ಬೆಂಗಳೂರು ನ್ಯಾಕ್: ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Posted By:

ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಷನ್ ಕೌನ್ಸಿಲ್ (NAAC)ನಲ್ಲಿ ಖಾಲಿಯಿರುವ ವಿವಿಧ 24 ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಗ್ರೂಪ್ ಎ, ಗ್ರೂಪ್ ಬಿ ಮತ್ತು ಗ್ರೂಪ್ ಸಿ ಸೇರಿದಂತೆ ಸ್ನಾತಕೋತ್ತರ ಪದವಿ, ಪದವಿ ಮತ್ತ ಹನ್ನೆರಡನೇ ತರಗತಿ ಓದಿರುವವರಿಗೆ ನ್ಯಾಕ್ ನಲ್ಲಿ ಉದ್ಯೋಗಾವಕಾವಿದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಮೇ 23 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಬೆಂಗಳೂರು ನ್ಯಾಕ್ ನೇಮಕಾತಿ

ಹುದ್ದೆಗಳ ವಿವರ

ಅಸಿಸ್ಟೆಂಟ್ ಅಡ್ವೈಸರ್ (ಗ್ರೂಪ್ ಎ) - 10 ಹುದ್ದೆಗಳು

ವೇತನ ಶ್ರೇಣಿ: 15600 -39100 +6000(ಎಜಿಪಿ)(ಪಿಬಿ-3)
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಐದು ವರ್ಷಗಳ ಸೇವಾ ಅನುಭವ ಅಥವಾ ಪಿಹೆಚ್.ಡಿ ಹೊಂದಿರಬೇಕು
ವಯೋಮಿತಿ: 35 ವರ್ಷ

ಸಿಸ್ಟಂ ಅನಾಲಿಸ್ಟ್ (ಗ್ರೂಪ್ ಎ)-1 ಹುದ್ದೆ

ವೇತನ ಶ್ರೇಣಿ: 15600 -39100 +5400(ಜಿಪಿ)(ಪಿಬಿ-3)
ವಿದ್ಯಾರ್ಹತೆ: ಎಂಸಿಎ/ಬಿ.ಟೆಕ್/ಬಿ.ಇ ಪದವಿಯನ್ನು ಕನಿಷ್ಟ ಶೇ.೫೫ ಅಂಕಗಳೊಂದಿಗೆ ಪಡೆದಿರಬೇಕು. ಹಾಗೂ ಈ ಹುದ್ದೆಗೆ ಸಂಬಂಧಿಸಿದ ಹಾಗೆ ಐದು ವರ್ಷಗಳ ಅನುಭವವಿರಬೇಕು.
ವಯೋಮಿತಿ: 35 ವರ್ಷ

ಅಸಿಸ್ಟೆಂಟ್ ಲೈಬ್ರರಿಯನ್ (ಗ್ರೂಪ್-ಬಿ)-1 ಹುದ್ದೆ

ವೇತನ ಶ್ರೇಣಿ: 9300 -34800 +4200(ಜಿಪಿ)(ಪಿಬಿ-2)
ವಿದ್ಯಾರ್ಹತೆ: ಲೈಬ್ರರಿ ಸೈನ್ಸ್ ಅಥವಾ ಇನ್ಫರ್ಮೇಷನ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸೇವಾ ಅನುಭವ ಮತ್ತು ಪಿಹೆಚ್.ಡಿ ಗಳಿಸಿರುವವರಿಗೆ ಆದ್ಯತೆ.
ವಯೋಮಿತಿ: 35 ವರ್ಷ

ಅಸಿಸ್ಟೆಂಟ್ (ಪಬ್ಲಿಕೇಷನ್)(ಗ್ರೂಪ್-ಬಿ)-1 ಹುದ್ದೆ

ವೇತನ ಶ್ರೇಣಿ: 9300 -34800 +4200(ಜಿಪಿ)(ಪಿಬಿ-2)
ವಿದ್ಯಾರ್ಹತೆ: ಹಿಂದಿ ಅಥವಾ ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಮುದ್ರಣ ಕ್ಷೇತ್ರದಲ್ಲಿ ಮೂರು ವರ್ಷಗಳ ಸೇವಾ ಅನುಭವ ಹೊಂದಿರಬೇಕು. ಹಿಂದಿ ಮತ್ತು ಇಂಗ್ಲಿಷ್ ಭಾಷೆ ಮೇಲೆ ಹಿಡಿತ ಹೊಂದಿದ್ದು, ಡಿಟಿಪಿ ಅಥವಾ ಪ್ರಿಂಟಿಂಗ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಮಾಡಿದವರಿಗೆ ಆದ್ಯತೆ.
ವಯೋಮಿತಿ: 30 ವರ್ಷ

ಇದನ್ನು ಗಮನಿಸಿ: ಬೆಂಗಳೂರಿನ ಆಧಾರ್ ಕೇಂದ್ರದಲ್ಲಿ ಉದ್ಯೋಗಾವಕಾಶ

ಜೂನಿಯರ್ ಸೆಮಿ ಪ್ರೊಫೆಷನಲ್ ಅಸಿಸ್ಟೆಂಟ್ (ಗ್ರೂಪ್-ಸಿ)-7 ಹುದ್ದೆ

ವೇತನ ಶ್ರೇಣಿ: 5200 -20200 +1900(ಜಿಪಿ)(ಪಿಬಿ-1)
ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿಯೊಂದಿಗೆ ಒಂದು ವರ್ಷದ ಸೇವಾ ಅನುಭವ ಹೊಂದಿರಬೇಕು
ವಯೋಮಿತಿ: 25 ವರ್ಷ

ಟೆಕ್ನಿಕಲ್ ಅಸಿಸ್ಟೆಂಟ್-1 ಹುದ್ದೆ

ವೇತನ ಶ್ರೇಣಿ: 5200 -20200 +1900(ಜಿಪಿ)(ಪಿಬಿ-1)
ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ ಅಥವಾ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಷಯದಲ್ಲಿ ಡಿಪ್ಲೊಮಾ ಗಳಿಸಿರಬೇಕು. ಮೂರು ವರ್ಷದ ಸೇವಾ ಅನುಭವವಿದ್ದವರಿಗೆ ಆದ್ಯತೆ.
ವಯೋಮಿತಿ: 25 ವರ್ಷ

ಲೈಬ್ರರಿ ಅಸಿಸ್ಟೆಂಟ್-2 ಹುದ್ದೆ

ವೇತನ ಶ್ರೇಣಿ: 5200 -20200 +1900(ಜಿಪಿ)(ಪಿಬಿ-1)
ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿಯೊಂದಿಗೆ ಲೈಬ್ರರಿ/ಅಕೌಂಟ್ಸ್/ಡಾಟಾ ಎಂಟ್ರಿಯಲ್ಲಿ ಒಂದು ವರ್ಷದ ಸೇವಾ ಅನುಭವ ಹೊಂದಿರಬೇಕು
ವಯೋಮಿತಿ: 25 ವರ್ಷ

ಡ್ರೈವರ್-1 ಹುದ್ದೆ

ವೇತನ ಶ್ರೇಣಿ: 5200 -20200 +1900(ಜಿಪಿ)(ಪಿಬಿ-1)
ವಿದ್ಯಾರ್ಹತೆ: 10+2 ಮತ್ತು ನಾಲ್ಕು ಚಕ್ರದ ಮೋಟಾರ್ ವಾಹನದ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು
ವಯೋಮಿತಿ: 25 ವರ್ಷ

ಅರ್ಜಿ ಸಲ್ಲಿಕೆ

ನ್ಯಾಕ್ ಅಧಿಕೃತ ವೆಬ್ಶೈಟ್ ಮೂಲಕ ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಪ್ರಮುಖ ದಿನಾಂಕ

23-05-2017 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.
24-05-2017 ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ www.naac.gov.in ಗಮನಿಸಿ

English summary
An employment notification has been released by the National Assessment and Accreditation Council (NAAC),

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia