Essay On World Radio Day 2022 In Kannada : ವಿಶ್ವ ರೇಡಿಯೋ ದಿನಕ್ಕೆ ಪ್ರಬಂಧ ಬರೆಯಲು ವಿದ್ಯಾರ್ಥಿಗಳಿಗೆ ಮಾಹಿತಿ

ಜನರ ಜೀವನಾಡಿಯಾಗಿದ್ದ ರೇಡಿಯೋ ಅನ್ನು ಎಂದಿಗೂ ಮರೆಯುವಂತಿಲ್ಲ. ಸಾಮೂಹಿಕ ಮಾಧ್ಯಮಗಳಲ್ಲಿ ರೇಡಿಯೋಗೆ ಅಗ್ರಸ್ಥಾನವಿದೆ. ಹಾಗಾಗಿ ವಿಶ್ವದೆಲ್ಲೆಡೆ ಪ್ರತಿ ವರ್ಷ ಫೆಬ್ರವರಿ 13ರಂದು "ವಿಶ್ವ ರೇಡಿಯೋ ದಿನ"ವನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಈ ದಿನದ ಕುರಿತು ಪ್ರಬಂಧ ಬರೆಯಲು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇದನ್ನು ಓದಿ ತಿಳಿದು ನಿಮ್ಮ ಪ್ರಬಂಧಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಬಹುದು.

ವಿಶ್ವ ರೇಡಿಯೋ ದಿನದ ಕುರಿತು ಪ್ರಬಂಧ ಬರೆಯಲು ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ

ಒಂದು ಕಾಲಕ್ಕೆ ಆತ್ಮೀಯ ಸ್ನೇಹಿತ, ಮನರಂಜನೆಯ ಮೂಲ ಮತ್ತು ಬಹು ದೊಡ್ಡ ಪ್ರತಿಷ್ಟಿತ ಸಮೂಹ ಸಂವಹನ ಮಾಧ್ಯಮ ಎಂದೇ ಹೆಸರು ಪಡೆದುಕೊಂಡ ರೇಡಿಯೋ ಎಂದೆಂದಿಗೂ ಎಲ್ಲರ ಮನದಲ್ಲೂ ಜೀವಂತ.

ಕಾಲಕಾಲಕ್ಕೆ ತಂತ್ರಜ್ಞಾನಗಳ ಬೆಳವಣಿಗೆಯಾಗುತ್ತಾ ಹೋದಂತೆ ಮಾಧ್ಯಮಗಳ ಸ್ವರೂಪವೂ ಬದಲಾಗುತ್ತಾ ಹೋಯಿತು. ಆದರೆ ಅಂದಿನಿಂದ ಇಂದಿನವರೆಗೂ ರೇಡಿಯೋ ಮಾತ್ರ ಅಗ್ರ ಸ್ಥಾನದಲ್ಲಿದೆ. ಏಕೆಂದರೆ ಅಂದು ರೇಡಿಯೋ ಜನರ ಜೀವನಾಡಿಯಾಗಿತ್ತು, ಅವರ ಬದುಕಿನುದ್ದಕ್ಕೂ ರೇಡಿಯೋದಲ್ಲಿ ಬರುವ ಸುದ್ದಿ ಮತ್ತು ಕಾರ್ಯಕ್ರಮಗಳು ಬೆರೆತು ಹೋಗಿದ್ದವು. ಆದರೆ ಇಂದು ತಂತ್ರಜ್ಞಾನಗಳ ಆವಿಷ್ಕಾರದಿಂದಾಗಿ ರೇಡಿಯೋ ಬಳಕೆಯು ಕಡಿಮೆಯಾಗಿದೆ. ಬದಲಾಗಿ ಟಿವಿ ಸ್ಮಾರ್ಟ್ ಫೋನ್ ಗಳು ತಲೆ ಎತ್ತಿವೆ. ಆದರೆ ಜಾಗತಿಕವಾಗಿ ಸಾಮೂಹಿಕ ಮಾಧ್ಯಮಗಳಲ್ಲಿ ರೇಡಿಯೋ ಅಗ್ರಸ್ಥಾನದಲ್ಲಿದೆ. ಹೀಗಾಗಿ ಪ್ರತೀ ವರ್ಷ ಫೆಬ್ರವರಿ ೧೩ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ.

ಫೆಬ್ರವರಿ ೧೩ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸುವ ಮೂಲಕ ರೇಡಿಯೋವನ್ನು ನೆನಪಿಸಿಕೊಳ್ಳಲಾಗುತ್ತದೆ. "ವಿಶ್ವ ರೇಡಿಯೋ ದಿನ" ಆಚರಣೆಯ ಇತಿಹಾಸವನ್ನು ನೋಡಿದಾಗ 2010ರಲ್ಲಿ ಸ್ಪೇನ್‌ನ ಸ್ಪ್ಯಾನಿಷ್ ರೇಡಿಯೋ ಅಕಾಡೆಮಿಯು ವಿಶ್ವ ರೇಡಿಯೋ ದಿನವನ್ನು ಆಚರಿಸುವ ಬೇಡಿಯಕೆಯನ್ನು ಯುನೆಸ್ಕೋದ ಮುಂದಿಟ್ಟಿತು. 2012 ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದನ್ನು ಅನುಮೋದಿಸಿತು. ಇದನ್ನು ಆಚರಿಸುವ ಸಂಪ್ರದಾಯ 2012ರ ಫೆಬ್ರವರಿ 13ರಿಂದ ಆರಂಭವಾಯಿತು. ಅಂದಿನಿಂದ ಇದು ಅಂತರರಾಷ್ಟ್ರೀಯ ದಿನದ ಸ್ಥಾನಮಾನವನ್ನು ಪಡೆದುಕೊಂಡಿದೆ. ಆದಾಗ್ಯೂ UNESCO ಸದಸ್ಯ ರಾಷ್ಟ್ರಗಳು 2011 ರಲ್ಲಿ ವಿಶ್ವ ರೇಡಿಯೋ ದಿನವನ್ನು ಘೋಷಿಸಿದವು. ಹಾಗಾಗಿ ಅಂದಿನಿಂದ ರೇಡಿಯೋ ಬಳಕೆಗೆ ಜನರನ್ನು ಉತ್ತೇಜಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸುತ್ತಾ ಬಂದಿದ್ದೇವೆ.

ಈ ವಿಶೇಷ ದಿನದಂದು ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ರೇಡಿಯೊದ ಮಹತ್ವ ಮತ್ತು ಇತಿಹಾಸದ ತಿಳಿಸಲು ವಿಚಾರಗೋಷ್ಠಿಗಳು ಮತ್ತು ಚರ್ಚೆಗಳು ನಡೆಯುತ್ತವೆ. ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಈ ದಿನ ಯುನೆಸ್ಕೋ ಪ್ರಪಂಚದಾದ್ಯಂತದ ವಿವಿಧ ಪ್ರಸಾರ ಮತ್ತು ಸಮುದಾಯಗಳ ಸಹಯೋಗದೊಂದಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸಿ, ರೇಡಿಯೊದ ಪ್ರಾಮುಖ್ಯತೆ ಮತ್ತು ಭವಿಷ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಮತ್ತು ಅನುಕೂಲಗಳ ಬಗ್ಗೆ ಅರಿವು ಮೂಡಿಸಲು ವ್ಯವಸ್ಥೆ ಮಾಡಿದೆ.

For Quick Alerts
ALLOW NOTIFICATIONS  
For Daily Alerts

English summary
World radio day is celebrated on february 13. Here is the information to write essay on world radio day for students in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X