ಓದಿನ ಮಧ್ಯೆ ಸ್ಟಡಿ ಬ್ರೇಕ್ ತೆಗೆದೆಕೊಳ್ಳುವುದು ಹೇಗೆ?

Written By: Nishmitha B

ಶಾಲೆ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಓದಿನಲ್ಲಿ ಸಖತ್ ಬ್ಯುಸಿ ಇರುತ್ತಾರೆ. ಬ್ಯಾಕ್ ಟು ಬ್ಯಾಕ್ ಪರೀಕ್ಷೆಯಿಂದ ತುಂಬಾ ಸ್ಟ್ರೆಸ್ ನಿಂದ ಕೂಡಾ ಇರುತ್ತಾರೆ. ಈ ತಿಂಗಳು ಸ್ಟಡಿಮೇಲೆ ಹೆಚ್ಚು ಫೋಕಸ್ ಮಾಡುವುದು ತುಂಬಾ ಇಂಪೋರ್ಟೆಂಟ್. ಆದ್ರೆ ಇದೇ ಟೈಂನಲ್ಲಿ ಬ್ರೈನ್ ಕೂಲ್ ಆಗಿಡುವುದು ಕೂಡಾ ಇಂಪೋರ್ಟೆಂಟ್. ಮೈಂಡ್ ಫ್ರೆಶ್ ಆಗಿದ್ದರೆ ಮಾತ್ರ ಓದಿದು ಕೂಡಾ ನೆನಪಲ್ಲಿ ಉಳಿಯುತ್ತೆ

ಎಕ್ಸಾಂ ಟೈಮನಲ್ಲಿ ವಿದ್ಯಾರ್ಥಿಗಳು ತಮ್ಮ ಮೈಂಡ್ ಫ್ರೆಶ್ ಆಗಿಟ್ಟುಕೊಳ್ಳಬೇಕು. ಹಾಗಾಗಿ ಓದಿನ ಮಧ್ಯೆ ಕ್ರಮವಾಗಿ ಬ್ರೇಕ್ ಕೂಡಾ ತೆಗೆದುಕೊಳ್ಳಬೇಕು. ಸ್ಟಡಿ ಮಧ್ಯೆ ಪ್ರತಿ ೪೫ ನಿಮಿಷಕ್ಕೆ ಬ್ರೇಕ್ ತೆಗೆದುಕೊಂಡ್ರೆ ಓದನತ್ತ ಫೋಕಸ್ ಮಾಡಬಹುದು. ಇನ್ನು ಸ್ಟಡಿ ಬ್ರೇಕ್ ಹೇಗೆ ತೆಗೆದುಕೊಳ್ಳಬೇಕು ಅದರಿಂದ ಏನು ಪ್ರಯೋಜನ ಎಂಬುವುದು ಕೂಡಾ ವಿದ್ಯಾರ್ಥಿಗಳು ತಿಳಿದುಕೊಂಡಿರಬೇಕು. ಹೇಗೆಲ್ಲಾ ಸ್ಟಡಿ ಬ್ರೇಕ್ ತೆಗೆದುಕೊಳ್ಳ ಬಹುದು ಎಂಬ ಟಿಪ್ಸ್ ಇಲ್ಲಿದೆ ಓದಿ

ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಿ:

ಪರೀಕ್ಷೆ ಟೈಂನಲ್ಲಿ ಭಯಗೊಂಡು ವಿದ್ಯಾರ್ಥಿಗಳು ಬೇಗ ಸ್ಟ್ರೆಸ್ ಗೆ ಒಳಗಾಗುತ್ತಾರೆ. ಹಾಗಂತ ಇದಕ್ಕೆ ಟೆನ್ಶನ್ ಆಗಬೇಡಿ. ಯಾಕೆಂದ್ರೆ ಪರೀಕ್ಷೆ ಟೈಮನಲ್ಲಿ ಎಲ್ಲರಿಗೂ ಸ್ಟ್ರೆಸ್ ಆಗುವುದು ಸಾಮಾನ್ಯ. ಈ ಟೈಮನಲ್ಲಿ ಓದಿನತ್ತ ಫೋಕಸ್ ಮಾಡಲು ಆಗದೇ ಇದ್ದರೆ ನೀವು ಬ್ರೇಕ್ ತೆಗೊಂಡು ಸ್ವಲ್ಪ ರಿಲಾಕ್ಸ್ ಆಗಿ.

ಕಾಂಫಿಡೆನ್ಸ್ ಹೆಚ್ಚಿಸಿಕೊಳ್ಳಿ :

ಬ್ರೇಕ್ ತೆಗೆದುಕೊಳ್ಳದೇ ಕಂಟಿನ್ಯೂ ಆಗಿ ಓದಿತ್ತಾ ಹೋದರೆ ಇದು ನಿಮ್ಮ ಕಾಂಪಿಡೆನ್ಸ್ ನ್ನು ಕಡಿಮೆ ಮಾಡುತ್ತದೆ. ನೀವು ಬ್ರೇಕ್ ಕೊಡದೇ ಓದಿದಾಗ ನಿಮಗೆ ಗೊತ್ತಿಲ್ಲದೇ ನೀವು ಒಳಗೊಳಗಿನಿಂದ ಎಕ್ಸಾಂ ಬಗ್ಗೆ ಭಯ ಪಡಲು ಪ್ರಾರಂಬಿಸುತ್ತೀರಿ. ಇದರಿಂದ ನಿಮ್ಮ ಕಾಂಫಿಡೆಂಟ್ ಕಡಿಮೆಯಾಗುತ್ತದೆ. ಅದಕ್ಕಾಗಿ ಬ್ರೇಕ್ ತೆಗೆದುಕೊಳ್ಳಿ. ಇದರಿಂದ ಬ್ರೈನ್ ರಿಲಾಕ್ಸ್ ಆಗುತ್ತದೆ

ನೆನಪಿನ ಶಕ್ತಿ ಹೆಚ್ಚಿಸುತ್ತದೆ:

ಚಿಕ್ಕ ಬ್ರೆಕ್ ತೆಗೆದುಕೊಳ್ಳುವುದರಿಂದ ನಿಮ್ಮ ನೆನಪಿನ ಶಕ್ತಿ ಕೂಡಾ ಜಾಸ್ತಿಯಾಗುತ್ತದೆ. ಲಾಂಗ್ ಸ್ಟಡಿ ಮಧ್ಯೆ 15 ರಿಂದ 20 ನಿಮಿಷ ಬ್ರೇಕ್ ತೆಗೆದುಕೊಂಡರೆ ಬ್ರೈನ್ ಸೆಲ್ಸ್ ಚೆನ್ನಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ಓದಿರುವುದು ನೆನಪಿನಲ್ಲಿಟ್ಟು ಕೊಳ್ಳಲು ಸಹಾಯಕವಾಗುವುದು

ಆಲಸಿ ತನ ಹೋಗಲಾಡಿಸಿ:

ನೀವು ಬ್ರೇಕ್ ತೆಗೊಳದೇ ಓದುತ್ತಾ ಹೋದ್ರೆ ನಿಮ್ಮ ಮೆದುಳು ಆಯಾಸವಾಗುತ್ತದೆ ಅಷ್ಟೇ ಅಲ್ಲ ಆಲಸಿಯೂ ಆಗುತ್ತದೆ. ಈ ಟೈಂನಲ್ಲೂ ನೀವು ಬ್ರೇಕ್ ತೆಗೊಳದೇ ಓದಿದ್ದರೆ ಓದಿರುವುದು ನಿಮ್ಮ ನೆನಪಲ್ಲಿ ಉಳಿಯುದಿಲ್ಲ. ನೀವು ಎಷ್ಟೇ ಪ್ರ್ಯಾಕ್ಟೀಸ್ ಮಾಡಿದ್ರೂ ವೇಸ್ಟ್ ಆಗುವುದು. ಹಾಗಾಗಿ ಬ್ರೇಕ್ ತೆಗೆದುಕೊಂಡು ಓದಿದ್ರೆ ಓದಿರುವುದು ನಿಮ್ಮ ನೆನಪಲ್ಲಿ ಉಳಿಯುತ್ತದೆ. ನಿಮ್ಮ ಮೆದುಳು ನೆನಪಿಟ್ಟುಕೊಳ್ಳುವ ಶಕ್ತಿಯನ್ನ ಹೊಂದುತ್ತದೆ ಕೂಡಾ.

ಎಫೆಕ್ಟೀವ್ ಆಗಿ ಬ್ರೇಕ್ ತೆಗೆದುಕೊಳ್ಳುವುದು ಹೇಗೆ?

  • ಒಮ್ಮೆ ನೀವು ಸ್ಟಡಿ ಬ್ರೇಕ್ ತೆಗೆದುಕೊಳ್ಳಬೇಕು ಎಂದು ಡಿಸೈಡ್ ಮಾಡಿದ್ರೆ ಈ ವಿಧಾನ ಅನುಸರಿಸಿ. ಇಲ್ಲಿ ಕೆಲವೊಂದು ರಿಫ್ರೆಶ್ ಆಗಲು ಟಿಪ್ಸ್ ಇದೆ.
  • ವಾಕಿಂಗ್ ಮಾಡಿ. ಇದರಿಂದ ನಿಮ್ಮ ದೇಹದಲ್ಲಿ ರಕ್ತ ಚಲನೆ ಚೆನ್ನಾಗಿ ಆಗುವುದು
  • ಒಂದೇ ಜಾಗದಲ್ಲಿ ಗಂಟೆ ಗಟ್ಟಲೆ ಕೂತಿದ್ರೆ ಮೈಕೈ ನೋವಾಗುತ್ತದೆ. ಹಾಗಾಗಿ ಒಮ್ಮೆ ಎದ್ದು ನಿಂತು ಮೈಕೈ ಮುರಿಯಿರಿ ಇದರಿಂದ ನಿಮಗೆ ರಿಲಾಕ್ಸೇಶನ್ ಸಿಗುವುದು
  • ಸ್ನಾನ ಮಾಡಿ. ಇದರಿಂದ ನೀವು ಫ್ರೇಶ್ ಫೀಲ್ ಆಗುತ್ತೀರ. ಮೆದುಳು ಕೂಡಾ ಚೆನ್ನಾಗಿ ವರ್ಕ್ ಆಗುತ್ತದೆ
  • ಏನಾದ್ರೂ ತಿಂದು ಬ್ರೇಕ್ ತೆಗೆದುಕೊಳ್ಳಿ. ಆದ್ರೆ ನೆನಪಿರಲಿ ನೀವು ಸೇವಿಸುವ ಆಹಾರ ಲೈಟ್ ಆಗಿರಲಿ
  • ಧ್ಯಾನ ಮಾಡಿ. ಇದರಿಂದ ನಿಮ್ಮ ಮನಸ್ಸು ನಿಮ್ಮ ಹತೋಟಿಯಲ್ಲಿರುವುದು
  • ಡ್ಯಾನ್ಸಿಂಗ್, ಪೈಂಟಿಂಗ್ ಮಾಡಿ ಮನಸ್ಸಿಗೆ ರಿಲಾಕ್ಸ್ ಮಾಡಿ

 

English summary
Be it a school student, collegeor university graduate, starting from March to June, every individual undergoes a lot of stress or panic because of back-to-back examinations. These four months are absolutely important for preparations and to stay focused.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia