World Blood Donor Day 2021: ವಿಶ್ವ ರಕ್ತದಾನಿಗಳ ದಿನದ ಇತಿಹಾಸ, ಉದ್ದೇಶ, ಘೋಷಣೆ ಮತ್ತು ಉಲ್ಲೇಖಗಳು ಇಲ್ಲಿವೆ

ವಿಶ್ವ ರಕ್ತದಾನಿಗಳ ದಿನದ ಇತಿಹಾಸ, ಉದ್ದೇಶ ಮತ್ತು ಉಲ್ಲೇಖಗಳು

ಮನುಷ್ಯ ಆರೋಗ್ಯವಂತನಾಗಿ ಜೀವಿಸಲು ಉತ್ತಮ ರಕ್ತವನ್ನು ಹೊಂದಿರಬೇಕು. ಕಾರಣ ಮನುಷ್ಯರಲ್ಲಿ ರಕ್ತ ಸಂಬಂಧಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಪ್ರಸ್ತುತ ದಿನಗಳಲ್ಲಿ ಆರೋಗ್ಯದ ಮಹತ್ವ ನಿಮಗೆಲ್ಲಾ ತಿಳಿದೇ ಇದೆ. ಒಂದು ಜೀವ ಉಳಿಸಲು ಸುರಕ್ಷಿತ ರಕ್ತ ಮತ್ತು ರಕ್ತ ಉತ್ಪನ್ನಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ.

 

ಈ ಕೋವಿಡ್ -19 ಅವಧಿಯಲ್ಲಿ ಹೆಚ್ಚಿನ ರೋಗಿಗಳ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ರಕ್ತದಾನಿಗಳ ಅಗತ್ಯವಿತ್ತು. ಇಂತಹ ಸಂದರ್ಭದಲ್ಲಿ ರಕ್ತದ ಮಹತ್ವ ಎಲ್ಲರಿಗೂ ತಿಳಿದಂತಾಗಿದೆ. ಈ ಸಾಂಕ್ರಾಮಿಕ ರೋಗದ ಹೊರತಾಗಿಯೂ ಅನೇಕ ದೇಶಗಳಲ್ಲಿನ ದಾನಿಗಳು ಅಗತ್ಯವಿರುವ ರೋಗಿಗಳಿಗೆ ರಕ್ತ ಮತ್ತು ಪ್ಲಾಸ್ಮಾವನ್ನು ದಾನ ಮಾಡುವುದನ್ನು ಮುಂದುವರೆಸಿದ್ದಾರೆ. ಈ ಅಸಾಮಾನ್ಯ ಕಾರ್ಯವು ಸಾಮಾನ್ಯ ಮತ್ತು ತುರ್ತು ಸಮಯದಲ್ಲಿ ಸುರಕ್ಷಿತ ಮತ್ತು ಸಾಕಷ್ಟು ರಕ್ತ ಪೂರೈಕೆಯನ್ನು ಖಾತ್ರಿಪಡಿಸುವಲ್ಲಿ ಸುಸಂಘಟಿತ, ಬದ್ಧ, ಸ್ವಯಂಪ್ರೇರಿತ, ಸಂಭಾವನೆ ಪಡೆಯದ ರಕ್ತದಾನಿಗಳ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದೆ.

ವಿಶ್ವ ರಕ್ತದಾನಿಗಳ ದಿನದ ಇತಿಹಾಸ 2021:

ಕಾರ್ಲ್ ಲ್ಯಾಂಡ್‌ಸ್ಟೈನರ್ ಅವರ ಜನ್ಮದಿನವನ್ನು ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಮೊದಲ ಬಾರಿಗೆ ಜೂನ್ 14, 2004 ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಆರಂಭಿಸಿತು.

ಸಾರ್ವಜನಿಕರಲ್ಲಿ ಆರೋಗ್ಯವಂತ ವ್ಯಕ್ತಿಯು ಸ್ವಯಂಪ್ರೇರಣೆಯಿಂದ ಮತ್ತು ಹಣರಹಿತ ಸುರಕ್ಷಿತ ರಕ್ತದಾನ ಮಾಡುವ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳ ಒಕ್ಕೂಟವು ಹೊಂದಿದೆ.

 

ಮೇ 2005 ರಲ್ಲಿ, ಡಬ್ಲ್ಯುಎಚ್‌ಒ ತನ್ನ 192 ಸದಸ್ಯ ರಾಷ್ಟ್ರಗಳೊಂದಿಗೆ 58 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ರಕ್ತದಾನಿಗಳ ದಿನವನ್ನು ಸ್ಥಾಪಿಸಿತು. ವಿಶ್ವದಾದ್ಯಂತದ ಎಲ್ಲಾ ದೇಶಗಳಲ್ಲಿ ರಕ್ತದಾನಿಗಳ ಅಮೂಲ್ಯ ಹೆಜ್ಜೆಗೆ ಗೌರವಿಸಲು ಮತ್ತು ಜನರ ಜೀವವನ್ನು ಉಳಿಸಿದ್ದಕ್ಕಾಗಿ ಧನ್ಯವಾದ ಹೇಳಲು ಪ್ರೇರೇಪಿಸಿತು.

ವಿಶ್ವ ರಕ್ತದಾನಿಗಳ ದಿನ 2021ರ ಘೋಷಣೆ ಏನು ?:

ಈ ವರ್ಷದ ವಿಶ್ವ ರಕ್ತದಾನಿಗಳ ದಿನದ ಘೋಷಣೆ "ರಕ್ತ ನೀಡಿ ಮತ್ತು ವಿಶ್ವವನ್ನು ಸೋಲಿಸಿರಿ". ಒಂದು ಜೀವವನ್ನು ಉಳಿಸಲು ರಕ್ತದಾನಿಗಳ ಕೊಡುಗೆ ಹೆಚ್ಚಿದೆ ಎನ್ನುವ ಸಂದೇಶವನ್ನು ತಿಳಿಸುತ್ತದೆ.

ವಿಶ್ವ ರಕ್ತದಾನಿಗಳ ದಿನ 2021 ಉದ್ದೇಶ:

2021ರ ವಿಶ್ವ ರಕ್ತದಾನಿ ದಿನಾಚರಣೆಯ ಅಭಿಯಾನದ ಉದ್ದೇಶ ಹೀಗಿದೆ:

ವಿಶ್ವದಾದ್ಯಂತ ರಕ್ತದಾನಿಗಳಿಗೆ ಧನ್ಯವಾದ ಹೇಳಲು ಮತ್ತು ಅಗತ್ಯವಿರುವವರರಿಗೆ ದುಡ್ಡು ರಹಿತ ರಕ್ತದಾನ ಮಾಡಲು ಜಾಗೃತಿ ಮೂಡಿಸುವುದು.

ಸಮುದಾಯ ಒಗ್ಗಟ್ಟು ಮತ್ತು ಸಾಮಾಜಿಕ ಒಗ್ಗಟ್ಟು ಹೆಚ್ಚಿಸುವಲ್ಲಿ ಸಮುದಾಯ ಮೌಲ್ಯಗಳನ್ನು ಉತ್ತೇಜಿಸಲು ರಕ್ತದಾನ ಸಹಾಯ ಮಾಡುತ್ತದೆ.

ರಕ್ತದಾನ ಮಾಡುವಂತೆ ಯುವಕರನ್ನು ಪ್ರೋತ್ಸಾಹಿಸಲು ಮತ್ತು ಇತರರು ಅದೇ ರೀತಿ ಮಾಡಲು ಪ್ರೇರೇಪಿಸುವುದು.

ವಿಶ್ವ ರಕ್ತದಾನಿಗಳ ದಿನ 2021ರ ಉಲ್ಲೇಖಗಳು:

* ರಕ್ತದಾನ ಮಾಡುವುದು ಎಂದರೆ ನಿಮಗೆ ಅದು ಕೆಲವು ನಿಮಿಷಗಳು, ಆದರೆ ಬೇರೆಯವರಿಗೆ ಅದು ಜೀವಿತಾವಧಿ.
* ಮೂರ್ಖರು ಅಥವಾ ಸೊಳ್ಳೆಗಳು ನಿಮ್ಮ ರಕ್ತವನ್ನು ಹೀರಲು ಬಿಡಬೇಡಿ, ಅದನ್ನು ಉತ್ತಮ ಬಳಕೆಗೆ ಇರಿಸಿ.
* ರಕ್ತದಾನವು ಜೀವನ ಮತ್ತು ಸಾವಿನ ನಡುವಿನ ವ್ಯತ್ಯಾಸವನ್ನು ತಿಳಿಸುತ್ತದೆ.
* ನೀವು ಮಾಡುವ ರಕ್ತದಾನವು ಇನ್ನೊಬ್ಬರ ಮುಖದ ಮೇಲೆ ಅಮೂಲ್ಯವಾದ ನಗುವನ್ನು ತರುತ್ತದೆ.
* ರಕ್ತ ದಾನ ಮಾಡಿ ಮತ್ತು ಅನೇಕ ಮುಖಗಳಲ್ಲಿ ಮೂಡುವ ಮಂದಹಾಸಕ್ಕೆ ಕಾರಣರಾಗಿ
* ರಕ್ತದಾನದಿಂದ ನಿಮಗೆ ಏನೂ ಖರ್ಚಾಗುವುದಿಲ್ಲ, ಆದರೆ ಅದು ಜೀವವನ್ನು ಉಳಿಸುತ್ತದೆ.
* ನಿಮ್ಮ ರಕ್ತವು ಅಮೂಲ್ಯವಾದುದು: ದಾನ ಮಾಡಿ, ಜೀವವನ್ನು ಉಳಿಸಿ ಮತ್ತು ಅದನ್ನು ದೈವಿಕಗೊಳಿಸಿ.
* ನಿಮ್ಮನ್ನು ಎಂದಿಗೂ ನೀವು ದುರ್ಬಲರೆಂದು ಎಂದು ಭಾವಿಸಬೇಡಿ, ಜೀವ ಉಳಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಕೇವಲ ರಕ್ತದಾನ ಮಾಡಿ.
* ರಕ್ತವನ್ನು ನೀಡಲು ನಿಮಗೆ ಹೆಚ್ಚುವರಿ ಶಕ್ತಿ ಅಥವಾ ಹೆಚ್ಚುವರಿ ಆಹಾರ ಬೇಕಾಗಿಲ್ಲ ಮತ್ತು ನೀವು ಜೀವವನ್ನು ಉಳಿಸುವಿರಿ.
* ಒಂದೇ ಒಂದು ಕಾರಣಕ್ಕಾಗಿ ನಿಮ್ಮ ರಕ್ತವನ್ನು ದಾನ ಮಾಡಿ. ಕಾರಣ ಜೀವನವಾಗಲಿ

For Quick Alerts
ALLOW NOTIFICATIONS  
For Daily Alerts

English summary
World blood donor day is on june 14. Here is the history, objective, slogan and quotes of the day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X