World Post Day 2021 : ಈ ದಿನದ ಇತಿಹಾಸ, ಥೀಮ್, ಮಹತ್ವ ಮತ್ತು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ

ಒಂದು ಕಾಲಕ್ಕೆ ಅಂಚೆ ಅಂದರೆ ನಿಜಕ್ಕೂ ಎಲ್ಲರೂ ಕಾತುರದಿಂದ ಕಾದು ಓದುವ ಸಂದೇಶವಾಗಿತ್ತು. ಕಾಲಕ್ರಮೇಣ ತಂತ್ರಜ್ಞಾನಗಳು ಬದಲಾದಂತೆ ಜನರ ಅಗತ್ಯತೆಗಳು ಬದಲಾಗುತ್ತಾ ಹೋಗಿವೆ. ಹೀಗಿರುವಾಗ ಅಂಚೆ ಎನ್ನುವುದು ಈಗಿನ ಮಕ್ಕಳಲ್ಲಿ ಗೊತ್ತೇ ಇರದ ಸಂಗತಿ. ಹಾಗಾಗಿ ನಾವು ವಿಶ್ವ ಅಂಚೆ ದಿನದ ಕುರಿತು ಒಂದಷ್ಟು ಮಾಹಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇವೆ.

 
ವಿಶ್ವ ಅಂಚೆ ದಿನದ ಬಗ್ಗೆ ಸಂಕ್ಷಿಪ್ತ ಮಾಹಿತಿ ನಿಮಗಾಗಿ

ಸಾಮಾನ್ಯವಾಗಿ ವೈಯಕ್ತಿಕ ಪತ್ರಗಳು, ಪ್ರಮುಖ ದಾಖಲೆಗಳಿಂದ ಹಿಡಿದು ಇ-ಕಾಮರ್ಸ್ ಮತ್ತು ಆನ್‌ಲೈನ್ ಶಾಪಿಂಗ್ ಗಳ ವರೆಗೂ ಅಂಚೆ ಸೇವೆಗಳು ಎಲ್ಲವನ್ನೂ ನಿಭಾಯಿಸುತ್ತವೆ. ಆಧುನಿಕವಾಗಿ ಡಿಜಿಟಲೀಕರಣದಿಂದಾಗಿ ಜನರು ತಮ್ಮ ವಸ್ತುಗಳನ್ನು ಪಾರ್ಸೆಲ್ ಮಾಡಲು ಡಿಜಿಟಲ್ ಮಾಧ್ಯಮಕ್ಕೆ ಬದಲಾಯಿಸಿಕೊಂಡಿದ್ದಾರೆ. ಆದರೆ ಅಂಚೆ ಸೇವೆಗಳು ಇನ್ನೂ ಸಮಾಜದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿವೆ.

ವಿಶ್ವದಾದ್ಯಂತ ಯುನಿವರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು) ಸ್ಥಾಪನೆಯ ವಾರ್ಷಿಕೋತ್ಸವವನ್ನು ಆಚರಿಸಲು ಪ್ರತಿ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ. ಹಲವು ಶತಮಾನಗಳಿಂದ ಕಾರ್ಯನಿರ್ವಹಿಸುತ್ತಿರುವ ಅಂಚೆ ವ್ಯವಸ್ಥೆಯನ್ನು 1874 ರಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸ್ಥಾಪಿಸಲಾಯಿತು.

ವಿಶ್ವ ಅಂಚೆ ದಿನದ ಇತಿಹಾಸ :

ವಿಶ್ವ ಅಂಚೆ ದಿನವನ್ನು ಮೊದಲು 1969 ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆದ ಯುಪಿಯು ಕಾಂಗ್ರೆಸ್‌ನಲ್ಲಿ ಆಚರಿಸಲಾಯಿತು. ಪ್ರಸ್ತಾವನೆಯನ್ನು ಭಾರತೀಯ ನಿಯೋಗದ ಸದಸ್ಯರಾದ ಶ್ರೀ ಆನಂದ್ ನರುಲಾ ಅವರು ಒಪ್ಪಿಕೊಂಡರು ಮತ್ತು ಅಂದಿನಿಂದ ಅಂಚೆ ಸೇವೆಗಳ ಮಹತ್ವವನ್ನು ತಿಳಿಸುವ ಸಲುವಾಗಿ ವಿಶ್ವದಾದ್ಯಂತ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತಿದೆ. ಯುಪಿಯು ಜಗತ್ತಿನಾದ್ಯಂತ ಜನರಿಗೆ ಪತ್ರ ಬರೆಯುವ ಜಾಗತಿಕ ಆವಿಷ್ಕಾರವನ್ನು ಪ್ರದರ್ಶಿಸಿತು.

ಪ್ರತಿ ವರ್ಷ ಯುಪಿಯುನ 192 ಸದಸ್ಯ ರಾಷ್ಟ್ರಗಳು ವಿಶ್ವ ಅಂಚೆ ದಿನವನ್ನು ಆಚರಿಸುತ್ತವೆ. ಸಮಾಜಕ್ಕೆ ಮತ್ತು ಜಾಗತಿಕ ಆರ್ಥಿಕತೆಗೆ ಯುಪಿಯುನ ಕೊಡುಗೆಗಳನ್ನು ಈ ದಿನ ಗುರುತಿಸಲಾಗುತ್ತದೆ. ದೇಶಗಳು ವಿಶೇಷ ಅಂಚೆಚೀಟಿ ಪ್ರದರ್ಶನಗಳನ್ನು ನಡೆಸುತ್ತವೆ ಮತ್ತು ಹೊಸ ಅಂಚೆ ಉಪಕ್ರಮಗಳನ್ನು ಪ್ರಾರಂಭಿಸುತ್ತವೆ.

 

1600ರ ದಶಕದಲ್ಲಿ ಅಂಚೆ ವ್ಯವಸ್ಥೆಗಳನ್ನು ವಿವಿಧ ದೇಶಗಳಲ್ಲಿ ಸ್ಥಾಪಿಸಲು ಆರಂಭಿಸಲಾಯಿತು ಮತ್ತು ಅನೇಕರು ಬಳಸುತ್ತಿದ್ದರು. ಕ್ರಮೇಣ ಪತ್ರಗಳ ವಿನಿಮಯವು ಜಾಗತಿಕವಾಗಿ ನಡೆಯಲಾರಂಭಿಸಿತು ಮತ್ತು 1800 ರ ಉತ್ತರಾರ್ಧದಲ್ಲಿ ಜಾಗತಿಕ ಅಂಚೆ ವ್ಯವಸ್ಥೆಯು ವಿಕಸನಗೊಂಡಿತು. ಇದು ನಿಧಾನ ಮತ್ತು ಕಠಿಣವಾಗಿದ್ದರೂ 1874 ರಲ್ಲಿ ಯುಪಿಯು ಸ್ಥಾಪನೆಯೊಂದಿಗೆ ಅದು ದಕ್ಷವಾಯಿತು.

ವಿಶ್ವ ಅಂಚೆ ದಿನದ ಥೀಮ್ :

ಈ ವರ್ಷದ ವಿಶ್ವ ಅಂಚೆ ದಿನದ ವಿಷಯ "ಚೇತರಿಸಿಕೊಳ್ಳಲು ಹೊಸತನ". ಈ ಥೀಮ್ ಸೂಕ್ತವಾಗಿದೆ ಏಕೆಂದರೆ ಇದು ಇಂದಿನ ಸಮಸ್ಯೆಯ ದುಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಪ್ರಮುಖವಾಗಿ ಎಲ್ಲವೂ ಡಿಜಿಟಲ್ ಆಗುತ್ತಿರುವಾಗ ಅಂಚೆ ವ್ಯವಸ್ಥೆಯು ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಯುಪಿಯು ಅದನ್ನು ಚೇತರಿಸಿಕೊಳ್ಳಲು ಸಹಾಯ ಮಾಡಲು ಮತ್ತು ಅದರ ಉಳಿವಿಗಾಗಿ ಉತ್ತಮ ಆಲೋಚನೆಗಳನ್ನು ಆವಿಷ್ಕರಿಸಲು ವಿನಂತಿಸುತ್ತಿದೆ.

ವಿಶ್ವ ಅಂಚೆ ದಿನದ ಮಹತ್ವ ಮತ್ತು ಆಚರಣೆ :

ವಿಶ್ವ ಅಂಚೆ ದಿನವನ್ನು ಪ್ರತಿ ವರ್ಷ 150 ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತದೆ. ಪ್ರತಿಯೊಂದು ದೇಶವೂ ಅದನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತದೆ. ಕೆಲವರು ಈ ದಿನದಂದು ಹೊಸ ಅಂಚೆ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸಲು ಅವಕಾಶವನ್ನು ತೆಗೆದುಕೊಳ್ಳುತ್ತಾರೆ ಮತ್ತು ಕೆಲವರು ತಮ್ಮ ಅತ್ಯುತ್ತಮ ಸೇವೆಗೆ ಪ್ರತಿಕ್ರಿಯೆಯಾಗಿ ತಮ್ಮ ಉದ್ಯೋಗಿಗಳನ್ನು ಗೌರವಿಸುತ್ತಾರೆ.

ಕೆಲವು ದೇಶಗಳು ಹೊಸ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವ ಪ್ರದರ್ಶನಗಳನ್ನು ನಡೆಸುತ್ತವೆ ಅಥವಾ ಅಂಚೆ ಸೇವೆಗಳ ಮಹತ್ವವನ್ನು ಉತ್ತೇಜಿಸಲು ಅಂಚೆ ಕಚೇರಿಗಳು ಮತ್ತು ವಸ್ತು ಸಂಗ್ರಹಾಲಯಗಳಲ್ಲಿ ವಿಶ್ವ ಅಂಚೆ ದಿನದ ಪೋಸ್ಟರ್‌ಗಳನ್ನು ಪ್ರದರ್ಶಿಸುತ್ತವೆ.

ಕೆಲವು ಅಂಚೆ ಕಚೇರಿಗಳು ತಮ್ಮ ಉದ್ಯೋಗಿಗಳಿಗೆ ಮತ್ತು ಸಾಮಾನ್ಯ ಪುರುಷರಿಗಾಗಿ ವಿಶೇಷ ಸ್ಮರಣಿಕೆಗಳಾದ ಬ್ಯಾಡ್ಜ್‌ಗಳು ಮತ್ತು ಟೀ ಶರ್ಟ್‌ಗಳನ್ನು ನೀಡುತ್ತವೆ. ಇತರ ದೇಶಗಳಲ್ಲಿ ವಿಶ್ವ ಅಂಚೆ ದಿನವು ಕೆಲಸದ ರಜಾದಿನವಾಗಿದೆ.

For Quick Alerts
ALLOW NOTIFICATIONS  
For Daily Alerts

English summary
World post day 2021 is on october 9, Here is the theme, history, significance and interesting facts in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X