ರಿಜೆಕ್ಟ್ ಪದ ಕೇಳಿ ಸಾಕಾಯಿತಾ... ನೋ ವರಿ ಈ ಪದದಿಂದ ಏನೆಲ್ಲಾ ಲಾಭವಿದೆ ಗೊತ್ತಾ?

By Kavya

ತಿರಸ್ಕಾರ ಎಂಬುವುದು ಒಳ್ಳೆಯ ವಿಚಾರ. ಆದ್ರೆ ನೋ ಡೌಟ್ ನಾವೆಲ್ಲರೂ ತಿರಸ್ಕಾರ ಎಂಬುದನ್ನ ತುಂಬಾ ದ್ವೇಷಿಸುತ್ತೇವೆ. ಆದ್ರೆ ಜೀವನದಲ್ಲಿ ತಿರಸ್ಕಾರ ಎಂಬುವುದು ಒಳ್ಳೆಯ ವಿಚಾರ ನೆನಪಿಟ್ಟುಕೊಳ್ಳಿ.

 

ಕೆಲಸದ ಒತ್ತಡ ಮಧ್ಯೆ ಹೀಗೆಲ್ಲಾ ಮಾಡಿ... ರಿಲಾಕ್ಸ್ ಆಗುತ್ತೆ!ಕೆಲಸದ ಒತ್ತಡ ಮಧ್ಯೆ ಹೀಗೆಲ್ಲಾ ಮಾಡಿ... ರಿಲಾಕ್ಸ್ ಆಗುತ್ತೆ!

ರಿಜೆಕ್ಟ್ ಪದ ಕೇಳಿ ಸಾಕಾಯಿತಾ... ನೋ ವರಿ ಈ ಪದದಿಂದ ಏನೆಲ್ಲಾ ಲಾಭವಿದೆ ಗೊತ್ತಾ?

ಹೌದು ನಾವು ತಮಾಶೆ ಮಾಡುತ್ತಾ ಇಲ್ಲ. ಜೀವನದಲ್ಲಿ ಯಶಸ್ಸು ಗಳಿಸಬೇಕಂದ್ರೆ ತಿರಸ್ಕಾರ ಎಂಬ ಹಂತವನ್ನ ನಾವು ದಾಟಲೇ ಬೇಕು. ಜೀವನದಲ್ಲಿ ತಿರಸ್ಕಾರ ಎಂಬುವುದು ಕೂಡಾ ಒಂದು ಭಾಗವಾಗಿದೆ. ಜೀವನದ ಪ್ರತೀ ಹಂತದಲ್ಲಿಯೂ ತಿರಸ್ಕಾರ ಅನುಭವಿಸುತ್ತಾ ಇದ್ದರೆ ಅದರ ಬಗ್ಗೆ ಚಿಂತೆ ಬಿಡಿ. ಅದು ದೊಡ್ಡ ವಿಷಯವೇ ಅಲ್ಲ. ಅದಕ್ಕಾಗಿ ನಿಮಗೆ ನೀವು ಹರ್ಟ್ ಮಾಡಿಕೊಳ್ಳುವುದು ಸರಿಯಲ್ಲ.

ತಿರಸ್ಕಾರವೂ ಒಳ್ಳೆಯದೇ ಎಂದು ನಾವು ನಿಮಗೆ ತಿಳಿಸುತ್ತೇವೆ ಯಾಕೆಂದ್ರೆ ಮುಂದಕ್ಕೆ ಓದಿ:

ನೀವು ತುಂಬಾ ವಿಷಯಗಳನ್ನ ಕಲಿಯಬಹುದು:

ನಂಬಿ... ಒಮ್ಮೆ ನಿಮ್ಮನ್ನ ಯಾರಾದ್ರೂ ತಿರಸ್ಕರಿಸಿದ್ರೆ, ಇದರಿಂದ ನಿಮಗೆ ಮುಂದಿನ ಬಾರಿ ಪ್ರಯತ್ನಮಾಡುವಾಗ ಯಾವುದನ್ನ ಅವಾಯ್ಡ್ ಮಾಡಬೇಕು ಎಂಬ ಐಡಿಯಾ ಸಿಗುತ್ತದೆ. ಅಷ್ಟೇ ಅಲ್ಲ ಇದರಿಂದ ನೀವು ಇಂಪ್ರೂವ್ ಕೂಡಾ ಆಗ್ತೀರಾ.

ಯೋಗ ಮಾಡುವುದು ಮಾತ್ರವಲ್ಲ ಇದರಲ್ಲೂ ಕೆರಿಯರ್ ರೂಪಿಸಿಕೊಳ್ಳಬಹುದು!ಯೋಗ ಮಾಡುವುದು ಮಾತ್ರವಲ್ಲ ಇದರಲ್ಲೂ ಕೆರಿಯರ್ ರೂಪಿಸಿಕೊಳ್ಳಬಹುದು!

ಯಾವುದು ಸರಿ ಎಂಬುವುದು ನಿಮಗೆ ತಿಳಿಯುತ್ತೆ:

ಸಂದರ್ಶನಕ್ಕೆ ಹೋದಾಗ ನಿಮ್ಮನ್ನ ರಿಜೆಕ್ಟ್ ಮಾಡಿದ್ರೆ ಅದರರ್ಥ ನಿಮ್ಮಲ್ಲಿ ಏನೋ ತಪ್ಪಿದೆ ಎಂದಲ್ಲ, ಬದಲಿಗೆ ಅವರು ನಿಮ್ಮಿಂದ ಬೇರೆ ಏನೋ ನಿರೀಕ್ಷೆ ಮಾಡಿದ್ದರು ಎಂದು. ಹಾಗಾಗಿ ರಿಜೆಕ್ಷನ್ ನಿಮ್ಮನ್ನ ಸರಿಯಾದ ಟ್ರ್ಯಾಕ್ ಗೆ ತರುತ್ತದೆ. ಸರಿಯಾದ ಕಂಪನಿಯಲ್ಲಿ ನಿಮಗೆ ಜಾಬ್ ಸಿಗುವಂತೆ ನಿಮ್ಮ ಐಡಿಯಾ ಲೆವೆಲ್ ಹೆಚ್ಚಿಸುತ್ತದೆ.

ನಿಮ್ಮನ್ನ ನೀವು ಇಂಪ್ರೂವ್ ಮಾಡಿಕೊಳ್ಳುತ್ತೀರಾ:

ಜೀವನದಲ್ಲಿ ನೀವು ತಿರಸ್ಕಾರವನ್ನ ಫೇಸ್ ಮಾಡಿದ್ದರೆ ಅದು ನಿಮ್ಮ ಜೀವನದಲ್ಲಿ ನಿಮಗೆ ಒಳ್ಳೆಯ ಅಡ್ವಾಂಟೇಜ್ ಎಂಬುವುದು ತಿಳಿದುಕೊಳ್ಳಿ. ಸಕ್ಸಸ್ ಆಗುವುದು ಹೇಗೆ ಎಂದು ಅದು ತಿಳಿಸಿಕೊಡುತ್ತದೆ. ಸಂದರ್ಶನದಲ್ಲಿ ವ್ಯಕ್ತಿಯೊಬ್ಬರು ಫೈಲಾದಾಗ, ಮತ್ತೊಂದು ಸಂದರ್ಶನಕ್ಕೆ ಹಾಜರಾಗುವ ವೇಳೆ ಅವರು ತುಂಬಾ ಇಂಪ್ರೂವ್ ಕೂಡಾ ಆಗಿರುತ್ತಾರೆ.

ಸಿನಿಮಾ ಹಾಸ್ಟೆಲ್ ಥರಹ ಇರುತ್ತಾ ರಿಯಲ್ ಹಾಸ್ಟೆಲ್!ಸಿನಿಮಾ ಹಾಸ್ಟೆಲ್ ಥರಹ ಇರುತ್ತಾ ರಿಯಲ್ ಹಾಸ್ಟೆಲ್!

ನೀವು ಸ್ಟ್ರಾಂಗ್ ಆಗ್ತೀರಾ:

ಈ ಮಾತನ್ನ ನೀವು ನಂಬಿ... ಜೀವನದಲ್ಲಿ ನೀವು ಅನುಭವಿಸುವ ತಿರಸ್ಕಾರದಿಂದ ನೀವು ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ. ತಿರಸ್ಕಾರವು ನಿಮ್ಮನ್ನ ಮತ್ತಷ್ಟು ಸ್ಟ್ರಾಂಗ್ ಆಗುವಂತೆ ಮಾಡುತ್ತದೆ. ಸುಮಾರು ೫೦ ಬಾರಿ ನೀವು ರಿಜೆಕ್ಟ್ ಆಗಿದ್ದರೆ ಕೊನೆಯಲ್ಲಿ ನೀವು ಸ್ಟ್ರಾಂಗೆಸ್ಟ್ ವ್ಯಕ್ತಿಯಾಗಿ ಹೊರಹೊಮ್ಮುತ್ತೀರಾ.

ನಿಮ್ಮ ಗುರಿ ನೀವು ಖಂಡಿತ ತಲುಪುತ್ತೀರಾ:

ಸಂದರ್ಶನದಲ್ಲಿ ನಿಮ್ಮ ಫ್ರೆಂಡ್ ಸೆಲೆಕ್ಟ್ ಆಗಿರಬಹುದು ಅದರರ್ಥ ನೀವು ಯಾವುದಕ್ಕೂ ಪ್ರಯೋಜನವಿಲ್ಲ ಎಂದಲ್ಲ. ಬದಲಿಗೆ ನಿಮ್ಮ ಟ್ಯಾಲೆಂಟ್ ಬೇರೆನೇ ಇದೆ ಎಂದರ್ಥ. ನಿಮ್ಮ ಟ್ಯಾಲೆಂಟ್ ಏನೆಂದು ಅರಿತುಕೊಂಡು, ಗುರಿ ತಲುಪಲು ಹಾರ್ಡ್ ವರ್ಕ್ ಮಾಡಿ.

 

ಬ್ಲಾಗ್ ತೆರೆದು ಫೇಮಸ್ ಬ್ಲಾಗರ್ ಆಗುವುದು ಹೇಗೆ?ಬ್ಲಾಗ್ ತೆರೆದು ಫೇಮಸ್ ಬ್ಲಾಗರ್ ಆಗುವುದು ಹೇಗೆ?

For Quick Alerts
ALLOW NOTIFICATIONS  
For Daily Alerts

English summary
You know what; just like winning, rejection is also a part of LIFE. No matter what; you will always keep experiencing rejection in life in every walk of your life. But hey, that doesn’t mean that you should give up in life and hurt yourself.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X