ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಮೈಸೂರು ಪ್ರವೇಶಾತಿ ಪ್ರಾರಂಭ

Posted By:

2017-18 ನೇ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿಸಿದಂತೆ ಮೈಸೂರಿನ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಪ್ರವೇಶಾತಿ ಅಧಿಸೂಚನೆ ಹೊರಡಿಸಿದೆ.

ಪ್ರವೇಶ ಬಯಸುವ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆ ಮೂಲಕ ದಾಖಲಾತಿ ಮಾಡಿಕೊಳ್ಳುತ್ತಿದ್ದು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 10, 2017 ಕೊನೆಯ ದಿನವಾಗಿದೆ.

ಕೋರ್ಸ್ ವಿವರ

ಬಿ.ಎಸ್ಸಿ-ಬಿಇಡಿ

ಕೂರ್ಸ್ ಅವಧಿ: 04 ವರ್ಷ
ವಿದ್ಯಾರ್ಹತೆ: ವಿಜ್ಞಾನ ವಿಷಯದಲ್ಲಿ (ಪಿಸಿಎಂ/ಪಿಸಿಬಿ) ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪಿಯುಸಿ/ಹನ್ನೆರಡನೇ ತರಗತಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಗಳಿಸಿರಬೇಕು. (ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ.5 ವಿನಾಯಿತಿ ಇದೆ).

ಬಿ.ಎ-ಬಿ.ಇಡಿ

ಕೂರ್ಸ್ ಅವಧಿ: 04 ವರ್ಷ
ವಿದ್ಯಾರ್ಹತೆ: ವಿಜ್ಞಾನ/ಕಲೆ/ವಾಣಿಜ್ಯ ವಿಷಯದಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪಿಯುಸಿ/ಹನ್ನೆರಡನೇ ತರಗತಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಗಳಿಸಿರಬೇಕು. (ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ.5 ವಿನಾಯಿತಿ ಇದೆ).

ಬಿಎ-ಬಿ.ಇಡಿ, ಬಿ.ಎಸ್ಸಿ-ಬಿಇಡಿ, ಎಂ-ಇಡಿ  ಪ್ರವೇಶಾತಿ ಪ್ರಾರಂಭ

ಎಂ.ಎಸ್ಸಿ-ಇಡಿ
ಕೂರ್ಸ್ ಅವಧಿ: 06 ವರ್ಷ
ವಿದ್ಯಾರ್ಹತೆ: ವಿಜ್ಞಾನ ವಿಷಯದಲ್ಲಿ (ಪಿಸಿಎಂ) ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪಿಯುಸಿ/ಹನ್ನೆರಡನೇ ತರಗತಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಗಳಿಸಿರಬೇಕು. (ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ.5 ವಿನಾಯಿತಿ ಇದೆ).

ಸೂಚನೆ: 2015 , 2016 ಅಥವಾ 2017 ರಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಬಿ.ಇಡಿ

ಕೋರ್ಸ್ ಅವಧಿ: 02 ವರ್ಷ
ವಿದ್ಯಾರ್ಹತೆ: ಅಭ್ಯರ್ಥಿಯು ವಿಜ್ಞಾನ ವಿಷಯದಲ್ಲಿ ಅಥವಾ ಇಂಜಿನಿಯರಿಂಗ್ ಟೆಕ್ನಾಲಜಿಯಲ್ಲಿ ವಿಜ್ಞಾನ ಅಥವಾ ಗಣಿತ ವಿಷಯಗಳಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಪದವಿಗಳಸಿರಬೇಕು. ಅಥವಾ ಸಮಾಜ ವಿಜ್ಞಾನ ವಿಷಯದಲ್ಲಿ ಪದವಿ ಹೊಂದಿರಬೇಕು. (ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ.5 ವಿನಾಯಿತಿ ಇದೆ).

ಎಂ.ಇಡಿ

ಕೋರ್ಸ್ ಅವಧಿ: 02 ವರ್ಷ
ವಿದ್ಯಾರ್ಹತೆ: ಅಭ್ಯರ್ಥಿಯು ಶೇ. 50 ಅಂಕಗೊಳೊಂದಿಗೆ ವಿಜ್ಞಾನ ಅಥವಾ ಕಲಾ ಪದವಿಯೊಂದಿಗೆ ಬಿ.ಇಡಿ ಶಿಕ್ಷಣ ಗಳಿಸಿರಬೇಕು. (ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ.5 ವಿನಾಯಿತಿ ಇದೆ).

ಡಿಸಿಜಿಸಿ

ಡಿಪ್ಲೊಮಾ ಇನ್ ಗೈಡೆನ್ಸ್ ಅಂಡ್ ಕೌನ್ಸಿಲಿಂಗ್
ಕೋರ್ಸ್ ಅವಧಿ : 01 ವರ್ಷ
ಅರ್ಹತೆ: ಮೂರು ವರ್ಷ ಅನುಭವವಿರುವ ಸೇವೆಯಲ್ಲಿರುವ ಶಿಕ್ಷಕರು/ಪದವೀಧರರು ಅರ್ಜಿ ಸಲ್ಲಿಸಬಹುದು.

ಪಿ.ಎಚ್.ಡಿ (ಸೈಕಾಲಜಿ ಮತ್ತು ಸಸ್ಯಶಾಸ್ತ್ರ)

ಮೈಸೂರು ವಿಶ್ವವಿದ್ಯಾನಿಲಯದ ನಿಯಮಾವಳಿಗಳಂತೆ.

ಸೂಚನೆ : ಡಿಪ್ಲೊಮಾ ಮತ್ತು ಪಿ.ಎಚ್.ಡಿ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆಗಳು ಇರುವುದಿಲ್ಲ.

ಆನ್-ಲೈನ್ ಅರ್ಜಿ ಸಲ್ಲಿಸಲು www.ncert-cee.kar.nic.in ಬೇಟಿ ನೀಡಿ

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ರೂ.800 /-
  • ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ: ರೂ.400 /-

ಇದನ್ನು ಗಮನಿಸಿ: ಬ್ಯಾಂಕ್ ಆಫ್ ಬರೋಡ-ಬ್ಯಾಂಕಿಂಗ್ ಸ್ಕೂಲ್ ಪ್ರವೇಶಾತಿ

ಶುಲ್ಕ ಪಾವತಿ

  • ಇ-ಚಲನ್ ಡೌನ್ಲೋಡ್ ಮಾಡಿ ಕೆನೆರಾ ಬ್ಯಾಂಕ್ ಮೂಲಕ ಪಾವತಿಸಬಹುದಾಗಿದೆ.
  • ನೆಟ್ ಬ್ಯಾಂಕಿಂಗ್ ಮೂಲಕವೂ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ; ಮೇ 10 , 2017
  • ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ: ಮೇ 16 , 2017 ರ ನಂತರ
  • ಪ್ರವೇಶ ಪರೀಕ್ಷೆ ದಿನಾಂಕ: ಜೂನ್ 11 , 2017

ಹೆಚ್ಚಿನ ಮಾಹಿತಿಗಾಗಿ www.riemysore.ac.in ಗಮನಿಸಿ

English summary
The Online Application for Common Entrance Examination 2017 will start from 10 April 2017 and will close on 10 May 2017. The date of Common Entrance Examination is 11 June 2017.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia