ಹಂಪಿ ವಿಶ್ವವಿದ್ಯಾಲಯ ಬೋಧಕೇತರ ಹುದ್ದೆಗಳ ನೇಮಕಾತಿ

Posted By:

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ವೃಂದದಲ್ಲಿ ಖಾಲಿಯಿರುವ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಸ್ಥಳೀಯ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು ಆರು ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ನಿಗದಿತ ಅರ್ಜಿ ನಮೈನೆಯಲ್ಲಿ (ಎಂಟು ಸೆಟ್)ಗಳಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಬೋಧಕೇತರ ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ

ಸಹಾಯಕ ಗ್ರಂಥಪಾಲಕ:01 ಹುದ್ದೆ

ವೇತನ ಶ್ರೇಣಿ: ರೂ.15600-39100+ಎಜಿಪಿ 6000
ಅರ್ಹತೆ: ಯುಜಿಸಿ ನಿಗದಿಪಡಿಸಿದ ಅರ್ಹತೆಗಳು ಹಾಗೂ ಕಾಲ ಕಾಲಕ್ಕೆ ಸರ್ಕಾರ ಮತ್ತು ವಿಶ್ವವಿದ್ಯಾಲಯ ಸೂಚಿಸುವ ನಿಯಮಗಳು ಅನ್ವಯಿಸುತ್ತವೆ.

ಸಹಾಯಕ ತೋಟಗಾರಿಕೆ ಅಧಿಕಾರಿ: 01 ಹುದ್ದೆ

ವೇತನ ಶ್ರೇಣಿ: ರೂ.16000-29600
ಅರ್ಹತೆ: ಬಿಎಸ್ಸಿ ತೋಟಗಾರಿಕೆ ಪದವೀಧರರಾಗಿರಬೇಕು. ಶೇ 50 ಅಂಕಗಳಲ್ಲಿ ಉತ್ತೀರ್ಣರಾಗಿರಬೇಕು. ಮನ್ನಣೆ ಪಡೆದ ತೋಟಗಾರಿಕೆ ಸಂಸ್ಥೆಯಲ್ಲಿ 2 ವರ್ಷಗಳ ಅನುಭವ ಇರಬೇಕು. ಕನ್ನಡ ಭಾಷೆ ಹಾಗೂ ಕಂಪ್ಯೂಟರ್ ಜ್ಞಾನ ಬಲ್ಲವರಾಗಿರಬೇಕು.

ಶೀಘ್ರ ಲಿಪಿಗಾರರು: 02 ಹುದ್ದೆಗಳು

ವೇತನ ಶ್ರೇಣಿ: ರೂ.16000-29600
ಅರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶೀಘ್ರ ಲಿಪಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಕಂಪ್ಯೂಟರ್ ಜ್ಞಾನ ಅವಶ್ಯ. ಕನ್ನಡ ಭಾಷೆಯ ಜ್ಞಾನ ಇರಬೇಕು.

ಗ್ರಂಥಾಲಯ ಸಹಾಯಕ:02 ಹುದ್ದೆಗಳು

ವೇತನ ಶ್ರೇಣಿ: ರೂ.16000-29600
ಅರ್ಹತೆ: ಅಂಗೀಕೃ ವಿಶ್ವವಿದ್ಯಾಲಯದಿಂದ ಬಿ.ಲಿಬ್ ಪದವೀಧರರಾಗಿರಬೇಕು. ಶೇ 50 ಅಂಕಗಳಲ್ಲಿ ಉತ್ತೀರ್ಣರಾಗಿರಬೇಕು. ಗ್ರಂಥಾಲಯದಲ್ಲಿ ಮೂರು ವರ್ಷಗಳ ಅನುಭವ ಇರಬೇಕು. . ಕನ್ನಡ ಭಾಷೆ ಹಾಗೂ ಕಂಪ್ಯೂಟರ್ ಜ್ಞಾನ ಬಲ್ಲವರಾಗಿರಬೇಕು.

ಇದನ್ನು ಗಮನಿಸಿ: ಹಂಪಿ ವಿಶ್ವವಿದ್ಯಾಲಯ ಬೋಧಕ ಹುದ್ದೆಗಳ ನೇಮಕಾತಿ

ಅರ್ಜಿ ಸಲ್ಲಿಕೆ

ಅರ್ಜಿ ನಮೂನೆಯನ್ನು ವೆಬ್ಸೈಟ್ ವಿಳಾಸದಿಂದ ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ ದಿನಾಂಕ 10-11-2017 ರ ಸಂಜೆ 5-30 ರ ಒಳಗಾಗಿ ಕುಲಸಚಿವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ. ವಿದ್ಯಾರಣ್ಯ-583276 ರವರಿಗೆ ಖುದ್ದಾಗಿ ಅಥವಾ ಪೋಸ್ಟ್ ಮೂಲಕ ಸಲ್ಲಿಸುವುದು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.500/-
  • ಪ.ಜಾ/ಪ.ಪಂ/ಪ್ರ-1ರ ಅಭ್ಯರ್ಥಿಗಳಿಗೆ ರೂ.250/-

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Hampi Kannada University invites applications from eligible candidates for non teaching posts recruitment.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia