ಕೆಪಿಎಸ್‌ಸಿ ಪೂರ್ವಭಾವಿ (ಪ್ರಿಲಿಮ್ಸ್) ಪರೀಕ್ಷೆ ವಿವರಗಳು

Posted By:

ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರ್ಸ್ಗಳ ಹುದ್ದೆಗೆ ನಡೆಸಲಾಗುವ ಪೂರ್ವಭಾವಿ ಪರೀಕ್ಷೆ ಕುರಿತಾದ ಮಾಹಿತಿ.

ಈ ಸ್ಪರ್ಧಾತ್ಮಕ ಪರೀಕ್ಷೆಯು ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್‍ಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ) ನಿಯಮ 1997ರ ಷೆಡ್ಯೂಲ್ 2 ರಲ್ಲಿ ತಿಳಿಸಿರುವಂತೆ ಎರಡು ಹಂತಗಳನ್ನು ಒಳಗೊಂಡಿರುತ್ತದೆ.

(1) ಪೂರ್ವಭಾವಿ ಪರೀಕ್ಷೆಯನ್ನು (Preliminary Examination) ಮುಖ್ಯ ಪರೀಕ್ಷೆಗೆ (Main Examination)
ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ನಡೆಸಲಾಗುವುದು, ಮತ್ತು
(2) ಮುಖ್ಯ ಪರೀಕ್ಷೆಯನ್ನು ಮತ್ತು ವ್ಯಕ್ತಿತ್ವ ಪರೀಕ್ಷೆಯನ್ನು ವಿವಿಧ ಸೇವೆಗಳು ಮತ್ತು ಹುದ್ದೆಗಳಿಗೆ ಅಭ್ಯರ್ಥಿಗಳನ್ನು
ಆಯ್ಕೆ ಮಾಡುವ ಸಲುವಾಗಿ ನಡೆಸಲಾಗುವುದು.
(3) ಹೆಚ್ಚಿನ ವಿವರಗಳಿಗೆ ನಿಯಮಗಳನ್ನು ನೋಡಲು ಸೂಚಿಸಿದೆ. ಈ ನಿಯಮಗಳು ಆಯೋಗದ ವೆಬ್‍ಸೈಟ್
kpsc.kar.nic.in ನಲ್ಲಿ ಲಭ್ಯವಿರುತ್ತದೆ. [ಕೆ ಪಿ ಎಸ್ ಸಿ: 401 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿ]

ಕೆಪಿಎಸ್‌ಸಿ ಪ್ರಿಲಿಮ್ಸ್ ವಿವರ

ಪೂರ್ವಭಾವಿ ಪರೀಕ್ಷೆ

ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) (9ನೇ ತಿದ್ದುಪಡಿ) ನಿಯಮಗಳು, 2011 ರಂತೆ ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ (ಬಹು ಆಯ್ಕೆ) ಮಾದರಿಯ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

 • ಪ್ರತಿ ಪ್ರಶ್ನೆಗೆ ಎರಡು ಅಂಕಗಳಂತೆ ಪ್ರತಿ ಪತ್ರಿಕೆಯು 100 ಪ್ರಶ್ನೆಗಳನ್ನೊಳಗೊಂಡಿರುತ್ತದೆ.
 • ಪ್ರತಿ ಪತ್ರಿಕೆಯು ಗರಿಷ್ಠ 200 ಅಂಕಗಳು ಮತ್ತು ಎರಡು ಗಂಟೆಗಳ ಕಾಲಾವಧಿಯದ್ದಾಗಿರುತ್ತದೆ

ಪತ್ರಿಕೆ-1

  ವಿಷಯಗಳುಪ್ರಶ್ನೆಗಳ ಸಂಖ್ಯೆಅಂಕಗಳು
  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳನ್ನು ಒಳಗೊಂಡಂತೆ ಸಾಮಾನ್ಯ ಅಧ್ಯಯನ 40 80
   ಮಾನವಿಕ ಶಾಸ್ತ್ರ 60 120
  ಒಟ್ಟು100200

  ಪತ್ರಿಕೆ-2

  ವಿಷಯಪ್ರಶ್ನೆಗಳ ಸಂಖ್ಯೆಅಂಕಗಳು
  ರಾಜ್ಯದ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ ಸಾಮಾನ್ಯ ಅಧ್ಯಯನ 40 80
  ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ 30 60
  ಸಾಮಾನ್ಯ ಮಾನೋಸಾಮಥ್ರ್ಯ 30 60
  ಒಟ್ಟು100200

  ಪರೀಕ್ಷೆಯ ಪಠ್ಯಕ್ರಮ

  ಪೂರ್ವಭಾವಿ ಪರೀಕ್ಷೆ: (ವಸ್ತುನಿಷ್ಠ ಮಾದರಿ)

  ಪತ್ರಿಕೆ-1

  (i) ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು.
  (ii) ಮಾನವಿಕ ಶಾಸ್ತ್ರ -ಭಾರತದ ಇತಿಹಾಸ- ಕರ್ನಾಟಕವನ್ನು ಪ್ರಾಮುಖ್ಯವಾಗಿರಿಸಿಕೊಂಡು ಭಾರತದ ರಾಷ್ಟ್ರೀಯ ಚಳುವಳಿಗೆ ಹೆಚ್ಚಿನ ಗಮನ ನೀಡಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಇತಿಹಾಸ ವಿಷಯದ ಬಗ್ಗೆ ಅಭ್ಯರ್ಥಿಯ ವಿಸ್ತಾರವಾದ ಸಾಮಾನ್ಯ ತಿಳುವಳಿಕೆ.
  (iii) ಕರ್ನಾಟಕದ ಬಗ್ಗೆ ಹೆಚ್ಚಿನ ಗಮನ ನೀಡುವುದರೊಂದಿಗೆ ಜಾಗತಿಕ ಭೂಗೋಳ ಶಾಸ್ತ್ರ ಮತ್ತು ಭಾರತದ ಭೂಗೋಳ ಶಾಸ್ತ್ರ.
  (iv) ದೇಶದ ರಾಜಕೀಯ ವ್ಯವಸ್ಥೆ, ಗ್ರಾಮೀಣಾಭಿವೃದ್ಧಿ, ಭಾರತದ ನಿರಂತರ ಅಭಿವೃದ್ಧಿಗೆ ಯೋಜನೆ ಮತ್ತು ಆರ್ಥಿಕ ಸುಧಾರಣೆಗಳು, ಬಡತನ ನಿರ್ಮೂಲನೆ, ಜನಸಂಖ್ಯಾಶಾಸ್ತ್ರ, ಸಾಮಾಜಿಕ ಬದಲಾವಣೆಗಳನ್ನು ಒಳಗೊಂಡಂತೆ ಭಾರತದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆ.

  ಪತ್ರಿಕೆ-2

  (i)ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು.
  (ii)ಸಾಮಾನ್ಯ ವಿಜ್ಞಾನಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ- ವಿಷಯದಲ್ಲಿ ಪ್ರಾವೀಣ್ಯತೆ ಬೇಕಾಗಿಲ್ಲದೆ ಆರೋಗ್ಯ, ಪರಿಸರ ವಿಜ್ಞಾನ, ಜೈವಿಕ ವೈವಿಧ್ಯತೆ ಮತ್ತು ಹವಾಮಾನದಲ್ಲಿ ಬದಲಾವಣೆಗಳು ಇವುಗಳನ್ನೊಳಗೊಂಡಂತೆ ಇರುತ್ತದೆ.
  (iii)ಯಾವುದೇ ವಿಜ್ಞಾನ ವಿಷಯವನ್ನು ವಿಶೇಷವಾಗಿ ಅಧ್ಯಯನ ಮಾಡದಿರುವ ಒಬ್ಬ ಸುಶಿಕ್ಷಿತ ವ್ಯಕ್ತಿಯಿಂದ ನಿರೀಕ್ಷೆ ಮಾಡುವಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೈನಂದಿನ ಅನುಭವಗಳು/ ಅವಲೋಕನೆಗಳು/ ಪರಿಣಾಮಗಳು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಮಕಾಲೀನ ಬೆಳವಣಿಗೆಗಳು.
  (iv) ಸಾಮಾನ್ಯ ಮನೋಸಾಮಥ್ರ್ಯ- ಮನೋಶಕ್ತಿ, ಗ್ರಹಿಸುವಿಕೆ, ತಾರ್ಕಿಕ ಪ್ರತಿಪಾದನೆ ಮತ್ತು ವಿಶ್ಲೇಷಣಾ ಸಾಮಥ್ರ್ಯ, ನಿರ್ಧಾರ ತೆಗೆದುಕೊಳ್ಳುವಿಕೆ, ಸಮಸ್ಯೆ ಬಿಡಿಸುವಿಕೆ, ಮೂಲ ಗಣಿತ ಜ್ಞಾನ (ಸಂಖ್ಯೆಗಳು ಮತ್ತು ಅವುಗಳ ಸಂಬಂಧಗಳು, ಅವುಗಳ ಪರಿಮಾಣ ಇತ್ಯಾದಿ) ಮತ್ತು ದತ್ತಾಂಶದ ವ್ಯಾಖ್ಯಾನ (ನಕ್ಷೆಗಳು, ರೇಖಾಚಿತ್ರಗಳು, ಕೋಷ್ಟಕಗಳು, ದತ್ತಾಂಶ ದಕ್ಷತೆ, ಇತ್ಯಾದಿ- ಹತ್ತನೇ ತರಗತಿ / ಎಸ್.ಎಸ್.ಎಲ್.ಸಿ ಪರೀಕ್ಷೆ ಮಟ್ಟದಲ್ಲಿ).

  English summary
  KPSC Preliminary Examination shall consist of two papers of objective type (multiple choice)

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia