ದ್ವಿತೀಯ ಪಿಯುಸಿ ಪರೀಕ್ಷೆ: ಭೌತಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಗಣಿತ ಪರೀಕ್ಷೆಯ ನಂತರ ವಿಜ್ಞಾನ ವಿದ್ಯಾರ್ಥಿಗಳು ಬರೆದ ಪತ್ರಿಕೆ ಇದಾಗಿದ್ದು ಇದು ಕೂಡ ವಿದ್ಯಾರ್ಥಿಗಳನ್ನು ಹೆಚ್ಚು ಕಾಡಿದ ಪತ್ರಿಕೆಯಾಗಿದೆ.

ಈ ಬಾರಿಯ ಭೌತಶಾಸ್ತ್ರದ ಪತ್ರಿಕೆ ನಿರೀಕ್ಷೆಯಂತೆ ವಿದ್ಯಾರ್ಥಿಗಳನ್ನು ಹೆಚ್ಚು ತಲೆಕಡಿಸಿಕೊಳ್ಳುವಂತೆ ಮಾಡಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ಎಂಟನೇ ದಿನವಾದ ಇಂದು ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದ ಪರೀಕ್ಷೆ ನಡೆಯಿತು. ಜಯನಗರದ ಎನ್ ಎಂ ಕೆ ಆರ್ ವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 543 ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದರು.

ಗಣಿತ ಪರೀಕ್ಷೆಯ ನಂತರ ವಿಜ್ಞಾನ ವಿದ್ಯಾರ್ಥಿಗಳು ಬರೆದ ಪತ್ರಿಕೆ ಇದಾಗಿದ್ದು ಇದು ಕೂಡ ವಿದ್ಯಾರ್ಥಿಗಳನ್ನು ಹೆಚ್ಚು ಕಾಡಿದ ಪತ್ರಿಕೆಯಾಗಿದೆ.
ಪರೀಕ್ಷೆ ಮುಗಿಸಿ ಬಂದ ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ಎಲ್ಲರು ಕೂಡ ಪತ್ರಿಕೆಯ ಕೊನೆಯ ಭಾಗವಾದ ಲೆಕ್ಕ(ಪ್ರಾಬ್ಲಂ)ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.

 ಭೌತಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ವಿದ್ಯಾರ್ಥಿಗಳ ಮಾತು

ಜೈನ್ ಕಾಲೇಜು ವಿದ್ಯಾರ್ಥಿ ಸಂಜಯ್ ಹೇಳುವಂತೆ ಮೊದಲ ನಾಲ್ಕು ಭಾಗಗಳು ವಿದ್ಯಾರ್ಥಿಗಳಿಗೆ ಸುಲಭವಾಗಿದ್ದು, ಬಹುಪಾಲು ವಿದ್ಯಾರ್ಥಿಗಳಿಗೆ ಪ್ರಾಬ್ಲಂಗಳು ತುಂಬಾ ಕಷ್ಟ ಎನಿಸಿದವು. ಆಯ್ಕೆಗಳಿದ್ದರೂ ಕೂಡ ಎಲ್ಲಾ ಪ್ರಶ್ನೆಗಳು ಕಷ್ಟಕರವಾಗಿತ್ತು. ಒಂದು ಪ್ರಶ್ನೆಗೆ ಉತ್ತರಿಸುವುದೇ ಕಷ್ಟವಾಗಿತ್ತು ಉಳಿದಂತೆ ನಾವು ಊಹಿಸಿದ ರೀತಿಯಲ್ಲೇ ಪ್ರಶ್ನೆಗಳಿದ್ದವು."

ಜೈನ್ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿ ರಂಜಿತ್ ಮಾತನಾಡಿ "ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದರಿಂದ ಈ ಪತ್ರಿಕೆಗೆ ಉತ್ತರಿಸಲು ಸುಲಭವಾಯಿತು. ಹಳೆಯ ಪ್ರಶ್ನೆಪತ್ರಿಕೆಗಳಲ್ಲಿ ಬಂದಿದ್ದ ಪ್ರಶ್ನೆಗಳನ್ನು ಬಿಟ್ಟು ಉಳಿದ ಪ್ರಶ್ನೆಗಳಿಗೆ ಸಾಕಷ್ಟು ಅಭ್ಯಾಸ ಮಾಡಿದ್ದೆವು, ನಮ್ಮ ನಿರೀಕ್ಷೆಯಂತೆ ಕಳೆದ ಬಾರಿ ಕೇಳಿದ ಯಾವ ಪ್ರಶ್ನೆಗಳನ್ನು ಈ ಬಾರಿ ಕೇಳಿಲ್ಲ ಹಾಗಾಗಿ ಉತ್ತಮವಾಗಿಯೇ ಪರೀಕ್ಷೆ ಬರೆದಿದ್ದೇವೆ." ಎಂದು ಹೇಳಿದರು.

ಭೌತಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಎಪತ್ತು ಅಂಕಗಳ ಭೌತಶಾಸ್ತ್ರದ ಪತ್ರಿಕೆಯು 37 ಪ್ರಶ್ನೆಗಳನ್ನು ಒಳಗೊಂಡಿದೆ. ಐದು ವಿಭಾಗಗಳನ್ನಾಗಿ ಪ್ರಶ್ನೆಪತ್ರಿಕೆಯನ್ನು ವಿಂಗಡಿಸಿದ್ದು ಉತ್ತರಿಸಲು ಮೂರು ಗಂಟೆ ಹದಿನೈದು ನಿಮಿಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ.
ಭಾಗ-ಎ
ಒಟ್ಟು ಹತ್ತು ಪ್ರಶ್ನೆಗಳನ್ನೊಳಗೊಂಡಿದ್ದು, ವಿದ್ಯಾರ್ಥಿಯು ಎಲ್ಲಾ ಹತ್ತು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಕ್ಕೆ ಒಂದು ಅಂಕ ನಿಗದಿಪಡಿಸಲಾಗಿರುತ್ತದೆ.
ಭಾಗ-ಬಿ
10 ಅಂಕಗಳ ಈ ಭಾಗವು ಒಟ್ಟು ಎಂಟು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಯು ಯಾವುದಾದರು ಐದು ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಎರಡು ಅಂಕಗಳನ್ನು ನಿಗದಿಪಡಿಸಿಲಾಗಿರುತ್ತದೆ.
ಭಾಗ-ಸಿ
15 ಅಂಕಗಳ ಸಿ ಭಾಗವು ಎಂಟು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳು ಯಾವುದಾದರು ಐದು ಪ್ರಶ್ನೆಗಳಿಗೆ. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಮೂರು ಅಂಕಗಳನ್ನು ನಿಗದಿಪಡಿಸಿಲಾಗಿರುತ್ತದೆ.
ಭಾಗ-ಡಿ
ಡಿ ಭಾಗವನ್ನು ಎರಡು ವಿಭಾಗಗಳನ್ನಾಗಿ ವಿಂಡಿಸಿದ್ದು ಒಟ್ಟು ಆರು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ವಿಭಾಗದಲ್ಲು ಮೂರು ಪ್ರಶ್ನೆಗಳಿದ್ದು ವಿದ್ಯಾರ್ಥಿಯು ಪತ್ರಿ ವಿಭಾಗದ ಯಾವುದಾದರು ಎರಡು ಪ್ರಶ್ನಗಳಿಗೆ ಉತ್ತರಿಸಬೇಕಾಗುತ್ತದೆ. ಪ್ರತಿಪ್ರಶ್ನೆಗೆ ಐದು ಅಂಕಗಳಿದ್ದು ಈ ಭಾಗವು ಒಟ್ಟು 20 ಅಂಕಗಳನ್ನು ಒಳಗೊಂಡಿರುತ್ತದೆ.
ಭಾಗ-ಇ
ಇ ವಿಭಾಗವು ಲೆಕ್ಕಗಳನ್ನು ಒಳಗೊಂಡಿದ್ದು ಒಟ್ಟು ಐದು ಲೆಕ್ಕಗಳನ್ನು ಕೇಳಲಾಗಿರುತ್ತದೆ. ವಿದ್ಯಾರ್ಥಿಗಳು ಯಾವುದಾದರು ಮೂರು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದ್ದು ಪ್ರತಿ ಲೆಕ್ಕಗಳಿಗೂ ಐದು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

More News  

For Quick Alerts
ALLOW NOTIFICATIONS  
For Daily Alerts

English summary
On the eighth day of second puc examination students felt difficulty to answer the part e of physics paper
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+