ಐಟಿಐ ಆದವರಿಗೆ ಕೈಗಾದಲ್ಲಿ ಅಪ್ರೆಂಟಿಸ್ಶಿಪ್

Posted By:

ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿರುವ ಭಾರತದ ಅಣು ವಿದ್ಯುತ್‌ ನಿಗಮದಲ್ಲಿ (ಎನ್‌ಪಿಸಿಐಎಲ್‌) ಟ್ರೇಡ್‌ ಅಪ್ರೆಂಟಿಸ್‌ಗಳ ನೇಮಕ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿವಿಧ ಟ್ರೇಡ್‌ಗಳಲ್ಲಿ ಐಟಿಐ ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಒಟ್ಟು 80 ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಅಪ್ರೆಂಟಿಸ್ಶಿಪ್ ವಿವರ

ಫಿಟ್ಟರ್‌-15, ಟರ್ನರ್‌-5, ಮೆಷಿನಿಸ್ಟ್‌-5, ಎಲೆಕ್ಟ್ರಿಷಿಯನ್‌-20, ವೆಲ್ಡರ್‌ (ಗ್ಯಾಸ್‌ ಮತ್ತು ಎಲೆಕ್ಟ್ರಿಕ್‌, ಸ್ಟ್ರಕ್ಚರಲ್‌ ವೆಲ್ಡರ್‌ ಮತ್ತು ಗ್ಯಾಸ್‌ ಕಟ್ಟರ್‌)-10, ಇನ್‌ಸ್ಟ್ರುಮೆಂಟ್‌ ಮೆಕ್ಯಾನಿಕ್ಸ್‌-15 ಮತ್ತು ಎಲೆಕ್ಟ್ರಾನಿಕ್‌ ಮೆಕ್ಯಾನಿಕ್‌-10

ಕೈಗಾದಲ್ಲಿ ಅಪ್ರೆಂಟಿಸ್ಶಿಪ್

ವಿದ್ಯಾರ್ಹತೆ

ಫಿಟ್ಟರ್‌/ಟರ್ನರ್‌/ ಮೆಷಿನಿಸ್ಟ್‌/ಎಲೆಕ್ಟ್ರಿಷಿಯನ್‌/ವೆಲ್ಡರ್‌/ಇನ್‌ಸ್ಟ್ರುಮೆಂಟ್‌ ಮೆಕ್ಯಾನಿಕ್‌/ ಎಲೆಕ್ಟ್ರಾನಿಕ್ಸ್‌ ಮೆಕ್ಯಾನಿಕ್‌ ವಿಷಯಗಳಲ್ಲಿ ಐಟಿಐ ಸರ್ಟಿಫಿಕೇಟ್‌ ಪಡೆದವರು ಅರ್ಜಿ ಸಲ್ಲಿಸಬಹುದು.

ಈಗಾಗಲೇ ಭಾರತ ಸರಕಾರದ ಅಪ್ರೆಂಟಿಸ್‌ ಕಾಯಿದೆಯನ್ವಯ ಕೇಂದ್ರ/ರಾಜ್ಯ ಸರಕಾರದ ಅಥವಾ ಸಾರ್ವಜನಿಕ ಸ್ವಾಮ್ಯದ ಅಥವಾ ಯಾವುದೇ ಖಾಸಗಿ ಸಂಸ್ಥೆಯಲ್ಲಿ ಅಪ್ರೆಂಟಿಸ್‌ ಆಗಿ ತರಬೇತಿ ಪಡೆದವರು ಕೈಗಾದ ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಇದನ್ನು ಗಮನಿಸಿ: ಕರ್ನಾಟಕ ವಿದ್ಯುತ್ ನಿಗಮದಲ್ಲಿ ಅಪ್ರೆಂಟಿಸ್ ಶಿಪ್ ತರಬೇತಿ

ವಯೋಮಿತಿ

ಕನಿಷ್ಠ 16 ವರ್ಷ ಮತ್ತು ಗರಿಷ್ಠ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯನ್ನು ಜುಲೈ 31, 2017ಕ್ಕೆ ಲೆಕ್ಕ ಹಾಕಲಾಗುತ್ತದೆ. ಸರಕಾರದ ನಿಯಮದಂತೆ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ದೈಹಿಕ ಅರ್ಹತೆ

ಎತ್ತರ- 137 ಸೆಂ.ಮೀ. ಮತ್ತು ಇದಕ್ಕಿಂತ ಹೆಚ್ಚಿರಬೇಕು. ತೂಕ- 25.4 ಕೆ.ಜಿ. ಮತ್ತು ಹೆಚ್ಚಿರಬೇಕು. ಎದೆಯ ಸುತ್ತಳತೆ- 3.8 ಸೆಂ.ಮೀ.ಗಿಂತ ಕಡಿಮೆ ಇಲ್ಲದಂತೆ ಎದೆಯನ್ನು ವಿಸ್ತರಿಸಲು ಸಾಧ್ಯವಿರಬೇಕು. ಅಭ್ಯರ್ಥಿಗಳು ಕಣ್ಣು ಅಥವಾ ರೆಪ್ಪಗೆ ಸಂಬಂಧಪಟ್ಟಂತೆ ಯಾವುದೇ ಅಸ್ವಸ್ಥತತೆ ಹೊಂದಿರಬಾರದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-08-2017

ಆಯ್ಕೆ ಪ್ರಕ್ರಿಯೆ

ಐಟಿಐ ಕೋರ್ಸ್‌ನಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ. ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಅರೆಕೌಶಲ ಉದ್ಯೋಗಿಗಳಿಗೆ ಸರಕಾರ ನಿಗದಿಪಡಿಸಿದ ಕನಿಷ್ಠ ವೇತನದ ಶೇಕಡ 90(2 ವರ್ಷದ ಕೋರ್ಸ್‌ಗೆ) ಮತ್ತು ಶೇಕಡ 80 (1 ವರ್ಷದ ಕೋರ್ಸ್‌)ಗೆ ಸ್ಟೈಫೆಂಡ್‌ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ www.apprenticeship.gov.in ವೆಬ್‌ಸೈಟ್‌ನಲ್ಲಿ ಸಂಬಂಧಪಟ್ಟ ದಾಖಲೆಪತ್ರಗಳ ಜೊತೆಗೆ ಅರ್ಜಿ ಸಲ್ಲಿಸಬೇಕು.

ಆನ್‌ಲೈನ್‌ ಅರ್ಜಿ ಸಲ್ಲಿಕೆಯಲ್ಲಿ ತೊಂದರೆ ಕಂಡುಬಂದರೆ ಎನ್‌ಪಿಸಿಐಎಲ್‌ ವೆಬ್‌ಸೈಟ್‌ www.npcil.nic.in ನಿಂದ ಕರಿಯರ್‌ ವಿಭಾಗದಲ್ಲಿ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಿಕೊಂಡು ಸಂಬಂಧಪಟ್ಟ ದಾಖಲೆಪತ್ರಗಳ ಜೊತೆಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಳಾಸ

ಮ್ಯಾನೇಜರ್‌ (ಎಚ್‌ಆರ್‌ಎಂ), ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌, ಕೈಗಾ ಸೈಟ್‌, ವಿಯಾ ಕಾರಾವರ, ಕೈಗಾ ಅಂಚೆ, ಉತ್ತರ ಕನ್ನಡ ಜಿಲ್ಲೆ- 581400, ಕರ್ನಾಟಕ.

English summary
Kaiga invites applications from iti candidates for apprenticeship. Total 80 vacancies are there in kaiga, interested candidates can apply before Aug 24.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia