ಏನೆಲ್ಲಾ ಚಿತ್ರ-ವಿಚಿತ್ರ ಕೆಲಸಗಳಿವೆ ಗೊತ್ತಾ... ಇವರ ಆದಾಯವೂ ಅಷ್ಟಕಷ್ಟೆ!

ಇಂತಹ ಉದ್ಯೋಗಗಳಲ್ಲಿ ಪ್ರಾಣಕ್ಕೆ ಆಪತ್ತು ಕೂಡಾ ಕಟ್ಟಿಟ್ಟ ಬುತ್ತಿಯಂತೆ ಇರುತ್ತದೆ. ಬನ್ನಿ ಆ ವಿಚಿತ್ರ ಹುದ್ದೆಗಳ ಬಗ್ಗೆ ಇದೀಗ ಕೆರಿಯರ್ ಇಂಡಿಯಾ ನಿಮಗೆ ತಿಳಿಸುತ್ತದೆ ಮುಂದಕ್ಕೆ ಓದಿ

By Kavya

ಜಗತ್ತಿನಲ್ಲಿ ಇರುವ ಪ್ರತಿಯೊಂದು ಹುದ್ದೆಯೂ ಕೂಡಾ ಒಂದೇ ರೀತಿಯದಲ್ಲ. ಕೆಲವೊಂದು ಹುದ್ದೆ ಐಷರಾಮಿ ಹುದ್ದೆಯಂತಹ ಫೆಸಿಲಿಟಿ ನೀಡಿದ್ದರೆ. ಇನ್ನೂ ಕೆಲವೊಂದು ಹುದ್ದೆಗಳಿಂದ ಪ್ರಾಣಕ್ಕೆ ಅಪಾಯವಿರುತ್ತದೆ. ಇನ್ನೂ ಕೆಲವೊಂದು ವಿಚಿತ್ರ ಜಾಬ್ ಗಳಿವೆ, ಆ ಜಾಬ್ ಬಗ್ಗೆ ಕೇಳಿದ್ರೆ ನಾವು ಮುಖಸಿಂಡರಿಸಿಕೊಳ್ಳಬಹುದು. ಆದ್ರೆ ಜೀವನ ಎಂಬ ಬಂಡಿ ಸಾಗಿಸಬೇಕಲ್ಲ, ಜನರು ಎಂತಹ ಉದ್ಯೋಗ ಕೂಡಾ ಮಾಡಲು ತಯಾರಿರುತ್ತಾರೆ.

ಏನೆಲ್ಲಾ ಚಿತ್ರ-ವಿಚಿತ್ರ ಕೆಲಸಗಳಿವೆ ಗೊತ್ತಾ...!

ಇನ್ನೂ ಇಂತಹ ಉದ್ಯೋಗಗಳಲ್ಲಿ ಪ್ರಾಣಕ್ಕೆ ಆಪತ್ತು ಕೂಡಾ ಕಟ್ಟಿಟ್ಟ ಬುತ್ತಿಯಂತೆ ಇರುತ್ತದೆ. ಬನ್ನಿ ಆ ವಿಚಿತ್ರ ಹುದ್ದೆಗಳ ಬಗ್ಗೆ ಇದೀಗ ಕೆರಿಯರ್ ಇಂಡಿಯಾ ನಿಮಗೆ ತಿಳಿಸುತ್ತದೆ ಮುಂದಕ್ಕೆ ಓದಿ:

<strong>also read: ಗೇಟ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಇದು ಬೆಸ್ಟ್ ಪುಸ್ತಕ!</strong>also read: ಗೇಟ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಇದು ಬೆಸ್ಟ್ ಪುಸ್ತಕ!

 ಮೆಡಿಕಲ್ ತ್ಯಾಜ್ಯವನ್ನ ಸುಟ್ಟು ಹಾಕುವುದು:

ಮೆಡಿಕಲ್ ತ್ಯಾಜ್ಯವನ್ನ ಸುಟ್ಟು ಹಾಕುವುದು:

ಕಂಡಕಂಡದ್ದೆಲ್ಲವನ್ನ ಸುಟ್ಟು ಹಾಕುವ ಸ್ವಭಾವ ನಿಮ್ಮದಾಗಿದ್ದರೆ, ಈ ಜಾಬ್ ನಿಮಗೆ ಬೆಸ್ಟ್.ಸೂಚಿ, ಕೆಮಿಕಲ್, ಬಳಸಿದಂತಹ ಬ್ಯಾಂಡೇಜ್ ಗಳು ಮುಂತಾದುದನ್ನ ಸುಟ್ಟು ಹಾಕಲೆಂದು ಆಸ್ಪತ್ರೆಗಳು ವ್ಯಕ್ತಿಯೊಬ್ಬರನ್ನ ನೇಮಿಸಿರುತ್ತಾರೆ. ಜಸ್ಟ್ ಯೋಚಿಸಿ ಪ್ರತೀ ದಿನ ಈ ಕೆಮಿಕಲ್ ಸುಟ್ಟು ಹಾಕಿ ಹಾಕಿ ಇವರ ದೇಹಕ್ಕೆ ಅದೆಷ್ಟು ಕೆಮಿಕಲ್ ಸೇರಿರಬಹುದು ಎಂದು.

ಸೊಳ್ಳೆಗಳ ಬಗ್ಗೆ ರಿಸರ್ಚ್:

ಸೊಳ್ಳೆಗಳ ಬಗ್ಗೆ ರಿಸರ್ಚ್:

ಇದೇನು ತಮಾಷೆಯ ವಿಚಾರ ಎಂದು ತಿಳಿದುಕೊಳ್ಳಬೇಡಿ. ಇಲ್ಲಿ ಇವರು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳಬೇಕು. ಆಗ ಮಾತ್ರ ಅವುಗಳ ಬಗ್ಗೆ ಸ್ಟಡಿ ಮಾಡಲು ಸಾಧ್ಯ. ಮಲೇರಿಯಾ, ಡೆಂಗ್ಯು,ಫೈಲೇರಿಯಾ ರೋಗಗಳ ಬಗ್ಗೆ ರಿಸರ್ಚ್ ಮಾಡಿ ಅದಕ್ಕೆ ಔಷಧಿ ಕಂಡು ಹಿಡಿಯಬೇಕೆಂದೆದಾದ್ರೆ ಅವರು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳಬೇಕು. ಆಗ ಮಾತ್ರ ಯಾವ ಸೊಳ್ಳೆಯಿಂದ ಯಾವ ರೋಗ, ಅದಕ್ಕೆ ಯಾವ ಔಷಧಿ ಸೂಕ್ತ ಎಂದು ಕಂಡು ಹಿಡಿಯಲು ಸಾಧ್ಯವಾಗುದು

ಪೆಟ್ ಫುಡ್ ಟೆಸ್ಟಿಂಗ್:
 

ಪೆಟ್ ಫುಡ್ ಟೆಸ್ಟಿಂಗ್:

ಹೌದು ಫುಡ್ ಟೆಸ್ಟಿಂಗ್ ಅಂದ್ರೆ ಕೂಲ್ ಜಾಬ್ ಎಂದು ನೀವು ಅಂದು ಕೊಂಡಿರಬಹುದು ಆದ್ರೆ ಪೆಟ್ ಫುಡ್ ಟೆಸ್ಟಿಂಗ್ ಇದೆಯಲ್ಲ ಅದು ಹೇಳಿದಷ್ಟು ಸುಲಭದ ಕೆಲಸವಲ್ಲ. ಯಾಕೆಂದ್ರೆ ಇಲ್ಲಿ ಪ್ರಾಣಿಗಳು ತಿನ್ನುವಂತಹ ಲಿವರ್ ಮಿಕ್ಸರ್, ಹಾಗೂ ಮೂಳೆಗಳನ್ನ ಟೇಸ್ಟ್ ಮಾಡಲು ನೀಡುತ್ತಾರೆ.

 

ವಾಸನೆ ಚೆಕ್ ಮಾಡುವುದು:

ವಾಸನೆ ಚೆಕ್ ಮಾಡುವುದು:

ಈ ಪ್ರೊಫೆಶನ್ ಅಂದ್ರೆ ಜನರು ಯಾಕೋ ಹಗುರವಾಗಿ ಕಾಣುತ್ತಾರೆ. ಕಾರಣ ಇಲ್ಲಿ ಪ್ರಯೋಗಕ್ಕೆ ಒಳ ಪಡಿಸುವವರ ಹಲವಾರು ಮಂದಿಯ ಕಂಕುಳದ ವಾಸನೆಯನ್ನ ಮೂಸಿ ಮೂಸಿ ವರದಿ ತಯಾರಿಸಬೇಕು.

 

ರಸ್ತೆಯಲ್ಲಿ ಬಿದ್ದಿರುವ ಸತ್ತ ಪ್ರಾಣಿಗಳ ತೆರವು:

ರಸ್ತೆಯಲ್ಲಿ ಬಿದ್ದಿರುವ ಸತ್ತ ಪ್ರಾಣಿಗಳ ತೆರವು:

ಹೌದು ರಸ್ತೆಯಲ್ಲಿ ವಾಹನಗಳು ಹೋಗುವ ಸ್ಪೀಡ್‌ಗೆ ಅದೆಷ್ಟೋ ಪ್ರಾಣಿಗಳು ಸಾವನ್ನಪ್ಪುತ್ತವೆ. ಈ ಟೈಂನಲ್ಲಿ ಪ್ರಾಣಿಗಳ ದೇಹವು ಛಿದ್ರ ಛಿದ್ರವಾಗಿರುತ್ತದೆ. ಅಷ್ಟೇ ಅಲ್ಲ ಕೊಳೆತು ನಾರುತ್ತದೆ ಕೂಡಾ. ಹಾಗಾಗಿ ಇಂತಹ ಟೈಂನಲ್ಲಿ ಅಲ್ಲಿಗೆ ತೆರಳಿ ಮೃತ ಪ್ರಾಣಿ ಶರೀರವನ್ನ ತೆರವು ಗೊಳಿಸಿ, ರಸ್ತೆಯನ್ನ ಸ್ವಚ್ಛಮಾಡಬೇಕಾಗುತ್ತದೆ. ಈ ಕೆಲಸ ಮಾಡುವವರ ಮನಸ್ಸು ಗಟ್ಟಿಯಾಗಿರಬೇಕು

ಚರಂಡಿ ಸ್ವಚ್ಚತೆ:

ಚರಂಡಿ ಸ್ವಚ್ಚತೆ:

ಈ ಹುದ್ದೆ ಭಾರತದಲ್ಲಿ ಸ್ವಲ್ಪ ಪಾಪ್ಯುಲರ್ . ಇಲ್ಲಿ ಇವರುಗಳು ಡ್ರೈನೇಜ್ ಒಳಗೆ ಇಳಿದು, ಬರೀ ಕೈಯಲ್ಲಿ ಮಾನವನ ವೇಸ್ಟೇಜ್ ಗಳನ್ನ ತೆಗೆದು ಕ್ಲೀನ್ ಮಾಡುತ್ತಾರೆ. ಈ ಕೆಲಸ ಮಾಡಲು ನಿಜಕ್ಕೂ ಇವರಿಗೆ ಧೈರ್ಯ ಇರಲೇಬೇಕು. ಈ ಕಾರ್ಯದಲ್ಲೂ ಅದೆಷ್ಟೋ ಮಂದಿ ಉಸಿರುಗಟ್ಟಿ ಸಾವನ್ನಪ್ಪುತ್ತಾರೆ.

ಕಿವಿ ಕ್ಲೀನಿಂಗ್:

ಕಿವಿ ಕ್ಲೀನಿಂಗ್:

ಅದೆಷ್ಟೋ ಆತಂಕಕಾರಿ ಕೆಲಸಗಳ ಬಗ್ಗೆ ಈಗಷ್ಟೇ ನಾವು ತಿಳಿಸಿದ್ದೇವೆ. ಅವುಗಳಲ್ಲಿ ಭಾರತದಲ್ಲಿ ಮತ್ತೊಂದು ಪಾಪ್ಯುಲರ್ ಆಗಿರುವ ಹುದ್ದೆ ಇದೆ ಅದೇನೆಂದರೆ ಕಿವಿ ಕ್ಲೀನ್ ಮಾಡುವುದು. ಇಲ್ಲಿ ಕೆಲಸ ಮಾಡುವವರು ರಸ್ತೆ ಬದಿ, ಬಸ್‌ , ರೈಲ್ವೇ ನಿಲ್ದಾಣಗಳಲ್ಲಿ ಕುಳಿತಿರುತ್ತಾರೆ. ಗ್ರಾಹಕರು ಕಿವಿ ಸ್ವಚ್ಛ ಮಾಡಲು ಇವರ ಬಳಿ ಹೋಗುತ್ತಾರೆ. ಕಿವಯಲ್ಲಿನ ಫಂಗಸ್, ಡಸ್ಟ್ ಎಲ್ಲವನ್ನ ಇವರು ಸ್ವಚ್ಛಗೊಳಿಸುತ್ತಾರೆ.

<strong>also read: ನಿಮ್ಮ ಕೆಲಸ ಹೋಗಲು ಇವಿಷ್ಟು ಸಾಕು!</strong>also read: ನಿಮ್ಮ ಕೆಲಸ ಹೋಗಲು ಇವಿಷ್ಟು ಸಾಕು!

For Quick Alerts
ALLOW NOTIFICATIONS  
For Daily Alerts

English summary
jobs are not equal that is one harsh fact that humankind accepted long ago. some professions are such that they can be classified only under weird because of the profile associated to them. Mind you, these jobs are fancy in no way. Some of them even involve a great level of risk to the employees.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X