ಕೆಎಎಸ್ ಮುಖ್ಯ ಪರೀಕ್ಷೆಯ ವಿವರಗಳು

ಕೆಎಎಸ್ ಪರೀಕ್ಷೆಯ ಪೂರ್ವಭಾವಿ(ಪ್ರಿಲಿಮ್ಸ್)ಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಯು ಕನಿಷ್ಠ 35 ಅಂಕಗಳನ್ನು ಗಳಿಸಲೇಬೇಕು.

ಕೆಎಎಸ್ ಪರೀಕ್ಷೆಯ ಪ್ರಮುಖ ಭಾಗವಾಗಿರುವ ಮುಖ್ಯ ಪರೀಕ್ಷೆಯು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತವೆ. ಹಲವು ಮಂದಿ ಪ್ರಿಲಿಮ್ಸ್ ಮುಗಿಸಿದರೂ ಮುಖ್ಯ ಪರೀಕ್ಷೆಯಲ್ಲಿ ವಿಫಲರಾಗುತ್ತಾರೆ. ಮುಖ್ಯ ಪರೀಕ್ಷೆಯಲ್ಲಿ ಏನೇನೆಲ್ಲ ಇರುತ್ತದೆ ಎನ್ನಲು ಇಲ್ಲಿದೆ ಮಾಹಿತಿ.

ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) (11ನೇ ತಿದ್ದುಪಡಿ) ನಿಯಮಗಳು, 2014 ರಂತೆ ಮುಖ್ಯ ಪರೀಕ್ಷೆಯು ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಯನ್ನು ಒಳಗೊಂಡಿರುತ್ತದೆ.

ಲಿಖಿತ ಪರೀಕ್ಷೆ

ಪತ್ರಿಕೆಗಳು(ಕಡ್ಡಾಯ ಮತ್ತು ಅರ್ಹತಾದಾಯಕ)ವಿಷಯಅಂಕಗಳುಅವಧಿ
ಅರ್ಹತಾದಾಯಕ ಪತ್ರಿಕೆ
ಕಡ್ಡಾಯ ಕನ್ನಡ 150 2
ಅರ್ಹತಾದಾಯಕ ಪತ್ರಿಕೆ
ಕಡ್ಡಾಯ ಆಂಗ್ಲಭಾಷೆ 150 2
ಕಡ್ಡಾಯ ಪತ್ರಿಕೆ-1
ಪ್ರಬಂಧ 250 3
ಕಡ್ಡಾಯ ಪತ್ರಿಕೆ-2ಸಾಮಾನ್ಯ ಅಧ್ಯಯನ-1
250 3
ಕಡ್ಡಾಯ ಪತ್ರಿಕೆ-3ಸಾಮಾನ್ಯ ಅಧ್ಯಯನ-2 250 3
ಕಡ್ಡಾಯ ಪತ್ರಿಕೆ-4ಸಾಮಾನ್ಯ ಅಧ್ಯಯನ-3 250 3
ಕಡ್ಡಾಯ ಪತ್ರಿಕೆ-5ಸಾಮಾನ್ಯ ಅಧ್ಯಯನ-4 250 3
ಕಡ್ಡಾಯ ಪತ್ರಿಕೆ-6ಐಚ್ಛಿಕ ವಿಷಯ-1
250 3
ಕಡ್ಡಾಯ ಪತ್ರಿಕೆ-7ಐಚ್ಛಿಕ ವಿಷಯ-2
250 3
ಲಿಖಿತ ಪರೀಕ್ಷೆಯ ಒಟ್ಟು ಅಂಕಗಳು
1750

ಕೆಎಎಸ್ ಮುಖ್ಯ ಪರೀಕ್ಷೆ

ಐಚ್ಛಿಕ ವಿಷಯಗಳು

ಐಚ್ಛಿಕ ವಿಷಯಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಸಮೂಹ 1 ಮತ್ತು ಸಮೂಹ 2. ಅಭ್ಯರ್ಥಿಗಳು ಐಚ್ಛಿಕ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು. ಪ್ರತಿ ಐಚ್ಛಿಕ ವಿಷಯವು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಗಳಿಗೆ ಯಾವುದೇ ಸಂದರ್ಭದಲ್ಲಿಯೂ ಮುಖ್ಯ ಪರೀಕ್ಷೆಯ ಅರ್ಜಿಯಲ್ಲಿ ಕೋರಿರುವ ಐಚ್ಛಿಕ ವಿಷಯವನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.

ಸಮೂಹ 1 ರ ಐಚ್ಛಿಕ ವಿಷಯಗಳು

  1. ಕೃಷಿ, ಕೃಷಿ ಮಾರುಕಟ್ಟೆ, ರೇಷ್ಮೆ ಮತ್ತು ಸಹಕಾರ
  2. ಪಶು ಸಂಗೋಪನೆ, ಪಶುವೈದ್ಯ ವಿಜ್ಞಾನ ಮತ್ತು
  3. ಮೀನುಗಾರಿಕೆ
  4. ಮಾನವಶಾಸ್ತ್ರ
  5. ಸಸ್ಯಶಾಸ್ತ್ರ
  6. ರಸಾಯನಶಾಸ್ತ್ರ
  7. ಸಿವಿಲ್ ಇಂಜಿನಿಯರಿಂಗ್
  8. ವಾಣಿಜ್ಯ ಮತ್ತು ಲೆಕ್ಕಶಾಸ್ತ್ರ
  9. ಅರ್ಥಶಾಸ್ತ್ರ
  10. ಎಲೆಕ್ಟ್ರಿಕಲ್ ಇಂಜಿನಿಯರಿಂಗ್
  11. ಭೂಗೋಳಶಾಸ್ತ್ರ
  12. ಭೂವಿಜ್ಞಾನ
  13. ಇತಿಹಾಸ
  14. ಕಾನೂನು
  15. ಮ್ಯಾನೇಜ್‍ಮೆಂಟ್
  16. ಗಣಿತಶಾಸ್ತ್ರ
  17. ಮೆಕ್ಯಾನಿಕಲ್ ಇಂಜಿನಿಯರಿಂಗ್ ಒeಛಿhಚಿಟಿiಛಿಚಿಟ ತತ್ವಶಾಸ್ತ್ರ
  18. ಭೌತಶಾಸ್ತ್ರ
  19. ರಾಜ್ಯಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು
  20. ಮನೋವಿಜ್ಙಾನ
  21. ಸಾರ್ವಜನಿಕ ಆಡಳಿತ
  22. ಸಮಾಜಶಾಸ್ತ್ರ
  23. ಸಂಖ್ಯಾಶಾಸ್ತ್ರ
  24. ಪ್ರಾಣಿಶಾಸ್ತ್ರ
  25. ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ

ಸಮೂಹ:2 ರ ಐಚ್ಛಿಕ ವಿಷಯಗಳು

26(ಎ). ಇಂಗ್ಲಿಷ್
26(ಬಿ). ಹಿಂದಿ
26(ಸಿ). ಕನ್ನಡ
26(ಡಿ). ಉರ್ದು

ಇದನ್ನು ಗಮನಿಸಿ: ಕೆಪಿಎಸ್‌ಸಿ ಪ್ರಿಲಿಮ್ಸ್ ವಿವರ

ಸೂಚನೆ

  1. ಕಡ್ಡಾಯ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳಲ್ಲಿ ಪಡೆದ ಅಂಕಗಳು ಅರ್ಹತಾದಾಯಕ ಸ್ವರೂಪದ್ದಾಗಿರುತ್ತವೆ. ಅರ್ಹತೆ ಪಡೆಯಲು ಈ ಪ್ರತಿಯೊಂದು ಪತ್ರಿಕೆಯಲ್ಲಿ ಕನಿಷ್ಠ ಶೇಕಡ 35 (52.5) ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಎರಡೂ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಅಭ್ಯರ್ಥಿಗಳ ಆಯ್ಕೆಯ ಅರ್ಹತೆಯನ್ನು ನಿಗದಿಪಡಿಸುವಲ್ಲಿ ಪರಿಗಣಿಸಲಾಗುವುದಿಲ್ಲ. ಈ ಎರಡು ಪತ್ರಿಕೆಗಳಲ್ಲಿ ನಿಗದಿತ ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಇತರೆ ಪತ್ರಿಕೆಗಳಲ್ಲಿ ಎಷ್ಟೇ ಹೆಚ್ಚು ಅಂಕಗಳನ್ನು ಗಳಿಸಿದ್ದರೂ ವ್ಯಕ್ತಿತ್ವ ಪರೀಕ್ಷೆಗೆ ಮತ್ತು ಆಯ್ಕೆಗೆ ಅರ್ಹರಾಗುವುದಿಲ್ಲ ಹಾಗೂ ಇಂತಹ ಅಭ್ಯರ್ಥಿಗಳ ಇತರೆ ವಿಷಯಗಳಲ್ಲಿ ಪಡೆದ ಅಂಕಗಳನ್ನು ಪ್ರಕಟಿಸುವುದಿಲ್ಲ.
  2. ಮುಖ್ಯ ಪರೀಕ್ಷೆಯು ವಿವರಣಾತ್ಮಕ ಮಾದರಿಯಲ್ಲಿರುತ್ತದೆ ಮತ್ತು ಎಲ್ಲಾ ಪತ್ರಿಕೆಗಳು ಕಡ್ಡಾಯವಾಗಿರುತ್ತವೆ.
  3. ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ಮುದ್ರಿಸಲಾಗಿರುತ್ತದೆ. ಅಭ್ಯರ್ಥಿಗಳು ಪತ್ರಿಕೆಯ ಉತ್ತರಗಳನ್ನು ಸಂಪೂರ್ಣವಾಗಿ ಕನ್ನಡ ಅಥವಾ ಆಂಗ್ಲಭಾಷಾ ಮಾಧ್ಯಮದಲ್ಲಿಯೇ ಉತ್ತರಿಸತಕ್ಕದ್ದು.
  4. ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ ಹಾಗೂ ಕಡ್ಡಾಯ ಆಂಗ್ಲಭಾಷೆ ಪತ್ರಿಕೆಗಳನ್ನು ಹೊರತುಪಡಿಸಿ ಉಳಿದ ಪತ್ರಿಕೆಗಳು ಪದವಿ ಮಟ್ಟದ್ದಾಗಿರುತ್ತದೆ. ಕಡ್ಡಾಯ ಕನ್ನಡ ಹಾಗೂ ಕಡ್ಡಾಯ ಆಂಗ್ಲಭಾಷೆ ಪತ್ರಿಕೆಗಳು ಎಸ್.ಎಸ್.ಎಲ್.ಸಿಯ ಪ್ರಥಮ ಭಾಷೆಯ ಮಟ್ಟದ್ದಾಗಿರುತ್ತದೆ.
  5. ಎಲ್ಲಾ 07 ಪತ್ರಿಕೆಗಳು ಕಡ್ಡಾಯ ಪತ್ರಿಕೆಗಳಾಗಿರುತ್ತವೆ. ಪತ್ರಿಕೆ- (02) ರಿಂದ (05)ರವರೆಗಿನ ಪತ್ರಿಕೆಗಳು ಮೂರು ಭಾಗಗಳನ್ನು ಒಳಗೊಂಡಿರುತ್ತದೆ. ಪ್ರತಿ ಪತ್ರಿಕೆಯು ಗರಿಷ್ಠ 250 ಅಂಕಗಳನ್ನು ಒಳಗೊಂಡಿರುತ್ತದೆ ಮತ್ತು 03 ಗಂಟೆಗಳ ಅವಧಿಯದ್ದಾಗಿರುತ್ತದೆ.
  6. ಲಿಖಿತ ಮತ್ತು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಅಂತಿಮ ಆಯ್ಕೆಪಟ್ಟಿಯೊಂದಿಗೆ ಪ್ರಕಟಿಸಲಾಗುವುದು.

ವ್ಯಕ್ತಿತ್ವ ಪರೀಕ್ಷೆ

ವ್ಯಕ್ತಿತ್ವ ಪರೀಕ್ಷೆಯು ಗರಿಷ್ಠ 200 ಅಂಕಗಳನ್ನು ಒಳಗೊಂಡಿರುತ್ತದೆ. ವ್ಯಕ್ತಿತ್ವ ಪರೀಕ್ಷೆಯು ಅಭ್ಯರ್ಥಿಗಳ ವೈಯಕ್ತಿಕ ಗುಣಮಟ್ಟ ಮತ್ತು ಸಿವಿಲ್ ಸೇವೆಗಳಿಗೆ ಸೂಕ್ತರೇ ಎಂಬ ಬಗ್ಗೆ ಅಂದರೆ ನಾಯಕತ್ವದ ಗುಣ, ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯ, ವಿವಿಧ ಮತ್ತು ಆಳವಾದ ಆಸಕ್ತಿ ಒಂದು ಗುಂಪಿನಲ್ಲಿ ಕೆಲಸ ಮಾಡುವ ಸಾಮರ್ಥ್ಯ ಮತ್ತು ಪ್ರೇರಣಾ ಕೌಶಲ್ಯ ಹಾಗೂ ತಾರ್ಕಿಕ ಯೋಚನಾ ಸಾಮರ್ಥ್ಯಗಳ ಬಗ್ಗೆ ನಿರ್ಧರಿಸುತ್ತದೆ.

ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್‍ಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ) (ತಿದ್ದುಪಡಿ) ನಿಯಮಗಳು 2017 ರಂತೆ ಆಯೋಗವು ಗ್ರೂಪ್-'ಎ' ಮತ್ತು 'ಬಿ' ಸೇವೆಗಳ ಖಾಲಿ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:5 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಕರೆಯಲಾಗುವುದು. ಆಯೋಗವು, ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳ ಜೇಷ್ಠತೆ (ಮೆರಿಟ್) ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿಯನ್ವಯ ಲಭ್ಯವಿರುವ ಹುದ್ದೆಗಳಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಿರಿಸಿದ ರಿಕ್ತ ಸ್ಥಾನಗಳಿಗನುಗುಣವಾಗಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಕರೆಯಲಾಗುವುದು.

For Quick Alerts
ALLOW NOTIFICATIONS  
For Daily Alerts

English summary
As  per Karnataka Recruitment of Gazetted  Probationers (Appointment by Competitive Examinations) (11th Amendment) Rules, 2014, the Main Examination shall consist of written examination and personality test
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X