ಸಿಬಿಎಸ್ಇ ಬೋರ್ಡ್ ಪರೀಕ್ಷೆ... ಸ್ಟಡೀಸ್ ಗೆ ಯಾವ ಆಪ್ ಬೆಸ್ಟ್‌?

Written By: Nishmitha B

10 ನೇ ತರಗತಿ ಹಾಗೂ 12ನೇ ತರಗತಿ ಸಿಬಿಎಸ್ಇ ಬೋರ್ಡ್ ಪರೀಕ್ಷೆ ನಮ್ಮ ಕೆರಿಯರ್ ಲೈಫ್ ನ್ನು ನಿರ್ಧರಿಸುತ್ತದೆ. ಹಾಗಾಗಿ ಈ ಹಂತದಲ್ಲಿ ನಾವು ಆದಷ್ಟು ಸ್ಟಡೀಸ್ ಕಡೆ ಹೆಚ್ಚು ಗಮನಕೊಡಬೇಕು. ಅದಕ್ಕಾಗಿಯೇ ಹಗಲು ರಾತ್ರಿ ಓದಬೇಕು. ಅದೆಷ್ಟೋ ಪುಸ್ತಕಗಳನ್ನ ರೆಫರ್ ಕೂಡಾ ಮಾಡಬೇಕು. ಹಾಗಾಗಿ ಸಿಬಿಎಸ್ ಇ ಗೆ ಸ್ಟಡಿ ಮಾಡಲು ಕೆಲವೊಂದು ಆಪ್ ಗಳು ಕೂಡಾ ಇದೆ.

ಜನತೆಯ ಅಗತ್ಯಕ್ಕೆ ತಕ್ಕಂತೆ ಕೆಲವೊಂದು ಆಪ್ ಗಳನ್ನು ರಚಿಸಲಾಗಿದೆ. ಇಂತಹ ಆಪ್‌ ಗಳಲ್ಲಿ ಶಿಕ್ಷಣಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಸಿಬಿಎಸ್ ಇ ಪರೀಕ್ಷೆ ತಯಾರಿಗಾಗಿ ಅದೆಷ್ಟೋ ಆಪ್‌ಗಳು ಲಭ್ಯವಿದೆ. ಅಂತಹ ಆಪ್‌ಗಳಲ್ಲಿ ಬೆಸ್ಟ ಆಪ್‌ ಯಾವುದು ಎಂದು ನಾವು ನಿಮಗೆ ಲಿಸ್ಟ್‌ ನೀಡುತ್ತಿದ್ದೇವೆ ನೋಡಿ

ವಿದ್ಯಾರ್ಥಿಗಳ ಸ್ಟಡೀಸ್ ಗೆ ಸಹಾಯಕವಾಗುವ ಟಾಪ್ 6 ಬೆಸ್ಟ್ ಆಂಡ್ರೋಯಿಡ್ ಆಪ್‌ಗಳ ಲಿಸ್ಟ್ ಇಲ್ಲಿದೆ, ಇಂದೇ ಡೌನ್ ಮಾಡಿಕೊಳ್ಳಲು ಮರೆಯದಿರಿ

1. ಈ ಪಾಠಶಾಲ:

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಇಂಡಿನ್ ಆಂಡ್ ನ್ಯಾಷನಲ್ ಕೌನ್ಸಿಲ್ ಆಫ್ ಎಜ್ಯುಕೇಶನ್ ರಿಸರ್ಚ್ ಆಂಡ್ ಟ್ರೈನಿಂಗ್ ಜಂಟಿಯಾಗಿ ಈ ಆಪ್‌ ನ್ನು ರಚಿಸಿದೆ. ಪಠ್ಯಪುಸ್ತಕ, ಪಠ್ಯಪುಸ್ತಕಕ್ಕೆ ಸಂಬಂಧಪಟ್ಟ ಆಡಿಯೋ, ವೀಡಿಯೋ ಇದರಲ್ಲಿ ಲಭ್ಯವಿದೆ. ಯಾರು ಬೇಕಾದ್ರೂ ಈ ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು

2 ಮೆರಿಟ್ನೇಶನ್:

ಸಿಬಿಎಸ್ ಇ ಗೆ ಸಂಬಂಧಪಟ್ಟ ಆಪ್ ಗಳಲ್ಲಿ ಇದು ಫೇಮಸ್ ಆಪ್. ಈಗಾಗಲೇ ೧.೫ ಕೋಟಿ ವಿದ್ಯಾರ್ಥಿಗಳು ಈ ಆಪ್ ನ ಪ್ರಯೋಜನ ಪಡೆಯುತ್ತಿದ್ದಾರೆ. ಸ್ಟಡಿ ಮೆಟೀರಿಯಲ್, ಹೋಂ ವರ್ಕ್, ಪರೀಕ್ಷಾ ತಯಾರಿಗೆ ಬೇಕಾಗಿರುವ ಸ್ಯಾಂಪಲ್ ಪೇಪರ್, ರಿವಿಷನ್ ನೋಟ್ಸ್, ಹಳೆ ಪ್ರಶ್ನೆ ಪತ್ರಿಕೆಗಳು ಲಭ್ಯವಿದೆ

3. ಮೈಸಿಬಿಎಸ್ಇ ಗೈಡ್:

ಸ್ಟಡಿ ಮೆಟೀರಿಯಲ್, ಪ್ರಾಕ್ಟೀಸ್ ಪೇಪರ್ಸ್, ಸ್ಟಡಿ ನೋಟ್ಸ್, ಸ್ಯಾಂಪಲ್ ಪೇಪರ್ಸ್ ಇವೆಲ್ಲವನ್ನ ಇದು ಒಳಗೊಂಡಿದೆ. ಇನ್ನು ಈ ಆಪ್ 3 ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಸಬ್‌ಜೆಕ್ಟ್ ಒಳಗೊಂಡಿದೆ. ಈ ಆಪ್ ಮೂಲಕ ಆನ್‌ಲೈನ್ ಟೆಸ್ಟ್‌ ಪ್ರಾಕ್ಟೀಸ್ ಕೂಡಾ ಮಾಡಬಹುದು. ಚಾಪ್ಟರ್ ಪ್ರಕಾರ ಬೇಕಾದ್ರೆ ಚಾಪ್ಟರ್ ಪ್ರಕಾರ ಕೂಡಾ ಇದರಲ್ಲಿ ಸಿಲೇಬಸ್ ಸಿಗಲಿದೆ.

4 ಸಿಬಿಎಸ್ ಇ12ನೇ ಕ್ಲಾಸ್ ಪ್ರಶ್ನಾಪತ್ರಿಕೆ

ಬೋರ್ಡ್ ಎಕ್ಸಾಂ ಬರೆಯಲಿದ್ದೀರಿ ಎಂದಾದ್ರೆ ಇದು ಬೆಸ್ಟ್ ಆಪ್. ಹಾಗೂ ಈ ಆಪ್‌ ನೀವು ಡೌನ್‌ಲೋಡ್ ಮಾಡಿಕೊಳ್ಳಲೇ ಬೇಕು. ಹಿಂದಿನ ವರ್ಷದ ಪ್ರಶ್ನಾಪತ್ರಿಕೆಗೆ ಉತ್ತರಿಸಲು ಕಷ್ಟಪಡುತ್ತಿದ್ದರೆ ನೀವು ಈ ಆಪ್‌ನ ಸೌಲಭ್ಯ ಪಡೆದುಕೊಳ್ಳಬಹುದು. ಪ್ರತಿ ಸಬ್‌ಜೆಕ್ಟ್ ನ ಸ್ಯಾಂಪಲ್ ಪ್ರಶ್ನಾಪತ್ರಿಕೆ ನೀವು ಇದರಲ್ಲಿ ನೋಡಬಹುದು. ಎನ್‌ಸಿಇಆರ್ ಟಿ ಪಠ್ಯಪುಸ್ತಕದಿಂದ ರೆಫರ್ ಮಾಡಿ ಈ ಆಪ್‌ನಲ್ಲಿ ನೀಡಲಾಗುತ್ತದೆ

5 ಬಿವೈಜೆಯು

ಭಾರತದಲ್ಲಿ ನಡೆಯುವ ಪ್ರತಿಯೊಂದು ಎಕ್ಸಾಂ ಗೆ ಈ ಆಪ್ ಬೆಸ್ಟ್ ಸೊಲ್ಯುಷನ್. ವಿಡಿಯೋ ಭೋದನೆ, ಪಠ್ಯ ಕ್ರಮದ ಅನುಸಾರ ಪರೀಕ್ಷೆಗಳು, ಗೈಡ್ಸ್ ಸೇರಿದಂತೆ ಕಲಿಕೆಗೆ ಬೇಕಾಗುವ ಇನ್ನಿತ್ತರ ಸೌಲಭ್ಯಗಳನ್ನು ಈ ಆಪ್‌ ನಿಂದ ಪಡೆಯಬಹುದು.

6 ಟಾಪರ್

ಡಿಫರೆಂಟ್ ಲಕ್ಷಣ ಹೊಂದಿರುವ ಸ್ಟಡಿ ಆಪ್ ಇದಾಗಿದೆ. ಇಷ್ಟು ಅಂಕ ಸಿಗಲೇ ಬೇಕು ಎಂದು ಟಾರ್ಗೆಟ್ ಮಾಡಿಕೊಂಡು ಓದುವ ವಿದ್ಯಾರ್ಥಿಗಳು ಈ ಆಪ್‌ನ ಪ್ರಯೋಜನ ಪಡೆಯಬಹುದು. 5ನೇ ತರಗತಿಯಿಂದ 12ನೇ ತರಗತಿ ವರೆಗಿನ ಪಠ್ಯಕ್ರಮ ಈ ಆಪ್‌ನಲ್ಲಿ ಲಭ್ಯವಿದೆ.ಪ್ರಶ್ನಾ ಬ್ಯಾಂಕ್ ಜತೆ ವಿದ್ಯಾರ್ಥಿಗಳು ವಿಡಿಯೋ ಲೆಕ್ಚರ್ ನ ಪ್ರಯೋಜನ ಕೂಡಾ ಪಡೆಯಬಹುದು

English summary
Here are the top six android apps CBSE students should have on their mobile phones

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia