World Animal Day 2021 : ವಿಶ್ವ ಪ್ರಾಣಿಗಳ ಕಲ್ಯಾಣ ದಿನದ ಇತಿಹಾಸ, ಮಹತ್ವ ಮತ್ತು ಉದ್ದೇಶ ತಿಳಿಯಿರಿ

ವಿಶ್ವ ಪ್ರಾಣಿಗಳ ಕಲ್ಯಾಣ ದಿನವನ್ನು ಏಕೆ ಆಚರಿಸುತ್ತಾರೆ ಗೊತ್ತಾ?

ವಿಶ್ವ ಪ್ರಾಣಿಗಳ ಕಲ್ಯಾಣ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 4 ರಂದು ಆಚರಿಸಲಾಗುತ್ತದೆ. ಪ್ರಾಣಿ ಪೋಷಕ ಸಂತ ಎಂದು ಕರೆಯಲ್ಪಡುವ ಸೈಂಟ್ ಫ್ಯಾನ್ಸಿಸ್ ಆಫ್ ಅಸ್ಸಿಸಿಯ ಹಬ್ಬದ ದಿನವನ್ನು ವಿಶ್ವ ಪ್ರಾಣಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಜಗತ್ತಿನೆಲ್ಲೆಡೆ ಪ್ರಾಣಿ ಸಂಕುಲ ರಕ್ಷಣೆಗಾಗಿ ಪಣ ತೊಡುವ ಮತ್ತು ಜನರಲ್ಲಿ ಈ ಕುರಿತು ಅರಿವು ಮೂಡಿಸುವ ಪ್ರಯತ್ನವನ್ನು ಈ ದಿನದ ಮೂಲಕ ಸಾರಲಾಗುತ್ತದೆ. ವಿಶ್ವ ಪ್ರಾಣಿಗಳ ಕಲ್ಯಾಣ ದಿನವನ್ನು ವಿಶ್ವ ಪ್ರಾಣಿಗಳ ಪ್ರೇಮಿ ದಿನವನ್ನಾಗಿ ಕೂಡ ಆಚರಿಸಲಾಗುತ್ತದೆ. ಬನ್ನಿ ಈ ದಿನದ ಇತಿಹಾಸ, ಮಹತ್ವ ಮತ್ತು ಉದ್ದೇಶ ಕುರಿತಾದ ಇನ್ನಷ್ಟು ಮಾಹಿತಿಯನ್ನು ಪಡೆಯೋಣ.

ವಿಶ್ವ ಪ್ರಾಣಿಗಳ ದಿನದ ಇತಿಹಾಸ :

ಪ್ರಾಣಿ ಪೋಷಕ ಸಂತ ಎಂದು ಕರೆಯಲ್ಪಡುವ ಸೈಂಟ್ ಫ್ಯಾನ್ಸಿಸ್ ಆಫ್ ಅಸ್ಸಿಸಿಯ ಹಬ್ಬದ ದಿನವನ್ನು ವಿಶ್ವ ಪ್ರಾಣಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಮೊದಲಿಗೆ 1925ರಲ್ಲಿ ಜರ್ಮನಿಯ ಬರ್ಲಿನ್ನಲ್ಲಿ ಈ ದಿನವನ್ನು ಆಚರಿಸಲಾಯಿತು. ಜರ್ಮನ್‌ ಯಹೂದಿ, ಲೇಖಕರಾದ ಹೆನ್ರಿಕ್‌ ಜಿಮ್ಮರ್ಮ್ಯಾನ್ ಅವರು ಪ್ರಾಣಿಗಳಿಗೆ ಮೀಸಲಾಗಿರುವ ದಿನವನ್ನು ಪ್ರಾರಂಭಿಸಬೇಕೆಂದು 1931ರಲ್ಲಿ ಫ್ಲಾರೆನ್ಸ್‌ನಲ್ಲಿ ನಡೆದ ಪರಿಸರ ವಿಜ್ಞಾನಿಗಳ ಸಮಾವೇಶದಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಈ ಕಾರ್ಯಕ್ರಮಕ್ಕೆ ಸುಮಾರು 5,000 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಜಿಮ್ಮರ್ಮ್ಯಾನ್ ಅವರ ಸಲಹೆಯ ಮೇರೆಗೆ 1929ರಲ್ಲಿ ವಿಶ್ವ ಪ್ರಾಣಿ ದಿನವನ್ನು ಅಕ್ಟೋಬರ್ 4ರಂದು ಜಾರಿಗೊಳಿಸಲಾಯಿತು.

1931 ರಲ್ಲಿ ಇಟಲಿಯ ಫ್ಲಾರೆನ್ಸ್‌ನಲ್ಲಿ ನಡೆದ ವಿಶ್ವ ಸಂರಕ್ಷಣಾ ಸಂಸ್ಥೆಯ ಸಮ್ಮೇಳನದಲ್ಲಿ ವಿಶ್ವ ಪ್ರಾಣಿಗಳ ದಿನವು ಜಾಗತಿಕವಾಯಿತು. 2002 ರಲ್ಲಿ ಫಿನ್ನಿಷ್ ಅಸೋಸಿಯೇಷನ್ ​​ಆಫ್ ಅನಿಮಲ್ ಪ್ರೊಟೆಕ್ಷನ್ ಅಸೋಸಿಯೇಷನ್ಸ್ ಈ ದಿನವನ್ನು ಆಚರಿಸಿತು ಮತ್ತು ಅದರ ಕಾರ್ಯಕ್ರಮಗಳಲ್ಲಿ ಶಾಲಾ ಮಕ್ಕಳನ್ನು ಸಹ ಒಳಗೊಂಡಿತ್ತು.

ವಿಶ್ವ ಪ್ರಾಣಿ ದಿನದ ಮಹತ್ವ :

ಮಾನವನ ಜನಜೀವನವು ಪರಿಸರ ಮತ್ತು ಪ್ರಾಣಿಗಳ ಮೇಲೆ ಬೀರುವ ಪರಿಣಾಮಗಳ ಕುರಿತಾಗಿ ಅರಿವು ಮೂಡಿಸುವುದೆರೆಡೆಗೆ ಈ ದಿನ ಗಮನ ಹರಿಸುತ್ತದೆ. ಪ್ರಾಣಿಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಒಳಗೊಳ್ಳುವಿಕೆಯ ಮೂಲಕ ಪ್ರಾಣಿಗಳ ಪ್ರೀತಿ, ಕಾಳಜಿ, ವಾತ್ಸಲ್ಯ ಮತ್ತು ರಕ್ಷಣೆಯನ್ನು ಪ್ರೋತ್ಸಾಹಿಸುವುದರಿಂದ ಇದನ್ನು 'ಪ್ರಾಣಿ ಪ್ರೇಮಿಗಳ ದಿನ' ಎಂದೂ ಕರೆಯಲಾಗುತ್ತದೆ.

ವಿಶ್ವ ಪ್ರಾಣಿ ದಿನದ ಗುರಿ :

ವಿಶ್ವ ಪ್ರಾಣಿ ದಿನದ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಪ್ರಾಣಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ವಿಶ್ವದಾದ್ಯಂತ ಪ್ರಾಣಿಗಳ ಕಲ್ಯಾಣ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವುದು ಈ ದಿನದ ಮುಖ್ಯ ಗುರಿಯಾಗಿದೆ.

ಪ್ರತಿಯೊಂದು ದೇಶದಲ್ಲೂ ಈ ದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಹೆಚ್ಚಿನ ಜಾಗೃತಿ ಮತ್ತು ಶಿಕ್ಷಣದ ಮೂಲಕ ಪ್ರಾಣಿಗಳನ್ನು ಯಾವಾಗಲೂ ಬುದ್ಧಿವಂತ ಜೀವಿಗಳೆಂದು ಗುರುತಿಸುವ ಮತ್ತು ಅವರ ಕಲ್ಯಾಣಕ್ಕೆ ಸಂಪೂರ್ಣವಾಗಿ ಪ್ರಯತ್ನವನ್ನು ಮಾಡುವ ಪ್ರಪಂಚವನ್ನು ನಾವು ನಿರ್ಮಾಣ ಮಾಡಬಹುದು ಎಂದು ವೆಬ್‌ಸೈಟ್ ನಲ್ಲಿ ಹೇಳಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
World animal day is on october 4. Here is the history, significance and aim of the day in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X