ನೀಟ್ ಪರೀಕ್ಷೆ: 60 ರ ವಯಸ್ಸಿನಲ್ಲಿ ಎಂಬಿಬಿಎಸ್ ಮಾಡುವಾಸೆ

40-60ರ ಆಸುಪಾಸಿನ 100ಕ್ಕೂ ಹೆಚ್ಚು ಅಭ್ಯರ್ಥಿಗಳು 2016ರ ನೀಟ್ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಹೊರಬಂದ ಮೇಲೆ 25ರ ವಯೋಮಿತಿ ಮೀರಿದ 20,000ಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್ ಪರೀಕ್ಷೆ ಬರೆಯಲಿದ್ದಾರೆ.

ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ ಎನ್ನುವ ಮಾತಿಗೆ ಈ ಬಾರಿಯ ನೀಟ್ ಪರೀಕ್ಷೆ ಸಾಕ್ಷಿಯಾಗಿದೆ.

ಕೆಲದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ನೀಟ್ ಪರೀಕ್ಷೆಗೆ ವಯಸ್ಸಿನ ಮಿತಿಯಿಲ್ಲ ಎಂಬ ತೀರ್ಪು ನೀಡಿತ್ತು. ತೀರ್ಪಿನ ನಂತರ ನೀಟ್ ಪರೀಕ್ಷೆ ನೋಂದಾವಣಿಯಲ್ಲಿ ಅಚ್ಚರಿಯ ಬೆಳವಣಿಗೆ ಕಂಡು ಬಂದಿದೆ.

25 ವರ್ಷ ಮೀರಿದ 20 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು

ನೀಟ್ ಪರೀಕ್ಷೆ ಬರೆಯುವುದಕ್ಕೆ ಇರುವ ವಯೋಮಿತಿ 25 ವರ್ಷ ಎಂದಿತ್ತಾದರೂ, ಇದನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್ ತೆರವುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ 60-70ರ ಆಸುಪಾಸಿನ ಅಭ್ಯರ್ಥಿಗಳು ಎಂಬಿಬಿಎಸ್ ಹಾಗೂ ಬಿಡಿಎಸ್ ಪ್ರವೇಶಾತಿ ಪರೀಕ್ಷೆ(ನೀಟ್)ಗೆ ನೋಂದಾಯಿಸಿಕೊಂಡಿದ್ದಾರೆ.

60 ರ ವಯಸ್ಸಿನಲ್ಲಿ ಎಂಬಿಬಿಎಸ್ ಗೆ ಮಾಡುವಾಸೆ

40-60ರ ಆಸುಪಾಸಿನ 100ಕ್ಕೂ ಹೆಚ್ಚು ಅಭ್ಯರ್ಥಿಗಳು 2016ರ ನೀಟ್ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಹೊರಬಂದ ಮೇಲೆ 25ರ ವಯೋಮಿತಿ ಮೀರಿದ 20,000ಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್ ಪರೀಕ್ಷೆ ಬರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಗಮನಿಸಿ: 25 ವರ್ಷ ಮೇಲ್ಪಟ್ಟವರು ಪರೀಕ್ಷೆ ಬರೆಯಬಹುದು

ಅಮೆರಿಕದಲ್ಲಿ ಎಂ,ಎಸ್ ಮುಗಿಸಿರುವ 31 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ನೀಟ್ ಪರೀಕ್ಷೆಗೆ ನೋಂದಾಯಿಸಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರೆಯಬೇಕು ಎನ್ನುವ ಅಸೆ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಕಾಲೇಜಿನಲ್ಲಿ ಎನ್ ಆರ್ ಐ ಸೀಟ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಇನ್ನು ಅರ್ಧಕ್ಕೆ ಓದು ನಿಲ್ಲಿಸಿದ ಅನೇಕ ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದು ಕಾನ್ಪುರದ ಅಂದ್ಲೀಬ್ ಬೇಗ್ ಕೂಡ ಈ ಪಟ್ಟಿಗೆ ಸೇರಿದ್ದಾರೆ. 29 ವರ್ಷದ ಅಂದ್ಲೀಬ್ ಬೇಗ್ ಮೆಡಿಕಲ್ ಸೀಟ್ ದೊರೆತಿದ್ದರೂ ದುಬಾರಿ ಶುಲ್ಕದಿಂದಾಗಿ ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಗಿರಲಿಲ್ಲ, ಆದರೆ ಈಗ ನೀಟ್ ಪರೀಕ್ಷೆ ಮೂಲಕ ಮತ್ತೆ ವೈದ್ಯಕೀಯ ಶಿಕ್ಷಣದತ್ತ ಮುಖಮಾಡಿದ್ದಾರೆ.

ಮೂವತ್ತಕ್ಕೂ ಮೇಲ್ಪಟ್ಟ ವಯಸ್ಸಿನ ಸಾವಿರಾರು ಅಭ್ಯರ್ಥಿಗಳು ಈ ಸಲ ಪರೀಕ್ಷೆ ಬರೆಯುತ್ತಿದ್ದಾರೆ. ಅವರು ತಮ್ಮ ಹಾಲಿ ವೃತ್ತಿಯಲ್ಲಿ ಆಸಕ್ತಿ ಕಳೆದುಕೊಂಡಿರುವುದೂ ಇದಕ್ಕೆ ಕಾರಣ ಎಂದು ಮಹಾರಾಷ್ಟ್ರ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಕೆ.ಡಿ.ಚವಾಣ್ ಹೇಳುತ್ತಾರೆ.

ವಯಸ್ಸು ಕೇವಲ ಸಂಖ್ಯೆಯಷ್ಟೇ, ಆದರೆ ಇಳಿವಯಸ್ಸಿನಲ್ಲೂ ವೈದ್ಯಕೀಯ ಪದವಿ ಪಡೆಯುವ ಆಸೆ ಅನೇಕರಲ್ಲಿದೆ ಎನ್ನುವುದಕ್ಕೆ ನೀಟ್ ಪರೀಕ್ಷೆಗೆ ನೋಂದಾಯಿಸಿಕೊಂಡವರ ಸಂಖ್ಯೆಯೇ ಸಾಕ್ಷಿ. ಈ ಬೆಳವಣಿಗೆ ಓದಿನ ಮೇಲಿರುವ ಆಸಕ್ತಿಯನ್ನು ತೋರಿಸುವುದಲ್ಲದೇ ಅಚ್ಚರಿಯನ್ನೂ ಉಂಟು ಮಾಡುತ್ತದೆ.

ಇದನ್ನು ಗಮನಿಸಿ:ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ದುಬಾರಿ

For Quick Alerts
ALLOW NOTIFICATIONS  
For Daily Alerts

English summary
For many undergraduate medical degree aspirants, age just seems to be a number. Two persons in the 61-70 bracket registered for the NEET exam for admission to MBBS and BDS
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X