World Day For Safety And Health At Work 2021: ಈ ದಿನದ ಇತಿಹಾಸ, ಉದ್ದೇಶ ಮತ್ತು ಥೀಮ್ ಏನು ?

ವರ್ಲ್ಡ್ ಡೇ ಫಾರ್ ಸೇಫ್ಟಿ ಮತ್ತು ಹೆಲ್ತ್ ಅಟ್ ವರ್ಕ್ ದ ಇತಿಹಾಸ ಮತ್ತು ಉದ್ದೇಶಗಳೇನು ?

ಪ್ರತಿಯೊಬ್ಬ ಉದ್ಯೋಗಿಗಳು ತಾವು ಕೆಲಸ ನಿರ್ವಹಿಸುವ ಜಾಗದಲ್ಲಿ ಉಂಟಾಗುವ ಅಪಘಾತಗಳು ಮತ್ತು ರೋಗಗಳನ್ನು, ತಡೆಗಟ್ಟುವಿಕೆಯನ್ನು ಉತ್ತೇಜಿಸಿ ನೌಕರರ ಸುರಕ್ಷತೆ ಮತ್ತು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಏಪ್ರಿಲ್ 28 ರಂದು ವರ್ಲ್ಡ್ ಡೇ ಫಾರ್ ಸೇಫ್ಟಿ ಅಂಡ್ ಹೆಲ್ತ್ ಅಟ್ ವರ್ಕ್ ಡೇ ಅನ್ನು ಆಚರಿಸಲಾಗತ್ತದೆ.

ಈ ಭಾರಿ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ರಾಷ್ಟ್ರವು ಹೋರಾಡುತ್ತಿದೆ. ಕೋವಿಡ್ -19 ಅನ್ನು ಎದುರಿಸಲು ಇಡೀ ರಾಷ್ಟ್ರವು ಲಾಕ್‌ಡೌನ್ ಗೆ ಒಳಗಾಗಿದೆ. ಈ ವ‍ರ್ಷ ವರ್ಲ್ಡ್ ಡೇ ಫಾರ್ ಸೇಫ್ಟಿ ಅಂಡ್ ಹೆಲ್ತ್ ಅಟ್ ವರ್ಕ್ ದಿನದಂದು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವತ್ತ ಗಮನ ಹರಿಸಲಿದೆ.

ವರ್ಲ್ಡ್ ಡೇ ಫಾರ್ ಸೇಫ್ಟಿ ಅಂಡ್ ಹೆಲ್ತ್ ಅಟ್ ವರ್ಕ್ ಡೇ ದಿನದ ಇತಿಹಾಸ:

2003 ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು (ಐಎಲ್ಒ) ಕೆಲಸದಲ್ಲಿ ಅಪಘಾತಗಳು ಮತ್ತು ರೋಗಗಳ ತಡೆಗಟ್ಟುವಿಕೆಗೆ ಒತ್ತು ನೀಡುವ ಸಲುವಾಗಿ ಔದ್ಯೋಗಿಕ ಜಾಗದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನವನ್ನು ಆಚರಿಸಲು ಪ್ರಾರಂಭಿಸಿತು.

ಈ ಆಚರಣೆಯು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯದ ಕುರಿತಾದ ಜಾಗತಿಕ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿದೆ. ಉದ್ಯೋಗಿಗಳಿಗೆ ಕೆಲಸ ಮಾಡುವ ಸ್ಥಳದಲ್ಲಿ ಸ್ವಾತಂತ್ರ್ಯ, ಸಮಾನತೆ, ಸುರಕ್ಷತೆ ಮತ್ತು ಆರೋಗ್ಯದ ವಾತಾವರಣವನ್ನು ಖಾತರಿಪಡಿಸುವ ಸಲುವಾಗಿ, ಉದ್ಯೋಗದಾತರಿಗೆ ಕೆಲಸದ ಸ್ಥಳವನ್ನು ಹೇಗೆ ಸುರಕ್ಷಿತ ಮತ್ತು ಆರೋಗ್ಯಕರವಾಗಿರಿಸುವುದು ಎಂಬ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ನೌಕರರ ಕೆಲಸದ ಸುರಕ್ಷತೆ ಮತ್ತು ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.

1996ರಲ್ಲಿ ನಡೆದ ಟ್ರೇಡ್‌ ಯೂನಿಯನ್‌ ಚಳವಳಿಯಲ್ಲಿ ಸತ್ತ ಹಾಗೂ ಗಾಯಗೊಂಡ ನೌಕರರ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಟ್ರೇಡ್‌ ಯೂನಿಯನ್‌ ಮೂವ್‌ಮೆಂಟ್‌ ಕೋರಿಕೆಯ ಮೇರೆಗೆ 2003ರಿಂದ ಐಎಲ್‌ಒ ಈ ದಿನವನ್ನು ಆಚರಿಸುತ್ತಿದೆ. ಯುವ ನೌಕರರ ಸುರಕ್ಷತೆ ಮತ್ತು ಆರೋಗ್ಯ ಸುಧಾರಣೆ ಮತ್ತು ಬಾಲ ಕಾರ್ಮಿಕ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವುದು ಈ ವರ್ಷದ ಆಚರಣೆಯ ಧ್ಯೇಯವಾಗಿದೆ.

ವರ್ಲ್ಡ್ ಡೇ ಫಾರ್ ಸೇಫ್ಟಿ ಅಂಡ್ ಹೆಲ್ತ್ ಅಟ್ ವರ್ಕ್ ಡೇ ಆಚರಣೆಯ ಉದ್ದೇಶ:

ಈ ವರ್ಷ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಶ್ವ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನವು ಗಮನ ಹರಿಸಲಿದೆ. ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ರಾಷ್ಟ್ರೀಯ ತ್ರಿಪಕ್ಷೀಯ ಸಂವಾದವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

ಔದ್ಯೋಗಿಕ ಜಾಗದಲ್ಲಿ ಸುರಕ್ಷತೆ ಮತ್ತು ಆರೋಗ್ಯದ ಮಹತ್ವವನ್ನು ಪ್ರತಿಬಿಂಬಿಸುವ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಜಾಗೃತಿ ಮೂಡಿಸುತ್ತದೆ.

For Quick Alerts
ALLOW NOTIFICATIONS  
For Daily Alerts

English summary
World day for safety and health at work is on april 28, Here is the history, theme and objectives in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X