12ನೇ ತರಗತಿ ಫೈಲಾ... ಹಾಗಿದ್ರೆ ಮುಂದೇನು ಎಂದು ನಾವು ಹೇಳ್ತೇವೆ ಕೇಳಿ!

ಇನ್ನು ಈ ಪರೀಕ್ಷೆಯಲ್ಲಿ ಫೈಲಾದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಎದೆಗುಂದಬೇಡಿ. ಪ್ರತಿಯೊಂದಕ್ಕೂ ಎರಡನೇ ಅವಕಾಶ ಎಂಬುವುದು ಇದೆ. ಮತ್ತೆ ಪರೀಕ್ಷೆ ಕಟ್ಟಿ ಚೆನ್ನಾಗಿ ಕಲಿತು ಓದಿ ಪರೀಕ್ಷೆ ಎದುರಿಸಿ ಪಾಸಾಗಿ.

ದಿ ಸೆಂಟರ್ ಆಫ್ ಬೋರ್ಡ ಎಜ್ಯುಕೇಶನ್ 12ನೇ ತರಗತಿ ಫಲಿತಾಂಶ ಕಳೆದ ಶನಿವಾರ ಮೇ 26, 2018ರಂದು ಪ್ರಕಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದ್ದರೆ, ಈ ವರ್ಷ ಶೇಕಡಾ 1 ಪಾಸಾದವರ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ಪಾಸಾದವರ ಸಂಖ್ಯೆ ಶೇಕಡಾ 82.02 ರಷ್ಟಿದ್ದು, ಈ ಬಾರೀ 83.01 ಆಗಿದೆ. ಈ ವರ್ಷ ಸುಮಾರು 11 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಭಾಗಿಯಾಗಿದ್ದು, ಅವರಲ್ಲಿ, 9.18 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. ಮಾರ್ಚ 5 ರಿಂದ ಎಪ್ರಿಲ್ 27 ರವರೆಗೆ ಪರೀಕ್ಷೆ ನಡೆದಿತ್ತು.

12ನೇ ತರಗತಿ ಫೈಲಾ... ಹಾಗಿದ್ರೆ ಮುಂದೇನು ಎಂದು ನಾವು ಹೇಳ್ತೇವೆ ಕೇಳಿ!

ಇನ್ನು ಈ ಪರೀಕ್ಷೆಯಲ್ಲಿ ಫೈಲಾದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಎದೆಗುಂದಬೇಡಿ. ಪ್ರತಿಯೊಂದಕ್ಕೂ ಎರಡನೇ ಅವಕಾಶ ಎಂಬುವುದು ಇದೆ. ಮತ್ತೆ ಪರೀಕ್ಷೆ ಕಟ್ಟಿ ಚೆನ್ನಾಗಿ ಕಲಿತು ಓದಿ ಪರೀಕ್ಷೆ ಎದುರಿಸಿ ಪಾಸಾಗಿ.

ಆದ್ರೆ ಫೈಲಾದವರು ಇಲ್ಲಿಗೆ ತಮ್ಮ ಜೀವನ ಮುಗಿಯಿತು ಎಂದು ಅಂದುಕೊಳ್ಳಬೇಡಿ. ಅಷ್ಟೇ ಅಲ್ಲ ಫೈಲಾದ ವಿದ್ಯಾರ್ಥಿಗಳು ಇದೀಗ ಮುಂದೇನು ಎಂಬ ಗೊಂದಲದಲ್ಲಿ ಇದ್ದಾರೆ ಅದಕ್ಕೆ ಕಾರಣ ಸಿಬಿಎಸ್‍ಇ ಎಂಬುವುದು ಕೆರಿಯರ್ ಹಂತದ ಮೊದಲ ಹೆಜ್ಜೆ. ಈ ಹಂತದಲ್ಲಿ ನಿಮ್ಮ ಭವಿಷ್ಯದ ಕೆರಿಯರ್ ನಿರ್ಧಾರವಾಗುತ್ತದೆ ಎಂದು ನಾವು ಅಂದುಕೊಂಡಿರುವುದು. ಆದ್ರೆ ಆ ಮಾತಿಗೆ ತಲೆಕೆಡಿಸಕೊಳ್ಳಬೇಡಿ. ನಿಮ್ಮ ಬಳಿ ಸಿಬಿಎಸ್‍ಇ 10ನೆ ತರಗತಿಯ ಪಾಸಾದ ಸರ್ಟಿಫಿಕೇಟ್ ಇದ್ರೆ ಸಾಕು, ನೀವು ನಿರಾಶರಾಗದೇ ಯಾವೆಲ್ಲಾ ಕೋರ್ಸ ಮಾಡಬಹುದು ಎಂಬ ಮಾಹಿತಿ ನಿಮಗೆ ಕೆರಿಯರ್ ಇಂಡಿಯಾ ನೀಡುತ್ತಿದೆ.

