ಕೆಪಿಎಸ್ಸಿ: ಹೆಚ್ಚುವರಿ 454 ಎಫ್ ಡಿ ಎ, 300 ಎಸ್ ಡಿ ಎ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೆಪಿಎಸ್ಸಿ ಹೊಸದಾಗಿ 398+56 (ಹೈ.ಕ) ಪ್ರಥಮ ದರ್ಜೆ ಸಹಾಯಕರ ಹುದ್ದೆಗಳು ಮತ್ತು 262+38 (ಹೈ.ಕ) ದ್ವಿತೀಯ ದರ್ಜೆ ಸಹಾಯಕರ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕೆಪಿಎಸ್ಸಿ ಹೊಸದಾಗಿ 398+56 (ಹೈ.ಕ) ಪ್ರಥಮ ದರ್ಜೆ ಸಹಾಯಕರ ಹುದ್ದೆಗಳು ಮತ್ತು 262+38 (ಹೈ.ಕ) ದ್ವಿತೀಯ ದರ್ಜೆ ಸಹಾಯಕರ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 12 ಕೊನೆಯ ದಿನವಾಗಿರುತ್ತದೆ.

ಕೆಪಿಎಸ್ಸಿ ಅರ್ಜಿ ಆಹ್ವಾನ

ಹುದ್ದೆಗಳ ವಿವರ

ಪ್ರಥಮ ದರ್ಜೆ ಸಹಾಯಕರು 398+56 (ಹೈ.ಕ)
ಒಟ್ಟು ಹುದ್ದೆ 454
ವೇತನ ಶ್ರೇಣಿ : ರೂ. 14550-26700/-

ದ್ವಿತೀಯ ದರ್ಜೆ ಸಹಾಯಕರು 262+38
ಒಟ್ಟು ಹುದ್ದೆ 300
ವೇತನ ಶ್ರೇಣಿ: ರೂ.1600-21000

ಶೈಕ್ಷಣಿಕ ವಿದ್ಯಾರ್ಹತೆ

ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ

ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಅಂಗೀಕರಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಕೆಪಿಎಸ್ಸಿ: ಎಫ್ ಡಿ ಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಹೇಗಿರುತ್ತೆ ಗೊತ್ತಾ?ಕೆಪಿಎಸ್ಸಿ: ಎಫ್ ಡಿ ಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಹೇಗಿರುತ್ತೆ ಗೊತ್ತಾ?

ಟಿಪ್ಪಣಿ: ಡಿಪ್ಲೊಮಾ, ಹಿಂದಿ ಸಭಾಗಳಿಂದ ಪಡೆದ ರತ್ನಾ, ವಿಶಾರದ, ಪಂಡಿತ್ ಇತ್ಯಾದಿ ವಿದ್ಯಾರ್ಹತೆಗಳನ್ನು ಪದವಿಗೆ ತತ್ಸಮಾನವೆಂದು KCS (Recruitment to the Ministerial Post) Rule 1978 ರ ನಿಯಮಗಳಲ್ಲಿ ಅಧಿಸೂಚಿಸಿರುವುದಿಲ್ಲವಾದ್ದರಿಂದ, ಇವು ಪದವಿಗೆ ಸಮಾನವಾಗುವುದಿಲ್ಲ. ಆದ್ದರಿಂದ ಈ ವಿದ್ಯಾರ್ಹತೆಯ ಅಭ್ಯರ್ಥಿಗಳು ಸದರಿ ಹುದ್ದೆಗೆ ಅರ್ಹರಾಗುವುದಿಲ್ಲ.

ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸುವ ಪದವಿ ಪೂರ್ವ ಪರೀಕ್ಷೆ ಅಥವಾ ತತ್ಸಮಾನ ವಿದ್ಯಾರ್ಹತೆಗಳಾದ ಐಟಿಐ ಮತ್ತು ಇತರೆ ಮೂರು ವರ್ಷದ ಡಿಪ್ಲೊಮೋ ಕೋರ್ಸ್.

ಕೆಪಿಎಸ್ಸಿ: ಎಸ್ ಡಿ ಎ ಪ್ರಶ್ನೆ ಪ್ರತ್ರಿಕೆ ಮತ್ತು ಪಠ್ಯಕ್ರಮಕೆಪಿಎಸ್ಸಿ: ಎಸ್ ಡಿ ಎ ಪ್ರಶ್ನೆ ಪ್ರತ್ರಿಕೆ ಮತ್ತು ಪಠ್ಯಕ್ರಮ

ಟಿಪ್ಪಣಿ: ಮುಕ್ತ ವಿಶ್ವವಿದ್ಯಾಲಯಗಳು ನಡೆಸುವ 10+2 ಪರೀಕ್ಷೆಯನ್ನು ಸದರಿ ಹುದ್ದೆಗೆ ನಿಗದಿತ ವಿದ್ಯಾರ್ಹತೆ ಎಂದು ಪರಿಗಣಿಸಲಾಗುವುದಿಲ್ಲ.

ಈ ಹಿಂದೆ 01-09-2017ರ ಅಧಿಸೂಚನೆಯಂತೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ.

ಕೌನ್ಸಿಲಿಂಗ್ ಮೂಲಕ ಇಲಾಖೆಗಳನ್ನು ಹಂಚಿಕೆ ಮಾಡಲಾಗುವುದರಿಂದ ಇಲಾಖಾ ಆದ್ಯತೆ ನೀಡುವ/ಬದಲಾಯಿಸುವ ಅವಶ್ಯಕತೆಯೂ ಇರುವುದಿಲ್ಲ.

ಇದನ್ನು ಗಮನಿಸಿ: ಎಫ್ ಡಿ ಎ, ಎಸ್ ಡಿ ಎ ಪರೀಕ್ಷೆ ಪಾಸ್ ಆಗಲು ಸುಲಭ ವಿಧಾನ

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 27-11-2017
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-12-2017
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ: 13-12-2017

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
KPSC FDA and SDA recruitment 2017, 754 additional posts added. Eligible candidates can apply before December 12.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X