World Thinking Day 2022 : ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಇಲ್ಲಿದೆ

ಜಗತ್ತಿನಾದ್ಯಂತ ಫೆಬ್ರವರಿ 22ರಂದು ವಿಶ್ವ ಚಿಂತನಾ ದಿನ ಅಥವಾ ಥಿಂಕಿಂಗ್ ಡೇ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಗರ್ಲ್ ಗೈಡ್ ಮತ್ತು ಗರ್ಲ್ ಸ್ಕೌಟ್ ದಿನ ಎಂದೂ ಕರೆಯಲಾಗುತ್ತದೆ.

ವಿಶ್ವ ಚಿಂತನಾ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಇಲ್ಲಿದೆ

ಈ ದಿನ ಸ್ಕೌಟಿಂಗ್ ಮತ್ತು ಗೈಡಿಂಗ್ ನ ಸ್ಥಾಪಕರಾದ ಲಾರ್ಡ್ ರಾಬರ್ಟ್ ಬೇಡನ್ ಪೊವೆಲ್ ಮತ್ತು ಅವರ ಪತ್ನಿ ಮತ್ತು ವಿಶ್ವ ಮುಖ್ಯ ಮಾರ್ಗದರ್ಶಿ ಲೇಡಿ ಓಲೇವ್ ಬೇಡನ್ ಪೊವೆಲ್ ಅವರ ಜನ್ಮದಿನವಾದ ಕಾರಣ ಫೆಬ್ರವರಿ 22 ಅನ್ನು ವಿಶ್ವ ಚಿಂತನಾ ದಿನವನ್ನಾಗಿ ಆಯ್ಕೆ ಮಾಡಲಾಗಿದೆ. ಇದನ್ನು ಸ್ಕೌಟ್ ಮತ್ತು ಗೈಡ್ ಸಂಘದವರೇ ಹೆಚ್ಚು ಆಚರಿಸುತ್ತಾರೆ. ಈ ದಿನ ಹೊಸ ಚಿಂತನೆಗಳಿಗೆ ಮೀಸಲಾಗಿದ್ದರೂ ಇದನ್ನು ಹೆಚ್ಚಿನವರು ಸ್ಕೌಟ್ ಮತ್ತು ಗೈಡ್ ಗಳ ಬಗ್ಗೆ ಮಾಹಿತಿ ನೀಡಲು ಉಪಯೋಗಿಸುತ್ತಾರೆ. ಈ ದಿನ ಸ್ಕೌಟ್ ಮತ್ತು ಗೈಡ್‌ಗಾಗಿ ನಿಧಿ ಸಂಗ್ರಹಣೆ ಮಾಡಲಾಗುತ್ತದೆ. ಬನ್ನಿ ಈ ದಿನದ ಇತಿಹಾಸ, ಮಹತ್ವ ಮತ್ತು ಈ ವರ್ಷದ ಥೀಮ್ ಬಗ್ಗೆ ತಿಳಿಯೋಣ.

ವಿಶ್ವ ಚಿಂತನಾ ದಿನ 2022 ಇತಿಹಾಸ :

1926 ರಲ್ಲಿ ನಡೆದ ನಾಲ್ಕನೇ ಗರ್ಲ್ ಸ್ಕೌಟ್ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ವಿಶೇಷ ಅಂತರಾಷ್ಟ್ರೀಯ ದಿನದ ಅಗತ್ಯವನ್ನು ಸಮ್ಮೇಳನದ ಪ್ರತಿನಿಧಿಗಳು ಎತ್ತಿ ಹಿಡಿದರು. ಈ ದಿನ ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್ಸ್ ವಿಶ್ವಾದ್ಯಂತ ಗರ್ಲ್ ಗೈಡಿಂಗ್ ಮತ್ತು ಗರ್ಲ್ ಸ್ಕೌಟಿಂಗ್ ಮತ್ತು ಎಲ್ಲಾ ಗರ್ಲ್ ಗೈಡ್‌ಗಳ ಬಗ್ಗೆ ಯೋಚಿಸುತ್ತಾರೆ.

ಫೆಬ್ರವರಿ 22 ರಂದು ಬಾಯ್ ಸ್ಕೌಟ್ ಆಂದೋಲನದ ಸಂಸ್ಥಾಪಕ ಲಾರ್ಡ್ ಬೆಡೆನ್-ಪೊವೆಲ್ ಮತ್ತು ಅವರ ಪತ್ನಿಯಾದ ಮೊದಲ ವಿಶ್ವ ಮುಖ್ಯ ಮಾರ್ಗದರ್ಶಿ ಲೇಡಿ ಓಲೇವ್ ಬೆಡೆನ್-ಪೊವೆಲ್ ಅವರ ಜನ್ಮದಿನವೂ ಹೌದು. ಹಾಗಾಗಿ ಅವರ ಜನ್ಮದಿನವನ್ನು ಗುರುತಿಸುವ ನಿಟ್ಟಿನಲ್ಲಿ ಈ ದಿನವನ್ನು ವಿಶ್ವ ಚಿಂತನಾ ದಿನ ಮತ್ತು ವಿಶ್ವ ಸ್ಕೌಟ್ ದಿನವನ್ನಾಗಿ ಆಚರಿಸಲಾಗುತ್ತದೆ.

ಅಲ್ಲದೇ 1999 ರಲ್ಲಿ ನಡೆದ 30 ನೇ ವಿಶ್ವ ಸಮ್ಮೇಳನದಲ್ಲಿ ವಿಶೇಷ ದಿನದ ಜಾಗತಿಕ ಅಂಶವನ್ನು ಒತ್ತಿಹೇಳಲು "ಥಿಂಕಿಂಗ್ ಡೇ" ನಿಂದ "ವಿಶ್ವ ಚಿಂತನೆಯ ದಿನ" ಎಂದು ಬದಲಾಯಿಸಲಾಯಿತು.

ವಿಶ್ವ ಚಿಂತನಾ ದಿನ 2022 ಮಹತ್ವ :

ವಿಶ್ವ ಚಿಂತನಾ ದಿನವು ಯುವತಿಯರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಕುರಿತು ಮಾತನಾಡಲು ಮತ್ತು 150 ದೇಶಗಳಲ್ಲಿ 10 ಮಿಲಿಯನ್ ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್‌ಗಳಿಗೆ ನಿಧಿಸಂಗ್ರಹಿಸಲು ಒಂದು ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ.

ವಿಶ್ವ ಚಿಂತನಾ ದಿನ 2022ರ ಥೀಮ್:

ವಿಶ್ವ ಚಿಂತನಾ ದಿನವನ್ನು ಪ್ರತಿ ವರ್ಷ ವಿಶೇಷ ಥೀಮ್ ನೊಂದಿಗೆ ಆಚರಿಸಲಾಗುತ್ತದೆ. ಈ ವರ್ಷದ ಥೀಮ್ "ನಮ್ಮ ಪ್ರಪಂಚ, ನಮ್ಮ ಸಮಾನ ಭವಿಷ್ಯ: ಪರಿಸರ ಮತ್ತು ಲಿಂಗ ಸಮಾನತೆ"

For Quick Alerts
ALLOW NOTIFICATIONS  
For Daily Alerts

English summary
World thinking is on february 22. Here is the history, significance and theme in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X