ದೇನಾ ಬ್ಯಾಂಕ್: ಪಿ ಜಿ ಡಿಪ್ಲೊಮಾ ಬ್ಯಾಂಕಿಂಗ್ ಪ್ರವೇಶಾತಿ

ಅಮಿಟಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಗಳಿಸುವುದರ ಮೂಲಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಯಸುವವರಿಗೆ ದೇನಾ ಬ್ಯಾಂಕ್ ಅವಕಾಶ ಒದಗಿಸುತ್ತಿದೆ.

ಅಮಿಟಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಗಳಿಸುವುದರ ಮೂಲಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಯಸುವವರಿಗೆ ದೇನಾ ಬ್ಯಾಂಕ್ ಅವಕಾಶ ಒದಗಿಸುತ್ತಿದೆ.

ಎರಡು ವರ್ಷಗಳ ಈ ಕೋರ್ಸ್ 12 ತಿಂಗಳ ಪದವಿ ಜೊತೆಯಲ್ಲಿ 9 ತಿಂಗಳ ಕ್ಯಾಂಪಸ್ ಕಾರ್ಯಕ್ರಮ ಮತ್ತು ಮೂರು ತಿಂಗಳ ತರಬೇತಿಯನ್ನು ಹೊಂದಿರುತ್ತದೆ. ಕೋರ್ಸ್ ಪೂರ್ಣಗೊಂಡ ನಂತರ ಅಭ್ಯರ್ಥಿಗಳು ಪ್ರೊಬೆಶನರಿ ಅಧಿಕಾರಿಗಳಾಗಿ ದೇನಾ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸಬಹುದಾಗಿದೆ.

ಒಟ್ಟು 300 ಪ್ರೊಬೆಶನರಿ ಅಧಿಕಾರಿ ಹುದ್ದೆಗಳಿಗೆ ದೇನಾ ಬ್ಯಾಂಕ್ ಅರ್ಜಿ ಆಹ್ವಾನಿಸಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು 09ನೇ ಮೇ, 2017 ಕಡೆಯ ದಿನವಾಗಿದೆ.

ದೇನಾ ಬ್ಯಾಂಕ್ ಪ್ರವೇಶಾತಿ

ಆಯ್ಕೆ ವಿಧಾನ

ಅರ್ಹ ಅಭ್ಯರ್ಥಿಗಳನ್ನು ಆನ್ ಲೈನ್ ಪರೀಕ್ಷೆ (ಆಬ್ಜೆಕ್ಟಿವ್ ಮತ್ತು ಡಿಸ್ಕ್ರಿಪ್ಟಿವ್), ಗುಂಪು ಸಂವಹನ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷದ ಕೋರ್ಸ್ಗೆ ಅವಕಾಶ ಪಡೆಯುತ್ತಾರೆ. ವರ್ಷಕ್ಕೆ ಮುನ್ನೂರು ಮಂದಿಗೆ ಮೂರು ಬ್ಯಾಚ್ ಗಳ ಮೂಲಕ ಪ್ರವೇಶಾತಿ ನೀಡಲಾಗುವುದು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ, ವಸತಿಯೊಂದಿಗೆ ತಿಂಗಳಿಗೆ ರೂ.2.500/- ಸ್ಟೈಫಂಡ್ ಕೂಡ ನೀಡುತ್ತಿದ್ದು, ವಿದ್ಯಾರ್ಥಿಗಳ ಕೋರ್ಸ್ ಫೀಸ್ ಅನ್ನು ಕೆಲಸಕ್ಕೆ ನೇಮಕವಾದ ನಂತರ ಮರುಪಾವತಿ ಮಾಡಲಾಗುತ್ತದೆ. [ಬ್ಯಾಂಕ್ ಆಫ್ ಬರೋಡ-ಬ್ಯಾಂಕಿಂಗ್ ಸ್ಕೂಲ್ ಪ್ರವೇಶಾತಿ]

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆಗೆ ಕಡೆಯ ದಿನ : 09ನೇ ಮೇ, 2017
  • ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ: 30-05-2017 ರ ನಂತರ
  • ಪ್ರವೇಶ ಪರೀಕ್ಷೆ ದಿನಾಂಕ (ತಾತ್ಕಾಲಿಕ): 11-06-2017

ವಿದ್ಯಾರ್ಹತೆ

  • ಯುಜಿಸಿಯ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಶೇ 55, ಇತರೆ ವರ್ಗದ ಅಭ್ಯರ್ಥಿಗಳು ಶೇ 60ರಷ್ಟ ಅಂಕದೊಂದಿಗೆ ಉತ್ತೀರ್ಣರಾಗಿಬೇಕು.

ವೇತನ ಶ್ರೇಣಿ: ರೂ.31,705 - 45,950/-

ವಯೋಮಿತಿ

  • 2017ರ ಏಪ್ರಿಲ್ 1ರ ಹೊತ್ತಿಗೆ 29 ವರ್ಷದವರಾಗಿರಬೇಕು.
  • ಮೀಸಲಾತಿ ಆಧಾರದ ಮೇಲೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು

ಅರ್ಜಿ ಶುಲ್ಕ

ಪ್ರೊಬೆಶನರಿ ಅಧಿಕಾರಿ ಹುದ್ದೆಗಳಿಗೆ ಅರ್ಹತೆ ಉಳ್ಳವರು ಮತ್ತು ಇಚ್ಛೆಯುಳ್ಳವರು ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 50 ರು. ಇತರರು 400 ರು. ದಿನಾಂಕ 09-05-2017 ರೊಳಗೆ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿಬೇಕು.

ಪರೀಕ್ಷಾ ಕೇಂದ್ರಗಳು

ದೇಶಾದ್ಯಂತ ಪರೀಕ್ಷೆಗಳು ನಡೆಯಲಿದ್ದು ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಮಂಗಳೂರು ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ.

ಇನ್ನು ಹೆಚ್ಚಿನ ವಿವರಗಳಿಗಾಗಿ ದೇನಾ ಬ್ಯಾಂಕ್ ವೆಬ್ಸೈಟ್ ವಿಳಾಸ www.denabank.com ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
Dena bank offers Admission to Post Graduate Diploma in Banking & Finance (PGD-B&F)through ‘Amity University’
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X