ಬರೀ ಸೌದಿ, ದುಬೈ ಮಾತ್ರವಲ್ಲ... ಈ ರಾಷ್ಟ್ರಗಳಲ್ಲೂ ಚಿಕ್ಕ ಚಿಕ್ಕ ಕೆಲಸಕ್ಕೆ ಹೆಚ್ಚು ಸಂಬಳ ಪಡೆಯಬಹುದು !

ಯಾವ ದೇಶ ಕೆಲಸ ಮಾಡಲು ಬೆಸ್ಟ್? ಯಾವ ದೇಶದಲ್ಲಿ ಹೆಚ್ಚು ಉದ್ಯೋಗವಕಾಶಗಳಿವೆ ಎಂದು ನೀವು ಯೋಚಿಸುತ್ತಿದ್ದೀರಾ. ಇಲ್ಲಿದೆ ಆ ಬಗ್ಗೆ ಮಾಹಿತಿ. ಟಾಪ್ 5 ಬೆಸ್ಟ್ ರಾಷ್ಟ್ರಗಳು ಯಾವುವು ಎಂಬ ಮಾಹಿತಿ ಇಲ್ಲಿ ನೀಡಲಾಗಿದ್ದು, ಮುಂದಕ್ಕೆ ಓದಿ

By Kavya

ಯಾವ ದೇಶ ಕೆಲಸ ಮಾಡಲು ಬೆಸ್ಟ್? ಯಾವ ದೇಶದಲ್ಲಿ ಹೆಚ್ಚು ಉದ್ಯೋಗವಕಾಶಗಳಿವೆ ಎಂದು ನೀವು ಯೋಚಿಸುತ್ತಿದ್ದೀರಾ. ಇಲ್ಲಿದೆ ಆ ಬಗ್ಗೆ ಮಾಹಿತಿ. ಟಾಪ್ 5 ಬೆಸ್ಟ್ ರಾಷ್ಟ್ರಗಳು ಯಾವುವು ಎಂಬ ಮಾಹಿತಿ ಇಲ್ಲಿ ನೀಡಲಾಗಿದ್ದು, ಮುಂದಕ್ಕೆ ಓದಿ.

ಉದ್ಯೋಗಕ್ಕೆ ಬೆಸ್ಟ್‌ ಟಾಪ್ 5 ರಾಷ್ಟ್ರಗಳು:

ಲಕ್ಸೆಂಬರ್ಗ್:

ಲಕ್ಸೆಂಬರ್ಗ್:

ಲಕ್ಸೆಂಬರ್ಗ್ ಯೂರೋಪಿಯನ್ ಯೂನಿಯನ್‌ನ ಸದಸ್ಯ ರಾಷ್ಟ್ರವಾಗಿದೆ. ಯೂರೋಪ್‌ನ ಅತೀ ಚಿಕ್ಕ ರಾಷ್ಟ್ರಗಳಲ್ಲಿ ಇದು ಕೂಡಾ ಒಂದಾಗಿದೆ. ಡೀಲವೆರ್ ಗಿಂತಲೂ ಇದು ಚಿಕ್ಕ ರಾಷ್ಟ್ರವಾಗಿದೆ. ಈ ರಾಷ್ಟ್ರದಲ್ಲಿ ಸಾಮಾನ್ಯವಾಗಿ 4 ಭಾಷೆಗಳನ್ನ ನೀವು ಗುರುತಿಸಬಹುದು. ಈ ದೇಶವನ್ನ ಕಡಿದಾದ, ಕಡಿಮೆ ಜನಸಂಖ್ಯೆ ಹೊಂದಿರುವ ಉತ್ತರ ಪ್ರಸ್ಥಭೂಮಿ ಮತ್ತು ದಕ್ಷಿಣ ತಗ್ಗು ಪ್ರದೇಶಗಳು ಹಾಗೂ ಪ್ರಮುಖ ನಗರಗಳು ಮತ್ತು ವ್ಯಾಪಕ ಜಮೀನು ಪ್ರದೇಶ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಸರಾಸರಿ ವರಮಾನ: $ 60,369
ಕನಿಷ್ಠ ವೇತನ: ಪ್ರತಿ ಗಂಟೆಗೆ $11.20
ರಜೆ: ಕಡಿಮೆ ಅಂದ್ರೂ 25 ದಿನ ರಜೆ
ಸಾರ್ವಜನಿಕ ರಜಾದಿನಗಳು: 10

