ಕಂಪನಿ ಲೆಕ್ಕಾಚಾರ... ರಿಸಪ್ಷನ್ ಸೆಕ್ಷನ್ ನಲ್ಲಿ ಹೆಚ್ಚಾಗಿ ಮಹಿಳೆಯರೇ ಯಾಕಿರುತ್ತಾರೆ ಗೊತ್ತಾ?

By Kavya

ನಾವು ಇದುವರೆಗೆ ಯಾವೆಲ್ಲಾ ಆಫೀಸ್‌ನಲ್ಲಿ ಕೆಲಸ ಮಾಡಿದ್ದೇವೋ ಆ ಆಫೀಸ್‌ನ ರಿಸಪ್ಷನ್ ಸೆಕ್ಷನ್ ನಲ್ಲಿ ಒಂದು ಸುಂದರವಾಗದ ಹುಡುಗಿ ಕುಳಿತು ಎಲ್ಲರಿಗೆ ಸ್ವಾಗತ ಮಾಡಿರುವುದು ನಾವು ನೋಡಿರುತ್ತೇವೆ. ನೀವು ಆಫೀಸ್ ಪ್ರವೇಶಿಸುತ್ತಿದ್ದಂತೆ ಆಕೆ ನಗುಮುಖದಿಂದ ನಿಮಗೆ ಗುಡ್ ಮಾರ್ನಿಂಗ್ ಹೇಳಿ ವಿಶ್ ಮಾಡುತ್ತಾಳೆ.

ರಿಸಪ್ಷನಿಸ್ಟ್ ಆಗಿ ಮಹಿಳೆಯರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ ಯಾಕೆ?

 

ಕೇವಲ ನಿಮ್ಮ ಆಫೀಸ್‌ನಲ್ಲಿ ಮಾತ್ರವಲ್ಲ ಇತ್ತೀಚಿಗಿನ ದಿನಗಳಲ್ಲಿ ನೀವು ಎಲ್ಲೇ ಹೋಗಿ, ಬ್ಯಾಂಕ್, ಹೋಟೆಲ್ ಮುಂತಾದೆಡೆ ಎಲ್ಲಾ ರಿಸಪ್ಷನ್ ಪ್ಲೇಸ್ ನಲ್ಲಿ ಒಂದು ಸುಂದರವಾದ ಹುಡುಗಿ ಕುಳಿತಿರುವುದು ನಿಮ್ಮ ಕಣ್ಣಿಗೆ ಬಿದ್ದೇ ಬೀಳುತ್ತದೆ.

ಯಾವುದೋ ಗೊತ್ತಿಲ್ಲದ ಜಾಗಕ್ಕೆ ನಿವು ಹೋದಾಗ ಕೂಡಾ ರಿಸಪ್ಷನ್ ಪ್ಲೇಸ್ ನಲ್ಲಿ ಹುಡುಗಿಯನ್ನ ನೋಡಿದ್ರೆ ನಿಮಗೆ ಫ್ರೆಂಡ್ಲಿ ಫೀಲ್ ಆಗುತ್ತದೆ ಮಾತ್ರವಲ್ಲದೇ ನಿಮಗೆ ಆ ಜಾಗದ ಬಗ್ಗೆ ಏನೇ ಡೌಟ್ ಗಳಿದ್ದರೂ ಆಕೆ ಜತೆ ನಿಸ್ಸಂಕೋಚವಾಗಿ ಪರಿಹರಿಸಿಕೊಳ್ಳುತ್ತೀರಿ.

ಆದ್ರೆ ಯಾವತ್ತಾದ್ರೂ ಯೋಚಿಸಿದ್ದೀರಾ ರಿಸಪ್ಷನ್ ಪ್ಲೇಸ್ ನಲ್ಲಿ ಹೆಚ್ಚಾಗಿ ಯಾಕೆ ಹುಡುಗಿಯನ್ನ ಕೂರಿಸುತ್ತಾರೆ. ಹುಡುಗರಿಗೆ ಯಾಕೆ ಕೂರಿಸುವುದಿಲ್ಲ ಎಂದು. ಡೋಂಟ್ ವರಿ ಇದಕ್ಕೆ ನಾವು ನಿಮಗೆ ಉತ್ತರಿಸುತ್ತೇವೆ.

ಬ್ಯುಸಿನೆಸ್ ಜಗತ್ತಿನಲ್ಲಿ ಪುರುಷರಿಗಿಂತ ಮಹಿಳೆ ಚೆನ್ನಾಗಿ ನಿಭಾಯಿಸುತ್ತಾಳೆ. ಅಷ್ಟೇ ಅಲ್ಲ ಬ್ಯುಸಿನೆಸ್ ಆದಷ್ಟ ಬೇಗ ಸಕ್ಸಸ್ ಮಾಡುವ ಶಕ್ತಿ ಆಕೆಗಿರುತ್ತದೆ. ರಿಸಪ್ಷನಿಸ್ಟ್ ನಗು ನಗುತ್ತಾ ಅವರ ಜತೆ ಮಾರ್ಕೆಟಿಂಗ್ ಬಗ್ಗೆ ಚರ್ಚಿಸಿದ್ರೆ ಕ್ಲೈಂಟ್ ಗೆ ಯಾವತ್ತೂ ನೋ ಆಗಲ್ಲ ಎಂದು ಹೇಳಲು ಸಾಧ್ಯವಿಲ್ಲ.

ಇನ್ನು ಕ್ಲೈಂಟ್ ತಮಗೇನಾದ್ರೂ ಡೌಟ್ ಗಳು ಬಂದಾಗ ಅದನ್ನ ಅವರಿಗೆ ಅರ್ಥವಾಗುವಂತೆ ಮಹಿಳೆ ತಿಳಿಸುತ್ತಾಳೆ. ಒಂದು ವೇಳೆ ಆಕೆ ಜಾಗದಲ್ಲಿ ಪುರುಷನಿದ್ರೆ ಆತ ಶಾರ್ಟ್ ಆಗಿ ಹಾಗೂ ಗಂಭೀರನಾಗಿ ಹೇಳಿ ಮುಗಿಸುತ್ತಾನೆ. ಅಷ್ಟೇ ಅಲ್ಲ ಪುರುಷರಿಗೆ ತಾಳ್ಮೆ ಎಂಬುವುದು ಮಹಿಳೆಯರಿಗೆ ಹೋಲಿಸಿದ್ರೆ ತುಂಬಾ ಕಡಿಮೆ ಇರುತ್ತದೆ. ರಿಸಪ್ಷನಿಸ್ಟ್ ಮಹಿಳೆಯಾಗಿದ್ರೆ ಆಕೆ ಎಷ್ಟೇ ತಡವಾದ್ರೂ ಪರವಾಗಿಲ್ಲ, ತಾಳ್ಮೆಯಿಂದ ನಿಮಗೆ ಅರ್ಥವಾಗುವಂತೆ ವಿವರಿಸಲು ತಯಾರಿರುತ್ತಾಳೆ. ಅದು ಕೂಡಾ ನಗುಮುಖದಿಂದಲೇ ನಿಮಗೆ ವಿವರಿಸುತ್ತಾಳೆ.

 

ಹುಡುಗರು ಧೈರ್ಯವನ್ನ ನಂಬಿ ಕೆಲಸ ಮಾಡಿದ್ರೆ ಹುಡುಗಿಯರು ತಮ್ಮ ಕೆಲಸವನ್ನ ಬುದ್ದಿವಂತಿಕೆಯಿಂದ ನಿರ್ವಹಿಸುವ ಗುಣವನ್ನ ಹೊಂದಿರುತ್ತಾರೆ. ಮಹಿಳೆಯರು ತಮ್ಮ ಕೆಲಸವನ್ನ ಉಳಿಸಿಕೊಳ್ಳುವ ಉದ್ದೇಶದಿಂದ ತಮಗೆ ನೀಡಿರುವ ಕೆಲಸವನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಕ್ಲೈಂಟ್ ಕೋಪದಲ್ಲಿ ಗದರಿಸಿದ್ರೆ ಆಗ ಮಹಿಳಾ ಸ್ವಾಗತಕಾರಿಣಿ ಪ್ರೀತಿಯಿಂದ ಉತ್ತರಿಸಿದ್ರೆ ಅವರ ಕೋಪ ತನ್ನಂತಾನೆ ಕಡಿಮೆಯಾಗುತ್ತದೆ. ಅದೇ ಮಹಿಳೆ ಜಾಗದಲ್ಲಿ ಪುರುಷ ಕುಳಿತಿದ್ರೆ ಮಾತಿಗೆ ಮಾತು ಬೆಳೆದು ಕೆಲಸ ಕೆಡುವ ಸಂಭವವಿರುತ್ತದೆ.

ಇನ್ನು ಮಹಿಳಾ ರಿಸಪ್ಷನ್ ಇರುವುದರಿಂದ ಮತ್ತೊಂದು ಪ್ರಯೋಜನವೇನೆಂದ್ರೆ ಅವರು ಸೀಟಿನಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ ಇಡೀ ಆಫೀಸ್‌ಗೆ ಏನೋ ಒಂದು ಕಳೆಯಿದ್ದಂತೆ. ಅಷ್ಟೇ ಅಲ್ಲ ಮಹಿಳಾ ರಿಸಪ್ಷನಿಸ್ಟ್ ಇದ್ರೆ ಕ್ಲೈಂಟ್ ಸಾಲುಗಳು ಕೂಡಾ ತುಂಬಾ ಉದ್ದನೇ ಇರುತ್ತದೆ.

ಅಷ್ಟೇ ಅಲ್ಲ ಪ್ರತೀ ಆಫೀಸ್‌ನಲ್ಲೂ ಮಹಿಳೆಯರು ಒಂದು ಆಕರ್ಷಕ ಬಿಂದುವಾಗಿರುತ್ತಾರೆ. ಹಾಗಾಗಿ ರಿಸಪ್ಷನ್ ಪ್ಲೇಸ್ ನಲ್ಲಿ ಒಂದು ಮಹಿಳೆ ಇದ್ದರೆ ಯಾಕೆ ಅದೆಷ್ಟೋ ಕ್ಲೈಂಟ್ ಗಳಿಗೆ ಆಕರ್ಷಿತಳಾಗುತ್ತಾಳೆ. ಅಷ್ಟೇ ಅಲ್ಲ ಪುರುಷರಿಗಿಂತ ಮಹಿಳೆ ಚೆನ್ನಾಗಿ ಯೋಚಿಸಿ ಕಾರ್ಯ ನಿರ್ವಹಿಸಬಲ್ಲವಳಾಗಿದ್ದಾಳೆ. ಎಂತಹ ಸಂದಿಗ್ಧ ಪರಿಸ್ಥಿತಿ ವಾತಾವರಣ ನಿರ್ಮಾಣವಾದ್ರೂ ಮಹಿಳೆ ಚೆನ್ನಾಗಿ ನಿಭಾಯಿಸಬಲ್ಲಳು. ಹಾಗಾಗಿ ಮಹಿಳೆಯನ್ನೇ ಹೆಚ್ಚಾಗಿ ಆಫೀಸ್ ಕಚೇರಿಗಳಲ್ಲಿ ರಿಸಪ್ಷನ್ ಪ್ಲೇಸ್ ನಲ್ಲಿ ಕೂರಿಸುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
A receptionist dabbles in a little of everything. she greets with smile every clients, customer and visiters also office emplyees. not only that she also answering phone calls, and email queries. providing solutions for all type of office related works.She must have a positive image and make a people feel welcome, even during a busy times or bad days also
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X