ನಿಮ್ಮ ಬಾಸ್ ಲೇಡಿ ಆಗಿದ್ರೆ ಇನ್ನೂ ಸೂಪರ್ ಗುರು... ಯಾಕೆ ಗೊತ್ತಾ?

Posted By:

ಆಫೀಸ್‌ನಲ್ಲಿ ನಿಮ್ಮ ಬಾಸ್ ಮಹಿಳೆ ಆಗಿದ್ರೆ ನೀವು ಆಕೆಯನ್ನ ಇಷ್ಟಪಡಿ ಇಲ್ಲ ದ್ವೇಷಿಸಿ ಆದರೆ ಆಕೆ ಬಾಸ್ ಆಗಿರುವುದರಿಂದ ನಿಮಗೆ ಲಾಭಗಳೇ ಹೆಚ್ಚು. ನಿಮ್ಮ ಲೇಡಿ ಬಾಸ್ ಹಿಟ್ಲರ್ ಆಗಿರಬಹುದು, ಬೂಸಿ ಆಗಿರಬಹುದು ಇಲ್ಲ ಅಹಂ ಇರೋ ವ್ಯಕ್ತಿ ಎಂದು ನಿಮಗೆ ಅನಿಸಬಹುದು. ಆದ್ರೆ ಲೇಡಿ ಬಾಸ್‌ ನಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನ ನಾವು ನಿಮಗೆ ತಿಳಿಸುತ್ತೇವೆ ಒಮ್ಮೆ ಚೆಕ್ ಮಾಡಿಕೊಳ್ಳಿ

ಅರ್ಥಮಾಡಿಕೊಳ್ಳುತ್ತಾಳೆ:

ಪುರುಷ ಬಾಸ್‌ಗಿಂತ ಈಕೆ ಬೇಗ ಅರ್ಥಮಾಡಿಕೊಳ್ಳುತ್ತಾಳೆ. ನಮ್ಮ ಪರಿಸ್ಥಿತಿಯನ್ನ ಆಕೆ ಬೇಗನೇ ಅರ್ಥ ಮಾಡಿಕೊಳ್ಳುವ ಸ್ವಭಾವ ಹೊಂದಿರುತ್ತಾರೆ. ಅವರು ನಮಗೆ ಹಲವಾರು ಅವಕಾಶಗಳನ್ನ ನೀಡುತ್ತಾರೆ. ನಿಮಗೆ ರಜೆ ಬೇಕಿದ್ದರೆ ಸುಳ್ಳು ಹೇಳುವ ಅವಶ್ಯಕತೆ ಇಲ್ಲ. ವಿವರಿಸಿ ಹೇಳಿದ್ರೆ ಆಕೆ ಅರ್ಥ ಮಾಡಿಕೊಂಡು ರಜೆನೀಡುತ್ತಾರೆ. ಜೀವನ ಹಾಗೂ ಕೆಲಸವನ್ನ ಜತೆ ಜತೆಯಾಗಿ ಬ್ಯಾಲೆನ್ಸ್ ಹೇಗೆ ಮಾಡುವುದೆಂದು ಅವರು ತಿಳಿದುಕೊಂಡಿರುತ್ತಾರೆ.

ಪಕ್ಷಪಾತವಿಲ್ಲದ ತೀರ್ಪು:

ಆಫೀಸ್ ವರ್ಕರ್ ಮಧ್ಯೆ ಇಲ್ಲ ಕಂಪನಿಗಳ ಮಧ್ಯೆ ಸಮಸ್ಯೆ ಉಂಟಾದಾಗ ಮಹಿಳಾ ಬಾಸ್ ಆಗಿದ್ದರೆ ಆಕೆ ಸರಿಯಾಗಿ ಸೊಲ್ಯುಶನ್ ನೀಡುತ್ತಾರೆ. ಆಕೆಯ ಸೊಲ್ಯುಶನ್ ನಿಂದ ಯಾರಿಗೂ ಹರ್ಟ್ ಆಗದಂತೆ ಆಕೆ ನೋಡಿಕೊಳ್ಳುತ್ತಾಳೆ. ನ್ಯಾಯಯುತವಾಗಿ ತೀರ್ಪು ನೀಡುತ್ತಾಳೆ. ಆದರೆ ಪುರುಷ ಬಾಸ್ ಈ ಸಂದರ್ಭದಲ್ಲಿ ತಮ್ಮ ಜತೆ ಯಾರು ಕ್ಲೋಸ್ ಇರುತ್ತಾರೋ ಅವರಿಗೆ ಬೆಂಬಲ ನೀಡಬಹುದು ಇಲ್ಲ ಮಹಿಳೆ ಮೇಲೆ ಆಕರ್ಷಿತರಾಗಿ ಅವರಿಗೆ ಬೆಂಬಲ ನೀಡಬಹುದು. ಆದ್ರೆ ಲೇಡಿ ಬಾಸ್ ಎರಡು ಕಡೆಯವರನ್ನ ಸಮನಾಗಿ ನೋಡುತ್ತಾಳೆ

ಚೆನ್ನಾಗಿ ಮಾತುಬಲ್ಲವಳಾಗಿರುತ್ತಾಳೆ:

ಪರ್ಸನಲ್ ಲೈಫ್ ಇರಲಿ ಇಲ್ಲ ಆಫೀಶಿಯಲ್ ಲೈಫ್ ಇರಲಿ ಲೇಡಿ ಬಾಸ್ ಚೆನ್ನಾಗಿ ಮಾತನಾಡಿ ನಿಭಾಯಿಸುತ್ತಾರೆ. ಅಷ್ಟೇ ಅಲ್ಲ ಪರ್ಸನಲ್ ಲೈಫ್ ಹಾಗೂ ಆಫೀಶಿಯಲ್ ಲೈಫ್ ಮಧ್ಯೆ ಒಂದು ಲೈನ್ ಎಳೆದಿರುತ್ತಾಳೆ ಅಷ್ಟೇ ಅಲ್ಲ ಲೈನ್ ಯಾವತ್ತೂ ಆಕೆ ಕ್ರಾಸ್ ಮಾಡುವುದಿಲ್ಲ. ಎಲ್ಲರ ಲೈಫ್ ಬಗೆಗಿನ ಸ್ಟ್ರೆಸ್ ಬಗ್ಗೆ ಆಕೆ ಮಾತನಾಡುತ್ತಾಳೆ. ಕೆಲಸಕ್ಕೆ ಹೆಚ್ಚಿನ ಒತ್ತು ನೀಡುದ್ದಲ್ಲದೇ ಪರ್ಸನಲ್ ಸಮಸ್ಯೆಗಳು ಕೆಲಸದ ಮಧ್ಯೆ ಬರದಂತೆ ನೋಡಿಕೊಳ್ಳುತ್ತಾಳೆ

ಮಲ್ಟಿಟಾಸ್ಕಿಂಗ್ ನಲ್ಲೂ ಎತ್ತಿದ ಕೈ:

ಹೌದು ಪುರುಷ ಬಾಸ್ ಗೆ ಹೋಲಿಸಿದ್ರೆ ಮಹಿಳಾ ಬಾಸ್ ಒಂದೇ ಟೈಂನಲ್ಲಿ ಅದೆಷ್ಟೋ ಕೆಲಸಗಳನ್ನ ಚಟ್ ಚಟ್ ಎಂದು ಮಾಡಿಮುಗಿಸುತ್ತಾಳೆ. ಒಂದೇ ಟೈಂನಲ್ಲಿ ಫೋನ್ ಎಟೆಂಡ್ ಮಾಡಿದ್ರೆ ಮತ್ತೊಂದೆಡೆ ಈ-ಮೇಲ್ ಕೂಡಾ ಚೆಕ್ ಮಾಡ್ತಾಳೆ. ಅಷ್ಟೇ ಅಲ್ಲ ಅದೇ ಟೈಂನಲ್ಲಿ ಮೀಟಿಂಗ್ ತಯಾರಿಯೂ ಮಾಡಿಕೊಂಡಿರುತ್ತಾಳೆ.

ಬೆಟರ್ ಲೀಡರ್‌ಶಿಪ್:

ಮಹಿಳಾ ಬಾಸ್‌ ಲೀಡರ್ ಶಿಪ್ ಕೂಡಾ ಚೆನ್ನಾಗಿರುತ್ತದೆ. ವರ್ಕ್ ಮೇಲೆ ಹೆಚ್ಚು ಪೋಕಸ್ ಮಾಡುತ್ತಾರೆ. ಅಷ್ಟೇ ಅಲ್ಲ ಅವರು ಹೆಚ್ಚು ನಂಬಿಕಸ್ಥರಾಗಿರುತ್ತಾರೆ. ಅವರು ಕೇವಲ ಅವರ ಅವಭಿವೃದ್ದಿಯನ್ನ ನೋಡಿಕೊಳ್ಳುವುದಿಲ್ಲ, ಇತರರ ಅಭಿವೃದ್ಧಿಯಲ್ಲೂ ಅವರ ಪಾಲು ಇರುತ್ತದೆ.

ಲೇಡಿ ಬಾಸ್ ಒಳ್ಳೆಯ ಫ್ರೆಂಡ್ ಕೂಡಾ ಆಗಿರುತ್ತಾರೆ:

ಲೇಡಿ ಬಾಸ್‌ ಅವರಿಗೆ ಅನುಭೂತಿ ಹಾಗೂ ಸಹಾನೂಭೂತಿ ಹೆಚ್ಚಿರುತ್ತದೆ. ಅಷ್ಟೇ ಅಲ್ಲ ಅವರು ಉತ್ತಮ ಕೇಳುಗರಾಗಿರುತ್ತಾರೆ ಕೂಡಾ. ಎಂತಹ ಕಠೀಣ ಪರಿಸ್ಥತಿ ಇದ್ದರೂ ಇವರು ಅದನ್ನ ಪರಿಹರಿಸಿಕೊಳ್ಳುತ್ತಾರೆ. ಅವರು ಯಾವುದೇ ಸೀಕ್ರೆಟ್ ಇದ್ದರೂ ಅದನ್ನ ರಹಸ್ಯವಾಗಿ ಇಟ್ಟುಕೊಂಡು ಪ್ರತಿ ಹಂತದಲ್ಲೂ ನಮಗೆ ಬೆಂಬಲವಾಗಿ ನಿಂತಿರುತ್ತಾರೆ. ನೀವು ಕೂಡಾ ಅವರಿಗೆ ಸರ್ಪೋಟೀವ್ ಆಗಿದ್ದರೆ ಅವರೂ ಯಾವತ್ತೂ ನಿಮ್ಮ ಕೈ ಬಿಡಲ್ಲ

ಪರ್ಫೇಕ್ಟ್ ರೋಲ್ ಮಾಡೆಲ್:

ಲೇಡಿ ಬಾಸ್ ಸ್ಥಾನಕ್ಕೆ ಆಕೆ ಬರಬೇಕಾದ್ರೆ ತುಂಬಾ ಕಷ್ಟ ಪಟ್ಟಿರತ್ತಾಳೆ. ಹಲವಾರು ಟಾಸ್ಕ್ ಗಳನ್ನು ಎದುರಿಸಿ ಆಕೆ ಆ ಸ್ಥಾನಕ್ಕೆ ಬಂದಿರುತ್ತಾಳೆ. ಹಾಗಾಗಿ ನೀವು ಆಕೆಯನ್ನ ನಿಮ್ಮ ರೋಲ್ ಮಾಡೆಲ್ ಆಗಿಸಿಕೊಳ್ಳಬಹುದು. ನಿಮಗೂ ಆಕೆಯಂತೆ ಆಗಬೇಕಾದ್ರೆ ನೀವು ಕೂಡಾ ಆಕೆಯನ್ನ ಹತ್ತಿರದಿಂದ ಗಮನಿಸಿ, ಆಕೆಯನ್ನ ಫಾಲೋ ಮಾಡಬಹುದು

ಬೆಸ್ಟ್ ಟೈಂ ಮ್ಯಾನೇಜ್‌ಮೆಂಟ್:

ಹೌದು ಲೇಡಿ ಬಾಸ್ ಹೇಗೆ ಮಲ್ಟಿಟಾಸ್ಕಿಂಗ್ ಮಾಡುತ್ತಾಳೋ ಅದೇ ರೀತಿ ಆಕೆ ಟೈಂ ಮ್ಯಾನೇಜ್‌ಮೆಂಟ್ ಮಾಡುವುದರ ಸೈ ಎನಿಸಿಕೊಂಡಿರುತ್ತಾರೆ. ಕರೆಕ್ಟ್ ಟೈಂ ಗೆ ಆಪೀಸ್ ಬರುತ್ತಾರೆ ಅಷ್ಟೇ ಅಲ್ಲ ಆಕೆ ತನ್ನ ಉದ್ಯೋಗಿಗಳಿಂದ ಕೂಡಾ ಅದನ್ನೇ ಬಯಸುತ್ತಾಳೆ

English summary
Women boss are super, cool and awesome. If we have women boss means we will get more advantages in working place. what are thease advantages means you can check here

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia