ದಾವಣಗೆರೆ ವಿಶ್ವವಿದ್ಯಾಲಯ ಘಟಕ ಕಾಲೇಜಾದ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯ, ದಾವಣಗೆರೆಯಲ್ಲಿ 2017-18ನೇ ಶೈಕ್ಷಣಿಕ ಸಾಲಿಗೆ ಐದು ವರ್ಷ (ಎರಡು ವರ್ಷ ಫೌಂಡೇಶನ್ ಮತ್ತು ಮೂರು ವರ್ಷ ಸ್ನಾತಕ ಪದವಿ)ಗಳ ಅವಧಿಯ ಬ್ಯಾಚುಲರ್ ಆಫ್ ವಿಜ್ಯುವಲ್ ಆರ್ಟ್ಸ್ (ಬಿವಿಎ) ಪದವಿ ಕೋರ್ಸಿಗೆ ಪ್ರವೇಶಾತಿ ಪ್ರಾರಂಭವಾಗಿದೆ.
ಬಿವಿಎ ಕೋರ್ಸಿನ ಪ್ರಥಮ ವರ್ಷದ ಫೌಂಡೇಶನ್ ಕೋರ್ಸಿಗೆ ಪ್ರವೇಶಕ್ಕಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಜೂನ್ 27 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅಸಕ್ತಿಯುಳ್ಳ ಅಭ್ಯರ್ಥಿಗಳು ನಿಗದಿತ ಪ್ರವೇಶ ಅರ್ಜಿ ನಮೂನೆಗಳನ್ನು ಶುಲ್ಕ ಪಾವತಿಸಿ ನಿಗದಿತ ದಿನಾಂಕದೊಳಗೆ ಕಛೇರಿಯ ವಿಳಾಸಕ್ಕೆ ಸಲ್ಲಿಸತಕ್ಕದ್ದು.
ಕೋರ್ಸ್ ವಿವರ
ಚಿತ್ರಕಲೆ
ಅನ್ವಯಿಕ ಕಲೆ
ಶಿಲ್ಪಕಲೆ
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.100/-
ಪ.ಜಾ/ಪ.ಪಂ/ಪ್ರ-1 ರ ಅಭ್ಯರ್ಥಿಗಳಿಗೆ ರೂ.75/-
ಅಂಚೆ ಮೂಲಕ ಪಡೆಯಲು ಬಯಸುವ ಅಭ್ಯರ್ಥಿಗಳು 23X10 ಸೆಂ.ಮೀ ಅಳತೆಯ ಸ್ವವಿಳಾಸದ ಲಕೋಟೆಗೆ ರೂ.25/- ಅಂಚೆ ಚೀಟಿಗಳನ್ನು ಅಂಟಿಸಿ ಕ್ರಾಸ್ ಮಾಡಿದ ಡಿ.ಡಿ.ಯನ್ನು ಪ್ರಾಚಾರ್ಯರು, ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯ, ದಾವಣಗೆರೆ ಇವರ ಪದನಾಮದಲ್ಲಿ ಪಡೆದು ಈ ಜಾಹೀರಾತು ಪ್ರಕಟಣಿಯ ದಿನಾಂಕದಿಂದ ಅನ್ವಯವಾಗುವಂತೆ ಪ್ರವೇಶ ಅರ್ಜಿಯನ್ನು ಪಡೆಯತಕ್ಕದ್ದು. [ಐಟಿಐ ಪ್ರವೇಶಕ್ಕೆ ಆನ್-ಲೈನ್ ಮೂಲಕ ಅರ್ಜಿ ಆಹ್ವಾನ]
ಪ್ರಮುಖ ದಿನಾಂಕಗಳು
ಭರ್ತಿ ಮಾಡಿದ ಅರ್ಜಿಗಳನ್ನು ದಂಡಶುಲ್ಕವಿಲ್ಲದೆ ಸಲ್ಲಿಸಲು ಕೊನೆಯ ದಿನಾಂಕ: 27-06-2017
ರೂ.100/- ರ ದಂಡಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2017
ಅರ್ಹತಾ ಪರೀಕ್ಷೆ ನಡೆಯುವ ದಿನಾಂಕ: 03-07-2017
ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸಂದರ್ಶನ ನಡೆಯುವ ದಿನಾಂಕ: 05-07-2017
ಅರ್ಜಿ ಸಲ್ಲಿಸುವ ವಿಳಾಸ
ಪ್ರಾಚಾರ್ಯರು,
ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯ,
ದಾವಣಗೆರೆ-4
ಸೂಚನೆ: ಸಂದರ್ಶನ ಮತ್ತು ಪ್ರವೇಶಕ್ಕಾಗಿ ಎಸ್ ಎಸ್ ಎಲ್ ಸಿ ಮೂಲ ಅಂಕಪಟ್ಟಿ ಹಾಗೂ ಇತರೆ ಮೂಲ ದಾಖಲಾತಿಗಳೊಂದಿಗೆ ವಿಶ್ವವಿದ್ಯಾನಿಲಯ ನಿಗದಿಪಡಿಸಿದ ವಾರ್ಷಿಕ ಪ್ರವೇಶ ಶುಲ್ಕ ಪಾವತಿಸಿ, ಪ್ರವೇಶ ಪಡೆದು ತರಗತಿಗೆ ಹಾಜರಾಗಬಹುದಾಗಿದೆ.
ಹೆಚ್ಚಿನ ಶೈಕ್ಷಣಿಕ ವಿವರಗಳಿಗಾಗಿ ಈ ಕಛೇರಿಯ ದೂರವಾಣಿ ಸಂಖ್ಯೆ ಮತ್ತು ವಿದ್ಯಾಲಯದ ಪ್ರಾಚಾರ್ಯರನ್ನು ಸಂಪರ್ಕಿಸಬಹುದಾಗಿದೆ.
ಕಛೇರಿ ದೂರವಾಣಿ ಸಂಖ್ಯೆ: 08912-220075
ಪ್ರಾಚಾರ್ಯರ ಮೊಬೈಲ್ ನಂಬರ್: 9964065643