ಛಾಯಾಗ್ರಹಣ ಎನ್ನುವುದು ಕೇವಲ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಎನ್ನುವುದಲ್ಲ ಅಲ್ಲಿ ಹಲವು ರೀತಿಯ ಸೂಕ್ಷ್ಮತೆಗಳನ್ನು ಬಿಂಬಿಸುವುದು ಎಂದೇ ಅರ್ಥ. ಛಾಯಾಗ್ರಹಣದಲ್ಲಿ ಛಾಯಾಗ್ರಾಹಕನ ಕೈಚಳಕದ ಕಲೆ ಹೆಚ್ಚಿರುತ್ತದೆ. ಹಿಂದೆ ಛಾಯಾಗ್ರಹಣ ಎನ್ನುವುದು ಮದುವೆ ಸಮಾರಂಭಗಳಲ್ಲಿ ಮತ್ತು ಇನ್ನಿತರೆ ಕೆಲವು ಸಂದರ್ಭಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಎಲ್ಲೆಲ್ಲಿಯೂ ಈ ಛಾಯಾಗ್ರಣದ ಬಳಕೆಯಾಗುತ್ತಲೇ ಇದೆ. ಇಂದಿನ ದಿನಗಳಲ್ಲಿ ಛಾಯಾಗ್ರಹಣ ಎಂಬುದು ಕ್ರೀಡೆ, ಪತ್ರಿಕೋದ್ಯಮ ಮತ್ತು ಇನ್ನಿತರೆ ಕ್ಷೇತ್ರಗಳಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತಿದ್ದು ಹಲವರು ಇದರ ಕಲಿಕೆಯ ಬಗೆಗೆ ಆಸಕ್ತಿಯನ್ನು ತೋರುತ್ತಿದ್ದಾರೆ.
ಹಲವರು ಈ ಛಾಯಾಗ್ರಹಣವನ್ನು ವೃತ್ತಿಯಾಗಿ ಮಾಡಿಕೊಳ್ಳಲು ಮತ್ತು ಉದ್ಯೋಗವನ್ನು ಸೃಷ್ಟಿಯಾಗಿಸಿಕೊಳ್ಳುವ ಉದ್ದೇಶದಿಂದ ಛಾಯಾಗ್ರಣಕ ಕಲಿಕೆಯ ಬಗೆಗೆ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದಾರೆ ಮತ್ತೆ ಕೆಲವರು ಹವ್ಯಾಸಿ ಛಾಯಾಗ್ರಾಹಕರಾಗಲು ಕಲಿಕೆಯನ್ನು ಪ್ರಾರಂಭಿಸಿದ್ದಾರೆ. ಹಾಗಾಗಿ ಇಂದಿನ ಲೇಖನದಲ್ಲಿ ತರಗತಿಗೆ ಸೇರದೆಯೇ ಛಾಯಾಗ್ರಣದ ಕಲಿಕೆಗೆ ಯಾವೆಲ್ಲಾ ಆನ್ಲೈನ್ ಕೋರ್ಸ್ಗಳಿವೆ ಎನ್ನುವುದರ ಬಗೆಗೆ ತಿಳಿಸಲಿದ್ದೇವೆ.

1 ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫೋಟೋಗ್ರಫಿ:
ಇಂಡಿಯನ್ ಇನ್ಸ್ಪಿಟ್ಯೂಟ್ ಆಫ್ ಫೋಟೋಗ್ರಫಿ ಉತ್ತಮ ಛಾಯಾಗ್ರಾಹಕರನ್ನು ಸೃಷ್ಟಿಸುವ ಉದ್ದೇಶದಿಂದ ಆರಂಭಗೊಂಡಿದ್ದು 32 ದೇಶಗಳೆಲ್ಲೆಡೆ 6000 ಛಾಯಾಗ್ರಾಹಕರನ್ನು ಹೊಂದಿದೆ. ಇಲ್ಲಿ 3ಆನ್ಲೈನ್ ಫೋಟೋಗ್ರಫಿ ಕೋರ್ಸ್ಗಳು ಇದ್ದು ಅವುಗಳ ವಿವರ ಕೆಳಗೆ ನೀಡಲಾಗಿದೆ.
3 ತಿಂಗಳ ಆನ್ಲೈನ್ ಫೌಂಡೇಶನ್ ಫೋಟೋಗ್ರಫಿ ಕೋರ್ಸ್
ಛಾಯಾಗ್ರಾಹಕನಾಗಲು ಬೇಕಿರುವಂತಹ ಕೌಶಲ್ಯ ಮತ್ತು ಜ್ಞಾನವನ್ನು ನೀಡುವ ಕೋರ್ಸ್ ಇದಾಗಿದ್ದು ಕೋರ್ಸ್ ಕಲಿಯಲು ಶುಲ್ಕ8000/- ರೂಗಳಿರುತ್ತದೆ. ಛಾಯಾಗ್ರಾಹಕರಾಗಬೇಕೆಂಬ ಹಂಬಲವುಳ್ಳ ವಿದ್ಯಾರ್ಥಿಗಳು ಈ ಕೋರ್ಸ್ಗಳನ್ನು ಮಾಡಬಹುದು.
1 ತಿಂಗಳ ಆನ್ಲೈನ್ ಫೋಟೋಗ್ರಫಿ ಕೋರ್ಸ್:
ಒಂದು ತಿಂಗಳ ಕೋರ್ಸ್ ಇದಾಗಿದ್ದು ಕಲಿಕೆಯ ಆರಂಭಿಕ ಹಂತದಲ್ಲಿರುವ ಅಭ್ಯರ್ಥಿಗಳು ಈ ಕೋರ್ಸ್ ಅನ್ನು ಮಾಡುವ ಮೂಲಕ ಫೋಟೋಗ್ರಫಿಯ ಬೇಸಿಕ್ ಜ್ಞಾನವನ್ನು ತಿಳಿದುಕೊಳ್ಳಬಹುದು. ಈ ಕೋರ್ಸಿಗೆ ಸೇರಲು 3950/- ರೂ ಶುಲ್ಕವನ್ನು ನಿಗದಿಪಡಿಸಲಾಗಿರುತ್ತದೆ.
ಆನ್ಲೈನ್ ಮೊಬೈಲ್ ಫೋನ್ ಫೋಟೋಗ್ರಫಿ ಕೋರ್ಸ್:
ಈ ಕೋರ್ಸ್ ಅನ್ನು ಕಲಿಯಲು ಅನೇಕರು ಆಸಕ್ತಿಯನ್ನು ತೋರುತ್ತಿದ್ದು, ಅಭ್ಯರ್ಥಿಗಳು ಈ ಕೋರ್ಸಿನಲ್ಲಿ ಮೊಬೈಲ್ ನಲ್ಲಿ ಹೇಗೆ ಉತ್ತಮ ಫೋಟೋ ತೆಗೆಯಬಹುದೆಂಬುದನ್ನು ಅರಿಯಬಹುದು. ಇದು ವೃತ್ತಿಪರ ಕೋರ್ಸ್ ಆಗಿರದೆ ಕೇವಲ ಜನಸಾಮಾನ್ಯರು ಹೇಗೆ ಫೋಟೋಗಳನ್ನು ತೆಗೆಯಬಹುದು ಎಂಬುದನ್ನು ತಿಳಿಸುತ್ತದೆ. ಈ ಕೋರ್ಸ್ ಕಲಿಯಲು 1980 ರೂ ಶುಲ್ಕವಿರುತ್ತದೆ.

2 ನ್ಯೂ ಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಫೋಟೋಗ್ರಫಿ:
ನ್ಯೂ ಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಫೋಟೋಗ್ರಫಿ ವಿವಿಧ ಆನ್ಲೈನ್ ಫೋಟೋಗ್ರಫಿ ಕೋರ್ಸ್ ಗಳನ್ನು ಒಳಗೊಂಡಿದೆ.
ಈ ಕೋರ್ಸ್ಗಳನ್ನು ಯಾವ ಸಮಯದಲ್ಲಿ ಎಲ್ಲಿ ಬೇಕಾದರೂ ಕಲಿಯಬಹುದು. ಪ್ರತಿಯೊಂದು ಕೋರ್ಸ್ಗೂ ತಗುಲುವ ಶುಲ್ಕದ ವೆಚ್ಚ 43,844 /-ರೂ.
ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಫೋಟೋಗ್ರಫಿಯಲ್ಲಿರುವ ವಿವಿಧ ಕೋರ್ಸ್ಗಳ ವಿವರ
1 ಪ್ರೊಫೆಷನಲ್ ಫೋಟೋಗ್ರಫಿ ಕೋರ್ಸ್
2 ಫಂಡಮೆಂಟಲ್ಸ್ ಆಫ್ ಡಿಜಿಟಲ್ ಫೋಟೋಗ್ರಫಿ
3 ಪೋರ್ಟ್ರೈಟ್ ಫೋಟೋಗ್ರಫಿ ಕೋರ್ಸ್
4 ಫೋಟೋಶಾಪ್ ಫಾರ್ ಫೋಟೋಗ್ರಾಫರ್ಸ್
5 ವೆಡ್ಡಿಂಗ್ ಫೋಟೋಗ್ರಫಿ ಕೋರ್ಸ್
6 ಫೋಟೋ ಜರ್ನಲಿಸಂ ಕೋರ್ಸ್
7 ಟ್ರಾವೆಲ್ ಫೋಟೋಗ್ರಫಿ ಕೋರ್ಸ್
8 ನೇಚರ್ ಮತ್ತು ಲ್ಯಾಂಡ್ಸ್ಕೇಪ್ ಫೋಟೋಗ್ರಫಿ
9 ವೀಡಿಯೋ ಮೇಕಿಂಗ್ ಕೋರ್ಸ್
10 ಬ್ಯುಸಿನೆಸ್ ಫಾರ್ ಫೋಟೋಗ್ರಾಫರ್ಸ್

3 ಮಿಚಿಗಾನ್ ಸ್ಟೇಟ್ ಯೂನಿವರ್ಸಿಟಿ:
ಯುನೈಟೆಡ್ ಸ್ಟೇಟ್ಸ್ನ ಸಾರ್ವಜನಿಕ ಸಂಶೋಧನಾ ಸಂಸ್ಥೆ, ಮಿಚಿಗಾನ್ ಸ್ಟೇಟ್ ಯೂನಿವರ್ಸಿಟಿಯು ಫೋಟೋಗ್ರಫಿಯಲ್ಲಿ ವಿವಿಧ ಐದು ಹಂತದ ಕೋರ್ಸ್ಗಳನ್ನು ಒಳಗೊಂಡಿದೆ. 4 ವಾರಗಳ ಕೋರ್ಸು ಇದಾಗಿದ್ದು, ಒಬ್ಬ ಅಭ್ಯರ್ಥಿಯು ಒಂದು ವಾರದಲ್ಲಿ 2 ರಿಂದ 3 ಗಂಟೆಗಳ ಕಾಲ ಕಲಿಯಲು ಮೀಸಲಿಡಬಹುದು. ವಿವಿಧ ಕೋರ್ಸುಗಳು ವಿಭಿನ್ನ ಶುಲ್ಕವನ್ನು ಹೊಂದಿರುತ್ತದೆ.
ಕೋರ್ಸು 1: ಕ್ಯಾಮೆರಾ, ಎಕ್ಸ್ಪೋಸರ್ ಮತ್ತು ಫೋಟೋಗ್ರಫಿ
ಕೋರ್ಸು 2: ಕ್ಯಾಮೆರಾ ಕಂಟ್ರೋಲ್
ಕೋರ್ಸು 3: ಪ್ರಿನ್ಸಿಪಲ್ಸ್ ಆಫ್ ಫೋಟೋ ಕಾಂಪೋಸಿಷನ್ ಮತ್ತು ಡಿಜಿಟಲ್ ಇಮೇಜ್ ಪೋಸ್ಟ್- ಪ್ರೊಡಕ್ಷನ್
ಕೋರ್ಸು 4: ಫೋಟೋಗ್ರಫಿ ಟೆಕ್ನಿಕ್ಸ್: ಲೈಟ್, ಕಂಟೆಂಟ್ ಮತ್ತು ಶೇರಿಂಗ್
ಕೋರ್ಸು 5: ಫೋಟೋಗ್ರಫಿ ಕ್ಯಾಪ್ಸ್ಟೋನ್ ಪ್ರಾಜೆಕ್ಟ್

4 ಫೋಟೋಗ್ರಫಿಯಲ್ಲಿ ಪ್ರೊಫೆಷನಲ್ ಡಿಪ್ಲೋಮಾ: ಶಾ ಅಕಾಡೆಮಿ
ಶಾ ಅಕಾಡೆಮಿ ಫೋಟೋಗ್ರಫಿಯಲ್ಲಿ 16 ವಾರಗಳ ಪ್ರೊಫೆಷನಲ್ ಡಿಪ್ಲೊಮಾ ಕೋರ್ಸ್ ಅನ್ನು ಹೊಂದಿರುತ್ತದೆ. ಈ ಕೋರ್ಸ್ಗೆ ಸೇರಲು ಅಭ್ಯರ್ಥಿಗಳು ರಿಜಿಸ್ಟರ್ ಮಾಡಿದಾಗ ಅಭ್ಯರ್ಥಿಗಳಿಗೆ ಉಚಿತವಾಗಿ ಕೋರ್ಸಿಗೆ ಬೇಕಾದ ಟೂಲ್ಸ್ ಮತ್ತು ಸ್ಟಡಿ ಮೆಟೀರಿಯಲ್ಗಳನ್ನು ನೀಡಲಾಗುತ್ತದೆ. ಈ ಕೋರ್ಸಿನಲ್ಲಿರುವ ಪ್ರತಿಯೊಂದು ಮಾಡ್ಯೂಲ್ ಗೆ 1000/-ಶುಲ್ಕವಿರುತ್ತದೆ.
ಮಾಡ್ಯೂಲ್ 1: ಪರಿಚಯ
ಮಾಡ್ಯೂಲ್ 2: ಕ್ರಿಯೇಟಿವ್ ಟೆಕ್ನಿಕ್ಸ್ ಮಾಡ್ಯೂಲ್
ಮಾಡ್ಯೂಲ್ 3: ಮಾಸ್ಟರಿಂಗ್ ಲೈಟ್ ಮಾಡ್ಯೂಲ್
ಮಾಡ್ಯೂಲ್ 4: ಪವರ್ಫುಲ್ ಎನ್ಹ್ಯಾನ್ಸ್ಮೆಂಟ್ ಮಾಡ್ಯೂಲ್

ಫೋಟೋಗ್ರಫಿಯಲ್ಲಿನ ಆಸಕ್ತಿದಾಯಕ ಮತ್ತು ವಿಶಿಷ್ಟ ಕೋರ್ಸುಗಳ ವಿವರ:
ಫೋಟೋಗ್ರಫಿಯ ಆನ್ಲೈನ್ ಕಲಿಕೆಯಲ್ಲಿ ಹಲವು ಕೋರ್ಸುಗಳಿದ್ದು, ವೃತ್ತಿಪರ ಫೋಟೋಗ್ರಾಫರ್ ಆಗಲು ಬೇಕಿರುವ ವಿಶಿಷ್ಟ ಕೋರ್ಸುಗಳ ವಿವರ ಇಲ್ಲಿವೆ
1 ಲಾಂಗ್ ಎಕ್ಸ್ಪೋಸರ್ ಫೋಟೋಗ್ರಫಿ
2 ಫೋಟೋಗ್ರಫೀ ಬಿಗಿನ್ನರ್ಸ್
3 ಫೋಟೋಗ್ರಫಿ- ಕ್ಯಾಮೆರಾ ಫ್ಲಾಶ್ ಬಳಸಿ ಕಲಿಕೆ
4 ಫೋಟೋಗ್ರಫಿ- ಕೌಶಲ್ಯಯುತ ಛಾಯಾಗ್ರಾಹಕನಾಗಲು ಸಲಹೆಗಳು
5 ಎಲಿವೇಟ್ ಯುವರ್ ಫೋಟೋಗ್ರಫಿ
6 ಕಮರ್ಷಿಯಲ್ ಫೋಟೋಗ್ರಾಫರ್ ಆಗುವುದು ಹೇಗೆ