10ನೇ ತರಗತಿ ಪಾಸಾಗಿದ್ದೀರಾ... ಮುಂದೇನು ಮಾಡಬಹುದು ಎಂದು ನಾವು ಹೇಳ್ತೇವೆ ನೋಡಿ!

By Kavya

ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಎನ್ನುವ ಪ್ರಶ್ನೆಯನ್ನು ಹಾಕಿಕೊಳ್ಳುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.

10ನೇ ತರಗತಿ ಪಾಸಾಗಿದ್ದೀರಾ... ಮುಂದೇನು ಮಾಡಬಹುದು ಎಂದು ನಾವು ಹೇಳ್ತೇವೆ ನೋಡಿ!

ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಎನ್ನವುದಕ್ಕೆ ಕರಿಯರ್ ಇಂಡಿಯಾ ಕನ್ನಡ ಮಾಹಿತಿಯನ್ನು ನೀಡುತ್ತಿದೆ. ಇದನ್ನು ಓದಿಕೊಂಡು ನೀವು ನಿಮ್ಮ ಆಸಕ್ತಿಗನುಗುಣವಾದ ಕೋರ್ಸ್ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದು.

ವಿಜ್ಞಾನ ವಿಭಾಗ:

10ನೇ ಕ್ಲಾಸ್ ನಂತರ ಆಯ್ಕೆ ಮಾಡಬಹುದಾದ ಬೆಸ್ಟ್ ಕೋರ್ಸ ಇದು. ಇದೊಂದು ಇನ್ನು ಪಿಯುಸಿ ನಂತರ ನಿಮಗೆ ಬೇಕಾದ್ರೆ ಆಟ್ರ್ಸ ಇಲ್ಲ ಕಾಮರ್ಸ ಲೈನ್ ಗೆ ಹೋಗಬಹುದು ಆದ್ರೆ ಆರ್ಟ ಹಾಗೂ ಕಾಮರ್ಸ ಕೋರ್ಸ ಮಾಡಿದ ವಿದ್ಯಾರ್ಥಿಗಳಿಗೆ ಇದು ಸಾಧ್ಯವಿಲ್ಲ. ಇನ್ನು ವಿಜ್ಞಾನ ಕೋರ್ಸನ್ನ ಹಲವಾರು ಪ್ರತಿಷ್ಟಿತ ಕಾಲೇಜುಗಳು ನಿಮಗೆ ಆಫರ್ ನೀಡುತ್ತದೆ.

  • ಫಿಸಿಕ್ಸ್, ಕೆಮೆಸ್ಟ್ರಿ, ಮ್ಯಾಥಮ್ಯಾಟಿಕ್ಸ್, ಬಯಾಲಾಜಿ (ಪಿಸಿಎಂಬಿ)
  • ಫಿಸಿಕ್ಸ್, ಕೆಮೆಸ್ಟ್ರಿ, ಮ್ಯಾಥಮ್ಯಾಟಿಕ್ಸ್, ಕಂಪ್ಯೂಟರ್ ಸೈನ್ಸ್ (ಪಿಸಿಎಂಸಿ)
  • ಫಿಸಿಕ್ಸ್, ಕೆಮೆಸ್ಟ್ರಿ, ಮ್ಯಾಥಮ್ಯಾಟಿಕ್ಸ್ ಹಾಗೂ ಎಲೆಕ್ಟ್ರಾನಿಕ್ಸ್ (ಪಿಸಿಎಂಇ)


ವಾಣಿಜ್ಯ:

ಯಾರಿಗೆ ಎಕಾನಾಮಿಕ್ಸ್ ಇಲ್ಲ ಅಕೌಂಟಿಂಗ್ ಕೋರ್ಸ ಮಾಡಬೇಕು ಎಂದು ಅಂದುಕೊಂಡಿದ್ರೆ ನೀವು ಕಾಮರ್ಸ ಸಬ್‍ಜೆಕ್ಟ್ ಆಯ್ಕೆ ಮಾಡುವುದು ಬೆಸ್ಟ್. ಈ ಕೋರ್ಸ ನೀವು ಮಾಡಿದ್ದಲ್ಲಿ, ಇನ್‍ವೆಸ್ಟ್‍ಮೆಂಟ್, ಬ್ಯಾಂಕಿಂಗ್, ಫೈನಾಂಶಿಯಲ್ ಅಡ್ವೈಸಿಂಗ್ ಮತ್ತು ಚಾರ್ಟಡ್ ಅಕೌಂಟಿಂಗ್ ಮುಂತಾದ ಕ್ಷೇತ್ರಗಳಲ್ಲಿ ತಮ್ಮ ಕೆರಿಯರ್ ರೂಪಿಸಿಕೊಳ್ಳಬಹುದು. ಇನ್ನು ಯಾರೂ ಏಮಿಂಗ್ ಮ್ಯಾನೇಜ್‍ಮೆಂಟ್ ಕೋರ್ಸ ಮಾಡಬೇಕು ಎಂದು ಅಂದುಕೊಂಡಿದ್ದಿರೋ ನೀವು ಕೂಡಾ ಕಾಮರ್ಸ ಸಬ್‍ಜೆಕ್ಟ್ ಆಯ್ಕೆ ಮಾಡಿಕೊಳ್ಳಬಹುದು.

ಕಲಾ ವಿಭಾಗ:

ಇನ್ನು ನೀವು ಭಾಷೆ ಹಾಗೂ ಹ್ಯೂಮಿನಿಟೀಸ್ ಲೈನ್‍ನಲ್ಲಿ ಕೆರಿಯರ್ ರೂಪಿಸಬೇಕೆಂದು ಅಂದುಕೊಂಡಿದ್ರೆ ನಿಮಗೆ ಈ ಲೈನ್ ಬೆಸ್ಟ್. ಇನ್ನು ಕಲಾ ವಿಭಾಗದಲ್ಲಿ ನೀವು ಸ್ಟಡಿ ಮಾಡಿದ್ರೆ ನಿಮಗೆ ಉದ್ಯೋಗ ಕ್ಷೇತ್ರದಲ್ಲಿ ವಿಫು¯ ಅವಕಾಶವಿದೆ. ಸೋಶಲ್ ವರ್ಕ, ಜರ್ನಲಿಸ್ಟ್, ಡಿಸೈನಿಂಗ್ ಮುಂತಾದ ಕ್ಷೇತ್ರದಲ್ಲಿ ನಿಮ್ಮ ಕೆರಿಯರ್ ರೂಪಿಸಿಕೊಳ್ಳಿ.

ಡಿಪ್ಲೋಮಾ ಇನ್ ಇಂಜಿನಿಯರಿಂಗ್:

ಇನ್ನು ನಿಮಗೆ ಇಂಜಿನಿಯರ್ ಮಾಡಬೇಕೆಂದು ಆಸೆಯಿದ್ರೆ, ನೀವು ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಕೋರ್ಸ ಮಾಡಿ ನಿಮ್ಮ ಕೆರಿಯರ್ ಲೈಫ್ ರೂಪಿಸಿಕೊಳ್ಳಬಹುದು. ಇನ್ನು ಎಸ್‍ಎಸ್‍ಎಲ್ ಸಿ ಬಳಿಕ ನೀವು ಡಿಪ್ಲೋಮಾ ಕೋರ್ಸ ಮಾಡಬೇಕೆಂದು ಅಂದುಕೊಂಡಿದ್ದರೆ ನಿಮ್ಮ ಎಸ್‍ಎಸ್‍ಎಲ್‍ಸಿ ಸರ್ಟಿಫಿಕೇಟ್ ಜತೆ ಇನ್ನೂ ಕೆಲವು ಸರ್ಟಿಫಿಕೇಟ್ ಗಳ ಅಗತ್ಯವಿದೆ. ಇಂಜಿನಿಯರಿಂಗ್ ನಲ್ಲಿ ನೀಡುವ ಡಿಪ್ಲೋಮಾ ಕೋರ್ಸಗಳು ಇವುಗಳು:

  • ಡಿಪ್ಲೋಮಾ ಇನ್ ಮ್ಯಾಕಾನಿಕಲ್ ಇಂಜಿನಿಯರಿಂಗ್
  • ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
  • ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್
  • ಡಿಪ್ಲೋಮಾ ಇನ್ ಕೆಮಿಕಲ್ ಇಂಜಿನಿಯರಿಂಗ್


ಡಿಪ್ಲೋಮಾ ಕೋರ್ಸಗಳು:

ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಮಾತ್ರವಲ್ಲದೇ ಇನ್ನೂ ಅನೇಕ ಹಲವಾರು ಡಿಪ್ಲೋಮಾ ಕೋರ್ಸಗಳು ಇವೆ. ಆ ಕೋರ್ಸ ಗಳು ಯಾವುವು ಎಂಬುವುದು ತಿಳಿಯಲು ಮುಂದಕ್ಕೆ ಓದಿ.

  • ಡಿಪ್ಲೋಮಾ ಇನ್ ಫಾರ್ಮಸಿ
  • ಡಿಪ್ಲೋಮಾ ಇನ್ ನರ್ಸಿಂಗ್ ಮತ್ತು ಮಿಡ್‍ವೈಫರಿ
  • ಡಿಪ್ಲೋಮಾ ಇನ್ ಇಂಟೀರಿಯರ್ ಡಿಸೈನಿಂಗ್
  • ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್
  • ಡಿಪ್ಲೋಮಾ ಇನ್ ಪ್ರಿಂಟಿಂಗ್ ಟೆಕ್ನಾಲಾಜಿ
  • ಡಿಪ್ಲೋಮಾ ಇನ್ ಪ್ಲ್ಯಾಸ್ಟಿಕ್ ಟೆಕ್ನಾಲಾಜಿ
  • ಡಿಪ್ಲೋಮಾ ಇನ್ ಲೆಧರ್ ಟೆಕ್ನಾಲಾಜಿ
  • ಡಿಪ್ಲೋಮಾ ಇನ್ ಪೌಲ್ಟ್ರಿ
  • ಡಿಪ್ಲೋಮಾ ಇನ್ ಮ್ಯೂಸಿಕ್
  • ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬರೋಟರಿ ಟೆಕ್ನಾಲಾಜಿ
  • ಡಿಪ್ಲೋಮಾ ಇನ್ ಫುಡ್ ಟೆಕ್ನಾಲಾಜಿ
For Quick Alerts
ALLOW NOTIFICATIONS  
For Daily Alerts

English summary
Here we are giving details of courses which students can do after class 10. read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X