ಹೆಚ್ಚಿನ ವೇತನಕ್ಕಾಗಿ ಫಾರಿನ್ ಹೋಗ್ತೀರಾ... ಆದ್ರೆ ಭಾರತದ ಈ ನಗರದಲ್ಲಿ ಸಂಪಾದಿಸಲು ವಿದೇಶಿಗರು ಬರುತ್ತಾರೆ ಗೊತ್ತಾ!

ಭಾರತದಲ್ಲಿಯೂ ಒಂದು ನಗರವಿದೆ ಅದು ವಿದೇಶಿಗರಿಗೆ ಅವರ ಕೆರಿಯರ್ ರೂಪಿಸಿಕೊಳ್ಳಲು ಆಕರ್ಷಿತವಾಗಿರುವ ತಾಣವಾಗಿದೆ. ಬನ್ನಿ ಆ ತಾಣ ಯಾವುದೆಂದು ನಾವು ಕೆರಿಯರ್ ಇಂಡಿಯಾ ನಿಮಗೆ ಪರಿಚಯಿಸುತ್ತಿದೆ

By Kavya

ಪ್ರತಿಯೊಬ್ಬರಿಗೂ ತಿಳಿದಿದೆ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಒಂದು ಪಿಡುಗಾಗಿ ಕಾಡುತ್ತಿದೆ ಎಂದು. ಈ ಕಾರಣದಿಂದಾಗಿ ಭಾರತದ ಅದೆಷ್ಟೋ ಮಂದಿ ಜನರು ವಿದೇಶದಲ್ಲಿ ಕೆಲಸ ಮಾಡಲು ಬಯಸುತ್ತಾರೆ. ಆಧುನಿಕ ಜೀವನ ನಿರ್ವಹಣೆ ಹಾಗೂ ಉತ್ತಮ ವೇತನಕ್ಕಾಗಿ ಭಾರತೀಯರು ನಮ್ಮ ದೇಶ ಬಿಟ್ಟು ಇದೀಗ ವಿದೇಶದತ್ತ ಪಯಣ ಬೆಳೆಸುತ್ತಿದ್ದಾರೆ.

ಭಾರತದ ಈ ನಗರದಲ್ಲಿ ಸಂಪಾದಿಸಲು ವಿದೇಶಿಗರು ಬರುತ್ತಾರೆ... ಆ ನಗರ ಯಾವುದು ಗೊತ್ತಾ?

ಆದರೆ ನಿಮಗೆ ಈ ವಿಷಯ ಕೇಳಿದ್ರೆ ಆಶ್ಚರ್ಯವಾಗಬಹುದು. ಲಕ್ಷಾಂತರ ರೂಪಾಯಿ ಸಂಪಾದಿಸಲು ವಿದೇಶದಿಂದ ಭಾರತದ ಈ ನಗರಕ್ಕೆ ಅದೆಷ್ಟೋ ಮಂದಿ ವಲಸೆ ಬರುತ್ತಿದ್ದಾರೆ. ಹೌದು ಈ ಮಾತು ನಿಜ ಭಾರತದಲ್ಲಿಯೂ ಒಂದು ನಗರವಿದೆ ಅದು ವಿದೇಶಿಗರಿಗೆ ಅವರ ಕೆರಿಯರ್ ರೂಪಿಸಿಕೊಳ್ಳಲು ಆಕರ್ಷಿತವಾಗಿರುವ ತಾಣವಾಗಿದೆ. ಬನ್ನಿ ಆ ತಾಣ ಯಾವುದೆಂದು ನಾವು ಕೆರಿಯರ್ ಇಂಡಿಯಾ ನಿಮಗೆ ಪರಿಚಯಿಸುತ್ತಿದೆ.

ಭಾರತದ ಈ ಫೇಮಸ್ ನಗರ ವಿದೇಶಿಯರಿಗೆ ತುಂಬಾ ಅಚ್ಚುಮೆಚ್ಚಾದ ತಾಣವಾಗಿದೆ. ಆ ಅಚ್ಚುಮೆಚ್ಚು ತಾಣ ಯಾವುದೆಂದರೆ ಮುಂಬಯಿ ನಗರ. ಹೌದು ಇದನ್ನ ಡ್ರೀಂ ಸಿಟಿ ಎಂದೂ ಕೂಡಾ ಕರೆಯುತ್ತಾರೆ. ಇಲ್ಲಿ ಜನರು ತಮ್ಮ ಕನಸು ನನಸು ಮಾಡಿಕೊಳ್ಳಲು ಇಲ್ಲಿಗೆ ಆಗಮಿಸುತ್ತಾರೆ.

ಇಂಟರ್ನ್ಯಾಷನಲ್ ಬ್ಯಾಂಕ್‌ಗಳಲ್ಲಿ ಹೆಚ್‌ಎಸ್‌ಬಿಸಿ ಬ್ಯಾಂಕ್ ಕೂಡಾ ಒಂದಾಗಿದೆ. ಮುಂಬಯಿಯಲ್ಲಿ ಇರುವ ಈ ಬ್ಯಾಂಕ್‌ನಲ್ಲಿ ವಿದೇಶಿಗರು 2.17 ಮಿಲಿಯನ್ ಡಾಲರ್ ಸಂಪಾದಿಸುತ್ತಾರೆ. ಈ ಅಂಕಿ ಅಂಶವು ಗ್ಲೋಬಲ್ ಸರಾಸರಿಯ ಎರಡರಷ್ಟಿರುತ್ತದೆ ಎಂಬ ನಿರೀಕ್ಷೆಯಿದೆ. ನಿರೀಕ್ಷಿತ ವೇತನದ ವಿಚಾರದಲ್ಲಿ ಸ್ವಿಜರ್ ಲ್ಯಾಂಡ್ ಮೊದಲ ಸ್ಥಾನದಲ್ಲಿ ಇದೆ.

ಈ ಸಮೀಕ್ಷೆಯ ಪ್ರಕಾರ ಏಷ್ಯಾದಲ್ಲಿ ಕೆಲಸ ಮಾಡುವ ವಿದೇಶಿಯರಿಗೆ ಆರ್ಥಿಕ ಬೆಂಬಲ ಸಿಗುತ್ತದೆ. ಈ ಪಟ್ಟಿಯಲ್ಲಿ ಮುಂಬೈ ಹೆಸರು ಕೂಡಾ ಇದೆ. ಲಂಡನ್ , ಸ್ಯಾನ್ ಫ್ರಾನ್ಸಿಸ್ಕೋ, ನ್ಯೂಯಾರ್ಕ್ ಗೆ ಹೋಲಿಸಿದರೆ, ಮುಂಬೈನಲ್ಲಿ ಕಡಿಮೆ ಉದ್ಯೋಗ ಅವಕಾಶಗಳಿವೆ ಎಂದು ವರದಿಗಳು ಹೇಳುತ್ತವೆ.

ಭಾರತದ ಈ ನಗರದಲ್ಲಿ ಸಂಪಾದಿಸಲು ವಿದೇಶಿಗರು ಬರುತ್ತಾರೆ... ಆ ನಗರ ಯಾವುದು ಗೊತ್ತಾ?

ನಮಗೆ ಎಲ್ಲರಿಗೂ ತಿಳಿದಿದೆ, ಮುಂಬೈ ಒಂದು ಎಂತಹ ನಗರವೆಂದರೆ ಅಲ್ಲಿ ಪ್ರತಿಯೊಬ್ಬರ ಕನಸೂ ಕೂಡಾ ನನಸಾಗುತ್ತದೆ ಎಂದು. ಅಷ್ಟೇ ಅಲ್ಲ ಮುಂಬಯಿಯಲ್ಲಿ ಪ್ರತಿಯೊಬ್ಬರಿಗೂ ಕೆಲಸ ಸಿಗುತ್ತದೆ. ಆದ್ರೆ ಸ್ವಲ್ಪ ಹೆಚ್ಚಿನ ಪರಿಶ್ರಮ ಅಗತ್ಯ ಹಾಗೂ ಸಮಯವೂ ಅಗತ್ಯವಾಗಿದೆ. ಈ ಕಾರಣದಿಂದ ಮುಂಬಯಿಯಲ್ಲಿ ಇದೀಗ ಜನಸಂಖ್ಯೆ ಕೂಡಾ ಹೆಚ್ಚುತ್ತಿದೆ ಜತೆಗೆ ಸಮಸ್ಯೆಗಳೂ ಕೂಡಾ ಸೃಷ್ಟಿಯಾಗುತ್ತಿದೆ. ನೀವು ಇಂದು ಮುಂಬಯಿ ನಗರಕ್ಕೆ ಸುತ್ತಾಡಲು ಹೋದಾಗ ಇಲ್ಲಿ ನೀವು ಒಂದು ರೂಂನ ಬಾಡಿಗೆ ಇತರ ನಗರಗಳಿಗೆ ಹೋಲಿಸಿದ್ರೆ ಇಲ್ಲಿ ದ್ವಿಗುಣವಾಗಿರುತ್ತದೆ. ಕನಸಿನ ಈ ನಗರದಲ್ಲಿ ಜೀವಿಸ ಬೇಕಾದ್ರೆ ಎಷ್ಟು ಖರ್ಚು ಮಾಡಬೇಕಾಗುತ್ತೆ ಎಂದು ನೀವು ಇದೀಗ ತಿಳಿದುಕೊಂಡಿರಬೇಕು ಅಲ್ವಾ.

ಇನ್ನು ಉದ್ಯೋಗದ ಬಗ್ಗೆ ಹೇಳುವುದಾದ್ರೆ ಜನರು ಮುಂಬಯಿಯಲ್ಲಿ ಕೆಲಸ ಪಡೆಯುತ್ತಾರೆ ಹೌದು. ಆದ್ರೆ ನಿರುದ್ಯೋಗದ ಬಗ್ಗೆ ಹೇಳುವುದಾದ್ರೆ ನಮ್ಮಲ್ಲಿ ವಿದ್ಯಾವಂತಹ ಅಭ್ಯರ್ಥಿಗಳ ಕೊರತೆ ಇದೆ. ಈ ಹಿಂದೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಏನು ತಿಳಿದುಬಂದಿದೆ ಎಂದರೆ, ಕಂಪನಿಗಳು ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳಲ್ಲಿ ಹುದ್ದೆಗೆ ಅಗತ್ಯವಾದ ಕೌಶಲ್ಯ ಹಾಗೂ ಪ್ರತಿಭೆ ಇಲ್ಲದಿರುವುದನ್ನ ಬಹಿರಂಗಪಡಿಸಿತ್ತು. ತಮ್ಮ ಕೌಶಲ್ಯ ಕೊರತೆಯಿಂದ ಅಭ್ಯರ್ಥಿಗಳು ಉದ್ಯೋಗ ವಂಚಿತರಾಗುತ್ತಿದ್ದಾರೆ. ಅಷ್ಟೇ ಅಲ್ಲ ಈ ಕಾರಣದಿಂದ ಇಂದಿಗೂ ಹೆಚ್ಚಿನ ಕಂಪನಿಗಳಲ್ಲಿ ಹುದ್ದೆಗಳು ಇನ್ನೂ ಖಾಲಿಯಾಗಿವೆ ಎಂಬುವುದು ತಿಳಿದುಬಂದಿದೆ.

ಇಂದು ಅದೆಷ್ಟೋ ಶಾಲೆ ಹಾಗೂ ಕಾಲೇಜು ಶಿಕ್ಷಣ ಸಂಸ್ಥೆಗಳು ಹಣ ಗಳಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಅದೆಷ್ಟೋ ಕೋರ್ಸ್ ಗಳನ್ನ ಪರಿಚಯಿಸುತ್ತಿದ್ದಾರೆ. ಆದ್ರೆ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿರುವ ಕೌಶಲ್ಯವನ್ನ ಅವರು ಕಲಿಸುತ್ತಿಲ್ಲ. ಕೌಶಲ್ಯವಂಚಿತ ವಿದ್ಯಾರ್ಥಿಗಳು ದೇಶದ ಉನ್ನತ ಕಂಪನಿಗಳಲ್ಲಿ ಕೆಲಸ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
All Countries have more job option and India is no exception. India can be a mind - boggling experience for people visiting from other countries. While many of them find India too colorful and too crowded also here more vacancy in jobs also. thats why foreigners picked up in india for career opportunity.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X