ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: 36 ಸಿಬ್ಬಂದಿಗಳ ನೇಮಕಾತಿ

Posted By:

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ, ಮಂಗಳೂರು, ಅರ್ಹ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳಿಗೆ ನಿಗದಿತ ನಮೂನೆಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.

ಅಕೌಂಟೆಂಟ್, ಕ್ಲರ್ಕ್ ಮತ್ತು ಅಟೆಂಡರ್ ಹುದ್ದೆ ಸೇರಿ ಒಟ್ಟು 36 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆಗಸ್ಟ್ 31 ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಇದನ್ನು ಗಮನಿಸಿ: ಎಚ್ಎಂಟಿ ಯಲ್ಲಿ 12 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ನೇಮಕಾತಿ

ಹುದ್ದೆಗಳ ವಿವರ

ಅಕೌಂಟೆಂಟ್-02 ಹುದ್ದೆಗಳು

ವಿದ್ಯಾರ್ಹತೆ: ಭಾರತದ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದ ಪದವಿಯಲ್ಲಿ ಶೇ.60 ಅಂಕಗಳು ಪಡೆದಿರಬೇಕು. ಮತ್ತು ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಕೋರ್ಸ್ ಮಾಡಿರಬೇಕು. ಸ್ನಾತಕೋತ್ತರ ಪದವೀಧರರಿಗೆ ಆದ್ಯತೆ ನೀಡಲಾಗುವುದು.

ಅಕೌಂಟೆಂಟ್ (ಐಟಿ)-01 ಹುದ್ದೆ

ವಿದ್ಯಾರ್ಹತೆ: ಭಾರತದ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಸ್ನಾತಕೋತ್ತರ ಪದವಿ (ಎಂಸಿಎ) ಯಲ್ಲಿ ಶೇ.60 ಅಂಕಗಳು ಪಡೆದಿರಬೇಕು. ಕಂಪ್ಯೂಟರ್ ಹಾರ್ಡ್ ವೇರ್/ನೆಟ್ವರ್ಕಿಂಗ್ ಮುಂತಾದ ಕಾರ್ಯಗಳನ್ನು ನಿರ್ವಹಿಸಿ, ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವವುಳ್ಳವರಿಗೆ ಆದ್ಯತೆ ನೀಡಲಾಗುವುದು.

ಅಕೌಂಟೆಂಟ್ (ಹೆಚ್ಆರ್)-01 ಹುದ್ದೆ

ವಿದ್ಯಾರ್ಹತೆ: ಭಾರತದ ಕಾನೂನಿನ ಮೂಲಕ ಸ್ಥಾಪನೆಯಾದ ವಿಶ್ವವಿದ್ಯಾನಿಲಯದಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂಎಚ್ಆರ್ಡಿ/ಎಂಬಿಎ) ಯಲ್ಲಿ ಶೇ.60 ಅಂಕಗಳು ಪಡೆದಿರಬೇಕು. ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಕೋರ್ಸ್ ಮಾಡಿರಬೇಕು. ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವವರಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು.

ಕ್ಲರ್ಕ್-22 ಹುದ್ದೆಗಳು

ವಿದ್ಯಾರ್ಹತೆ: ಭಾರತದ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿಯಲ್ಲಿ ಶೇ.60 ಅಂಕಗಳು ಪಡೆದಿರಬೇಕು. ಮತ್ತು ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಕೋರ್ಸ್ ಮಾಡಿರಬೇಕು.

ಅಟೆಂಡರ್-09 ಹುದ್ದೆಗಳು

ವಿದ್ಯಾರ್ಹತೆ: ಸರಕಾರದ ಪದವಿ ಪೂರ್ವ ಪರೀಕ್ಷೆ (ಪಿಯುಸಿ) ಯಲ್ಲಿ ಶೇ.50 ಅಂಕಗಳನ್ನು ಪಡೆದಿರಬೇಕು. ಮತ್ತು ಎಸ್ ಎಸ್ ಎಲ್ ಸಿ ತನಕದ ವಿದ್ಯಾಭ್ಯಾಸದಲ್ಲಿ ಕನ್ನಡ ಒಂದು ವಿಷಯವಾಗಿ ಓದಿರಬೇಕು. ಪದವೀಧರರಿಗೆ ಆಧ್ಯತೆ.

ವಯೋಮಿತಿ

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35
  • 2A, 2B, 3A, 3B ಅಭ್ಯರ್ಥಿಗಳಿಗೆ 18 ರಿಂದ 38
  • ಎಸ್ಸಿ ಮತ್ತು ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ

ಅರ್ಜಿ ಸಲ್ಲಿಕೆ

ಬ್ಯಾಂಕಿನ ಶಾಖೆಗಳಲ್ಲಿ ಅಭ್ಯರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಅರ್ಜಿಗಳನ್ನು ಪಡೆಯತಕ್ಕದ್ದು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.250/-
  • ಎಸ್ಸಿ ಮತ್ತು ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ ರೂ.100/-

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-08-2017

ಪ್ರಧಾನ ಕಛೇರಿಯ ವಿಳಾಸ

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ,
2 ನೇ ಮಹಡಿ, ಅಮೃತೋತ್ಸವ ಕಟ್ಟಡ, ಬಂಟ್ಸ್ ಹಾಸ್ಟೆಲ್ ವೃತ್ತ
ಮಂಗಳೂರು-575003

ಹೆಚ್ಚಿನ ಮಾಹಿತಿಗಾಗಿ www.ramakrishnacredit.com ಗಮನಿಸಿ

English summary
Sri Ramakrishna Credit Co-Op. Society Ltd, Mangalore invited applications from eligible candidates for 36 various posts.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia