ಐಟಿಐ ಪ್ರವೇಶಕ್ಕೆ ಆನ್-ಲೈನ್ ಮೂಲಕ ಅರ್ಜಿ ಆಹ್ವಾನ

Posted By:

2017-18ನೇ ಸಾಲಿನ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕೈಗಾರಿಕ ತರಬೇತಿ ಸಂಸ್ಥೆಗಳಿಗೆ ಪ್ರವೇಶ ನೀಡಲು ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಯುವಕ ಯುವತಿಯರಿಗೆ ರಾಜ್ಯದಲ್ಲಿರುವ ಎಲ್ಲಾ 258 ಸರ್ಕಾರಿ ಹಾಗೂ 196 ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿರುವ ಯಾವುದೇ ವೃತ್ತಿಯನ್ನು www.emptrg.kar.nic.in ಯಿಂದ ಪಡೆದು ಆನ್-ಲೈನ್ ಮುಖಾಂತರ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯದಲ್ಲಿರುವ 258 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಲಭ್ಯವಿರುವ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (NCVT) ಮತ್ತು ರಾಜ್ಯ ವೃತ್ತಿ ಶಿಕ್ಷಣ ಪರಿಷತ್ (SCVT) ವೃತ್ತಿಯ ಸ್ಥಾನಗಳಿಗೆ ಹಾಗೂ 196 ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಲಭ್ಯವಿರುವ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (NCVT) ವೃತ್ತಿಯ ಸ್ಥಾನಗಳಿಗೆ www.emptrg.kar.nic.in ರಲ್ಲಿ ಪ್ರಕಟಿಸಿರುವಂತೆ ವಿದ್ಯಾರ್ಹತೆ ಹಾಗೂ ಮೀಸಲಾತಿ ಆಧಾರದಲ್ಲಿ ಪ್ರವೇಶ ಪಡೆಯಲು ಅರ್ಜಿಗಳನ್ನು ಆನ್-ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ. [ಡಿಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳಿಗೆ ದಾಖಲಾತಿ ಪ್ರಾರಂಭ]

ಐಟಿಐ ಪ್ರವೇಶ ಪ್ರಕ್ರಿಯೆ

ನಿಯಮದಂತೆ COBSE (Council of Boards of school Education, New Delhi) ರವರಿಂದ ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಗಳಿಂದ 10ನೇ ತರಗತಿಯ ಪ್ರಮಾಣ ಪತ್ರ ಹೊಂದಿರುವಂತಹ ಅಭ್ಯರ್ಥಿಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಇಲಾಖೆಯ ವೆಬ್ಸೈಟ್ www.emptrg.kar.nic.in ರಲ್ಲಿ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕೈಗಾರಿಕ ತರಬೇತಿ ಸಂಸ್ಥೆಗಳ ಪ್ರವೇಶಕ್ಕಾಗಿ ಆನ್-ಲೈನ್ ಅರ್ಜಿಯನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. [ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್ ಪ್ರವೇಶಾತಿ]

NCVT ಮತ್ತು SCVT ಅಡಿಯಲ್ಲಿ ಅನುಷ್ಟಾನಗೊಳಿಸಿರುವ 40 ವಿವಿಧ ವೃತ್ತಿಗಳಲ್ಲಿ ತರಬೇತಿ ನೀಡಲಾಗುವುದು.

ದಿನಾಂಕ: 27-05-2017 ರಿಂದ ದಿನಾಂಕ 12-06-2017 ರವರೆಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ

ಹೆಚ್ಚಿನ ವಿವರಗಳಿಗಾಗಿ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಥವಾ ಉದ್ಯೋಗ ಮತ್ತು ತರಬೇತಿ ಇಲಾಖೆಯನ್ನು ಅಥವಾ ಆನ್-ಲೈನ್ ಪ್ರವೇಶದ ಮಾಹಿತಿಗಾಗಿ ಸಹಾಯವಾಣಿ 080-25189105 ಅನ್ನು ಸಂಪರ್ಕಿಸಬಹುದಾಗಿದೆ.

ಕಛೇರಿ ವಿಳಾಸ

ಆಯುಕ್ತರು, ಉದ್ಯೋಗ ಮತ್ತು ತರಬೇತಿ ಇಲಾಖೆ,
ಕೌಶಲ್ಯ ಭವನ, ಡೈರಿ ವೃತ್ತ, ಬೆಂಗಳೂರು-29

English summary
Directorate of Employment and training invites online application for ITI admissions

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia