Career Options After NEET 2021 : ನೀಟ್ ನಂತರ ಮುಂದೇನು.. ಇಲ್ಲಿದೆ ಕೋರ್ಸ್ ಗಳ ವಿವರ

ನೀಟ್‌ ನಂತರ ಮುಂದೇನು ? ಇಲ್ಲಿದೆ ಕೋರ್ಸ್ ಗಳ ಪಟ್ಟಿ

ನೀಟ್ ಪರೀಕ್ಷೆ ಅತ್ಯಂತ ಕಷ್ಟಕರ ಮತ್ತು ಪ್ರಮುಖ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ. ನೀಟ್‌ಗೆ ಸಂಬಂಧಿಸಿದ ಸಾಮಾನ್ಯ ತಪ್ಪುಗ್ರಹಿಕೆಯೆಂದರೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅಭ್ಯರ್ಥಿಗಳು ವೈದ್ಯರಾಗುವುದು ಒಂದೇ ಆಯ್ಕೆ ಎಂಬುದು. ಆದರೆ ನೀಟ್ ಬಳಿಕ ನೀವು ಯಾವೆಲ್ಲಾ ಕೋರ್ಸ್ ಗಳನ್ನು ಆಯ್ಕೆಮಾಡಿಕೊಂಡು ಅಧ್ಯಯನ ಮಾಡಬಹುದು ಎಂದು ನಾವಿಲ್ಲಿ ಸಲಹೆ ನೀಡಲಿದ್ದೇವೆ.

ಡಾಕ್ಟರ್ (ಎಂಬಿಬಿಎಸ್):

10+2 ವಿದ್ಯಾರ್ಹತೆ ಹೊಂದಿರುವ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಮತ್ತು ವೈದ್ಯರಾಗಿ ಸೇವೆ ಸಲ್ಲಿಸಲು ಅಥವಾ ಅವರು ಬಯಸಿದ ನಿರ್ಧಿಷ್ಟ ವಿಷಯದಲ್ಲಿ ಪರಿಣತಿ ಪಡೆಯಲು ನೀಟ್ ಪರೀಕ್ಷೆಗೆ ಹಾಜರಾಗುತ್ತಾರೆ. ಅನೇಕ ಜನರು ನೀಟ್ ಪರೀಕ್ಷೆಯನ್ನು ಅನೇಕ ಬಾರಿ ತೆಗೆದುಕೊಳ್ಳುತ್ತಾರೆ ಹಾಗಾಗಿ ಸ್ಪರ್ಧೆಯು ಹೆಚ್ಚಿರುತ್ತದೆ. ನೀಟ್ ಮೂಲಕ ನೀವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಎಂಬಿಬಿಎಸ್ ಪದವಿ ಆಯ್ಕೆ ಮಾಡಿಕೊಳ್ಳಬಹುದು.

ದಂತವೈದ್ಯರು (ಬಿಡಿಎ):

ದಂತವೈದ್ಯರಾಗಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ನೀಟ್ ಮೂಲಕ ಬಿಡಿಎಸ್ ಪದವಿ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ತಿಳಿದಿರುವಂತೆ ಅನೇಕ ದಂತವೈದ್ಯರು ತಮ್ಮದೇ ಕ್ಲಿನಿಕ್‌ಗಳನ್ನು ತೆರೆದು ಸಾಕಷ್ಟು ಹಣವನ್ನು ಗಳಿಸುತ್ತಾರೆ. ಆದರೆ ಇತರರು ವಿವಿಧ ಚಿಕಿತ್ಸಾಲಯಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಾರೆ.

ಎಂಡಿ, ಎಂಎಸ್ ಮತ್ತು ಡಿಪ್ಲೋಮಾ:

ಎಂಬಿಬಿಎಸ್ ಮುಗಿಸಿದ ನಂತರ ವೈದ್ಯಕೀಯ ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ಜನರಿಗೆ ಸಾಮಾನ್ಯ ಆಯ್ಕೆಗಳಲ್ಲಿ ಇದೂ ಒಂದು. ಎಂಡಿ, ಎಂಎಸ್ ಅಥವಾ ಡಿಪ್ಲೊಮಾ ಹೊಂದಿರುವ ವೈದ್ಯರು ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಪರಿಣತಿ ಹೊಂದಲು ಸ್ನಾತಕೋತ್ತರ ಕಾರ್ಯಕ್ರಮಕ್ಕೆ ದಾಖಲಾಗಬಹುದು. ವೈದ್ಯಕೀಯ ಕ್ಷೇತ್ರದಲ್ಲಿ ಅವರ ಬೇಡಿಕೆ ಎಂದಿಗೂ ಕಡಿಮೆಯಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಎಂಬಿಎ):

ಎಂಬಿಬಿಎಸ್ ಮುಗಿಸಿದ ನಂತರ ಎಂಬಿಎ ಪಡೆಯುವುದು ಅಗತ್ಯವಲ್ಲದಿದ್ದರೂ ಸಹ ಕೆಲವರು ತಮ್ಮ ಉದ್ಯಮಶೀಲ ಕೌಶಲ್ಯವನ್ನು ಉತ್ತಮಗೊಳಿಸಲು ಮತ್ತು ಆರೋಗ್ಯ ನಿರ್ವಹಣೆಯಲ್ಲಿ ವೃತ್ತಿ ಭವಿಷ್ಯವನ್ನು ಅನ್ವೇಷಿಸಲು ಎಂಬಿಎ ಕೋರ್ಸ್ ಮಾಡುತ್ತಾರೆ. ಹೆಲ್ತ್‌ಕೇರ್ ಮತ್ತು ಹಾಸ್ಪಿಟಲ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ, ಜನರಲ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ(GM), ಆಸ್ಪತ್ರೆ ಆಡಳಿತದಲ್ಲಿ ಎಂಬಿಎ, ಆಸ್ಪತ್ರೆ ಮತ್ತು ಹೆಲ್ತ್ ಕೇರ್ ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿಡಿ (PGDHHM), ಆಸ್ಪತ್ರೆ ಆಡಳಿತದಲ್ಲಿ ಪಿಜಿಡಿ ಮತ್ತು ಆರೋಗ್ಯ ಆಡಳಿತದಲ್ಲಿ ಪಿಜಿಡಿ ಕೋರ್ಸ್ ಗಳನ್ನು ಮಾಡಿ ಉತ್ತಮ ವೃತ್ತಿ ಜೀವನವನ್ನು ಕಂಡುಕೊಳ್ಳಬಹುದು.

ವಿಜ್ಞಾನದಲ್ಲಿ ಮಾಸ್ಟರ್ಸ್ (M.Sc.):

ನೀವು ಎಂಬಿಬಿಎಸ್ ಮುಗಿಸಿದ ಬಳಿಕ ಎಂ.ಎಸ್ಸಿ ಪದವಿಯನ್ನು ಹೊಂದುವುದು ನಿಮ್ಮ ಇನ್ನೊಂದು ಆಯ್ಕೆಯಾಗಿರುತ್ತದೆ. ವೈದ್ಯಕೀಯ ಕೋರ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವುದು ವೈದ್ಯಕೀಯೇತರ ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅನೇಕ ಎಂಬಿಬಿಎಸ್ ಪದವೀಧರರು ಏರೋಸ್ಪೇಸ್ ಮೆಡಿಸಿನ್/ಅರಿವಳಿಕೆ/ಬಯೋಕೆಮಿಸ್ಟ್ರಿ/ಅಂಗರಚನಾಶಾಸ್ತ್ರ/ಕುಷ್ಠರೋಗ, ಚರ್ಮಶಾಸ್ತ್ರ ಮತ್ತು ವೆನೆರಿಯಾಲಜಿಜೆರಿಯಾಟ್ರಿಕ್ಸ್/ಫೋರೆನ್ಸಿಕ್ ಮೆಡಿಸಿನ್/ಇಎನ್ಟಿ ಮತ್ತು ಮುಂತಾದ ಯಾವುದೇ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಆಯ್ಕೆ ಮಾಡಬಹುದು.

ಕ್ಲಿನಿಕಲ್ ರಿಸರ್ಚ್:

