Who Is Parag Agrawal : ಟ್ವಿಟ್ಟರ್ ನೂತನ ಸಿಇಒ ಪರಾಗ್ ಅವರ ಜೀವನ ಚಿತ್ರಣ

ಜನಪ್ರಿಯ ಮೈಕ್ರೋಬ್ಲಾಗಿಂಗ್ ತಾಣ ಎಂದೇ ಕರೆಯಲ್ಪಡುವ ಟ್ವಿಟ್ಟರ್ ಸಂಸ್ಥೆಯ ಮುಖ್ಯ ನಿರ್ವಹಣಾಧಿಕಾರಿ (ಸಿಇಒ) ಜಾಕ್ ಡಾಸಿ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ತಮ್ಮ ಸ್ಥಾನದಲ್ಲಿ ಹೊಸ ಸಿಇಒ ಆಗಿ ಪರಾಗ್ ಅಗರವಾಲ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಾಕ್ ಟ್ವೀಟ್ ಮಾಡಿದ್ದಾರೆ.

 

ಟ್ವಿಟ್ಟರ್ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದ ಜಾಕ್​ ಡಾರ್ಸೆ ಟ್ವಿಟರ್ ಸಂಸ್ಥೆಯಲ್ಲಿ 16 ವರ್ಷ ಕಾರ್ಯನಿರ್ವಹಿಸಿದ್ದರು. ಆದರೆ ಅವರು ತಮ್ಮ ಹುದ್ದೆಗೆ ದಿಢೀರ್ ರಾಜಿನಾಮೆ ನೀಡಿದ್ದಾರೆ. ಸಂತಸದ ಸುದ್ದಿಯೆಂದರೆ ಟ್ವಿಟ್ಟರ್ ಸಂಸ್ಥೆಯಲ್ಲಿ ಸಿಟಿಒ ಆಗಿ ಕಾರ್ಯ ನಿರ್ವಹಿಸಿದ್ದ ಭಾರತೀಯ ಮೂಲದ ಪರಾಗ್ ಇನ್ಮುಂದೆ ಸಿಇಒ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಭಾರತೀಯ ಮೂಲದ ಪರಾಗ್ ಟ್ವಿಟ್ಟರ್ ಗೆ ಹೊಸ ಚೀಫ್ ಆಗಿ ನೇಮಕ

ಯಾರಿದು ಪರಾಗ್ ಅಗರವಾಲ್ ? ಎಲ್ಲಿಯವರು, ಎಲ್ಲಿ ಅಧ್ಯಯನ ಮಾಡಿದರು ಮತ್ತು ಅವರ ಹೆಂಡತಿ ಯಾರು ಎಂಬೆಲ್ಲಾ ಮಾಹಿತಿಯೊಂದಿಗೆ ಅವರ ಜೀವನಚರಿತ್ರೆಯನ್ನು ಇಲ್ಲಿ ತಿಳಿಯೋಣ.

 

ಪರಾಗ್ ಅಗರವಾಲ್ ಯಾರು?:

ಪರಾಗ್ ಅಗರವಾಲ್ ಅವರು ಮುಂಬೈನ್ ಕರಗ್‌ಪುರ್ ನಲ್ಲಿ 1984ರಲ್ಲಿ ಜನಿಸಿದರು. ಅವರ ವಿದ್ಯಾಭ್ಯಾಸದ ನಂತರ 2011ರಲ್ಲಿ ಟ್ವಿಟರ್‌ಗೆ ಜಾಹೀರಾತು ಇಂಜಿನಿಯರ್ ಆಗಿ ಸೇರ್ಪಡೆಗೊಂಡರು ಮತ್ತು ಅಕ್ಟೋಬರ್ 2017 ರಿಂದ ಮುಖ್ಯ ತಂತ್ರಜ್ಞಾನ ಅಧಿಕಾರಿ ಅಥವಾ CTO ಆಗಿ ಸೇವೆ ಸಲ್ಲಿಸಿದ್ದಾರೆ. ಕಂಪನಿಯ ಹೇಳಿಕೆಯ ಪ್ರಕಾರ ಸಿಟಿಒ ಆಗಿ ಅಗರವಾಲ್ ಕಂಪನಿಯ ತಾಂತ್ರಿಕ ಕಾರ್ಯತಂತ್ರಕ್ಕೆ ಜವಾಬ್ದಾರರಾಗಿದ್ದಾರೆ. ಕಂಪನಿಯಾದ್ಯಂತ ಮೆಷಿನ್ ಲರ್ನಿಂಗ್ ಸ್ಥಿತಿಯನ್ನು ಮುನ್ನಡೆಸುವಾಗ ಅಭಿವೃದ್ಧಿ ವೇಗವನ್ನು ಸುಧಾರಿಸಲು ಪ್ರಮುಖ ಕೆಲಸ ಮಾಡಿದ್ದಾರೆ.

ಪರಾಗ್ ಅಗರವಾಲ್ ಅವರ ವೈಯಕ್ತಿಕ ಮಾಹಿತಿ:

ಜನ್ಮ ದಿನಾಂಕ : 1984
ವಯಸ್ಸು : 37
ಜನ್ಮ ಸ್ಥಳ: ಮುಂಬೈ, ಭಾರತ
ವಾಸಸ್ಥಳ: ಕರಗ್‌ಪುರ್, ಮುಂಬೈ
ಧರ್ಮ: ಹಿಂದೂ
ರಾಷ್ಟ್ರೀಯತೆ : ಭಾರತೀಯ

ಶಿಕ್ಷಣ:

ಪರಾಗ್ ಅಗರವಾಲ್ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಂಬೈನಲ್ಲಿ ಅಧ್ಯಯನ ಮಾಡಿದ್ದಾರೆ. 12ನೇ ತರಗತಿಯ ಬೋರ್ಡ್ ಪರೀಕ್ಷೆಯ ನಂತರ ಎಐಇಇಇ ಪರೀಕ್ಷೆಯನ್ನು ತೆಗೆದುಕೊಂಡು ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಐಐಟಿ ಬಾಂಬೆಯಲ್ಲಿ ಪ್ರವೇಶ ಪಡೆದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬಿ ಟೆಕ್ ಪಡೆದಿರುವ ಪರಾಗ್ ಅಗರವಾಲ್ ಅವರು ಸ್ಟಾನ್ ಫಾರ್ಡ್ ವಿವಿಯಿಂದ ಪಿಎಚ್ ಡಿ ಪಡೆದುಕೊಂಡಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿ ಟ್ವಿಟ್ಟರ್ ಸಂಸ್ಥೆ ಸೇರಿ ಹಂತ ಹಂತವಾಗಿ ಬೆಳೆದ ಪರಾಗ್ ಅವರು ಹತ್ತು ವರ್ಷಗಳ ಸಂಸ್ಥೆಯ ಸಿಇಒ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಬಾಂಬೆ ಐಐಟಿಯ ಪದವೀಧರನಿಗೆ ಅಂತಾರಾಷ್ಟ್ರೀಯ ಮಟ್ಟದ ಮಹತ್ವದ ಸ್ಥಾನ ಲಭಿಸಿರುವುದು ಹೆಮ್ಮೆಯ ಸಂಗತಿ.

ವೃತ್ತಿ ಜೀವನ:

ಟ್ವಿಟ್ಟರ್ ಸಂಸ್ಥೆ ಸೇರುವುದಕ್ಕೂ ಮುನ್ನ ಮೈಕ್ರೋಸಾಫ್ಟ್, ಯಾಹೂ, ಎಟಿ ಅಂಡ್ ಟಿ ಮುಂತಾದ ಸಂಸ್ಥೆಗಳ ಸಂಶೋಧನಾ ವಿಭಾಗದಲ್ಲಿ ಪರಾಗ್ ಕಾರ್ಯ ನಿರ್ವಹಿಸಿದ್ದಾರೆ.

ಟ್ವಿಟರ್​ನಲ್ಲಿ 2011ರಿಂದ ಸೇವೆ ಆರಂಭಿಸಿ, ಹಲವು ಜವಾಬ್ದಾರಿ ನಿರ್ವಹಿಸಿ ಸಂಸ್ಥೆಯ ಏಳಿಗೆಯಲ್ಲಿ ಭಾಗಿಯಾಗಿರುವ ಪರಾಗ್ ಇದೀಗ ಅದೇ ಸಂಸ್ಥೆಯ ಮುಖ್ಯಸ್ಥ ಸ್ಥಾನಕ್ಕೆ ಏರಿದ್ದಾರೆ.

ವೇತನವೆಷ್ಟು ?:

ಪರಾಗ್ ಅಗರವಾಲ್ ಅವರು ಟ್ವಿಟ್ಟರ್ ಸಂಸ್ಥೆಯಲ್ಲಿ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಅವರು ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ಟ್ವಿಟ್ಟರ್ ಸಂಸ್ಥೆಯಲ್ಲಿ 1000 ಉದ್ಯೋಗಿಗಳಿದ್ದರು. ಪರಾಗ್ ಅವರು ಈಗ ಟ್ವಿಟ್ಟರ್ ನಲ್ಲಿ ನೂತನ ಸಿಇಒ ಆಗಿ ಸೇರ್ಪಡೆಯಾಗಿದ್ದು, ತಿಂಗಳಿಗೆ ಅಂದಾಜು $50K ಮತ್ತು ವರ್ಷಕ್ಕೆ $1.5 ಮಿಲಿಯನ್ ವೇತನವನ್ನು ನೀಡಲಾಗುವುದು.

ಪರಾಗ್ ಅಗರವಾಲ್ ಅವರ ಕುಟುಂಬ:

ಪರಾಗ್ ಅಗರವಾಲ್ ಅವರ ಕುಟುಂಬ ಕುರಿತಾದ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲದಿದ್ದರೂ, ಪರಾಗ್ ಅಗರವಾಲ್ ಕುಟುಂಬದಲ್ಲಿ ಮುದ್ದಾದ ಪತ್ನಿ ವಿನಿತಾ ಅಗರ್‌ವಾಲ್ ಮತ್ತು ಮಗಳು ಅನಾಮಿಕ ಅಗರವಾಲ್ ಅವರನ್ನು ಹೊಂದಿದ್ದಾರೆ.

ಟೆಕ್ ದಿಗ್ಗಜರಲ್ಲಿ ಭಾರತ ಮೂಲದವರು:

ಗೂಗಲ್ ಸಂಸ್ಥೆಯ ಆಲ್ಫಾಬೆಟ್‌ನ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಂಸ್ಥೆಯ ಸತ್ಯ ನಾದೆಲ್ಲಾ, ಐಬಿಎಂ ಸಂಸ್ಥೆಯ ಅರವಿಂದ್ ಕೃಷ್ಣ, ಅಡೋಬ್ ಸಂಸ್ಥೆಯ ಶಂತನು ನಾರಾಯಣ್ ಅವರ ಸಾಲಿಗೆ ಟ್ವಿಟ್ಟರ್ ನ ಹೊಸ ಸಿಇಒ ಪರಾಗ್ ಅಗರವಾಲ್ ಕೂಡ ಸೇರ್ಪಡೆಯಾಗಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Who is Parag Agrawal?: India-born Parag Agrawal has been appointed as the new Chief Executive Officer of Twitter. Know more about him in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X