ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಹೊರಬಿದಿದ್ದು, ಫಲಿತಾಂಶದ ಅಂಕಿ ಅಂಶದ ವಿವರ ಹೀಗಿದೆ.
ಏಪ್ರಿಲ್ 2017 ರ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ 30-03-2017 ರಿಂದ 12-04-2017 ರವರೆಗೆ ರಾಜ್ಯಾದ್ಯಂತ ಒಟ್ಟು 2770 ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಗಿತ್ತು.
ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯವನ್ನು ದಿನಾಂಕ 20-04-2017 ರಿಂದ ರಾಜ್ಯದ 225 ಮೌಲ್ಯಮಾಪನ ಕೇಂದ್ರಗಳಲ್ಲಿ ಒಟ್ಟು 68129 ಮಾಲ್ಯಮಾಪಕರುಗಳನ್ನು ನಿಯೋಜಿಸಿ ನಡೆಸಲಾಗಿದೆ. [ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಉಡುಪಿ ನಂಬರ್ ಒನ್]

ಮೌಲ್ಯಮಾಪನಕ್ಕೆ ನಿಯೋಜಿಸಿದ್ದ ಪರೀಕ್ಷಾ ಕೇಂದ್ರಗಳು
- ಬೆಂಗಳೂರು ವಿಭಾಗ: 71 ಕೇಂದ್ರಗಳು
- ಮೈಸೂರು ವಿಭಾಗ: 49 ಕೇಂದ್ರಗಳು
- ಬೆಳಗಾವಿ ವಿಭಾಗ: 63 ಕೇಂದ್ರಗಳು
- ಕಲಬುರಗಿ ವಿಭಾಗ: 42 ಕೇಂದ್ರಗಳು
ಹಾಜರಾತಿ ವಿವರ
| ವಿದ್ಯಾರ್ಥಿಗಳು-ಲಿಂಗವಾರು | ಹಾಜರಾತಿ | ತೇರ್ಗಡೆಯಾದವರು |
| ಬಾಲಕರು | 456147 | 284708 |
| ಬಾಲಕಿಯರು | 400139 | 296426 |
| ಒಟ್ಟು | 856286 | 581134 |
ರಾಜ್ಯದಲ್ಲಿ ವಿವಿಧ ಶ್ರೇಣಿಗಳಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ವಿವರ
| ಶ್ರೇಣಿ | ವಿದ್ಯಾರ್ಥಿಗಳ ಸಂಖ್ಯೆ |
| ಎ+ | 36138 |
| ಎ | 93332 |
| ಬಿ+ | 137098 |
| ಬಿ | 157693 |
| ಸಿ+ | 114879 |
| ಸಿ | 21299 |
ಇದನ್ನು ಗಮನಿಸಿ: ಶೇ.8 ರಷ್ಟು ಇಳಿಕೆ ಕಂಡ ಎಸ್ ಎಸ್ ಎಲ್ ಸಿ ಫಲಿತಾಂಶ
For Quick Alerts
For Daily Alerts


Click it and Unblock the Notifications