ಸ್ವಿಜರ್ಲ್ಯಾಂಡ್

ಸ್ವಿಜರ್ಲ್ಯಾಂಡ್

ಸ್ವಿಜರ್ಲ್ಯಾಂಡ್ ರಚನಾತ್ಮಕವಾಗಿ ಯುಎಸ್ ಅನ್ನು ಹೋಲುತ್ತದೆ. ಇದು 26 ರಾಷ್ಟ್ರಗಳ ಒಕ್ಕೂಟವಾಗಿದೆ. ಹಲವಾರು ಶಿಖರಗಳುಳ್ಳ ಪರ್ವತ ದೃಶ್ಯಗಳಿಗೆ ಫೇಮಸ್ ಆಗಿದೆ. ಸ್ವಿಜರ್ಲ್ಯಾಂಡ್. ಜರ್ಮನ್ , ಇಟಲಿಯನ್ ಹಾಗೂ ಫ್ರೆಂಚ್ ಭಾಷೆಗಳ ಜತೆ Rumantsch ಭಾಷೆ ಕೂಡಾ ಈ ದೇಶದ ಆಫೀಶಿಯಲ್ ಭಾಷೆಯಲ್ಲಿ ಒಂದಾಗಿದೆ. ಟೂರಿಸಂ ಇಲ್ಲಿನ ಪ್ರಮುಖ ಇಂಡಸ್ಟ್ರಿಯಾಗಿದೆ. ಕಮರ್ಷಿಯಲ್ ಸೆಕ್ಟರ್ ಗಳಲ್ಲಿ ಇಂಗ್ಲೀಷ್ ಭಾಷೆಯನ್ನಾಡುತ್ತಾರೆ.

ಸರಾಸರಿ ವರಮಾನ: $ 58, 389
ಕನಿಷ್ಠ ವೇತನ: ಇಲ್ಲ
ರಜೆ:20 ದಿನಗಳು
ಸಾರ್ವಜನಿಕ ರಜಾದಿನಗಳು: ಸುಮಾರು 7 ರಿಂದ 15
ಸರಾಸರಿ ಗಂಟೆಗಳ ವಾರಕ್ಕೆ ಕೆಲಸ: 31

ಅಮೆರಿಕಾ:
 

ಅಮೆರಿಕಾ:

ಯುನಿಟೈಡ್ ಸ್ಟೇಟ್ಸ್ ಜಗತ್ತಿನಲ್ಲೇ ಪವರ್‌ಫುಲ್ ದೇಶವಾಗಿದೆ. ಯುಎಸ್‌ನಲ್ಲಿ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಅಷ್ಟೇ ಅಲ್ಲ ಯುಎಸ್ 3ನೇ ಸ್ಥಾನದಲ್ಲಿ ಇದೆ. ವಿಶ್ವದಲ್ಲೇ ಅತಿ ಹೆಚ್ಚು ಸರಕುಗಳ ಆಮದುದಾರ ಮತ್ತು ಎರಡನೇ ಅತಿ ದೊಡ್ಡ ರಫ್ತುದಾರ ಎಂಬ ಖ್ಯಾತಿ ಪಡೆದಿದೆ. ಪ್ರತಿ ವರ್ಷಕ್ಕೆ ಅಮೆರಿಕಾದ ಆದಾಯ $ 55,0000 ಆಗಿದೆ. ಹಾಗಾಗಿ ಅತೀ ಹೆಚ್ಚು ವೇತನ ನೀವು ಇಲ್ಲಿ ಪಡೆಯಬಹುದು. ಯುನೈಟೆಡ್ ಸ್ಟೇಟ್ಸ್ ಅಂತರರಾಷ್ಟ್ರೀಯ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಭಾವವನ್ನು ಹೊಂದಿದೆ.

ಸರಾಸರಿ ವರಮಾನ: $ 58,714
ಕನಿಷ್ಠ ವೇತನ: ಪ್ರತ ಗಂಟೆಗೆ $7.25
ರಜೆ: ಸುಮಾರು 10 ರಿಂದ 20 ದಿನಗಳು
ಸಾರ್ವಜನಿಕ ರಜಾದಿನಗಳು: ಸುಮಾರು 8 ದಿನಗಗಳು
ಸರಾಸರಿ ಗಂಟೆಗಳ ವಾರಕ್ಕೆ ಕೆಲಸ: 34.4

ಆಸ್ಟ್ರೇಲಿಯಾ:

ಆಸ್ಟ್ರೇಲಿಯಾ:

