30ರ ನಂತರ ಮದುವೆ... ಸಕ್ಸಸ್ ಕೆರಿಯರ್ ಲೈಪ್ ನಿಂದ ಮ್ಯಾರೇಜ್ ಲೈಫ್ ಕೂಡಾ ಸಕ್ಸಸ್ ಹೇಗೆ ಗೊತ್ತಾ

Posted By:

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹೌದು ಅದು ಅವರ ನಂಬಿಕೆಗೆ ಬಿಟ್ಟರಿವುದು. ಮನೆಯಲ್ಲಿ ಮಗಳು ಪಿಯುಸಿ ವಿದ್ಯಾಭ್ಯಾಸ ಮುಗಿಸಿದಳು ಎಂದ ತಕ್ಷಣ ಆಕೆಗೆ ಹುಡುಗ ಹುಡುಕಲು ಪ್ರಾರಂಭಿಸುತ್ತಾರೆ. ಹುಡುಗಿಯರಿಗೆಲ್ಲಾ ಕೆಲಸ ಯಾಕೆ ಎಂಬುವುದು ಹಿರಿಯರ ಮನೋಭಾವ. ಹಾಗಾಗಿ 18 ವರ್ಷಕ್ಕೆ ಮದುವೆ ಎಂಬ ಬಂಧನಕ್ಕೆ ಒಳಗಾಗುತ್ತಾಳೆ ಹುಡುಗಿ. ಆದ್ರೆ ಇದರಿಂದ ಆಕೆ ಅದೆಷ್ಟೋ ಸಮಸ್ಯೆಗಳನ್ನ ಎದುರಿಸುತ್ತಾಳೆ.

30 ವರ್ಷದ ನಂತರ ಮದುವೆ ಆದ್ರೆ ಕೆರಿಯರ್ ಲೈಫ್ ಮಾತ್ರವಲ್ಲ ಆಕೆಯ ಪರ್ಸನಲ್ ಲೈಫ್ ನಲ್ಲೂ ಸಕ್ಸಸ್ ಪಡೆಯುತ್ತಾಳೆ. ಹೌದು ಮದುವೆ ಎಂಬುವುದು ಕೆರಿಯರ್ ಲೈಫ್ ನ್ನು ಕೂಡಾ ಅವಲಂಭಿಸಿದೆ. ಹಾಗಾಗಿ ವಿದ್ಯಾಭ್ಯಾಸ ಬಳಿಕ ಮೊದಲಿಗೆ ಕೆರಿಯರ್ ಲೈಫ್ ಬಿಲ್ಡ್ ಮಾಡಿಕೊಳ್ಳಿ. ಬಳಿಕ ಮದುವೆ. ಕೆರಿಯರ್ ಲೈಫ್ ಸಕ್ಸಸ್ ಬಳಿಕ 30 ವರ್ಷದ ನಂತರ ಮದುವೆ ಆದ್ರೆ ಏನೆಲ್ಲಾ ಲಾಭಗಳಿವೆ ಎಂದು ಮುಂದಕ್ಕೆ ಓದಿ.

ಕಮ್ಯುನಿಕೇಶನ್ ಸ್ಕಿಲ್ ಚೆನ್ನಾಗಿರುತ್ತದೆ:

ಎಷ್ಟೋ ಕಂಪನಿಗಳಲ್ಲಿ, ಎಷ್ಟೋ ಜನರ ಮಧ್ಯೆ ಕೆಲಸ ಮಾಡಿರುವ ಅನುಭವ ನಿಮಗೆ ಇರುತ್ತದೆ. ಅಷ್ಟೇ ಅಲ್ಲ ಹಲವಾರು ಪುಸ್ತಕಗಳನ್ನ ಕೂಡಾ ಓದಿಕೊಂಡು ಅದೆಷ್ಟೋ ಮಾಹಿತಿಗಳನ್ನ ಕಲೆಹಾಕಿಕೊಂಡಿರುತ್ತೀರಿ. ಹಾಗಾಗಿ ನಿಮ್ಮ ಕಮ್ಯುನಿಕೇಶನ್ ಸ್ಕಿಲ್ ತುಂಬಾ ಚೆನ್ನಾಗಿರುತ್ತದೆ. ಈ ಟೈಂನಲ್ಲಿ ನೀವು ಮದುವೆಯಾದ್ರೆ ನಿಮ್ಮ ಸಂಗಾತಿ ಜತೆ ನೀವು ಕಾಂಫಿಡೆಂಟ್ ಆಗಿ ಮಾತನಾಡಬಹುದು.

