ಇಂಜಿನೀಯರಿಂಗ್ ಕನಸು ಕಾಣುವ ವಿದ್ಯಾರ್ಥಿಗಳಿಗೆ... ಮುಂದಿನ ವರ್ಷದ ಎಂಟ್ರೇಂಸ್ ಎಕ್ಸಾಂ ಡೀಟೆಲ್ಸ್!

ಹೈಯರ್ ಎಜ್ಯುಕೇಶನ್ ಎಂದು ವಿಷಯ ಬಂದ್ರೆ ಇಂಜಿನೀಯರ್ ಮೊದಲ ಸ್ಥಾನದಲ್ಲಿ ಇರುತ್ತದೆ. ಇನ್ನು ಈ ಕೋರ್ಸ್ ಗೆ ಹೆಚ್ಚಿನ ಬೇಡಿಕೆ ಕೂಡಾ ಇದೆ. ಭಾರತದಲ್ಲಿ ಹಲವಾರು ಇಂಜಿನೀಯರಿಂಗ್ ಶಿಕ್ಷಣ ಸಂಸ್ಥೆಗಳು ಕೂಡಾ ಇವೆ ಅಷ್ಟೇ ಅಲ್ಲ ಇಲ್ಲಿ ನೀವು ಸೀಟು ಪಡೆಯಬೇಕಾದ್ರೆ ಮುಖ್ಯವಾಗಿ ಅತೀ ಹೆಚ್ಚು ಅಂಕಗಳಿಸಬೇಕು ಹಾಗೆಯೇ ಜತೆಗೆ ಪ್ರತಿಷ್ಟಿತ ಇಂಜಿನೀಯರಿಂಗ್ ಶಿಕ್ಷಣ ಸಂಸ್ಥೆಗಳು ಎಂಟ್ರೇಸ್ ಪರೀಕ್ಷೆ ಮಾಡುತ್ತವೆ. ಅದರಲ್ಲಿ ನೀವು ಅತೀ ಹೆಚ್ಚು ಅಂಕ ಸ್ಕೋರ್ ಮಾಡಿದ್ರೆ ಸೀಟು ನಿಮ್ಮದಾಗಿಸಿಕೊಳ್ಳಬಹುದು.

ಇಂಜಿನೀಯರಿಂಗ್ ಕನಸು ಕಾಣುವ ವಿದ್ಯಾರ್ಥಿಗಳಿಗೆ... ಮುಂದಿನ ವರ್ಷದ ಎಂಟ್ರೇಂಸ್ ಎಕ್ಸಾಂ ಡೀಟೆಲ್ಸ್!

ಹಾಗಾಗಿ ಪಿಯುಸಿ ನಂತರ ಯಾರೆಗೆಲ್ಲಾ ಇಂಜಿನೀಯರಿಂಗ್ ಲೈನ್‌ಗೆ ಹೋಗಬೇಕು ಎಂದು ಅಂದುಕೊಂಡಿದ್ದೀರೋ ನೀವೆಲ್ಲಾ ಮೊದಲಿಗೆ ಎಂಟ್ರೇಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಇನ್ನು ಎಂಟ್ರೇಸ್ ಪರೀಕ್ಷೆ ಬಗ್ಗೆ ಹೇಳುವಾದ್ರೆ ಈಗಾಗಲೇ ಸ್ಟೇಟ್ ಹಾಗೂ ಸೆಂಟ್ರಲ್ ಲೆವೆಲ್‌ನಲ್ಲಿ ನಡೆಸುವ ಕೆಲವೊಂದು ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡಿದ್ದೀರಾ. ಇಂಜಿನೀಯರಿಂಗ್‌ ಕ್ಷೇತ್ರದಲ್ಲಿ ಕೆರಿಯರ್ ಮೂಡಿಸಬೇಕೆಂದು ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಹಾಜರಾಗುತ್ತಾರೆ.

ಎಸ್‍ಎಸ್‍ಸಿ ಕಾಂಸ್ಟೇಬಲ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಯಾವುದು ಬೆಸ್ಟ್ ಬುಕ್ಸ್ ಗೊತ್ತಾ?

2019ರಲ್ಲಿ ಯಾವೆಲ್ಲಾ ಇಂಜಿನೀಯರಿಂಗ್ ಕೋರ್ಸ್ ಗಳ ಪ್ರವೇಶ ಪರೀಕ್ಷೆ ಇದೆ ಎಂಬ ಮಾಹಿತಿ ಇದೀಗ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತದೆ. ಸ್ಟಡಿ ಮಾಡುವ ಮುನ್ನ ಯಾವೆಲ್ಲಾ ಪರೀಕ್ಷೆ ಯಾವ ದಿನಾಂಕದಂದು ಎಂದು ನೋಟ್ ಮಾಡಿಕೊಳ್ಳಿ.

ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ (ಜೆಇಇ):

ಇಂಜಿನೀಯರಿಂಗ್ ಎಂಟ್ರೇಂಸ್ ಪರೀಕ್ಷೆ ಎಂದಾಗ ಜೆಇಇ ಮೊದಲ ಸ್ಥಾನದಲ್ಲಿ ಇರುತ್ತದೆ. ದೇಶದ ಪ್ರತಿಷ್ಟಿತ ಐಐಟಿ ಮತ್ತು ಎನ್‌ಐಟಿ ಶಿಕ್ಷಣ ಸಂಸ್ಥೆಯಲ್ಲಿ ಸೀಟು ಪಡೆಯಬೇಕಾದ್ರೆ ನೀವು ಜೆಇಇ ನಡೆಸುವ ಎಂಟ್ರೇಂಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡಿ ಪಾಸಾಗಲೇ ಬೇಕು. ಅಷ್ಟೇ ಅಲ್ಲ ಇನ್ನುಮುಂದೆ ಜೆಇಇ ಪ್ರಮುಕ ಪರೀಕ್ಷೆಯು ವರ್ಷಕ್ಕೆ ಎರಡು ಬಾರಿ ನಡೆಯಲಿದೆ ಎಂದ ಆದೇಶ ಕೂಡಾ ಹೊರಬಿದ್ದಿದ್ದು, ವಿದ್ಯಾರ್ಥಿಗಳು ಈ ಆದೇಶವನ್ನ ಒಪ್ಪಿಕೊಂಡಿದ್ದಾರೆ ಕೂಡಾ.

ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ, ಈಗಾಗಲೇ ಜೆಇಇ ಪ್ರಮುಖ ಪರೀಕ್ಷೆಯ ದಿನಾಂಕ ಪ್ರಕಟಿಸಿದ್ದು, ಜೆಇಇ ಪ್ರಮುಖ 1 ಮತ್ತು 2 ಪರೀಕ್ಷೆಯ ದಿನಾಂಕ ಈ ಕೆಳಗೆ ನೀಡಲಾಗಿದೆ.

ಜೆಇಇ ಪ್ರಮುಖ ಪರೀಕ್ಷೆಯ ದಿನಾಂಕ 2019

ಜೆಇಇ ಪ್ರಮುಖ 1:

 • ಪರೀಕ್ಷೆ ಮಾದರಿ: ಕಂಪ್ಯೂಟರ್ ಮಾದರಿ
 • ರಿಜಿಸ್ಟ್ರೇಶನ್ ದಿನಾಂಕ: ಸೆಪ್ಟಂಬರ್ 1 ಮತ್ತು 30, 2018
 • ಪ್ರವೇಶ ಪತ್ರ ಡೌನ್‌ಲೋಡ್: ಡಿಸಂಬರ್ 17, 2018
 • ಪರೀಕ್ಷೆ ದಿನಾಂಕ: ಜನವರಿ 6 ರಿಂದ 20, 2019
 • ಫಲಿತಾಂಶ ದಿನಾಂಕ: ಜನವರಿ 31, 2018

ಜೆಇಇ ಪ್ರಮುಖ 2:

 • ಪರೀಕ್ಷೆ ಮಾದರಿ: ಕಂಪ್ಯೂಟರ್ ಮಾದರಿ
 • ರಿಜಿಸ್ಟ್ರೇಶನ್ ದಿನಾಂಕ: ಫೆಬ್ರವರಿ 8 ರಿಂದ ಮಾರ್ಚ್ 7, 2019
 • ಪ್ರವೇಶ ಪತ್ರ ಡೌನ್‌ಲೋಡ್: ಮಾರ್ಚ್ 18, 2019
 • ಪರೀಕ್ಷೆ ದಿನಾಂಕ: ಎಪ್ರಿಲ್ 6 ರಿಂದ 20, 2019
 • ಫಲಿತಾಂಶ ದಿನಾಂಕ: ಎಪ್ರಿಲ್ 30, 2019

ಯಾವ ಎಂಬಿಎ ಸ್ಪೇಶಲೈಜೇಶನ್ ಬೆಸ್ಟ್ ನಿಮಗೆ ಗೊತ್ತಾ?

ಬಿಐಟಿಎಸ್ ಎಟಿ 2019

ಐಐಟಿ ಹಾಗೂ ಎನ್‌ಐಟಿ ಥರಹ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಮತ್ತು ಸೈನ್ಸ್ ಪಿಲನಿ ಯಲ್ಲಿ ಕೂಡಾ ಸೀಟು ಸಿಗುವುದು ತುಂಬಾ ಕಷ್ಟ. ಹಲವಾರು ಇಂಜಿನೀಯರಿಂಗ್ ಕೋರ್ಸ್ ಗಳಿಗೆ ಸೀಟು ಸಿಗಬೇಕಾದ್ರೆ ಇವರು ನಡೆಸುವ ಎಂಟ್ರೇಂಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡಬೇಕು.

ಪ್ರತೀ ವರ್ಷ ಈ ಪರೀಕ್ಷೆಗೆ ಸುಮಾರು 2ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ಪಿಲನಿ, ಗೋವಾ ಹಾಗೂ ಹೈದ್ರಾಬಾದ್ ನಲ್ಲಿ ಶಿಕ್ಷಣ ಸಂಸ್ಥೆ ಹೊಂದಿರುವ ಈ ಸಂಸ್ಥೆಯಲ್ಲಿ ಸೀಟು ಪಡೆಯಬೇಕಾದ್ರೆ ಕಂಪ್ಯೂಟರ್ ಮಾದರಿಯಲ್ಲಿ ಯಾವುದೇ ಬ್ರೇಕ್ ಇಲ್ಲದೇ ಸತತ ಮೂರು ಗಂಟೆ ನಡೆಯುವ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕಾಗಿದೆ.

ಬಿಐಟಿಎಸ್ ಎಟಿ ಪರೀಕ್ಷೆ ದಿನಾಂಕ 2019:

 • ಆನ್‌ಲೈನ್ ಅಪ್ಲಿಕೇಶನ್: ಡಿಸಂಬರ್ 2018
 • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 2019
 • ಪರೀಕ್ಷೆ ದಿನಾಂಕ: ಮೇ 2019

ಇನ್ನು 2019ರ ಸ್ಟೇಟ್ ಲೆವೆಲ್ ಇಂಜಿನೀಯರಿಂಗ್ ಎಂಟ್ರೇಂಸ್ ಎಕ್ಸಾಮಿನೇಶನ್  ಲಿಸ್ಟ್‌ಗೆ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

  English summary
  Engineering is the most opted course in India for higher education. Owing to the demand for this field of study, India has thousands of engineering colleges and the admissions to these colleges would be based on the marks secured in the entrance examination. Candidates who wish to pursue engineering after graduating from class 12 have to appear for the entrance examinations.

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more