ಬಿಜಾಪುರ ಸೈನಿಕ ಶಾಲೆ ಪ್ರವೇಶಾತಿಗೆ ಅರ್ಜಿ ಆಹ್ವಾನ

Posted By:

ಸೈನಿಕ ಶಾಲೆ ಬಿಜಾಪುರದಿಂದ 2018-19ನೇ ಸಾಲಿನ 6 ಮತ್ತು 9ನೇ ತರಗತಿ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಥಿಗಳನ್ನು ರಾಷ್ಟ್ರೀಯ ರಕ್ಷಣಾ ಅಕಾಡೆಮಿ/ ಭಾರತೀಯ ನೌಕಾ ಅಕಾಡೆಮಿಗೆ ಸೇರಲು ಶೈಕ್ಷಣಿಕವಾಗಿ ಮತ್ತು ದೈಹಿಕವಾಗಿ ತರಬೇತುಗೊಳಿಸುವ ಉದ್ದೇಶದಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬಿಜಾಪುರ ಸೈನಿಕ ಶಾಲೆ ಪ್ರವೇಶಾತಿ

ಅರ್ಜಿ ಸಲ್ಲಿಸಲು ಬಾಲಕರಿಗೆ ಮಾತ್ರ ಅವಕಾಶವಿದ್ದು, ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವಯೋಮಿತಿ

  • 6ನೇ ತರಗತಿ:02 ಜುಲೈ 2007 ರಿಂದ 01 ಜುಲೈ 2008 ರೊಳಗೆ ಅಭ್ಯರ್ಥಿಗಳು ಜನಿಸಿರಬೇಕು.
  • 9ನೇ ತರಗತಿ: 02 ಜುಲೈ 2004 ರಿಂದ 01 ಜುಲೈ 2005 ರೊಳಗೆ ಅಭ್ಯರ್ಥಿಗಳು ಜನಿಸಿರಬೇಕು, ಅಲ್ಲದೆ ಮಾನ್ಯತೆ ಪಡೆದ ಶಾಲೆಯಲ್ಲಿ 8ನೇ ತರಗತಿ ಅಭ್ಯಾಸ ಮಾಡುತ್ತಿರಬೇಕು. ಪಠ್ಯಕ್ರಮ: 10+02 (ಸಿಬಿಎಸ್ಇ-ವಿಜ್ಞಾನ ವಿಭಾಗ)

ದಾಖಲಾತಿ ವಿಧಾನ

ಅಖಿಲ ಭಾರತಮಟ್ಟದ ಸೈನಿಕ ಶಾಲಾ ಪ್ರವೇಶ ಪರೀಕ್ಷೆ, ಮೌಖಿಕ ಸಂದರ್ಶನ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

6 ಮತ್ತು 9ನೇ ತರಗತಿಯ ಪ್ರಶ್ನೆಪತ್ರಿಕೆಗಳು ಕ್ರಮವಾಗಿ 5ನೇ ಹಾಗೂ 8ನೇ ತರಗತಿಯ ಸಿಬಿಎಸ್ಇ ಪಠ್ಯಕ್ರಮ ಆಧಾರದಲ್ಲಿರುತ್ತದೆ.

ಪರೀಕ್ಷಾ ದಿನಾಂಕ: 07-01-2018

ಪರೀಕ್ಷಾ ಕೇಂದ್ರಗಳು: ವಿಜಯಪುರ, ಕಲಬುರಗಿ, ಬೆಳಗಾವಿ, ಬೆಂಗಳೂರು ಮತ್ತು ಧಾರವಾಡ.

ಖಾಲಿ ಇರುವ ಅಂದಾಜು ಸೀಟುಗಳು

6ನೇ ತರಗತಿಗೆ: 100

9ನೇ ತರಗತಿಗೆ 10 ಸೀಟುಗಳು

ಅರ್ಜಿ ಸಲ್ಲಿಕೆ

ಶಾಲೆಯ ವೆಬ್ಸೈಟ್ ವಿಳಾಸದಿಂದ ಅರ್ಜಿಯನ್ನು ಡೌನ್ಲೋಡ್ ಮಾಡಬಹುದು ಅಥವಾ ಶಾಲೆಯಿಂದ ಖುದ್ದಾಗಿ ಪಡೆಯಬಹುದು. ಅಕ್ಟೋಬರ್ 16 ರಿಂದ ನವೆಂಬರ್ 30 ರವರೆಗೂ ಅರ್ಜಿಗಳು ಲಭ್ಯವಿರುತ್ತದೆ.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ರಕ್ಷಣಾ ಇಲಾಖೆಯವರಿಗೆ ರೂ.400/-

ಪ.ಜಾ/ಪ.ಪಂ ವಿದ್ಯಾರ್ಥಿಗಳಿಗೆ ರೂ.250/-

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 16-10-2017
ಅರ್ಜಿ ಪಡೆಯಲು ಕೊನೆಯ ದಿನಾಂಕ: 30-11-2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-12-2017
ಪರೀಕ್ಷೆ ನಡೆಯುವ ದಿನಾಂಕ: 07-01-2018

ಹೆಚ್ಚಿನ ವಿವರಗಳಿಗಾಗಿ www.ssbj.in ಗಮನಿಸಿ

ಇದನ್ನು ಗಮನಿಸಿ: ಸೈನಿಕ ಶಾಲೆ ಕೊಡಗು: 6 ಮತ್ತು 9 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

English summary
Sainik school Bijapur invites applications to the admissions to class 6 and 9 for the academic year 2018-19

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia