World Athletics Day 2021: ವಿಶ್ವ ಅಥ್ಲೆಟಿಕ್ಸ್ ದಿನದ ಇತಿಹಾಸ, ಮಹತ್ವ ಮತ್ತು ಉದ್ದೇಶ ಏನು ? ಇಲ್ಲಿದೆ ಡೀಟೇಲ್ಸ್

ವಿಶ್ವ ಅಥ್ಲೆಟಿಕ್ಸ್ ದಿನದ ಇತಿಹಾಸ ಮತ್ತು ಮಹತ್ವದ ಕುರಿತು ಮಾಹಿತಿ

ಮೊದಲ ವಿಶ್ವ ಅಥ್ಲೆಟಿಕ್ಸ್ ದಿನವನ್ನು 1996 ರಲ್ಲಿ ಆಚರಿಸಲಾಯಿತು. ಆಗಿನ ಅಂತರರಾಷ್ಟ್ರೀಯ ಹವ್ಯಾಸಿ ಅಥ್ಲೆಟಿಕ್ ಫೆಡರೇಶನ್‌ನ (ಐಎಎಎಫ್) ಅಧ್ಯಕ್ಷರಾಗಿದ್ದ ಪ್ರಿಮೊ ನೆಬಿಯೊಲೊ ಈ ಆಚರಣೆಯನ್ನು ಪ್ರಾರಂಭಿಸಿದರು. ಇದನ್ನು ಪ್ರತಿ ವರ್ಷ ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ. ಪ್ರತಿ ವರ್ಷ ವಿಶ್ವ ಅಥ್ಲೆಟಿಕ್ಸ್ ದಿನಾಂಕವನ್ನು ಐಎಎಎಫ್ ನಿರ್ಧರಿಸುತ್ತದೆ. ಈ ಭಾರಿ ಮೇ 7,2021 ರಂದು ವಿಶ್ವ ಅಥ್ಲೆಟಿಕ್ಸ್ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದ ಇತಿಹಾಸ, ಮಹತ್ವ ಮತ್ತು ಉದ್ದೇಶಗಳೇನು ಎಂದು ತಿಳಿಯೋಣ.

ವಿಶ್ವ ಅಥ್ಲೆಟಿಕ್ಸ್ ದಿನದ ಇತಿಹಾಸ:

ವಿಶ್ವ ಅಥ್ಲೆಟಿಕ್ಸ್ ದಿನದ ಇತಿಹಾಸ:

ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಸ್ (ಐಎಎಎಫ್) 160ಕ್ಕೂ ಹೆಚ್ಚು ದೇಶಗಳ ರಾಷ್ಟ್ರೀಯ ಸಂಘಗಳ ಟ್ರ್ಯಾಕ್-ಅಂಡ್-ಫೀಲ್ಡ್ ಸಂಘಟನೆಯಾಗಿದೆ. ಇದನ್ನು 1912 ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ಸ್ಥಾಪಿಸಲಾಯಿತು.

ಎಲ್ಲಾ ಸದಸ್ಯರಲ್ಲಿ ಸ್ನೇಹಪರ ಸಹಕಾರವನ್ನು ನಿರ್ಮಿಸಲು ಐಎಎಎಫ್ ಅನ್ನು ಸ್ಥಾಪಿಸಲಾಗಿದೆ. ಜನಾಂಗೀಯ, ಧಾರ್ಮಿಕ ಅಥವಾ ರಾಜಕೀಯ ಆಧಾರದ ಮೇಲೆ ಅಂತರರಾಷ್ಟ್ರೀಯ ಸಭೆಗಳಲ್ಲಿ ಭಾಗವಹಿಸಲು ಇರುವ ಅಡೆತಡೆಯನ್ನು ಇದು ನಿಯಂತ್ರಿಸುತ್ತದೆ. ಸ್ಪರ್ಧೆಯನ್ನು ನಿಯಂತ್ರಿಸುವ ನಿಯಮಗಳು ಮತ್ತು ನಿಬಂಧನೆಗಳನ್ನು ಕಂಪೈಲ್ ಮಾಡುವುದು. ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಸ್ ಅನ್ನು ಹಿಂದೆ ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ ಎಂದು ಕರೆಯಲಾಗುತ್ತಿತ್ತು.

ವಿಶ್ವ ಅಥ್ಲೆಟಿಕ್ಸ್ ದಿನದ ಮಹತ್ವ:

ವಿಶ್ವ ಅಥ್ಲೆಟಿಕ್ಸ್ ದಿನದ ಮಹತ್ವ:

ಐಎಎಎಫ್ ಫೆಡರೇಶನ್‌ಗಳೊಂದಿಗೆ ಸಂಬಂಧ ಹೊಂದಿರುವ ಕ್ಲಬ್‌ಗಳಲ್ಲಿ ಸದಸ್ಯರಾಗಿರುವವರ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವ ಉದ್ದೇಶದಿಂದ ವಿಶ್ವ ಅಥ್ಲೆಟಿಕ್ಸ್ ದಿನವನ್ನು ಪ್ರಾರಂಭಿಸಲಾಯಿತು. ತದನಂತರದ ದಿನಗಳಲ್ಲಿ ಶಾಲಾ ಮಕ್ಕಳನ್ನು ತಂಡಗಳಲ್ಲಿ ಸೇರಿಸಿಕೊಳ್ಳುವ ಉದ್ದೇಶದಿಂದ ಈ ಯೋಜನೆಯನ್ನು ವಿಸ್ತರಿಸಲಾಯಿತು. ಸಾಮಾನ್ಯವಾಗಿ ಶಾಲೆಗಳು ದೈಹಿಕ ಚಟುವಟಿಕೆಗಳನ್ನು ಮತ್ತು ಅಥ್ಲೆಟಿಕ್ಸ್ ಅನ್ನು ಉತ್ತೇಜಿಸುವ ಪ್ರಮುಖ ಸ್ಥಾನವಾಗಿದೆ. ಹಾಗಾಗಿ ಕಾಲಕ್ರಮೇಣ ಅಥ್ಲೆಟಿಕ್ಸ್ ಜೀವನದ ಒಂದು ಭಾಗವಾಗುತ್ತಾ ಹೋಯಿತು.

ವಿಶ್ವ ಅಥ್ಲೆಟಿಕ್ಸ್ ದಿನದ ಉದ್ದೇಶಗಳು:

ವಿಶ್ವ ಅಥ್ಲೆಟಿಕ್ಸ್ ದಿನದ ಉದ್ದೇಶಗಳು:

ವಿಶ್ವ ಅಥ್ಲೆಟಿಕ್ಸ್ ದಿನವನ್ನು ಏಕೆ ಆಚರಿಸಲಾಗುತ್ತದೆ ಮತ್ತು ಅದರ ಉದ್ದೇಶಗಳೇನು ಎನ್ನುವುದನ್ನು ಇಲ್ಲಿ ತಿಳಿಯಿರಿ.

* ಕ್ರೀಡೆಯ ಮಹತ್ವದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವುದು.
* ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅಥ್ಲೆಟಿಕ್ಸ್ ಅನ್ನು ಪ್ರಾಥಮಿಕ ಕ್ರೀಡೆಯಾಗಿ ಪ್ರೋತ್ಸಾಹಿಸುವುದು.
* ಯುವಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದರ ಮಹತ್ವವನ್ನು ಸಾರುವುದು.
* ಅಥ್ಲೆಟಿಕ್ಸ್ ಅನ್ನು ವಿಶ್ವದಾದ್ಯಂತ ಶಾಲೆಗಳಲ್ಲಿ ಮಕ್ಕಳು ಭಾಗವಹಿಸುವ ಕ್ರೀಡೆಯಾಗಿ ಆದ್ಯತೆ ನೀಡುವುದು.
* ಯುವಕರಲ್ಲಿ ಕ್ರೀಡೆ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಂಪರ್ಕವನ್ನು ಕಲ್ಪಿಸುವುದು.

For Quick Alerts
ALLOW NOTIFICATIONS  
For Daily Alerts

English summary
World athletics day is celebrated on may 7. Here is the history, significance and objectives of the day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X