ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದಲ್ಲಿ 2017-18 ನೇ ಸಾಲಿನ ಡಿಪ್ಲೊಮಾ (ತೋಟಗಾರಿಕೆ) ಎರಡು ವರ್ಷದ ಕೋರ್ಸ್ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಎಸ್ ಎಸ್ ಎಲ್ ಸಿ ಪಾಸ್ ಆದ ಅಭ್ಯರ್ಥಿಗಳು ಅರ್ಹರಾಗಿದ್ದು, ಅರ್ಜಿಗಳನ್ನು ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ನಿಗದಿತ ದಿನಾಂಕದೊಳಗೆ ಸಲ್ಲಿಸತಕ್ಕದ್ದು.
ಕೋರ್ಸಿನ ವಿವರ
ಡಿಪ್ಲೊಮಾ (ತೋಟಗಾರಿಕೆ)
ಅವಧಿ: 02 ವರ್ಷ
ಕೇಂದ್ರವಾರು ಸೀಟುಗಳ ಸಂಖ್ಯೆ
ಅರಭಾವಿ (ಬೆಳಗಾವಿ): 25
ಹೊಗಳಗೆರೆ (ಕೋಲಾರ): 25
ಶೈಕ್ಷಣಿಕ ಅರ್ಹತೆ
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು
ಅರ್ಜಿ ಮತ್ತು ವಿವರಣಾ ಹಾಗೂ ಮಾಹಿತಿ ಪುಸ್ತಕಗಳನ್ನು ತೋಟಗಾರಿಕಾ ವಿಶ್ವವಿದ್ಯಾಲಯದ ವೆಬ್ಸೈಟ್ ನಲ್ಲಿ ಪಡೆಯತಕ್ಕದ್ದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.1000/- ಗಳಂತೆ ಸ್ಟೈಪಂಡ್ ನೀಡಲಾಗುವುದು.
ಸ್ಟೂಡೆಂಟ್ಸ್ ಇನ್ಸ್ಪಿರೇಷನ್ ಟ್ರಸ್ಟ್ ವಿದ್ಯಾರ್ಥಿವೇತನ
ಪ್ರವೇಶ ಮೀಸಲಾತಿ
ವಿವಿಧ ಮೀಸಲಾತಿ ವರ್ಗಗಳಿಗೆ ಕರ್ನಾಟಕ ಸರ್ಕಾರದ ಪ್ರಚಲಿತ ಮೀಸಲಾತಿ ಆದೇಶಗಳನ್ನು ಅನುಸರಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-08-2017
ಅರ್ಜಿ ಶುಲ್ಕ
- ಸಾಮಾನ್ಯ ಅಭ್ಯರ್ಥಿಗಳಿಗೆ ರೂ.500/-(60 ಬ್ಯಾಂಕಿನ ಶುಲ್ಕ)
- ಪ.ಜಾ/ಪ.ಪಂ/ಪ್ರ-1 ರ ಅಭ್ಯರ್ಥಿಗಳಿಗೆ ರೂ.250/- (60 ಬ್ಯಾಂಕಿನ ಶುಲ್ಕ)
- ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಯಲ್ಲಿ ಪಾವತಿಸುವುದು.
ಅರ್ಜಿ ಸಲ್ಲಿಕೆ
- ಅರ್ಜಿ ನಮೂನೆ ಮತ್ತು ಬ್ಯಾಂಕ್ ಚಲನ್ ವಿಶ್ವವಿದ್ಯಾಲಯದ ವೆಬ್ಸೈಟ್ ನಲ್ಲಿ ಪಡೆದಕೊಳ್ಳುವುದು.
- ಭರ್ತಿ ಮಾಡಿದ ಅರ್ಜಿಗಳನ್ನು ವಿಶ್ವವಿದ್ಯಾಲಯದ ಚಲನ್ ಪ್ರತಿ ಮತ್ತು ಎಲ್ಲಾ ಅವಶ್ಯಕ ದಾಖಲೆಗಳೊಂದಿಗೆ ಡೀನ್ (ಸ್ನಾತಕೋತ್ತರ) ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಉದ್ಯಾನಗಿರಿ, ನವನಗರ, ಬಾಗಲಕೋಟ ಇವರಿಗೆ ದಿನಾಂಕ: 19-08-2017 ರ ಸಾಯಂಕಾಲ 5:00 ಗಂಟೆ ಒಳಗಾಗಿ ಸಲ್ಲಿಸುವುದು.
ಕೌನ್ಸಲಿಂಗ್ ವಿವರ
ಕೌನ್ಸಲಿಂಗ್ ನಡೆಯುವ ಕೇಂದ್ರ: ಬಾಗಲಕೋಟ
ಕೌನ್ಸಲಿಂಗ್ ನಡೆಯುವ ದಿನಾಂಕ: 29-08-2017 (ಬೆಳಿಗ್ಗೆ 10:00 ಗಂಟೆಗೆ)
ಕೌನ್ಸಲಿಂಗ್ ನಡೆಯುವ ಸ್ಥಳ: ಮುಖ್ಯ ಆಢಳಿತ ಭವನದ ಕಟ್ಟಡ, ತೋಟಗಾರಿಕೆ ವಿಜ್ಞಾನಗಳ, ವಿಶ್ವವಿದ್ಯಾಲಯ, ಉದ್ಯಾನಗಿರಿ, ಬಾಗಲಕೋಟ-587104
ಕೌನ್ಸಲಿಂಗ್ ಗೆ ಹಾಜರಾಗಲು ಅರ್ಹರಾಗುವ ಅಭ್ಯರ್ಥಿಗಳ ಪಟ್ಟಿಯನ್ನು ದಿನಾಂಕ: 24-08-2017 ರಂದು ವಿಶ್ವವಿದ್ಯಾಲಯದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳು ಅವಶ್ಯಕ ಮೂಲ ದಾಖಲಾತಿಗಳೊಂದಿಗೆ ಹಾಗೂ ಅಗತ್ಯ ಶುಲ್ಕದೊಂದಿಗೆ ಕೌನ್ಸಲಿಂಗ್ ಗೆ ಹಾಜರಗತಕ್ಕದ್ದು.
ಹೆಚ್ಚಿನ ವಿವರಗಳಿಗಾಗಿ uhsbagalkot.edu.in ಗಮನಿಸಿ