2017-18ನೇ ಸಾಲಿನ ಸೌತ್ ಏಷ್ಯನ್ ಯುನಿವರ್ಸಿಟಿ ಪ್ರವೇಶಾತಿ ಪ್ರಾರಂಭ

Posted By:

2017-18 ನೇ ಸಾಲಿನ ಸ್ನಾತಕೋತ್ತರ ಮತ್ತು ಪಿಹೆಚ್.ಡಿ ಪದವಿಗಳಿಗಾಗಿ ಸೌತ್ ಏಷ್ಯನ್ ಯುನಿವರ್ಸಿಟಿ ಅಧಿಸೂಚನೆ ಹೊರಡಿಸಿದೆ. ಸಾರ್ಕ್ ರಾಷ್ಟ್ರಗಳ ಒಕ್ಕೂಟದಿಂದ ಸ್ಥಾಪಿತವಾಗಿರುವ ವಿಶ್ವವಿದ್ಯಾಲಯವು ಆರು ವಿಷಯಗಳ ಪದವಿಗಳಿಗೆ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಸೌತ್ ಏಷ್ಯನ್ ಯುನಿವರ್ಸಿಟಿ ಪ್ರವೇಶಾತಿ

ಲಭ್ಯವಿರುವ ಕೋರ್ಸುಗಳು

  • ಎಕನಾಮಿಕ್ಸ್
  • ಕಂಪ್ಯೂಟರ್ ಸೈನ್ಸ್
  • ಬಯೋಟೆಕ್ನಾಲಜಿ
  • ಅಪ್ಲೈಡ್ ಮ್ಯಾಥೆಮ್ಯಾಟಿಕ್ಸ್
  • ಸೋಷಿಯಾಲಜಿ
  • ಇಂಟರ್ನ್ಯಾಷನಲ್ ರಿಲೇಷನ್ಸ್

ಅರ್ಹತೆ

ವಿದ್ಯಾರ್ಹತೆ

ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ವಿಧಾನ

ಸೌತ್ ಏಷ್ಯನ್ ಯುನಿವರ್ಸಿಟಿ ಅಧಿಕೃತ ವೆಬ್ಸೈಟ್ ವಿಳಾಸ http://www.sau.int/ ಭೇಟಿ ನೀಡಿ
"ADMISSIONS 2017 OPEN APPLY NOW" ಮೇಲೆ ಕ್ಲಿಕ್ ಮಾಡಿ
"APPLY ONLINE" ಕ್ಲಿಕ್ಕಿಸಿ
ಆನ್ಲೈನ್ ಅರ್ಜಿಯಲ್ಲಿ ಕೇಳಿರುವ ಮಾಹಿತಿಗಳನ್ನು ತಪ್ಪಿಲ್ಲದಂತೆ ತುಂಬಿ
ಅರ್ಜಿ ತುಂಬಿದ ನಂತರ "Submit " ಬಟನ್ ಕ್ಲಿಕ್ ಮಾಡಿ

ಮೀಸಲಾತಿ ವಿಧಾನ

ಭಾರತೀಯ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಮಟ್ಟದಲ್ಲಿ ಶೇ.50 ರಷ್ಟು ಸೀಟುಗಳನ್ನು ಮೀಸಲು ನೀಡಲಾಗುವುದು.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿದ್ಯಾರ್ಥಿಗಳಿಗೆ ಶೇ.10 ರಷ್ಟು ಸೀಟುಗಳು ಮೀಸಲು
ಅಫ್ಘಾನಿಸ್ತಾನ್, ಭೂತಾನ್, ಮಾಲ್ಡೀವ್ಸ್,ನೇಪಾಳ ಮತ್ತು ಶ್ರೀಲಂಕಾ ವಿದ್ಯಾರ್ಥಿಗಳಿಗೆ ಶೇ.4 ರಷ್ಟು ಮೀಸಲಾತಿ ಸಿಗುವುದು.
ಸಾರ್ಕ್ ಪ್ರದೇಶಕ್ಕೆ ಸೇರದ ವಿದ್ಯಾರ್ಥಿಗಳಿಗೆ ಶೇ.10 ರಷ್ಟು ಮೀಸಲಾತಿ ಇರುವುದು.

ಮೆರಿಟ್ ಪಟ್ಟಿ

ದೇಶವರು ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುವುದು. ಅಭ್ಯರ್ಥಿಗಳಿಗೆ ಆಯಾ ದೇಶದ ಅಭ್ಯರ್ಥಿಗಳೇ ಪ್ರತಿಸ್ಪರ್ದಿಗಳಾಗಿರುತ್ತಾರೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 25 ,2017
ಏಪ್ರಿಲ್ 9 . 2017 ರಂದು ಪ್ರವೇಶ ಪರೀಕ್ಷೆಗಳು ನಡೆಯಲಿವೆ

ಸೌತ್ ಏಷ್ಯನ್ ಯುನಿವರ್ಸಿಟಿ
ಸಾರ್ಕ್ (SAARC ) ರಾಷ್ಟ್ರಗಳ ಕೇಂದ್ರ ಸರ್ಕಾರಗಳ ಒಕ್ಕೂಟದಿಂದ ಸ್ಥಾಪಿತವಾಗಿದೆ . 2010 ರಲ್ಲಿ ಕಾರ್ಯರೂಪಕ್ಕೆ ಬಂದ ಈ ಶಿಕ್ಷಣ ಪದ್ದತಿಯು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿ ನೀಡುತ್ತಾ ಬಂದಿದೆ.
ಹನ್ನೊಂದು ಸ್ನಾತಕೋತ್ತರ ಮತ್ತು ಒಂದು ಪದವಿ ಶಿಕ್ಷಣವನ್ನು ಈ ವಿಶ್ವವಿದ್ಯಾಲಯವು ಹೊಂದಿದೆ.
ಪ್ರಸ್ತುತ ನವದೆಹಲಿಯ ಚಾಣಕ್ಯಪುರಿಯಲ್ಲಿನ ಅಕ್ಬರ್ ಭವನ್ ಕ್ಯಾಂಪಸ್ ನಿಂದ ಕಾಯನಿರ್ವಹಿಸುತ್ತಿದ್ದು, ಈ ವಿಶ್ವವಿದ್ಯಾಲಯಕ್ಕಾಗಿ ದೆಹಲಿಯ ದಕ್ಷಿಣ ಭಾಗಕ್ಕಿರುವ ಗರ್ಹಿ ಮೈದಾನ್ ಬಳಿ ಸುಮಾರು ನೂರು ಎಕರೆಯ ಕ್ಯಾಂಪಸ್ ತಯಾರಾಗುತ್ತಿದೆ.
ಎಸ್ ಎ ಯು ನೀಡುವ ಪದವಿಯು ಸಾರ್ಕ್ ಗೆ ಒಳಪಡುವ ಎಂಟು ರಾಷ್ಟ್ರಗಳಿಂದ ಮಾನ್ಯತೆ ಪಡೆದಿದ್ದು ವಿದ್ಯಾರ್ಥಿಗಳನ್ನು ಹೆಚ್ಚಾಗಿ ತನ್ನತ್ತ ಆಕರ್ಷಿಸುತ್ತಿದೆ.

ಇದನ್ನು ಗಮನಿಸಿ: ಬೆಂಗಳೂರು ವಿಶ್ವವಿದ್ಯಾಲಯ ಅಂಚೆ ತೆರಪು ಹಾಗೂ ದೂರ ಶಿಕ್ಷಣ ಮುಕ್ತ ವಿಶ್ವವಿದ್ಯಾಲಯ ಯೋಜನೆಗಳಡಿ ದಾಖಲಾತಿ

English summary
South Asian University (SAU) has released an official notification inviting all the interested, eligible candidates for admission to Masters and PhD programmes.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia