ಈ ಮೂರು ಅಭ್ಯಾಸಗಳಿಂದ ನಿಮ್ಮ ಕೆರಿಯರ್ ಲೈಫ್ ಹಾಳಾಗುತ್ತೆ ಹುಷಾರ್!

ಕೆರಿಯರ್ ಜೀವನ ವೈಫಲ್ಯಕ್ಕೆ ಕಾರಣವಾಗಿರುವ ನಮ್ಮಲ್ಲಿರುವ ಅಂತಹ ಅಭ್ಯಾಸಗಳಾದರೂ ಯಾವುದು ಎಂಬುವುದು ಎಂದು ಯೋಚಿಸುತ್ತಿದ್ದೀರಾ? ಆ ಅಭ್ಯಾಸಗಳು ಯಾವುವು ಎಂಬ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

By Kavya

ಪ್ರತಿಯೊಬ್ಬರೂ ಕೂಡಾ ತಮ್ಮ ಕೆರಿಯರ್ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬೇಕೆಂದು ಬಯಸುತ್ತಾರೆ. ಅಷ್ಟೇ ಅಲ್ಲ ಅದಕ್ಕಾಗಿ ಹಗಲು ರಾತ್ರಿ ಎನ್ನದೇ ಪರಿಶ್ರಮ ಕೂಡಾ ಪಡುತ್ತಾರೆ.

ಕೆರಿಯರ್ ಲೈಫ್ ಹಾಳು ಮಾಡುವ ಆ ಮೂರು ಅಭ್ಯಾಸಗಳು!

ಹಾರ್ಡ್ ವರ್ಕ್ ಹಾಗೂ ಪ್ರಯತ್ನದ ಜತೆಯೂ ನಾವೂ ನಮ್ಮ ವೃತ್ತಿ ಜೀವನದಲ್ಲಿ ಮುಂದೆ ಹೋಗುವ ಬದಲು ಯಶಸ್ಸಿನ ವಿಚಾರದಲ್ಲಿ ನಾವಿನ್ನೂ ಇತರ ಸಹದ್ಯೋಗಿಗಳ ಹಿಂದೆ ಬಿದ್ದಿದ್ದೇವೆ.

ಕೆಲವೊಮ್ಮೆ ಏನು ಆಗುತ್ತೆ ಅಂದ್ರೆ ಎಲ್ಲವೂ ಮುಗಿದು ಹೋದ್ರೂ ಇನ್ನೂ ನಮ್ಮ ಬಳಿ ಏನೂ ಉಳಿದಿಲ್ಲ ಎನ್ನುವ ಭಾವನೆ ಮೂಡುತ್ತದೆ. ನಾವು ನಮ್ಮ ವೃತ್ತಿ ಜೀವನದಲ್ಲಿ ಏನನ್ನೂ ಸಾಧಿಸಿಲ್ಲ ಎಂದು ನಮಗೆ ಅನಿಸಲು ಪ್ರಾರಂಭವಾಗುತ್ತದೆ. ಕೆಲವೊಮ್ಮೆ ನಮಗೆ ಅನಿಸುತ್ತದೆ ನಮ್ಮ ಈ ವಿಫಲತೆಗೆ ನಾವೇ ಕಾರಣರೆಂದು ಕೂಡಾ. ಹೌದು ಒಂದು ಮಾತು ನೆನಪಿಟ್ಟುಕೊಳ್ಳಿ ನಿಮ್ಮ ವಿಫಲತೆಗೆ ನಿಮ್ಮ ಅಭ್ಯಾಸಗಳು ಕೂಡಾ ಒಂದು ಕಾರಣವಾಗಿದೆಯೆಂದು.

ಹೌದು ನೀವು ಈಗ ಚಿಂತಿಸುತ್ತಿರಬಹುದು ಅಭ್ಯಾಸಗಳಿಂದ ಕೆರಿಯರ್ ಜೀವನ ಹೇಗೆ ಹಿಂದಕ್ಕೆ ಬೀಳುತ್ತದೆ ಎಂದು. ಕೆರಿಯರ್ ಜೀವನ ವೈಫಲ್ಯಕ್ಕೆ ಕಾರಣವಾಗಿರುವ ನಮ್ಮಲ್ಲಿರುವ ಅಂತಹ ಅಭ್ಯಾಸಗಳಾದರೂ ಯಾವುದು ಎಂಬುವುದು ಎಂದು ಯೋಚಿಸುತ್ತಿದ್ದೀರಾ? ಆ ಅಭ್ಯಾಸಗಳು ಯಾವುವು ಎಂಬ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

ಹಕ್ಕು ಚಲಾಯಿಸಬೇಡಿ:

ಆಫೀಸ್‌ನಲ್ಲಿ ನಿಮ್ಮ ಬಾಸ್ ಹಾಗೂ ಇತರರ ಮುಂದೆ ನಿಮ್ಮ ಹಕ್ಕು ಚಲಾಯಿಸಲು ಹೋಗಬೇಡಿ. ಹಾಗೂ ನಿಮ್ಮನ್ನ ಉನ್ನತ ಮಟ್ಟದಲ್ಲಿ ಇರಿಸಿ, ಇತರರನ್ನ ಕೀಳಾಗಿ ಕಾಣುವ ಪ್ರಯತ್ನ ಮಾಡಬೇಡಿ. ನಿಮ್ಮ ಇಂತಹ ಸ್ವಭಾವ ಇತರರಿಗೆ ಮಾತ್ರವಲ್ಲ ಸ್ವತಃ ನಿಮ್ಮ ಕೆರಿಯರ್ ಗೂ ಹಾನಿಯನ್ನುಂಟು ಮಾಡುತ್ತದೆ. ನಿಮ್ಮ ಈ ಸ್ವಭಾವದಿಂದ ನಿಮ್ಮ ಇಮೇಜ್ ಕೂಡಾ ಹಾಳಾಗುತ್ತದೆ

ಆಫೀಸ್ ಪಾಲಿಟಿಕ್ಸ್:

ಆಫೀಸ್‌ನಲ್ಲಿ ಕೆಲವರು ಚೆನ್ನಾಗಿ ಪಾಲಿಟಿಕ್ಸ್ ಕೂಡಾ ಆಡುತ್ತಾರೆ. ಒಬ್ಬರನ್ನೊಬ್ಬರ ಕಾಲು ಎಳೆಯಲು ಸದಾ ಒಳಗೊಳಗೆ ಸಂಚು ಕೂಡಾ ರೂಪಿಸುತ್ತಿರುತ್ತಾರೆ. ಇವರು ಆಫೀಸ್‌ ಕೆಲಸಕ್ಕಿಂತ ಇಂತಹ ಕೆಲಸದಲ್ಲಿ ಹೆಚ್ಚು ಬ್ಯುಸಿ ಇರುತ್ತಾರೆ. ಸಹದ್ಯೋಗಿಗಳನ್ನು ಕೀಳಾಗಿ ಕಾಣುವುದು, ಅಪವಾದ ಹೊರಿಸುವುದು, ವಿವಾದ ಸೃಷ್ಟಿಸುವುದು ಇಂತಹವರ ಕಾಯವಾಗಿರುತ್ತದೆ. ಇಂತಹ ಜನರು ತಮ್ಮ ಜೀವನದಲ್ಲಿ ಸ್ಥಿರವಾಗಿರುವುದಿಲ್ಲ ಹಾಗೂ ಇದೇ ಕಾರಣದಿಂದ ಇವರ ಕೆರಿಯರ್ ಜೀವನ ಕೂಡಾ ಹಾಳಾಗುತ್ತದೆ. ಹಾಗಾಗಿ ಈ ಸ್ವಭಾವ ನೀವು ರೂಢಿಸಿಕೊಂಡರೆ ನಿಮ್ಮ ವೃತ್ತಿ ಜೀವನ ಗೋವಿಂದಾ...

ಬದಲಾವಣೆ ಬಯಸದೇ ಇರುವುದು:

ಕೆಲವು ಜನರಿಗೆ ಒಂದೇ ರೀತಿಯ ಕೆಲಸ ಮಾಡುವ ಅಭ್ಯಾಸವಿರುತ್ತದೆ. ಅನಾದಿಕಾಲದಿಂದಲೂ ಮಾಡಿಕೊಂಡು ಬಂದಿರುವ ಕೆಲಸವನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ. ಆದರೆ ಯಾವತ್ತೂ ಹೊಸ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ. ಆದ್ರೆ ಒಂದು ತಿಳಿದುಕೊಳ್ಳಿ ಕೆರಿಯರ್ ಜೀವನದಲ್ಲಿ ಸಫಲತೆ ಸಿಗಬೇಕಾದ್ರೆ ಬದಲಾವಣೆ ಅಗತ್ಯ. ನೀವು ಕೆರಿಯರ್ ನಲ್ಲಿ ಬೆಳವಣಿಗೆ ಬಯಸುದಾದ್ರೆ ನೀವು ಬದಲಾವಣೆ ಕೂಡಾ ಒಪ್ಪಿಕೊಳ್ಳಬೇಕು. ನಿಮ್ಮ ಕೆಲಸದಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಸ್ತುತ ದಿನಗಳಿಗೆ ಸರಿಯಾಗಿ ಅಪ್‌ಡೇಟ್ ಆಗಿರಿ

ಈಗ ನಿಮಗೆ ತಿಳಿದಿರಬಹುದು ಯಾವ ಅಭ್ಯಾಸದಿಂದ ಕೆರಿಯರ್ ಲೈಫ್ ಹಾಳಾಗುತ್ತದೆ ಎಂದು . ಇಂತಹ ಅಭ್ಯಾಸಗಳನ್ನ ದೂರವಿರಿಸಿ. ಇಂತಹ ಅಭ್ಯಾಸಗಳು ನಿಮ್ಮನ್ನು ವೃತ್ತಿ ಜೀವನದಲ್ಲಿ ಹಿಂದಕ್ಕೆ ಹಾಕುವುದು ಮಾತ್ರವಲ್ಲದೇ ನಿಮ್ಮ ಕೆರಿಯರ್ ಲೈಫ್ ಬರ್ಬಾದ್ ಕೂಡಾ ಮಾಡುತ್ತವೆ.

For Quick Alerts
ALLOW NOTIFICATIONS  
For Daily Alerts

English summary
Some of the bad habits that can cause you to be Failed, Dint get promotion, lost the job, or refused the raise you wanted.So you have to change your habits. Your own habits may be cause of these problems. nOw you thinking How to change the bad habits? Dont worry here is the list about How to change the bad habits
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X