ಯುಜಿಸಿ ಮಾನ್ಯತೆಯಿಂದ ಹೊರಗುಳಿದ ಬೆಂಗಳೂರು ವಿವಿಯ ಶೇ.80 ಕಾಲೇಜುಗಳು

Posted By:

ಬೆಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಮಾನ್ಯತೆ ಪಡೆದಿರುವ ಶೇ 80ರಷ್ಟು ಕಾಲೇಜುಗಳು ಯುಜಿಸಿ ಮಾನ್ಯತೆಯಿಂದ ಹೊರಗುಳಿದಿರುವ ವಿಚಾರ ಬೆಳಕಿಗೆ ಬಂದಿದೆ.

ವೇತನ ಹೆಚ್ಚಳ: ಕಾಲೇಜು ಶಿಕ್ಷಕರಿಗೆ ಕೇಂದ್ರದಿಂದ ದೀಪಾವಳಿ ಬಂಪರ್ ಕೊಡುಗೆ

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ನ್ಯಾಕ್ ಮಾನ್ಯತೆ ಪಡೆಯಲು ಅಗತ್ಯ ಮೂಲಸೌಕರ್ಯವಿಲ್ಲದ ಕಾಲೇಜುಗಳನ್ನು ಪಟ್ಟಿ ಮಾಡಲಾಗಿದ್ದು, ಅವುಗಳ ಮಾನ್ಯತೆ ರದ್ದು ಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ವಿವಿಯ ಶೇ.80 ಕಾಲೇಜುಗಳಿಗೆ ಮಾನ್ಯತೆ ಇಲ್ಲ

ಬಿ.ಇಡಿ, ದೈಹಿಕ ಶಿಕ್ಷಣ ಮತ್ತು ಪದವಿ ಕಾಲೇಜುಗಳು ಸೇರಿ ಒಟ್ಟು 650 ಕಾಲೇಜುಗಳು ಬೆಂಗಳೂರು ವಿಶ್ವವಿದ್ಯಾಲಯದಡಿ ಇವೆ. ಇವುಗಳಲ್ಲಿ 20 ಸರ್ಕಾರಿ, 4 ಬಿಬಿಎಂಪಿ ಹಾಗೂ 30 ಅನುದಾನಿತ ಕಾಲೇಜುಗಳ ಪೈಕಿ ಒಂದು ಸರ್ಕಾರಿ ಕಾಲೇಜಿಗೆ ಎ+ನ್ಯಾಕ್‌ ಮಾನ್ಯತೆ ದೊರೆತಿದೆ. 596 ಖಾಸಗಿ ಕಾಲೇಜುಗಳ ಪೈಕಿ 117 ಕಾಲೇಜುಗಳಿಗೆ ಯುಜಿಸಿ ಮಾನ್ಯತೆ ದೊರಕಿದೆ.

ಇದನ್ನು ಗಮನಿಸಿ: ಹಂಪಿ ವಿಶ್ವವಿದ್ಯಾಲಯ: ಬೋಧಕ ಹುದ್ದೆಗಳ ನೇಮಕಾತಿ

'ಯುಜಿಸಿಯಿಂದ 2 (ಎಫ್‌), 12 (ಬಿ) ಹಾಗೂ ನ್ಯಾಕ್‌ ಮಾನ್ಯತೆ ನೀಡಲಾಗುತ್ತದೆ. ಇದರಲ್ಲಿ 12 (ಬಿ) ಮಾನ್ಯತೆ ಇಲ್ಲದ ಕಾಲೇಜಿಗೆ ಸಂಶೋಧನಾ ಅನುದಾನ ಹಾಗೂ ಪ್ರಾಧ್ಯಾಪಕರಿಗೆ ಬೋಧನಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಜರಾಗಲು ಅವಕಾಶ ಇರುವುದಿಲ್ಲ. ಹಾಗಾಗಿ ಕಾಲೇಜು ಅಭಿವೃದ್ಧಿ ಪರಿಷತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ' ಎಂದು ಕಾಲೇಜು ಅಭಿವೃದ್ಧಿ ಪರಿಷತ್ತಿನ ನಿರ್ದೇಶಕ ಪ್ರೊ. ವಿ.ನಾಗೇಶ್‌ ಬೆಟ್ಟಕೋಟೆ ತಿಳಿಸಿದ್ದಾರೆ.

'ಒಂದು ಕಾಲೇಜಿಗೆ ಯುಜಿಸಿ ಮಾನ್ಯತೆ ದೊರೆಯಬೇಕಾದರೆ, ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಅನುಪಾತ ಸರಿಯಾಗಿರಬೇಕು. ಹಾಜರಾತಿ ಇರಬೇಕು. ಲೈಂಗಿಕ ಕಿರುಕುಳ ತಡೆ ಘಟಕ, ಕಾಯಂ ಬೋಧಕ ಸಿಬ್ಬಂದಿ, ಉತ್ತಮ ಕಟ್ಟಡ, ಶೌಚಾಲಯ ವ್ಯವಸ್ಥೆಗಳು ಸರಿಯಾಗಿ ಇರಬೇಕು. ಇವುಗಳನ್ನು ಪರಿಶೀಲಿಸಿ ಉತ್ತಮ ಕಾಲೇಜುಗಳನ್ನು ಯುಜಿಸಿ ಮಾನ್ಯತೆಗೆ ಶಿಫಾರಸು ಮಾಡುತ್ತೇವೆ. ಕಾಲೇಜು ಮತ್ತು ಯುಜಿಸಿ ನಡುವೆ ಕೊಂಡಿಯಾಗಿ ಕಾಲೇಜು ಅಭಿವೃದ್ಧಿ ಪರಿಷತ್ತು ಕಾರ್ಯ ನಿರ್ವಹಿಸುತ್ತದೆ' ಎಂದು ಅವರು ವಿವರಿಸಿದರು.

ಮಾನ್ಯತೆ ಪಡೆಯಲು ಕಾರ್ಯಗಾರ

'ಯುಜಿಸಿ ಮಾನ್ಯತೆ ಪಡೆಯುವುದರಿಂದ ವಿದ್ಯಾರ್ಥಿಗಳಿಗೆ, ಬೋಧಕರಿಗೆ ಏನೆಲ್ಲ ಅನುಕೂಲವಾಗುತ್ತದೆ, ಮಾನ್ಯತೆ ಪಡೆಯಲು ಯಾವ ರೀತಿ ಅಭಿವೃದ್ಧಿ ಕೈಗೊಳ್ಳಬೇಕು ಎಂದು ತಿಳಿಸಲು ಪರಿಷತ್ತಿನ ವತಿಯಿಂದ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ಮೊದಲ ಬಾರಿ ಎರಡು ದಿನಗಳ ಕಾರ್ಯಾಗಾರ ಆಯೋಜಿಸಲಾಗಿದ್ದು, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ತರಬೇತಿ ನಡೆಸಲು ಉದ್ದೇಶಿಸಲಾಗಿದೆ. ಒಟ್ಟು 400 ಜನರಿಗೆ ತರಬೇತಿ ನೀಡುವ ಯೋಜನೆ ಇದೆ. ಪ್ರಾಂಶುಪಾಲರಿಗೆ ಈ ತರಬೇತಿ ಇರುತ್ತದೆ. ಮೊದಲು ನೋಂದಣಿ ಮಾಡಿಕೊಂಡವರಿಗೆ ಅವಕಾಶ ನೀಡುತ್ತೇವೆ' ಎಂದು ಅವರು ವಿವರಿಸಿದರು.

English summary
Bangalore university colleges failed to get UGC recognition. UGC reported that 80% of colleges affiliated to Bangalore University have no proper infrastructure.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia