ದ್ವಿತೀಯ ಪಿಯುಸಿ ಪರೀಕ್ಷೆ: ಗಣಿತ ಕಬ್ಬಿಣದ ಕಡಲೆ

ಇಷ್ಟು ದಿನ ಪ್ರಶ್ನೆಪತ್ರಿಕೆ ಹಿಡಿದು ಸಂಭ್ರಮಿಸಿದ್ದ ವಿದ್ಯಾರ್ಥಿಗಳು ಇಂದು ಗಣಿತ ಪರೀಕ್ಷೆ ಮುಗಿಸುವಷ್ಟರಲ್ಲಿ ಸುಸ್ತಾಗಿದ್ದಾರೆ.

ಪರೀಕ್ಷಾ ಕೇಂದ್ರದಿಂದ ಹೊರಬಂದ ವಿದ್ಯಾರ್ಥಿಗಳ ಮುಖದಲ್ಲಿ ಬರಿ ಲೆಕ್ಕಾಚಾರಗಳೇ ಕಾಣುತ್ತಿದ್ದವು. ಯಾವ ವಿದ್ಯಾರ್ಥಿಯ ಬಳಿಯೂ ಸುಲಭ ಎಂಬ ಪದವೇ ಬರದಿದ್ದು ಇಂದಿನ ವಿಶೇಷ.

ಪ್ರತಿವರ್ಷದಂತೆ ಗಣಿತ ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಕಷ್ಟ ಎನ್ನುವ ಮನೋಭಾವ ಇದ್ದು, ಅದು ಈ ಬಾರಿಯು ಮುಂದುವರಿದಿದೆ. ಇಲ್ಲಿನ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಒಟ್ಟು 542 ವಿದ್ಯಾರ್ಥಿಗಳು ಇಂದು ಗಣಿತ ಪರೀಕ್ಷೆ ಬರೆದಿದ್ದಾರೆ.

ಗಣಿತ ಕಬ್ಬಿಣದ ಕಡಲೆ

 

ವಿದ್ಯಾರ್ಥಿಗಳು ಹೇಳುವಂತೆ "ಇಂದಿನ ಪ್ರಶ್ನೆಪತ್ರಿಕೆ ಇಷ್ಟು ಕಷ್ಟವಿರುತ್ತದೆ ಎನ್ನುವುದನ್ನು ನಾವು ಯಾವತ್ತು ಊಹಿಸಿರಲಿಲ್ಲ, ನಮ್ಮ ನಿರೀಕ್ಷೆಗೂ ಮೀರಿದ ಪ್ರಶ್ನೆಗಳು ಬಂದಿವೆ, ತುಂಬಾ ಚೆನ್ನಾಗಿ ಅಲ್ಲದಿದ್ದರು ಇರುವುದರಲ್ಲೇ ಉತ್ತಮವಾಗಿ ಬರೆದಿದ್ದೇವೆ. ಕಾಲೇಜುಗಳಲ್ಲಿ ಪ್ರಿಪರೇಟರಿ ಮತ್ತು ಟ್ಯೂಷನ್ ಗಳಲ್ಲಿ ನಡೆಸಿದ ಪರೀಕ್ಷೆಗೂ ಇಂದಿನ ಪರೀಕ್ಷೆಗೂ ಸಾಕಷ್ಟು ವ್ಯತ್ಯಾಸವಿದ್ದು ಕಷ್ಟಕರ ಪ್ರಶ್ನೆಗಳನ್ನು ಕೇಳಲಾಗಿದೆ" ಎನ್ನುತ್ತಾರೆ.

ಸಮಾದಾನ ಮಾಡಿದ ಪೋಷಕರು

ಪರೀಕ್ಷಾ ಕೇಂದ್ರದ ಹೊರಗೆ ಮಕ್ಕಳಿಗಾಗಿ ಕಾಯುತ್ತಿದ್ದ ಪೋಷಕರು ಕೂಡ ಇಂದಿನ ಪ್ರಶ್ನೆಪತ್ರಿಕೆ ನೋಡಿ ಸುಸ್ತಾಗಿದ್ದಾರೆ. ಅವರಲ್ಲಿ ಒಬ್ಬರು ಮಾತನಾಡಿ " ನಾವು ಮೊದಲೇ ನಿರೀಕ್ಷಿಸಿದ್ದೆವು, ಗಣಿತದ ಪರೀಕ್ಷೆ ಎಂದಿಗೂ ಸುಲಭವಲ್ಲ ಎನ್ನುವುದನ್ನು ಮಕ್ಕಳಿಗೆ ತಿಳಿಸಿದ್ದೆವು, ನಮ್ಮ ಮಾತಿನಂತೆ ಗಣಿತದ ಪರೀಕ್ಷೆ ಕಷ್ಟವಾಗಿಯೇ ಇದೆ." ಎಂದು ಹೇಳಿಕೆ ನೀಡಿದರು. ಇನ್ನು ಕೆಲ ಪೋಷಕರು ಮಕ್ಕಳಿಗೆ ಮುಂದಿನ ಪರೀಕ್ಷೆಗಳಿಗೆ ಚೆನ್ನಾಗಿ ಓದುವಂತೆ ಮಕ್ಕಳನ್ನು ಪ್ರೆರೇಪಿಸುತ್ತಿದ್ದ ದೃಶ್ಯ ಕೂಡ ಕಂಡುಬಂತು.

ಗುಂಪು ಚರ್ಚೆ

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಹೊರಬಂದು ಗುಂಪುಗುಂಪಾಗಿ ಪ್ರಶ್ನೆಪತ್ರಿಕೆ ಹಿಡಿದು ಚರ್ಚಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪರೀಕ್ಷೆ ಮುಗಿದು ಮುಕ್ಕಾಲು ಗಂಟೆಯಾದರು ಪರೀಕ್ಷಾ ಕೇಂದ್ರದ ಬಳಿ ವಿದ್ಯಾರ್ಥಿಗಳು ಪುಸ್ತಕಗಳನ್ನು, ಪ್ರಶ್ನೆಪತ್ರಿಕೆಗಳನ್ನು ಹಿಡಿದು ಚರ್ಚಿಸುವುದರಲ್ಲಿ ಮಗ್ನರಾಗಿದ್ದರು.

ಪಾರ್ಟ್-ಸಿ ತಲೆನೋವು

ವಿದ್ಯಾರ್ಥಿಗಳನ್ನು ಈ ಬಾರಿ ಕಾಡಿರುವುದು ಪ್ರಶ್ನಪತ್ರಿಕೆಯ 'ಸಿ' ವಿಭಾಗ. ಮೂರು ಅಂಕಗಳ ಈ ವಿಭಾಗವು ಒಟ್ಟು ಹದಿನಾಲ್ಕು ಪ್ರಶ್ನೆಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳು ಒಟ್ಟು ಹತ್ತು ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಕ್ಕೆ ಮೂರು ಅಂಕಗಳನ್ನು ನಿಗದಿಪಡಿಸಿದ್ದು, ಒಟ್ಟು ಮೂವತ್ತು ಅಂಕಗಳನ್ನು ಒಳಗೊಂಡಿದೆ. ಆಯ್ಕೆಗಾಗಿ ಹೆಚ್ಚುವರಿ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದರೂ ವಿದ್ಯಾರ್ಥಿಗಳು ಉತ್ತರಿಸಲು ತತ್ತರಿಸಿದ್ದಾರೆ.

ಗಣಿತ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ನೂರು ಅಂಕಗಳ ಗಣಿತ ಪ್ರಶ್ನೆಪತ್ರಿಕೆಯು ಎ.ಬಿ.ಸಿ.ಡಿ ಮತ್ತು ಇ ಎಂಬ ಐದು ವಿಭಾಗಗಳನ್ನು ಒಳಗೊಂಡಿದೆ. ಉತ್ತರಿಸಲು ಮೂರು ಗಂಟೆ ಹದಿನೈದು ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
ಎ ವಿಭಾಗ
ಮೊದಲನೇ ವಿಭಾಗದಲ್ಲಿ ಹತ್ತು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಇಲ್ಲಿ ವಿದ್ಯಾರ್ಥಿಯು ಎಲ್ಲಾ ಹತ್ತು ಪ್ರಶ್ನೆಗಳಿಗೂ ಉತ್ತರಿಸಬೇಕಿದ್ದು ಯಾವುದೇ ಆಯ್ಕೆಗೆ ಅವಕಾಶವಿರುವುದಿಲ್ಲ. ಪ್ರತಿ ಪ್ರಶ್ನೆಗೂ ಒಂದು ಅಂಕ ನಿಗದಿಪಡಿಸಲಾಗಿರುತ್ತದೆ.
ಬಿ ವಿಭಾಗ
20 ಅಂಕಗಳ ಎರಡನೇ ವಿಭಾಗವು ಹದಿನಾಲ್ಕು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಯು ಯಾವುದಾದರು ಹತ್ತು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕು.
ಸಿ ವಿಭಾಗ
ಮೂರನೇ ವಿಭಾಗವು ಮೂವತ್ತು ಅಂಕಗಳನ್ನು ಒಳಗೊಂಡಿರುತ್ತದೆ. ಒಟ್ಟು ಹದಿನಾಲ್ಕು ಪ್ರಶ್ನೆಗಳನ್ನು ಕೇಳಲಾಗಿದ್ದು ವಿದ್ಯಾರ್ಥಿಯು ಯಾವುದಾದರು ಹತ್ತು ಪ್ರಶ್ನಗಳಿಗೆ ಮಾತ್ರ ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಗೂ ಮೂರು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.
ಡಿ ವಿಭಾಗ
30 ಅಂಕಗಳ ನಾಲ್ಕನೇ ವಿಭಾಗದಲ್ಲಿ ಒಟ್ಟು ಹತ್ತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ವಿದ್ಯಾರ್ಥಿಯು ಯಾವುದಾದರು ಆರು ಪ್ರಶ್ನೆಗೆ ಉತ್ತರಿಸಬೇಕು. ಪ್ರತಿ ಪ್ರಶ್ನೆಗೆ ಐದು ಅಂಕಗಳು.
ಇ ವಿಭಾಗ
ಪ್ರಶ್ನೆಪತ್ರಿಕೆಯ ಕೊನೆಯ ವಿಭಾಗದಲ್ಲಿ ಒಟ್ಟು ಎರಡು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪ್ರತಿ ಪ್ರಶ್ನೆಯೂ ಎ ಮತ್ತು ಬಿ ಎಂಬ ಪ್ರಶ್ನೆಗಳನ್ನು ಹೊಂದಿದ್ದು ಒಂದಕ್ಕೆ ಆರು ಮತ್ತು ಮತ್ತೊಂದಕ್ಕೆ ನಾಲ್ಕು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಒಟ್ಟು ಹತ್ತು ಅಂಕಗಳು ಈ ವಿಭಾಗದಿಂದ ವಿದ್ಯಾರ್ಥಿಯು ಗಳಿಸಬಹುದಾಗಿದೆ.

 

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದೆ

For Quick Alerts
ALLOW NOTIFICATIONS  
For Daily Alerts

    English summary
    On fifth day of II PUC examination students faced difficulty to answer mathematics paper

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more