ಯುಎಸ್ ಗೆ ಹವಾಮಾನಕ್ಕೆ ಹೋಲಿಸದರೆ ಆಸ್ಟ್ರೇಲಿಯಾ ಕಂಪ್ಲೀಟ್ ಡಿಫರೆಂಟ್. ಚಳಿಗಾಲ ಜೂನ್‌ನಿಂದ ಆಗಸ್ಟ್, ವಸಂತಕಾಲ ಸೆಪ್ಟೆಂಬರ್ ನಿಂದ ನವಂಬರ್, ಬೇಸಿಗೆ ಕಾಲ ಡಿಸಂಬರ್ ನಿಂದ ಫೆಬ್ರವರಿ, ಮಾರ್ಚ್ ನಿಂದ ಮೇ ನಲ್ಲಿ ಹಿಮ ಬೀಳಲು ಪ್ರಾರಂಭವಾಗುತ್ತದೆ. ಆಸ್ಟ್ರೇಲಿಯಾವು ಶ್ರೀಮಂತ ರಾಷ್ಟ್ರವಾಗಿದೆ. 378 ಕ್ಕೂ ಹೆಚ್ಚು ಸಸ್ತನಿ ಜಾತಿಗಳು, 828 ಹಕ್ಕಿ ಜಾತಿಗಳು, 4,000 ಮೀನು ಜಾತಿಗಳು, 300 ಜಾತಿಯ ಜಾತಿಗಳು, 140 ಹಾವು ಜಾತಿಗಳು, ಎರಡು ಮೊಸಳೆ ಜಾತಿಗಳು ಮತ್ತು ಸುಮಾರು 50 ವಿಧದ ಕಡಲಿನ ಸಸ್ತನಿಗಳು ಸೇರಿದಂತೆ ಇಲ್ಲಿನ ಪ್ರಾಣಿ ಜೀವನವೂ ಕೂಡಾ ವೈವಿಧ್ಯಮಯವಾಗಿದೆ.

ಸರಾಸರಿ ವರಮಾನ: $50,167
ಕನಿಷ್ಠ ವೇತನ: $10.90 ಪ್ರತಿ ಗಂಟೆಗೆ
ರಜೆ: ಕಡಿಮೆ ಅಂದ್ರೂ 20 ದಿನ
ಸಾರ್ವಜನಿಕ ರಜಾದಿನಗಳು: ಕಡಿಮೆ ಅಂದ್ರೂ 7 ದಿನ
ಸರಾಸರಿ ಗಂಟೆಗಳ ವಾರಕ್ಕೆ ಕೆಲಸ: 32

ನಾರ್ವೆ:

ನಾರ್ವೆ:

ವಿಶ್ವದ 4 ನೇ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ನಾರ್ವೆ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಇಲ್ಲಿನ ಜೀವನವೂ ಕೂಡಾ ಐಷಾರಾಮಿಯಾಗಿದೆ. ಇಲ್ಲಿ ಸುಮಾರು 400,000 ಸರೋವರಗಳಿವೆ. ಇದು ವಿಶ್ವದಲ್ಲೇ ಅತೀ ಹೆಚ್ಚು ಸಾಲ್ಮನ್ ರಫ್ತು ಮಾಡುವ ದೇಶವಾಗಿದೆ. ದೊಡ್ಡ ದೊಡ್ಡ ತೈಲ ನಿಕ್ಷೇಪಗಳ ಕಾರಣದಿಂದ ಈ ರಾಷ್ಟ್ರ ಸಂಪತ್ತಿನಲ್ಲೂ ಮುಂದಿದೆ. ಅಷ್ಟೇ ಅಲ್ಲ ಈ ರಾಷ್ಟ್ರ ವಿಶ್ವದಲ್ಲೇ 10 ನೇ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರವಾಗಿದೆ.

ಸರಾಸರಿ ವರಮಾನ: $50, 908
ಕನಿಷ್ಠ ವೇತನ: ನಮೂದಿಸಿಲ್ಲ
ರಜೆ: 25 ದಿನಗಳು
ಸಾರ್ವಜನಿಕ ರಜಾದಿನಗಳು: 2 ದಿನಗಳು
ಸರಾಸರಿ ಗಂಟೆಗಳ ವಾರಕ್ಕೆ ಕೆಲಸ: 27.4

For Quick Alerts
ALLOW NOTIFICATIONS  
For Daily Alerts

English summary
Do You Know which Country will pay the workers highest salary. now your mind start to guess i think. but leave it. we are giving a information about top 5 Country will pay the workers highest salary
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X