ಎನ್‌ಸಿಡಿಐಆರ್‌ ಸೈಂಟಿಸ್ಟ್ ಹುದ್ದೆಗೆ ನೇಮಕಾತಿ

Posted By:

ಬೆಂಗಳೂರಿನಲ್ಲಿರುವ ನ್ಯಾಷನಲ್‌ ಸೆಂಟರ್‌ ಫಾರ್‌ ಡಿಸೀಸ್‌ ಇನ್‌ಫಾರ್ಮೆಟಿಕ್ಸ್‌ ಆ್ಯಂಡ್‌ ರಿಸರ್ಚ್‌ನಲ್ಲಿ (ಎನ್‌ಸಿಡಿಐಆರ್‌) ಸೈಂಟಿಸ್ಟ್ -ಬಿ (ಬಯೋಸ್ಟಾಟಿಸ್ಟಿಕ್ಸ್/ಸ್ಟಾಟಿಸ್ಟಿಕ್ಸ್) ಹುದ್ದೆಯನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್: ಎಇಇ ನೇಮಕಾತಿ

ಹಿರಿಯ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಅವರಿಗೆ ಸಹಾಯಕರಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಬಯಸುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಸೈಂಟಿಸ್ಟ್‍-ಬಿ ಹುದ್ದೆ

ಒಂದು ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು, ಬಯೋ-ಸ್ಟಾಟಿಸ್ಟಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದವರು ಮತ್ತು ಸಂಬಂಧಪಟ್ಟ ಕ್ಷೇತ್ರದಲ್ಲಿ ಪಿಹೆಚ್.ಡಿ ಹೊಂದಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ

ಹುದ್ದೆ ಹೆಸರು: ಸೈಂಟಿಸ್ಟ್‍-ಬಿ (ಬಯೋಸ್ಟಾಟಿಸ್ಟಿಕ್ಸ್/ಸ್ಟಾಟಿಸ್ಟಿಕ್ಸ್)
ಹುದ್ದೆ ಸಂಖ್ಯೆ:01
ವೇತನ ಶ್ರೇಣಿ: ರೂ.15600-39100+5400/-

ಶೈಕ್ಷಣಿಕ ವಿದ್ಯಾರ್ಹತೆ

ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಬಯೋ-ಸ್ಟಾಟಿಸ್ಟಿಕ್ಸ್ ನಲ್ಲಿ ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು, ಅಥವಾ ಬಯೋ-ಸ್ಟಾಟಿಸ್ಟಿಕ್ಸ್ ನಲ್ಲಿ ದ್ವಿತೀಯ ದರ್ಜೆ ಸ್ನಾತಕೋತ್ತರ ಪದವಿಯೊಂದಿಗೆ ಪಿಹೆಚ್.ಡಿ ಹೊಂದಿರಬೇಕು.

ವಯೋಮಿತಿ ವಿವರ

ಗರಿಷ್ಠ ಮಯೋಮಿತಿ: 38 ವರ್ಷಗಳು (ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ)

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಕೆ

ಅರ್ಜಿಗಳು ಐಸಿಎಂಆರ್ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ, ಅಗತ್ಯ ದೃಢೀಕೃತ ದಾಖಲೆಗಳನ್ನು ಲಗತ್ತಿಸಿ ಕಛೇರಿ ವಿಳಾಸಕ್ಕೆ ಸಲ್ಲಿಸಲು ಸೂಚಿಸಲಾಗಿದೆ.

 

 

ಲಗತ್ತಿಸಬೇಕಾದ ದಾಖಲೆಗಳು

ಅರ್ಜಿಯೊಂದಿಗೆ ದೃಢೀಕರಿಸಿದ ಶೈಕ್ಷಣಿಕ ದಾಖಲೆಗಳು, ಜನನ ಪ್ರಮಾಣ ಪತ್ರ, ಸೇವಾ ಅನುಭವ ಪತ್ರ, ಗುರುತಿನ ಚೀಟಿ, ಅರ್ಜಿ ಶುಲ್ಕದ ಡಿ ಡಿ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Online Applications are invited upto 31st January 2018 for the one post of Scientist – B (Bio-Statistics / Statistics) at National Centre for DiseaseInformatics and Research, Bengaluru.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia