World Day Of Social Justice 2022 : ಈ ದಿನದ ಇತಿಹಾಸ, ಮಹತ್ವ, ಥೀಮ್ ಮತ್ತು ಆಚರಣೆ ಕುರಿತ ಮಾಹಿತಿ

ಪ್ರತಿ ವರ್ಷ ಫೆಬ್ರವರಿ 20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಮತ್ತು ಸಾಮಾಜಿಕವಾಗಿ ಸಮಗ್ರ ಸಮಾಜವನ್ನು ಮಾಡಲು ಬಡತನ, ಲಿಂಗ, ದೈಹಿಕ ತಾರತಮ್ಯ, ಅನಕ್ಷರತೆ, ಧಾರ್ಮಿಕ ತಾರತಮ್ಯವನ್ನು ತೊಡೆದುಹಾಕಲು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಮುದಾಯಗಳನ್ನು ಒಟ್ಟುಗೂಡಿಸುವುದಾಗಿದೆ.

ವಿಶ್ವ ಸಾಮಾಜಿಕ ನ್ಯಾಯ ದಿನದ ಬಗ್ಗೆ ತಿಳಿದುಕೊಳ್ಳಬೇಕಾ ? ಇಲ್ಲಿದೆ ಮಾಹಿತಿ

ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಪೂರ್ಣ ಉದ್ಯೋಗ ಮತ್ತು ಯೋಗ್ಯ ಕೆಲಸದ ಪ್ರಚಾರ, ಸಾರ್ವತ್ರಿಕ ಸಾಮಾಜಿಕ ರಕ್ಷಣೆ, ಲಿಂಗ ಸಮಾನತೆ ಮತ್ತು ಸಾಮಾಜಿಕ ಯೋಗಕ್ಷೇಮ ಹಾಗೂ ಎಲ್ಲರಿಗೂ ನ್ಯಾಯ ದೊರಕುವ ಪರಿಹಾರಗಳನ್ನು ಹುಡುಕುವ ಅಂತರರಾಷ್ಟ್ರೀಯ ಸಮುದಾಯದ ಪ್ರಯತ್ನಗಳನ್ನು ಈ ದಿನದ ಸ್ಮರಣಾರ್ಥ ಬೆಂಬಲಿಸುತ್ತದೆ. ಈ ದಿನ ಜನರಲ್ಲಿ ಜಾಗೃತಿ ಮೂಡಿಸಲು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ, ಥೀಮ್ ಮತ್ತು ಆಚರಣೆಯ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ.

ವಿಶ್ವ ಸಾಮಾಜಿಕ ನ್ಯಾಯ ದಿನ 2022 ಇತಿಹಾಸ :

ನವೆಂಬರ್ 26,2007 ರಂದು ಜನರಲ್ ಅಸೆಂಬ್ಲಿಯ ಅರವತ್ತಮೂರನೆಯ ಅಧಿವೇಶನದಲ್ಲಿ ಫೆಬ್ರವರಿ 20 ಅನ್ನು ವಾರ್ಷಿಕವಾಗಿ ವಿಶ್ವ ಸಾಮಾಜಿಕ ನ್ಯಾಯದ ದಿನವಾಗಿ ಆಚರಿಸಲಾಗುತ್ತದೆ ಎಂದು ಸಾಮಾನ್ಯ ಸಭೆಯು ಘೋಷಿಸಿತು.

ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಜೂನ್ 10,2008 ರಂದು ನ್ಯಾಯಯುತ ಜಾಗತೀಕರಣಕ್ಕಾಗಿ ಸಾಮಾಜಿಕ ನ್ಯಾಯದ ಕುರಿತು ILO ಘೋಷಣೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಇದು 1919ರ ILO ನ ಸಂವಿಧಾನದ ನಂತರ ಅಂತರರಾಷ್ಟ್ರೀಯ ಕಾರ್ಮಿಕ ಸಮ್ಮೇಳನವು ಅಳವಡಿಸಿಕೊಂಡ ತತ್ವಗಳು ಮತ್ತು ನೀತಿಗಳ ಮೂರನೇ ಪ್ರಮುಖ ಹೇಳಿಕೆಯಾಗಿದೆ. 2009 ರಲ್ಲಿ ಈ ದಿನವನ್ನು ಮೊದಲು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಈ ದಿನದಂದು ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.

ವಿಶ್ವ ಸಾಮಾಜಿಕ ನ್ಯಾಯ ದಿನದ ಬಗ್ಗೆ ತಿಳಿದುಕೊಳ್ಳಬೇಕಾ ? ಇಲ್ಲಿದೆ ಮಾಹಿತಿ

ವಿಶ್ವ ಸಾಮಾಜಿಕ ನ್ಯಾಯ ದಿನದ ಮಹತ್ವ :

ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಈ ದಿನದ ಮಹತ್ವವು ತುಂಬಾನೆ ಪ್ರಾಮುಖ್ಯತೆಯನ್ನು ಹೊಂದಿದೆ. ಇಡೀ ಜಗತ್ತನ್ನೇ COVID-19 ಸಾಂಕ್ರಾಮಿಕ ರೋಗವು ಆಕ್ರಮಿಸಿಕೊಂಡಿತ್ತು, ಹೀಗಾಗಿ ಜಗತ್ತು ನಮ್ಮೆಡೆಗೆ ಒಡ್ಡಿದ ಹೊಸ ಸವಾಲಿನೊಂದಿಗೆ ಜೀವಿಸಲು ತಿಳಿಯುವುದು ಅನಿವಾರ್ಯವಾಗಿತ್ತು. ಈ ಸಾಂಕ್ರಾಮಿಕದಿಂದಾಗಿ ಉಳ್ಳವರು ತಮ್ಮ ಆರೋಗ್ಯವನ್ನು ಸುಧಾರಿಸಲು ಹೋರಾಡಿದರು. ಆದರೆ ಕೆಳ ವರ್ಗದವರು ಚಿಕಿತ್ಸೆ ಪಡೆಯಲು ಅನುಕೂಲವಿಲ್ಲದ ಕಾರಣ ಅನೇಕ ಸಾವು ನೋವುಗಳನ್ನು ಕಂಡಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಕೂಡ ಸಮಾನವಾದ ಚಿಕಿತ್ಸೆಯನ್ನು ಪಡೆಯುವಂತೆ ಮಾಡುವುದು ಮತ್ತು ಸಾಮಾಜಿಕ ನ್ಯಾಯ ಒದಗಿಸುವುದು ಈ ದಿನದ ಮಹತ್ವವನ್ನು ಎತ್ತಿ ತೋರುತ್ತದೆ.

ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸುವ ಉದ್ದೇಶ :

* ಬಡತನ, ನಿರುದ್ಯೋಗ, ಸಾಮಾಜಿಕ ಉನ್ನತಿ, ಮಾನವ ಹಕ್ಕುಗಳು ಮತ್ತು ಲಿಂಗ ಸಮಾನತೆಯಂತಹ ಸಾಮಾಜಿಕ ನ್ಯಾಯದ ಸಮಸ್ಯೆಗಳನ್ನು ಗುರುತಿಸುವ ಅಗತ್ಯವನ್ನು ಅರಿಯುವುದು.
* ಸಾಮಾಜಿಕ ಏಕೀಕರಣ ಮತ್ತು ಉದ್ಯೋಗದ ಗುರಿಯನ್ನು ಸಾಧಿಸುವತ್ತ ಗಮನಹರಿಸುವುದು.
* ಸಾಮಾಜಿಕ ಜವಾಬ್ದಾರಿಗಳು, ನ್ಯಾಯ ಮತ್ತು ಬಡತನ ನಿರ್ಮೂಲನೆ ಬಗ್ಗೆ ಅರಿವು ಮೂಡಿಸುವುದು.

ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಏಕೆ ಆಚರಿಸಲಾಗುತ್ತದೆ ?:

ಬಹಿಷ್ಕಾರ, ನಿರುದ್ಯೋಗ ಮತ್ತು ಬಡತನದಂತಹ ವಿವಿಧ ಸಾಮಾಜಿಕ ಸಮಸ್ಯೆಗಳನ್ನು ನಿಭಾಯಿಸುವ ಪ್ರಯತ್ನಗಳನ್ನು ಉತ್ತೇಜಿಸಲು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಸಾಮಾಜಿಕ ನ್ಯಾಯ ದಿನ 2022 ಥೀಮ್ :

ಪ್ರತಿ ವರ್ಷ ವಿಶ್ವ ಸಾಮಾಜಿಕ ನ್ಯಾಯ ದಿನಕ್ಕೆ ಒಂದು ವಿಷಯವನ್ನು ಆಯ್ಕೆ ಮಾಡಲಾಗುತ್ತದೆ. ಈ ವಿಷಯದ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು. 2022 ರ ವಿಶ್ವ ಸಾಮಾಜಿಕ ನ್ಯಾಯ ದಿನದಂದು ವಿಶ್ವಸಂಸ್ಥೆಯು ಆಯ್ಕೆ ಮಾಡಿದ ಥೀಮ್ "ಔಪಚಾರಿಕ ಉದ್ಯೋಗದ ಮೂಲಕ ಸಾಮಾಜಿಕ ನ್ಯಾಯವನ್ನು ಸಾಧಿಸುವುದು" ಎಂದು ರಚಿಸಲಾಗಿದೆ. ಬಡತನ ಮತ್ತು ಅಸಮಾನತೆಯನ್ನು ಕಡಿಮೆ ಮಾಡಲು ಪೂರ್ವಾಪೇಕ್ಷಿತವಾಗಿ ಉದ್ಯೋಗದ ಔಪಚಾರಿಕೀಕರಣದ ಮೇಲೆ ಕೇಂದ್ರೀಕರಿಸಲಾಗುತ್ತದೆ.

ವಿಶ್ವ ಸಾಮಾಜಿಕ ನ್ಯಾಯ ದಿನ 2022 ಆಚರಣೆ ಹೇಗಿರುತ್ತದೆ ? :

ಪ್ರತಿ ವರ್ಷ ಫೆಬ್ರವರಿ 20 ರಂದು ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯಂತಹ ವಿವಿಧ ಸಂಸ್ಥೆಗಳು ಸಾಮಾಜಿಕ ನ್ಯಾಯಕ್ಕಾಗಿ ಜನರಲ್ಲಿ ಮನವಿ ಮಾಡುತ್ತವೆ. ಈ ದಿನದಂದು ವಿವಿಧೆಡೆ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
World day of social justice is celebrated on february 20. Here is the history, significance, theme and celebrations in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X