ಕೋರ್ಸ ಇನ್ ಇಂಜಿನಿಯರಿಂಗ್:

ನಿಮ್ಮ ಬಳಿ ಕೇವ¯ 10ನೇ ತರಗತಿ ಪಾಸಾದ ಸರ್ಟಿಫಿಕೇಟ್ ಇದ್ದರೆ ಸಾಕು, ನೀವು ಈ ಡಿಪ್ಲೋಮಾ ಕೋರ್ಸ ಗಳನ್ನ ಮಾಡಬಹುದು. ಈ ಕೋರ್ಸ ಗಳು ನಿಮ್ಮ ಕೆರಿಯರ್ ಲೈಫ್‍ಗೆ ಸಹಾಯಕವಾಗಲಿದೆ. ಬೆಸ್ಟ್ ಡಿಪ್ಲೋಮಾ ಕೋರ್ಸ ಗಳ ವಿವರ ಹೀಗಿದೆ:

  • ಡಿಪ್ಲೋಮಾ ಇನ್ ಮ್ಯಾಕಾನಿಕಲ್ ಇಂಜಿನಿಯರಿಂಗ್
  • ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್
  • ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
  • ಡಿಪ್ಲೋಮಾ ಇನ್ ಕಂಪ್ಯೂಟರ್ ಇಂಜಿನಿಯರಿಂಗ್
  • ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್

ಕೋರ್ಸ ಇನ್ ದಿ ಮರೈನ್ ಫೀಲ್ಡ್:

10ನೇ ತರಗತಿ ಪಾಸಾಗಿದ್ದರೆ, ನೀವು ಮರೈನ್ ಫೀಲ್ಡ್‍ನಲ್ಲಿ ಡಿಪ್ಲೋಮಾ ಕೋರ್ಸ ಮಾಡಬಹುದು. ಮರೈನ್ ಫೀಲ್ಡ್‍ನಲ್ಲಿ ಎಂಟ್ರಿಯಾಗಬೇಕಾದ್ರೆ ನೀವು 10ನೇ ಕ್ಲಾಸ್ ಪಾಸಾಗಿರಬೇಕು. ಈ ಕೋರ್ಸ ಮಾಡಿದ್ರೆ ನಿಮಗೆ ಹೈ ಪ್ಯಾಕೇಜ್ ಸ್ಯಾಲರಿ ಕೂಡಾ ಸಿಗುತ್ತೆ. ಮರೈನ್ ಫೀಲ್ಡ್‍ನಲ್ಲಿ ಇರುವ ಕೋರ್ಸ ಗಳು ಯಾವುವು ಎಂದು ಮುಂದಕ್ಕೆ ಓದಿ

  • ಡಿಪ್ಲೋಮಾ ಇನ್ ಮರೈನ್ ಇಂಜಿನಿಯರಿಂಗ್
  • ಡಿಪ್ಲೋಮಾ ಇನ್ ಮರೈನ್ ಟೆಕ್ನಾಲಾಜಿ
  • ಡಿಪ್ಲೋಮಾ ಕೋರ್ಸ ಫಾರ್ ವೆಲ್ಡರ್ಸ
  • ಡಿಪ್ಲೋಮಾ ಕೋರ್ಸ ಫಾರ್ ವೈರ್ -ಮ್ಯಾನ್
  • ಡಿಪ್ಲೋಮಾ ಕೋರ್ಸ ಫಾರ್ ಸೈಲರ್

ಕಂಪ್ಯೂಟರ್‍ಗೆ ಸಂಬಂಧಪಟ್ಟ ಕೋರ್ಸಗಳು:

ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಕಂಪ್ಯೂಟರ್ ಕೋರ್ಸ ಲಭ್ಯವಿದೆ. ಈ ಕೋರ್ಸ ನೀವು ಪಡೆಯಬೇಕಾದ್ರೆ 10ನೇ ತರಗತಿ ಪಾಸಾಗಿರಬೇಕು. ವಿಷಯಕ್ಕೆ ಸಂಬಂಧಪಟ್ಟಂತೆ ಕೋರ್ಸನ ಅವಧಿ ಇರುತ್ತದೆ.

  • ಡಿಪ್ಲೋಮಾ ಇನ್ ಪ್ರಾಗ್ರಾಮಿಂಗ್
  • ಡಿಪ್ಲೋಮಾ ಇನ್ ಗ್ರಾಫಿಕ್ಸ್
  • ಡಿಪ್ಲೋಮಾ ಇನ್ ಡಿಸೈನ್
  • ಡಿಪ್ಲೋಮಾ ಇನ್ ವೆಬ್ ಡಿಸೈನಿಂಗ್
  • ಡಿಪ್ಲೋಮಾ ಇನ್ ಆಪ್ ಡೆವೆಲಪ್‍ಮೆಂಟ್


ಆಫ್‍ಬೀಟ್ ಕೋರ್ಸ ಗಳು:

ಕಂಪ್ಯೂಟರ್, ಹಾರ್ಡ ವೇರ್ ಮತ್ತು ನೆಟ್‍ವರ್ಕಿಂಗ್ ಈ ಮೇಲೆ ಹೇಳಿರುವ ಕೋರ್ಸಗಳನ್ನ ಹೊರತು ಪಡಿಸಿದ್ರೆ 10ನೇ ತರಗತಿ ಪಾಸಾದವರಿಗೆ ಆಫ್‍ಬೀಟ್ ಕೋರ್ಸಗಳಿವೆ.ಎಲೆಕ್ಟ್ರಿಶನ್, ಕ್ಲೀನರ್ಸ, ವೆಲ್ಡರ್ಸ, ಪ್ಲಂಬರ್ಸ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಅನೇಕ ಆಫ್‍ಬೀಟ್ ಕೋರ್ಸ ಗಳಿವೆ.ಇನ್ನು ಈ ಕೋರ್ಸ ಮಾಡಿದವರಿಗೆ ಸ್ಯಾಲರಿ ಕೂಡಾ ಹೆಚ್ಚೇ ಇರುತ್ತದೆ.

ಇನ್ನು ದೇಶದಲ್ಲಿ ಹಲವಾರು ಡಿಪ್ಲೋಮಾ ಕೋರ್ಸಗಳಿವೆ. ಹಾಗಾಗಿ ನಾವು ವಿದ್ಯಾರ್ಥಿಗಳಿಗೆ ಏನು ಸಲಹೆ ನೀಡುವುದೇನೆಂದ್ರೆ ಡಿಪ್ಲೋಮಾ ಕೋರ್ಸಗೆ ಸೇರುವ ಮುನ್ನ ಆ ಕಾಲೇಜು ಬಗ್ಗೆ ಸ್ಟಡಿ ಮಾಡಿ. ಯಾಕೆಂದ್ರೆ ಹಣಕ್ಕಾಗಿ ಇದೀಗ ಅದೆಷ್ಟೋ ಶಿಕ್ಷಣ ಸಂಸ್ಥೆಗಳಿವೆ

For Quick Alerts
ALLOW NOTIFICATIONS  
For Daily Alerts

English summary
The Central Board of Secondary Education (CBSE) had ended the long wait for the class 12 results on Saturday, i.e., May 26, 2018. And the pass percentage was increased by one percent from 82.02 to 83.01. Around 11 lakh students appeared for the examination and 9.18 lakh candidates passed with flying colours for the exams held between Mar 5 and Apr 27.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X