ಪ್ರಪಂಚವು ಇನ್ನೂ ಅನೇಕ ವಿಷಯಗಳಲ್ಲಿ ಸಂಶೋಧನೆಯನ್ನು ನಡೆಸುತ್ತಲೇ ಇದೆ ಮತ್ತು ಇದರಿಂದ ಅಭಿವೃದ್ಧಿ ಹೊಂದುತ್ತಿದೆ. ಇದರ ಪರಿಣಾಮವಾಗಿ ಕ್ಲಿನಿಕಲ್ ಸಂಶೋಧಕರಿಗೆ ಹೆಚ್ಚಿನ ಬೇಡಿಕೆಯಿದೆ. ಎಲ್ಲಾ ಔಷಧಗಳು, ಕಾರ್ಯವಿಧಾನಗಳು, ಆಪರೇಟಿಂಗ್ ವಿಧಾನಗಳು ಮತ್ತು ವೈದ್ಯಕೀಯ ಕಾರ್ಯಗಳು ಹಾಗೂ ಜ್ಞಾನವನ್ನು ವೈದ್ಯಕೀಯ ಪಠ್ಯಪುಸ್ತಕಗಳಲ್ಲಿ ಕಾಣಲಾಗುವುದಿಲ್ಲ. ವ್ಯಾಪಕ ಸಂಶೋಧನೆಯು ಪ್ರಗತಿಗೆ ಮತ್ತು ಸಾಮಾನ್ಯವಾಗಿ ವೈದ್ಯಕೀಯ ವಿಜ್ಞಾನವನ್ನು ಮುನ್ನಡೆಸಲು ಅತ್ಯಗತ್ಯವಾಗಿದೆ. ಹಾಗಾಗಿ ಅಭ್ಯರ್ಥಿಗಳು ಕ್ಲಿನಿಕಲ್ ರಿಸರ್ಚ್ ಕ್ಷೇತ್ರಕ್ಕೆ ಹೆಜ್ಜೆ ಇಡಬಹುದು.

ಕಾನೂನು ವೈದ್ಯಕೀಯ ಸಲಹೆಗಾರ:

ನ್ಯಾಯಾಲಯದ ಕೆಲವು ಪ್ರಕರಣಗಳಲ್ಲಿ ವೃತ್ತಿಪರ ವೈದ್ಯರ ಅಭಿಪ್ರಾಯದ ಅಗತ್ಯವಿರುತ್ತದೆ ಅಂತಹ ಸಂದರ್ಭದಲ್ಲಿ ಕಾನೂನು ವೈದ್ಯಕೀಯ ಸಲಹೆಗಾರರನ್ನು ಹುಡುಕಲಾಗುತ್ತದೆ. ಹಾಗಾಗಿ ಎಂಬಿಬಿಎಸ್ ನಂತರದ ಉತ್ತಮ ಹಾಗೂ ಲಾಭದಾಯಕ ವೃತ್ತಿ ಆಯ್ಕೆ ಎಂದು ಕಾನೂನು ವೈದ್ಯಕೀಯ ಸಲಹೆಗಾರರನ್ನು ಪರಿಗಣಿಸಲಾಗುತ್ತದೆ. ಪ್ರಪಂಚದಾದ್ಯಂತದ ಅನೇಕ ಅಪರಾಧಗಳಿಗೆ ವೈದ್ಯಕೀಯ ತಜ್ಞರ ಸಲಹೆ ಅಗತ್ಯವಿದೆ. ಇದರ ಪರಿಣಾಮವಾಗಿ ಎಂಬಿಬಿಎಸ್ ನಂತರ ಪ್ರಾಯೋಗಿಕವಾಗಿ ಕೆಲಸ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಕಾನೂನು ವೈದ್ಯಕೀಯ ಸಲಹೆಗಾರ ಹುದ್ದೆಯನ್ನು ಅಲಂಕರಿಸಬಹುದು.

ವೈದ್ಯಕೀಯ ಶಾಲೆಯ ಪ್ರಾಧ್ಯಾಪಕರು:

ವೈದ್ಯರು ಮತ್ತು ಶಿಕ್ಷಕರು ಎರಡೂ ಕೂಡ ಅತ್ಯಂತ ಶ್ರೇಷ್ಟ ವೃತ್ತಿಗಳು. ಬೋಧನೆ ಮತ್ತು ವೈದ್ಯಕೀಯ ಎರಡು ಪ್ರತಿಷ್ಠಿತ ವೃತ್ತಿಗಳ ಒಂದು ಅನನ್ಯ ಸಂಯೋಜನೆಯಾಗಿದೆ. ನರ್ಸಿಂಗ್ ಶಾಲೆಯಲ್ಲಿ ವೈದ್ಯಕೀಯ ಬೋಧಕರಾಗಿ ಅಥವಾ ಸಂಸ್ಥೆಗಳಲ್ಲಿ ವೈದ್ಯಕೀಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಬಹುದು. ನೀವು ವೈದ್ಯರಾಗಿಯೂ ಮತ್ತು ಬೋಧಕರಾಗಿಯೂ ಕೆಲಸ ನಿರ್ವಹಿಸುವ ಅವಕಾಶಗಳು ವಿಫುಲವಾಗಿವೆ.

For Quick Alerts
ALLOW NOTIFICATIONS  
For Daily Alerts

English summary
NEET exam is scheduled on september 12. Afte NEET what to do? here is the list of medical courses and career options.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X