ಕರ್ನಾಟಕ ಲೋಕಸೇವಾ ಆಯೋಗವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ 2017 ರ ನಿಯಮಗಳಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಒಟ್ಟು 1430 ಹಿರಿಯ ವೈದ್ಯಾಧಿಕಾರಿಗಳು/ತಜ್ಞರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಸೆಪ್ಟೆಂಬರ್ 11 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ, ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸತಕ್ಕದ್ದು.
ಇದನ್ನು ಗಮನಿಸಿ: ಬ್ಯಾಂಕ್ ಆಫ್ ಮಹಾರಾಷ್ಟ್ರ: ಮ್ಯಾನೇಜರ್ ಹುದ್ದೆಗಳ ನೇಮಕಾತಿ
ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಬಹುದಾಗಿದ್ದು, ಬೇರೆ ಯಾವುದೇ ರೀತಿಯಿಂದಲೂ ಸಲ್ಲಿಸಲು ಅವಾಶವಿರುವುದಿಲ್ಲ.
ಹುದ್ದೆಗಳ ವಿವರ
| ಹುದ್ದೆಯ ಹೆಸರು | ವೇತನ | ಹುದ್ದೆಸಂಖ್ಯೆ |
| ಹಿರಿಯ ವೈದ್ಯಧಿಕಾರಿ/ತಜ್ಞರು(ಜನರಲ್ ಮೆಡಿಸಿನ್) | 51300 | 257 |
| ಹಿರಿಯ ವೈದ್ಯಧಿಕಾರಿ/ತಜ್ಞರು(ಜನರಲ್ ಸರ್ಜರಿ) | 51300 | 101 |
| ಹಿರಿಯ ವೈದ್ಯಧಿಕಾರಿ/ತಜ್ಞರು(ಪ್ರಸೂತಿ ಮತ್ತು ಸ್ತ್ರೀರೋಗ) | 51300 | 167 |
| ಹಿರಿಯ ವೈದ್ಯಧಿಕಾರಿ/ತಜ್ಞರು(ಕಿವಿ,ಮೂಗು,ಗಂಟಲು) | 51000 | 59 |
| ಹಿರಿಯ ವೈದ್ಯಧಿಕಾರಿ/ತಜ್ಞರು(ಚರ್ಮರೋಗ) | 51300 | 79 |
| ಹಿರಿಯ ವೈದ್ಯಧಿಕಾರಿ/ತಜ್ಞರು(ಅರವಳಿಕೆ) | 51300 | 99 |
| ಹಿರಿಯ ವೈದ್ಯಧಿಕಾರಿ/ತಜ್ಞರು(ಮಕ್ಕಳ ತಜ್ಞರು) | 51300 | 158 |
| ಹಿರಿಯ ವೈದ್ಯಧಿಕಾರಿ/ತಜ್ಞರು(ನೇತ್ರ) | 51300 | 80 |
| ಹಿರಿಯ ವೈದ್ಯಧಿಕಾರಿ/ತಜ್ಞರು(ಕೀಲು, ಮೂಳೆರೋಗ) | 51300 | 31 |
| ಹಿರಿಯ ವೈದ್ಯಧಿಕಾರಿ/ತಜ್ಞರು(ರೇಡಿಯಾಲಜಿಸ್ಟ್) | 51300 | 34 |
| ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು | 50100 | 365 |
| ಒಟ್ಟು ಹುದ್ದೆಗಳು | 1430 | |
ವಯೋಮಿತಿ
- ಕನಿಷ್ಠ 21 ವರ್ಷ ಮತ್ತು ಗರಿಷ್ಠ 42 ವರ್ಷಗಳು
- ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 45 ವಷರ್ಗಳು
- ಪ.ಜಾ/ಪ.ಪಂ/ಪ್ರವರ್ಗ-1 ರ ಅಭ್ಯರ್ಥಿಗಳಿಗೆ 47 ವಷರ್ಗಳು
ಅರ್ಜಿ ಶುಲ್ಕ
- ಸಾಮಾನ್ಯ ಅಭ್ಯರ್ಥಿಗಳಿಗೆ ರೂ.300/-
- ಒಬಿಸಿ ಅಭ್ಯರ್ಥಿಗಳಿಗೆ ರೂ.150/-
- ಎಸ್.ಸಿ/ಎಸ್.ಟಿ/ಪ್ರ-1/ಮಾಜಿ ಸೈನಿಕ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಪ್ರಮುಖ ದಿನಾಂಕಗಳು
- ಆನ್-ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10-08-2017
- ಆನ್-ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-09-2017
- ಶುಲ್ಕ ಪಾವತಿಸಲು ಕೊನೆಯ ದಿನಾಂಕ: 12-09-2017
ಹೆಚ್ಚಿನ ಮಾಹಿತಿಗಾಗಿ www.kpsc.kar.nic.in ಗಮನಿಸಿ
ಇದನ್ನು ಗಮನಿಸಿ: ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟಿಡ್ ನಲ್ಲಿ ನೇಮಕಾತಿ
For Quick Alerts
For Daily Alerts


Click it and Unblock the Notifications











