21 ವರ್ಷಕ್ಕೆ ನೀವು ಕಾಲಿಡುತ್ತಿದ್ದೀರಾ... ಹಾಗಿದ್ರೆ ಈ ಪುಸ್ತಕಗಳನ್ನ ನೀವು ತಪ್ಪದೇ ಓದಲೇ ಬೇಕು!

By Kavya

18 ವರ್ಷದ ಒಳಗೆ ಇದ್ದಾಗ ನೀವೇನು ಮಾಡಿದ್ರೂ ಕಾನೂನು ಬದ್ಧವಾಗಿ ಮಾಡಿರುತ್ತೀರಿ. ಆದ್ರೆ 21 ವರ್ಷದ ನಂತರ ಎಲ್ಲವೂ ಹೊಸತಾಗಿ ಇರುತ್ತದೆ. ಸ್ಕೂಲ್ ಡೇಸ್ ತರಹ ನಿಮ್ಮ ಪದವಿ ಶೈಕ್ಷಣಿಕ ಜೀವನವು ಕೂಡಾ ಕ್ರೀಮ್ ವಾಕ್ ಆಗಿರಬಹುದು. ಹೊಸ ಜೀವನಕ್ಕೆ ತಯಾರಾಗುವ ಮುನ್ನ ಹೊಸ ಜೀವನ ಹೇಗೆ ಸಾಗಬಹುದು ಎಂಬ ಬಗ್ಗೆ ಮೊದಲೇ ತಿಳಿದುಕೊಂಡಿರಬೇಕು. ನೆನಪಿಟ್ಟುಕೊಳ್ಳಿ ಜೀವನ ಎಂಬುವುದು ಮಕ್ಕಳ ಆಟವಲ್ಲ. ನಿಮಗೆ ಸರಿಯಾದ ಜ್ಞಾನವಿದ್ರೆ ಮಾತ್ರ ನೀವು ಜೀವನ ಎಂಬ ಆಟದಲ್ಲಿ ಖಂಡಿತ ಜಯಗಳಿಸುತ್ತೀರಿ.

21 ವರ್ಷಕ್ಕೆ ಕಾಲಿಡುವವರು ಈ ಪುಸ್ತಕ ಓದಲೇ ಬೇಕು!

 

ಇನ್ನ ಇತರರ ಹಿತನುಡಿಗಿಂತ ಜನರ ಮೇಲೆ ಪುಸ್ತಕಗಳು ಹೆಚ್ಚಿನ ಪ್ರಭಾವ ಬೀರುತ್ತವೆ. ಒಂದು ಪುಸ್ತಕವು ನಿಮ್ಮ ಸುಂದರ ಜೀವನ ರೂಪಿಸಬಹುದು. ಹೇಗಿದ್ರು ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮನೆಯಲ್ಲಿ ಆರಾಮಾಗಿ ಕಾಲ ಕಳೆಯುತ್ತಿದ್ದೀರಿ ಈ ಸಂದರ್ಭದಲ್ಲಿ ಪುಸಕ್ತ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಹಾಗಾಗಿ ಜೀವನದ ಪ್ರಮುಖ ಘಟ್ಟ 21 ವರ್ಷಕ್ಕೆ ಕಾಲಿಡುವ ಮುನ್ನ ನೀವು ಯಾವ ಪುಸ್ತಕಗಳನ್ನ ಓದಬೇಕು ಎಂಬ ಮಾಹಿತಿ ಇಲ್ಲಿದೆ.

ಪಾಲೊ ಕೊಯೆಲೊ ಅವರ ದಿ ಆಲ್ಕೆಮಿಸ್ಟ್:

ನೀವು ನಿಮ್ಮ ಜೀವನದಲ್ಲಿ ಒಂದು ಗುರಿಯನ್ನ ಇಟ್ಟುಕೊಂಡು, ಅದನ್ನ ತಲುಪಲು ಸಹಕಾರಿಯಾಗುವಂತೆ ಪ್ಲ್ಯಾನ್ ಮಾಡಿಕೊಂಡಿರುತ್ತೀರಿ. ಸಾಮಾನ್ಯವಾಗಿ ನೀವು ಗುರಿ ತಲುಪಲು ಹಾರ್ಡ್ ವರ್ಕ್ ಕೂಡಾ ಮಾಡಬಹುದು. ಆದ್ರೆ ಎಷ್ಟು ದಿನ , ಎಷ್ಟು ವಾರ ಕೊನೆಗೆ ಎಷ್ಟು ತಿಂಗಳು ನೀವು ನಿಮ್ಮ ಗುರಿ ಬಗ್ಗೆ ಫೋಕಸ್ ಮಾಡಲು ಸಾಧ್ಯ. ಒಂದು ವೇಳೆ ವಿಫಲವಾದ್ರೆ ನೀವು ನಿಮ್ಮ ಪ್ಲ್ಯಾನ್ ಅರ್ಧಕ್ಕೆ ಕೈ ಬಿಡುತ್ತೀರಿ. ಪ್ಲ್ಯಾನ್ ಮಾತ್ರವಲ್ಲದೇ ಗುರಿಯನ್ನ ಕೂಡಾ ಬಿಟ್ಟು ಬಿಡುತ್ತೀರಾ.

ಎರಡು ದೋಣಿಯ ಆಯ್ಕೆ ನಿಮ್ಮ ಮುಂದೆ ಇದ್ದಾಗ, ಒಂದೇ ಆಯ್ಕೆ ಮಾಡುವ ಅವಕಾಶ ನಿಮ್ಮದಾಗಿದ್ರೆ ನೀವು ಏನು ಮಾಡುತ್ತೀರಾ... ಇಂತಹ ಸಂದಿಗ್ನ ವಾತಾವರಣ ಈ ವಯಸ್ಸಿನಲ್ಲಿ ನಿಮ್ಮ ಮುಂದೆ ಸೃಷ್ಟಿಯಾಗಬಹುದು. ಇಂತಹ ಸನ್ನಿವೇಶವನ್ನ ಹೇಗೆ ಸುಲಭವಾಗಿ ಹ್ಯಾಂಡಲ್ ಮಾಡಬಹುದು ಎಂದು ಈ ಪುಸ್ತಕ ಓದಿದ್ರೆ ನಿಮಗೆ ತಿಳಿಯಬಹುದು. ಈ ಪುಸ್ತಕ ಓದುವುದರಿಂದ ನೀವು ಬೆಸ್ಟ್ ಆದುದನ್ನೇ ಆಯ್ಕೆ ಮಾಡುವ ಸಾಮಥ್ರ್ಯ ನಿಮ್ಮದಾಗುವುದು.

ಹರುಕಿ ಮುರಾಕಮಿ ಅವರ ನಾರ್ವೇಜಿಯನ್ ವುಡ್:

ಪರಿಣಾಮಕಾರಿ ನಷ್ಟದಿಂದ ನೀವು ಹೊಸತೇನಾದ್ರೂ ಕಲಿಯಬಹುದು ಇಲ್ಲ ಆ ನಷ್ಟದಲ್ಲಿ ಮುಳುಗಿ ಹೋಗಬಹುದು. ನಿಮ್ಮ ಫ್ಯಾಮಿಲಿಗಿಂತ ನಿಮ್ಮ ಕ್ಲೋಸ್ ಫ್ರೆಂಡ್ ಏನೂ ಕಮ್ಮಿ ಇರುವುದಿಲ್ಲ, ಮೊದಲ ಪ್ರೀತಿ ಮೊದಲ ಮಳೆಯ ಬಂದಾಗ ಮಣ್ಣಿನಿಂದ ಸೂಸುವ ಆ ಸುವಾಸೆನೆಗಿಂತಲೂ ಹೆಚ್ಚು ಇಂತಹ ಅಂಶಗಳಿಂದ ನೀವು ಹಿಂದೆ ನಡೆದದ್ದು, ಈಗ ನಡೆಯುತ್ತಿರುವುದರ ಮಧ್ಯೆ ಆಯ್ಕೆ ಮಾಡಬಹುದಾಗಿದೆ. ಕೊನೆಯದಾಗಿ ನಿಮಗೆ ಜೀವನದ ಪ್ರಾಮುಖ್ಯತೆ ಬಗ್ಗೆ ಜ್ಞಾನೋದಯವಾಗುತ್ತದೆ. ಇದೊಂದು ಬ್ಯೂಟಿಫುಲ್ ಜಪಾನೆಸ್ ಸ್ಟೋರಿಯಾಗಿದೆ.

 

ಎಲಿಫ್ ಶಫಕ್ ಅವರ ದಿ ಫೋರ್ಟಿ ರೂಲ್ಸ್ ಆಫ್ ಲವ್ :

ವಿಶೇಷ ವ್ಯಕ್ತಿಯ ಮೇಲಿನ ಕ್ರಶ್, ವ್ಯಾಮೋಹ, ಆಕರ್ಷಣೆ, ಇಷ್ಟ ಇತ್ಯಾದಿಗಳು ಹೃದಯದ ತಾತ್ಕಾಲಿಕ ಭಾವನೆಗಳಾಗಿವೆ. ಆದ್ರೆ ಇದನ್ನ ಹಲವಾರು ವರ್ಷಗಳಿಂದ ನಾವು ತಪ್ಪಾಗಿ ಲವ್ ಎಂದು ಕರೆಯುತ್ತಿದ್ದೇವೆ. ದಿ ಫೋರ್ಟಿ ರೂಲ್ಸ್ ಆಫ್ ಲವ್ ಪುಸ್ತಕವು ಎಲ್ಲಾ ರುಬಿಸ್ಟೇನ್ ಜೀವನದ ಕತೆಯನ್ನ ಪ್ರಸ್ತುತಪಡಿಸುತ್ತಿದೆ. ಮಧ್ಯ ವಯಸ್ಸಿನ ಮಹಿಳೆ ಹಾಗೂ ಆಕೆಯ ಕುಟಂಬದ ಕತೆಯನ್ನ ನೀವು ಓದಬಹುದಾಗಿದೆ. ಪ್ರೀತಿಯು ನಿಮ್ಮ ಜೀವನವನ್ನ ಬದಲು ಮಾಡಬಹುದು. ನೀವು ಈಗ ಎಲ್ಲಿದ್ದೀರಿ, ಮುಂದೆ ಎಲ್ಲಿರಲು ಬಯಸುತ್ತೀರಾ ಇದನ್ನೆಲ್ಲಾ ನೀವು ಮಾಡಬೇಕೆಂದಾದ್ರೆ ನಂಬಿಕೆಯಿಂದ ಜೀವನ ನಡೆಸಬೇಕು.ನೀವು ಈ ಪುಸ್ತಕವನ್ನ ಮತ್ತೂ ತುಂಬಾ ಇಷ್ಟಪಡುತ್ತೀರಾ ಯಾಕೆಂದ್ರೆ ಈ ಪುಸ್ತಕವು 13 ನೇ ಶತಮಾನದ ಸೂಫಿ ಕವಿ ರುಮಿ ಮತ್ತು ಟಾಬ್ರಿಜ್ನ ಷಾಂಗಳ ಕುತೂಹಲಕಾರಿ ಜಗತ್ತನ್ನೂ ಕೂಡಾ ಒಳಗೊಂಡಿದೆ.

ಜೆಕೆ ರಾವ್ಲಿಂಗ್ ಅವರ ಹ್ಯಾರಿ ಪೋಟರ್ ಸೀರಿಸ್:

ನೀವು ಎಷ್ಟನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿದ್ದೀರಿ ಅನ್ನೋದು ಮುಖ್ಯವಲ್ಲ. ನಿಮ್ಮೋಳಗೆ ಇನ್ನೂ ನಿಮ್ಮ ಬಾಲ್ಯತನ ಹಾಗೆಯೇ ಇರಬಹುದು. ನೀವು ಚಿಕ್ಕವರಿದ್ದಾಗ ಹ್ಯಾರಿ ಪೋಟರ್ಸ್ ಸಿನಿಮಾ ನೋಡಿರಬಹುದು. ಅದೇ ಸ್ಟೋರಿ ಪುಟಗಳ ರೂಪದಲ್ಲಿ ಕಾದಂಬರಿಯಾಗಿ ನಿಮ್ಮ ಮುಂದೆ ಇದೆ. ನಿಮಗೆ ಬರವಣಿಗೆಯಲ್ಲಿ ಆಸಕ್ತಿ ಇದ್ದರೆ ನೀವು ಕೂಡಾ ಈ ಪುಸ್ತಕ ಓದಿಕೊಂಡು, ನಿಮ್ಮದೇ ಕಲ್ಪನಾ ಲೋಕದಲ್ಲಿ ವಿಹರಿಸಿ.

ವೆರೋನಿಕಾ ಡಿಸೈಡೆಡ್ ಟು ಡೈ:

ಯಾರೂ ಸಾಯುವ ನಿರ್ಧಾರ ಮಾಡುತ್ತಾರೆಯೋ, ಯಾರಿಗೆ ಜೀವನ ಸಾಕಾಗಿ ಹೋಗಿರುತ್ತೋ ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಇರೋರಿಗೆ ಈ ಟೈಟಲ್ ಪುಸ್ತಕ ಓದುವಂತೆ ಸಲಹೆ ನಿಡಲಾಗುತ್ತದೆ. ಸಂತೋಷ, ಖುಷಿ ಇರುವಂತೆ ಜೀವನಲ್ಲಿ ಮತ್ತೊಂದೆಡೆ ಆಘಾತ, ಅಪಘಾತ, ಏಕಾಂಗಿತನ ಕೂಡಾ ಇರುತ್ತದೆ. ನೀವು ಒಳ್ಳೆಯ ದಿನ ಬರುವ ತನಕ ಇದನ್ನೆಲ್ಲಾ ಸಹಿಸಿಕೊಮಡು ಇರಬೇಕು. ಸಂತೋಷವಾಗಿರಲು ನಿಮಗೆ ಯಾವುದೇ ದಾರಿ ಇಲ್ಲ ಎಂದಾದ್ರೆ ನೀವು ಈ ಪುಸ್ತಕ ಓದಲೇ ಬೇಕು.

ಕಾಮಿಕ್ಸ್:

ಈ ಪುಸ್ತಕ ನಿಮಗೆ ಇಂಟ್ರಸ್ಟಿಂಗ್ ಹಾಗೂ ನಿಮ್ಮಲ್ಲಿ ನಗು ತರಿಸುತ್ತದೆ. ನೀವು ಯಾವತ್ತೂ ಇಂತಹ ಪುಸ್ತಕ ಓದಿಲ್ಲ ಎಂದಾದ್ರೆ ನಿಮ್ಮ ಬಾಲ್ಯದ ಬೆಸ್ಟ್ ಪಾರ್ಟ್ ನೀವು ಮಿಸ್ ಮಾಡಿಕೊಂಡಿದ್ದೀರಿ ಎಂದರ್ಥ. ಈ ಪುಸ್ತಕಗಳು ಕೇವಲ ಕಾಮಿಡಿ ಮಾತ್ರ ನೀಡುವುದಿಲ್ಲ ಬದಲಿಗೆ ಕೊನೆಯಲ್ಲಿ ನೈತಿಕ ಸಂದೇಶ ಕೂಡಾ ನೀಡುತ್ತದೆ.

For Quick Alerts
ALLOW NOTIFICATIONS  
For Daily Alerts

English summary
So many books are avalable in market. are you tourning to 21 then you must read this books. this books everyone should read in their lifetime. here is the list about books which you have to must read in age of 21
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X