Yoga For Students : ವಿದ್ಯಾರ್ಥಿಗಳು ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾ ? ಹಾಗಾದ್ರೆ ಈ ಆಸನ ಮಾಡಿ

ವಿದ್ಯಾರ್ಥಿಗಳು ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಯೋಗಾಸನಗಳು ಬೆಸ್ಟ್

ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಎನ್ನುವುದು ತುಂಬಾನೆ ಮುಖ್ಯ. ಅದರಲ್ಲೂ ಮಗು ಚಿಕ್ಕವರಿರುವಾಗಿನಿಂದಲೂ ಪೋಷಕರು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇನ್ನು ಮಕ್ಕಳು ತಮ್ಮ ವಿದ್ಯಾಭ್ಯಾಸದ ಹಂತಕ್ಕೆ ಕಾಲಿಡುತ್ತಿದ್ದಂತೆಯೇ ಆರೋಗ್ಯ, ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ವೃದ್ಧಿಸಿಕೊಳ್ಳುವ ಆಹಾರ ಮತ್ತು ವ್ಯಾಯಾಮಗಳ ಬಗ್ಗೆ ಹೆಚ್ಚು ಗಮನವಹಿಸುತ್ತಾರೆ.

ಈಗಿನ ದಿನಗಳಲ್ಲಿ ಅನೇಕ ಮಕ್ಕಳು ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಹಲವಾರು ಕಾರಣಗಳಿರಬಹುದು, ಆದರೆ ಮಕ್ಕಳ ಮತ್ತು ವಿದ್ಯಾರ್ಥಿಗಳ ಆರೋಗ್ಯ ಸುಧಾರಿಸಲು, ಏಕಾಗ್ರತೆ ಹೆಚ್ಚಿಸಿಕೊಳ್ಳಲು ಮತ್ತು ಜ್ಞಾಪಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಏನು ಮಾಡಬೇಕು ಎಂದು ಯೋಚಿಸುತ್ತಿರುವಿರಾ ? ಹಾಗಾದ್ರೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ ಓದಿ.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆಹಾರ ಮತ್ತು ವ್ಯಾಯಾಮ ಹೆಚ್ಚು ಉಪಕಾರಿ. ಇನ್ನು ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸ ಹೆಚ್ಚು ಸೂಕ್ತ. ಹಾಗಾಗಿ ನಾವಿಲ್ಲಿ ಯಾವೆಲ್ಲಾ ಆಸನಗಳನ್ನು ಮಾಡಿದರೆ ಮಕ್ಕಳ ಮತ್ತು ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಲಿದ್ದೇವೆ. ಇದನ್ನು ಓದಿ ತಿಳಿದು ನಿಮ್ಮ ಮಕ್ಕಳ ದೈನಂದಿನ ಬದುಕಿಗೆ ಯೋಗ ಅಭ್ಯಾಸವನ್ನು ರೂಢಿಸುವ ಪ್ರಯತ್ನ ಮಾಡಿ.

ಪದ್ಮಾಸನ :

ಪದ್ಮಾಸನ :

ಪದ್ಮಾಸನ ಅಥವಾ ಕಮಲದ ಭಂಗಿಯು ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಕ್ಕಳ ಮನಸ್ಸನ್ನು ಶಾಂತಗೊಳಿಸುತ್ತದೆ. ಈ ಭಂಗಿಯು ವಿದ್ಯಾರ್ಥಿಗಳನ್ನು ಹೆಚ್ಚು ಜಾಗರೂಕರನ್ನಾಗಿ ಮಾಡುತ್ತದೆ. ವಿದ್ಯಾರ್ಥಿಗಳ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಮಕ್ಕಳ ದೇಹವನ್ನು ಸಹ ಸಡಿಲಗೊಳಿಸುತ್ತದೆ.

ಸರ್ವಂಗಾಸನ:

ಸರ್ವಂಗಾಸನ:

ಸರ್ವಂಗಾಸನವನ್ನು ಎಲ್ಲಾ ಆಸನಗಳ ತಾಯಿ ಎಂದೂ ಕರೆಯುತ್ತಾರೆ. ಈ ಆಸನವು ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ. ಯೋಗ ಪಠ್ಯದ ಪ್ರಕಾರ, ಸರ್ವಂಗಾಸನವು ವಿದ್ಯಾರ್ಥಿಗಳ ದೇಹದ ಎಲ್ಲಾ ಚಕ್ರಗಳು ಮತ್ತು ಅಂಗಗಳನ್ನು ತೊಡಗಿಸುತ್ತದೆ. ಇದು ಅತ್ಯಂತ ಹಳೆಯ ಮತ್ತು ಹೆಚ್ಚು ಚಿಕಿತ್ಸಕ ಯೋಗವಾಗಿದೆ. ಇದು ವಿದ್ಯಾರ್ಥಿಗಳ ಮೆದುಳನ್ನು ಪೋಷಿಸುವುದರ ಜೊತೆಗೆ ಆರೋಗ್ಯವಾಗಿರಿಸುತ್ತದೆ.

ಪಶ್ಚಿಮೋತ್ಥಾಸನ:
 

ಪಶ್ಚಿಮೋತ್ಥಾಸನ:

ಏಕಾಗ್ರತೆಯನ್ನು ಹೆಚ್ಚಿಸಲು ಪಶ್ಚಿಮೋತ್ತಾಸನ ಅಥವಾ ಕುಳಿತು ಮುಂದಕ್ಕೆ ಬಾಗುವ ಭಂಗಿ ಅತ್ಯುತ್ತಮವಾದ ಭಂಗಿಗಳಲ್ಲಿ ಒಂದಾಗಿದೆ. ಇದನ್ನು ಮಾಡುವುದರಿಂದ ವಿದ್ಯಾರ್ಥಿಗಳ ಮನಸ್ಸು ಶಾಂತವಾಗುತ್ತದೆ ಮತ್ತು ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ. ನಿಮ್ಮ ಸಹಾನುಭೂತಿಯ ನರಮಂಡಲಕ್ಕೆ ಯೋಗಾಸನವು ಒಳ್ಳೆಯದು. ಈ ಆಸನವು ತಲೆನೋವನ್ನು ಸಹ ಗುಣಪಡಿಸುತ್ತದೆ.

ಪಾದಹಸ್ತಾಸನ:

ಪಾದಹಸ್ತಾಸನ:

ಪಾದಹಸ್ತಾಸನ ಅಥವಾ ನಿಂತು ಮುಂದಕ್ಕೆ ಬಾಗುವ ಭಂಗಿಯನ್ನು ಮಾಡುವುದರಿಂದ ನಿಮ್ಮ ನರಮಂಡಲಕ್ಕೆ ಹೆಚ್ಚು ಶಕ್ತಿಯನ್ನು ತುಂಬುತ್ತದೆ. ನಿಮ್ಮ ಮೆದುಳಿಗೆ ಸರಾಗವಾಗಿ ರಕ್ತದ ಸಂಚಾರ ಮಾಡುವುದಕ್ಕೆ ಸಹಕರಿಸುತ್ತದೆ. ಇದರಿಂದ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿ ಇನ್ನಷ್ಟು ಹೆಚ್ಚುತ್ತದೆ.

ಹಾಲಾಸನ:

ಹಾಲಾಸನ:

ಹಾಲಾಸನ ಅಥವಾ ನೇಗಿಲು ಭಂಗಿಯನ್ನು ದಿನನಿತ್ಯ ಮಾಡುವುದರಿಂದ ಮಕ್ಕಳಲ್ಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಕ್ಕಳ ಮನಸ್ಸನ್ನು ಶಾಂತಗೊಳಿಸುತ್ತದೆ.

For Quick Alerts
ALLOW NOTIFICATIONS  
For Daily Alerts

English summary
International Yoga Day 2021: If students do these yoga asanas they can improve their concentration and memory power.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X