World Environment Day 2021: ಈ ದಿನದ ಥೀಮ್, ಇತಿಹಾಸ ಮತ್ತು ಮಹತ್ವ ತಿಳಿದಿದ್ದೀರಾ !

ವಿಶ್ವ ಪರಿಸರ ದಿನದ ಥೀಮ್, ಇತಿಹಾಸ ಮತ್ತು ಮಹತ್ವ ಏನು ?

ನಾವು ಜೀವಿಸುತ್ತಿರುವ ಈ ಭೂಮಿ ಹಲವು ಜೀವರಾಶಿಗಳನ್ನು ತನ್ನ ಮಡಿಲಿನಲ್ಲಿರಿಸಿಕೊಂಡು ಸಾಕಿ ಸಲಹುತ್ತಿದೆ. ಪ್ರತಿಯೊಂದು ಜೀವರಾಶಿಗಳಿಗೆ ಆಹಾರ, ಆಶ್ರಯ, ಗಾಳಿ ಮತ್ತು ಬೆಳಕನ್ನು ಒದಗಿಸುತ್ತಾ ಬಂದಿದೆ. ಮಾನವನ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಲೇ ಇದೆ.

ನಾವು ನಮ್ಮ ಜೀವನದಲ್ಲಿ ಪ್ರಕೃತಿಯನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದೇವೆ. ಪರಿಸರವಿಲ್ಲದೆ ನಾವು ಈ ಗ್ರಹದಲ್ಲಿ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನಮ್ಮ ಹೊಸ ಹೊಸ ಆವಿಷ್ಕಾರಗಳು ಇಂದು ಹಲವು ಬದಲಾವಣೆಗಳನ್ನು ತಂದೊಡ್ಡಿದೆ. ಇದರಿಂದ ಪ್ರಕೃತಿಯ ನಾಶ ನಮ್ಮಿಂದಲೇ ಆಗುತ್ತಿದೆ.

ಇಂದಿನ ದಿನಗಳಲ್ಲಿ ಪ್ರಕೃತಿಯ ಮಹತ್ವ ಹೆಚ್ಚು ಹೆಚ್ಚು ಅರ್ಥವಾಗುತ್ತಿದೆ. ಹಾಗಾಗಿ ನಾವು ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ನಮ್ಮ ಮಕ್ಕಳು ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸಿಕೊಳ್ಳಬೇಕಾದವರು. ಅವರಿಗೂ ಪರಿಸರದ ಕಾಳಜಿ ಅರ್ಥ ಮಾಡಿಸುವ ಅಗತ್ಯ ಹೆಚ್ಚಿದೆ. ಹಾಗಾಗಿ ಪ್ರತಿ ವರ್ಷ ಈ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಈ ದಿನದ ಥೀಮ್ ಏನು ? ಇತಿಹಾಸ ಏನು? ಎನ್ನುವುದನ್ನು ಇಲ್ಲಿ ತಿಳಿಯಿರಿ.

ವಿಶ್ವ ಪರಿಸರ ದಿನ 2021: ದಿನಾಂಕ

ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಜೂನ್ 5 ರಂದು ಆಚರಿಸಲಾಗುತ್ತದೆ. ಪರಿಸರವನ್ನು ರಕ್ಷಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು 1974 ರಲ್ಲಿ ಅಮೇರಿಕದ ಸ್ಪೋಕಾನೆ ನಗರದಲ್ಲಿ ಈ ದಿನವನ್ನು ಮೊದಲು ಆಚರಿಸಲಾಯಿತು.

ನಾವು ಪ್ರಕೃತಿಯ ಒಂದು ಭಾಗವಾಗಿದ್ದೇವೆ ಮತ್ತು ಪ್ರಕೃತಿಯನ್ನೇ ಅವಲಂಬಿಸಿದ್ದೇವೆ. ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅರಿವು ಮೂಡಿಸುವ ವಿಶೇಷ ದಿನವಾಗಿದೆ. ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆಗೆ ಒಂದು ನಿರ್ಧಿಷ್ಟ ವಿಷಯವಿದೆ. ಹಾಗೆಯೇ ಈ ವರ್ಷವು ಯಾವ ಥೀಮ್ ನೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ ? ತಿಳಿಯೋಣ ಬನ್ನಿ.

ವಿಶ್ವ ಪರಿಸರ ದಿನ 2021: ಥೀಮ್

ವಿಶ್ವ ಪರಿಸರ ದಿನ 2021ರ ವಿಷಯವೆಂದರೆ "ಪರಿಸರ ವ್ಯವಸ್ಥೆ ಪುನಃಸ್ಥಾಪನೆ". ಪರಿಸರ ವ್ಯವಸ್ಥೆಯನ್ನು ಪುನಃಸ್ಥಾಪಿಸುವುದು ಎಂದರೆ ಸಕ್ರಿಯವಾಗಿ ಮರಗಳನ್ನು ನೆಡುವುದರ ಮೂಲಕ ಅಥವಾ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಮೂಲಕ ಹಾಗೂ ಹೆಚ್ಚುತ್ತಿರುವ ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ ಪರಿಸರ ವ್ಯವಸ್ಥೆಯ ಮೇಲಿನ ಒತ್ತಡಗಳನ್ನು ತೆಗೆದುಹಾಕುವ ಮೂಲಕ ಪರಿಸರವನ್ನು ರಕ್ಷಿಸುಸಿಕೊಳ್ಳುವುದು.

ವಿಶ್ವ ಪರಿಸರ ದಿನ 2021: ಇತಿಹಾಸ

ಪರಿಸರದ ಕುರಿತಾದ ಮೊದಲ ಪ್ರಮುಖ ಸಮ್ಮೇಳನವನ್ನು 1972 ರಲ್ಲಿ ಜೂನ್ 5 ರಿಂದ 16ರ ವರೆಗೆ ಸ್ಟಾಕ್ಹೋಮ್ (ಸ್ವೀಡನ್) ನಲ್ಲಿ ನಡೆಸಲಾಯಿತು. ಅದೇ ವರ್ಷದ ಡಿಸೆಂಬರ್ 15 ರಂದು ಸಾಮಾನ್ಯ ಸಭೆಯನ್ನು ನಡೆಸಲಾಯಿತು. ಆ ಸಭೆಯಲ್ಲಿ ಜೂನ್ 5 ಅನ್ನು ವಿಶ್ವ ಪರಿಸರ ದಿನವೆಂದು ಅಂಗೀಕರಿಸಲಾಯಿತು. 1974 ರಲ್ಲಿ ಮೊದಲ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಅಂದಿನಿಂದ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಸರ್ಕಾರಗಳು, ವ್ಯವಹಾರಗಳು, ಸೆಲೆಬ್ರಿಟಿಗಳು ಮತ್ತು ನಾಗರಿಕರು ಪರಿಸರದ ಕುರಿತಾದ ಸಮಸ್ಯೆಗಳೆಡೆಗೆ ಗಮನವಹಿಸಲು ತೊಡಗುತ್ತಾರೆ.

ಪ್ರತಿ ವರ್ಷ ಈ ದಿನದಂದು ಜನರು ಸಾಮಾನ್ಯವಾಗಿ ಸಸಿಗಳನ್ನು ನೆಡುತ್ತಾರೆ. ವಿವಿಧೆಡೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ ಈ ವರ್ಷ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಜನರು ತಮ್ಮ ಮನೆಗಳಲ್ಲಿ ನಾಲ್ಕು ಗೋಡೆಗಳಿಗೆ ಸೀಮಿತವಾಗಿರುವುದರಿಂದ ವಿಶ್ವ ಪರಿಸರ ದಿನಾಚರಣೆಯು ವಿಭಿನ್ನವಾಗಿರುತ್ತದೆ.

ಜನರು ಹೊರಗೆ ಹೋಗುವ ಬದಲು ಈ ದಿನವನ್ನು ಕ್ರಿಯಾತ್ಮಕವಾಗಿಯೂ ಆಚರಿಸಬಹುದು. ಆನ್‌ಲೈನ್ ಮೂಲಕ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
World environment day is celebrated on june 5. Here is the history and significance of the day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X