ತಾಳ್ಮೆ ಹೆಚ್ಚಿರುತ್ತದೆ:

ನೀವು ಕೆರಿಯರ್ ಲೈಫ್ ನಲ್ಲಿ ಅದೆಷ್ಟೋ ಸಮಸ್ಯೆಗಳನ್ನ ಎದುರಿಸಿರುತ್ತೀರಿ. ಹಾಗಾಗಿ ನಿಮ್ಮಲ್ಲಿ ತಾಳ್ಮೆ ಎಂಬುವುದು ಹೆಚ್ಚಿರುತ್ತದೆ. 30ನೇ ವರ್ಷಕ್ಕೆ ಮದುವೆ ಯಾದಾಗ ದಾಂಪತ್ಯ ಜೀವದನಲ್ಲಿ ಏನಾದ್ರೂ ಸಮಸ್ಯೆ ತಲೆದೋರಿದಾಗ ತಾಳ್ಮೆಯಿಂದ ಬಗೆಹರಿಸುವ ಗುಣ ನಿಮ್ಮದಾಗಿರುತ್ತದೆ.

ಹಣಕಾಸು ಜವಾಬ್ದಾರಿ ಹೊರಲು ರೆಡಿ:

ಕೆರಿಯರ್ ಲೈಫ್ ನಿಂದ ಹಣ ಸಂಪಾದಿಸುವುದು ಮಾತ್ರವಲ್ಲ, ಹಣವನ್ನ ಹೇಗೆ ಉಳಿತಾಯ ಮಾಡುವುದು, ಯಾವ ರೀತಿ ಖರ್ಚು ಮಾಡುವುದು ಎಂಬ ಬಗ್ಗೆ ನೀವು ಚೆನ್ನಾಗಿ ತಿಳಿದುಕೊಂಡಿರುತ್ತೀರಿ. ಅಷ್ಟೇ ಅಲ್ಲ ಹಣಕಾಸಿನ ಬಗ್ಗೆ ನೀವು ಜವಬ್ದಾರಿ ಹೊರಲು ಕೂಡಾ ತಯಾರಿರುತ್ತೀರಿ.

ಖಂಡಿಸುವ ಗುಣ ನಿಮ್ಮದಾಗಿರುತ್ತದೆ:

ಶಿಕ್ಷಣ ಮುಗಿದ ಕೂಡಲೇ ಮದುವೆ ಮಾಡಿದ್ರೆ ಆಕೆ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಾಳೆ. ಪತಿಕಡೆಯವರು ಕಿರುಕುಳ ನೀಡಿದ್ರೂ ಆಕೆ ಮೂಕಳಾಗಿ ಯಾರಿಗೂ ಹೇಳದೇ ತನ್ನೊಳಗೆ ನೋವನ್ನ ಅನುಭವಿಸುತ್ತಾ ಕೊರಗುತ್ತಾಳೆ. ಆದ್ರೆ ಕೆರಿಯರ್ ಲೈಫ್ ಬಳಿಕ ವಿವಾಹವಾದ್ರೆ ಆಕೆ ಸಮಾಜವನ್ನ ಹತ್ತಿರದಿಂದ ಬಲ್ಲವಳಾಗಿರುತ್ತಾಳೆ. ಸಮಸ್ಯೆ ತಲೆದೋರಿದಾಗ ಆಕೆ ಅದನ್ನ ಖಂಡಿಸುವ ಗುಣ ಹೊಂದಿರುತ್ತಾಳೆ.

ಸ್ಟ್ರಾಂಗ್ ಮಹಿಳೆಯಾಗಿರುತ್ತಾಳೆ:

ಸಮಾಜದಲ್ಲಿ ಸ್ವತಂತ್ರಳಾಗಿ ಬದುಕುತ್ತಾಳೆ. ಕೆರಿಯರ್ ಲೈಫ್ ನಿಂದ ಆಕೆ ತನ್ನ ಕಾಲಮೇಲೆ ನಿಲ್ಲುವಂತೆ ಆಗಿರುತ್ತಾಳೆ. ಹಾಗಾಗಿ ಬ್ಯಾಂಕ್, ಪೊಲೀಸ್, ಕಾನೂನು ಸೇರಿದಂತೆ ಹಲವಾರು ಕ್ಷೇತ್ರಗಳ ಮಾಹಿತಿ ಪಡೆದುಕೊಂಡಿರುತ್ತಾಳೆ. ಪ್ರತಿಯೊಂದು ಕೆಲಸವನ್ನೂ ಸ್ವತಂತ್ರಳಾಗಿ ಮಾಡಿ ಮುಗಿಸುವ ಧೈರ್ಯ ಹಾಗೂ ಸ್ಥೈರ್ಯ ಹೊಂದಿರುತ್ತಾಳೆ.

English summary
Marriage are made in heaven. In India all are thinking like women who reach the 18 years she should take marriage. but that is not good. waiting for the Marriage until your 30years seems like worth the wait

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia