ಸಿಐಎಸ್ಎಫ್ 378 ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ

Posted By:

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಭಾರತದಾದ್ಯಂತ ಖಾಲಿ ಇರುವ 378 ಕಾನ್ಸ್ ಟೇಬಲ್ (Tradesman) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತರು ನಿಗದಿತ ದಿನಾಂಕ ನವೆಂಬರ್ 20,2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಸಿಐಎಸ್ಎಫ್ ನೇಮಕಾತಿ

ಬಾರ್ಬರ್, ಬೂಟ್ ಮೇಕರ್, ಕುಕ್, ಕಾರ್ಪೆಂಟರ್ ಸೇರಿದಂತೆ ಹಲವು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು, ಮೆಟ್ರಿಕ್ಯುಲೇಷನ್ (ಎಸ್ ಎಸ್ ಎಲ್ ಸಿ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಇದನ್ನು ಗಮನಿಸಿ: ವಾಕ್ ಇನ್ ಇಂಟರ್ವ್ಯೂ ಮೂಲಕ ರೆಪ್ರೆಸೆಂಟೇಟಿವ್ ಹುದ್ದೆಗಳ ನೇಮಕಾತಿ

ವೇತನ ಶ್ರೇಣಿ: 21700 ರಿಂದ 69100 ತಿಂಗಳಿಗೆ.

ವಯೋಮಿತಿ: 1st August 2017ಕ್ಕೆ ಅನ್ವಯವಾಗುಂತೆ 18ರಿಂದ 23 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

ಹುದ್ದೆಗಳ ವಿವರ

ಹುದ್ದೆ ಹೆಸರುಹುದ್ದೆ ಸಂಖ್ಯೆ
ಕಾನ್ಸ್ ಟೇಬಲ್/ಬಾರ್ಬರ್37
ಕಾನ್ಸ್ ಟೇಬಲ್/ಬೂಟ್ ಮೇಕರ್
8
ಕಾನ್ಸ್ ಟೇಬಲ್/ಕುಕ್
185
ಕಾನ್ಸ್ ಟೇಬಲ್ /ಕಾರ್ಪೆಂಟರ್8
ಕಾನ್ಸ್ ಟೇಬಲ್/ ಎಲೆಕ್ಟ್ರಿಷಿಯನ್3
ಕಾನ್ಸ್ ಟೇಬಲ್/ ಮೇಸನ್2
ಕಾನ್ಸ್ ಟೇಬಲ್/ ಮಾಲಿ4
ಕಾನ್ಸ್ ಟೇಬಲ್/ ಪೇಂಟರ್4
ಕಾನ್ಸ್ ಟೇಬಲ್/ಪ್ಲಂಬರ್2
ಕಾನ್ಸ್ ಟೇಬಲ್/ ಸ್ವೀಪರ್
94
ಕಾನ್ಸ್ ಟೇಬಲ್/ ವಾಷರ್ಮನ್31
ಒಟ್ಟು
378

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ (ಎಸ್ ಎಸ್ ಎಲ್ ಸಿ) ತೇರ್ಗಡೆಯಾಗಿರಬೇಕು.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮೂಲಕ ಈ ಕಾನ್ಸ್ ಟೇಬಲ್ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಪರೀಕ್ಷಾ ವಿಧಾನ

ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ಲಿಖಿತ ಪರೀಕ್ಷೆಯು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಇರುತ್ತದೆ. ನೂರು ಅಂಕಗಳ ಈ ಪರೀಕ್ಷೆಯಲ್ಲಿ ನೂರು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಯು ಬಹು ಆಯ್ಕೆ ಮಾದರಿಯದಾಗಿದ್ದು, ಅಭ್ಯರ್ಥಿಗಳು ಒಎಂಆರ್ ಪತ್ರಿಕೆಯಲ್ಲಿ ಉತ್ತರಿಸಬೇಕು.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.100/-
ಎಸ್.ಸಿ/ಎಸ್.ಟಿ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20/11/2017
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 22/11/2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Central Industrial Security Force released new notification for the recruitment of total 378 (Three hundred and Seventy Eight) jobs for Constable (Tradesman)

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia