ಸರ್ಕಾರಿ ಜಾಬ್ ಅಂದರೆ ಯಾರಿಗೆ ತಾನೆ ಇಷ್ಟವಿರಲ್ಲ ಹೇಳಿ. ಅಟೆಂಡೆಂಟ್ ನಿಂದ ಹಿಡಿದು ಗ್ರೂಪ್ ಎ ಆಫೀಸರ್ಸ್ ಹುದ್ದೆ ವರೆಗೆ ಯಾವ ಜಾಬ್ ಆದ್ರೂ ಓಕೆ ಆದ್ರೆ ಸರ್ಕಾರಿ ಜಾಬ್ ಆಗಿರಬೇಕು ಅಂತಾರೆ ನಮ್ಮ ಜನರು. ಪ್ರತಿಯೊಬ್ಬ ಸರ್ಕಾರಿ ಉದ್ಯೋಗಿಯೂ ತನ್ನ ಹುದ್ದೆ ಹಾಗೂ ಅದರ ಸೌಲಭ್ಯಗಳನ್ನ ಎಂಜಾಯ್ ಮಾಡುತ್ತಾನೆ. ಪ್ರತಿಯೊಬ್ಬರಿಗೂ ಸರ್ಕಾರಿ ಕೆಲಸ ತನ್ನದಾಗಬೇಕೆಂಬ ಆಸೆಯಿರುತ್ತದೆ.
ಇನ್ನು ಇಂತಹ ಸರ್ಕಾರಿ ಕೆಲಸಗಳಿಗೆ ನೀವು ಕೂಡಾ ಟ್ರೈ ಮಾಡಬೇಕು ಅಂತಿದ್ದೀರಾ. ಹಾಗಿದ್ರೆ ಯಾವೆಲ್ಲಾ ಸರ್ಕಾರಿ ಕೆಲಸಕ್ಕೆ ನೀವು ಟ್ರೈ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ
1. ನ್ಯಾಷನಲ್ ಡೆಫನ್ಸ್ ಅಕಾಡೆಮಿ (ಎನ್ ಡಿ ಎ)
ಭಾರತದ ಡಿಫೆನ್ಸ್ ಸೆಕ್ಟರ್ ಮೂರು ವಿಭಾಗಳನ್ನ ಒಳಗೊಂಡಿದೆ. ಇಂಡಿಯನ್ ಆರ್ಮಿ, ಇಂಡಿಯನ್ ಏರ್ ಫೋರ್ಸ್ ಹಾಗೂ ಇಂಡಿಯನ್ ನೇವಿ. ಯಾರೆಲ್ಲಾ ದ್ವಿತೀಯ ಪಿಯುಸಿ ಎಕ್ಸಾಂ ಪಾಸ್ ಆಗಿದ್ದೀರೊ, ಅವರೆಲ್ಲ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇಂಡಿಯನ್ ಆರ್ಮಿ ಹುದ್ದೆಗೆ ಯಾವ ಬ್ಯಾಕ್ ಗ್ರೌಂಡ್ ಇದ್ರೂ ಓಕೆ ಆದ್ರೆ ಇಂಡಿಯನ್ ನೇವಿ ಹಾಗೂ ಇಂಡಿಯನ್ ಏರ್ ಫೋರ್ಸ್ ಹುದ್ದೆಗೆ ಫಿಸಿಕ್ಸ್ ಹಾಗೂ ಮ್ಯಾಥಮ್ಯಾಟಿಕ್ಸ್ ಆಗಿರಬೇಕು.
2. ಎಸ್ಎಸ್ ಸಿ ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ ( ಸಿಹೆಚ್ ಎಸ್‌ಎಲ್)
ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ ಪರೀಕ್ಷೆಯನ್ನ ಆಯೋಜಿಸುತ್ತದೆ. ಕಡಿಮೆ ವಿಭಾಗ ಗುಮಾಸ್ತರು ಮತ್ತು ದತ್ತಾಂಶ ಪ್ರವೇಶ ನಿರ್ವಾಹಕರು ಹುದ್ದೆಗೆ ಎಸ್ಎಸ್ ಸಿ ಪರೀಕ್ಷೆ ನಡೆಸಲಾಗುತ್ತದೆ.
3. ಎಸ್ಎಸ್ ಸಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) :
ಮಲ್ಟಿ ಟಾಸ್ಕಿಂಗ್ ಸ್ಟಾಫ್ ಇದು ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸುವ ಪ್ರವೇಶಾತಿ ಪರೀಕ್ಷೆ ಇದು. ಸಚಿವ ಹಾಗೂ ಸರಕಾರಿ ಇಲಾಖೆಗಳಲ್ಲಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು ಈ ಪರೀಕ್ಷೆ ಆಯೋಜಿಸಲಾಗುತ್ತದೆ.
4. ಎಸ್ಎಸ್ ಸಿ ಸ್ಟೆನೋಗ್ರಾಫರ್ (ಗ್ರೇಡ್ ಸಿ ಹಾಗೂ ಗ್ರೇಡ್ ಡಿ):
ಸ್ಟಾಫ್ ಸೆಲೆಕ್ಷನ್ ಕಮಿಷನ್ ಈ ದಿ ಸ್ಟೆನೋಗ್ರಾಫರ್ ಎಕ್ಸಾಮಿನೇಶನ್ ಪರೀಕ್ಷೆಯನ್ನ ಆಯೋಜಿಸುತ್ತದೆ. ಗ್ರೇಡ್ ಸಿ ಹಾಗೂ ಗ್ರೇಡ್ ಡಿ ಸ್ಥಾನಕ್ಕೆ ಈ ಪರೀಕ್ಷೆಯನ್ನ ನಡೆಸಲಾಗುತ್ತದೆ. ಈ ಪರೀಕ್ಷೆ ಬರೆಯಬೇಕೆಂದಾದ್ರೆ ಸ್ಟೆನೋಗ್ರಾಫಿ ಸ್ಕಿಲ್ ಸರ್ಟಿಫಿಕೇಟ್ ಕೂಡಾ ಅಗತ್ಯ.
5. ರೈಲ್ವೇ ರಿಕ್ರ್ಯುಟ್ ಮೆಂಟ್ ಬೋರ್ಡ್:
ಯಾರೆಲ್ಲಾ ದ್ವಿತೀಯ ಪಿಯುಸಿ ಪರೀಕ್ಷೆ ಪಾಸ್ ಮಾಡಿದ್ದಿರೋ, ರೈಲ್ವೇ ವಿಭಾಗದಲ್ಲಿ ನಿಮಗಾಗಿ ಹಲವಾರು ಹುದ್ದೆಗಳು ಖಾಲಿ ಇವೆ. ಲೊಕೊ ಪೈಲಟ್, ಆಫೀಸರ್ ಅಸಿಸ್ಟೆಂಟ್, ಸ್ಟೇಶನ್ ಮಾಸ್ಟರ್ ಹಾಗೂ ಟಿಕೇಟ್ ಕಲೆಕ್ಟರ್ ಹುದ್ದೆಗಳಿಗೆ ನೀವು ಟ್ರೈ ಮಾಡಬಹುದು. ಈ ಹುದ್ದೆಗಳಿಗೆ ಹೈಸ್ಕೂಲ್ ಪದವಿ ಸರ್ಟಿಫಿಕೇಟ್ ಅಗತ್ಯವಿದೆ.
6. ರಾಜ್ಯ ಸರ್ಕಾರದಲ್ಲಿ ಕೆಲಸ:
ಯಾರೆಲ್ಲಾ 12ನೇ ತರಗತಿ ಪಾಸು ಮಾಡಿದ್ದಿರೋ, ಅವರಿಗೆಲ್ಲಾ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿಫುಲ ಉದ್ಯೋಗವಕಾಶವಿದೆ.
7. ಇಂಡಿಯನ್ ಆರ್ಮಿ:
ಈ ವಿಭಾಗದಲ್ಲಿ ಟೆಕ್ನಿಕಲ್ ಎಂಟ್ರಿ ಸ್ಕೀಮ್ ಮತ್ತು ಸೋಲ್ಜರ್ಸ್ (ಕೇವಲ ಪುರುಷ), ಮಹಿಳಾ ಕಾಂಸ್ಟೇಬಲ್, ಜ್ಯೂನಿಯರ್ ಕಮಿಷನಡ್ ಆಫೀಸರ್ ಹುದ್ದೆಗೆ ಪಿಯುಸಿ ಆದವರು ಅಪ್ಲೈ ಮಾಡಬಹುದು
8. ಇಂಡಿಯನ್ ನೇವಿ:
ಸೈಲೊರ್, ಕೆಡೆಟ್ ಎಂಟ್ರಿ ಇನ್ ಟೆಕ್ನಿಕಲ್ ಡಿಪ್ಲೋಮಾ ಹಾಗೂ ಸೀನಿಯರ್ ಸೆಕಂಡರಿ ರೆಕ್ರ್ಯುಟ್ಸ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು
9 ಇಂಡಿಯನ್ ಕೋಸ್ಟ್ ಗಾರ್ಡ್:
ದ್ವಿತೀಯ ಪಿಯು ಆದ ಬಳಿಕ ನೀವು ಇಂಡಿಯನ್ ಕೋಸ್ಟ್ ಗಾರ್ಡ್ ಇಲಾಖೆಯಲ್ಲಿನ ನಾವಿಕ್, ಯಾಂತ್ರಿಕ್ಸ್, ಅಸಿಸ್ಟೆಂಟ್ ಕಮಾಂಡೆಟ್ಸ್, ಏರ್‌ಮೆನ್ ಹುದ್ದೆಗೆ ಅಪ್ಲೈ ಮಾಡಬಹುದು.
10 ಸೆಕ್ಯುರಿಟಿ ಫೋರ್ಸಸ್:
ಡಿಫೆನ್ಸ್ ಮಾತ್ರವಲ್ಲದೇ, ಸೆಕ್ಯುರಿಟಿ ಫೋರ್ಸಸ್ ನಲ್ಲಿ ಹಲವಾರು ಹುದ್ದೆಗಳಿವೆ. ಬೋರ್ಡರ್ ಸೆಕ್ಯುರಿಟಿ ಫೋರ್ಸ್, ಇಂಡೋ- ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್, ಸಶಸ್ತ್ರ ಸೀಮಾ ಬಲ್, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಮತ್ತು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ವಿಭಾಗದಲ್ಲಿ ಹುದ್ದೆಗಳು ಇವೆ.